ಕಾಸರಕೋಡು ಬಂದರಿನ ಖಾಸಗೀಕರಣ: ಒಂದು ಸಕಾಲಿಕ ಸ್ಪಂದನ

ಹೊನ್ನಾವರದ ಕಾಸರಕೋಡು ಬಂದರಿನ ಖಾಸಗೀಕರಣ ರದ್ದಾಗಲಿ.

ಕಡಲಂಚಿನ ಪಟ್ಟಣ ಹೊನ್ನಾವರದ ಕಾಸರಕೋಡು ಬಂದರನ್ನು ಖಾಸಗೀಕರಣ ಮಾಡುವುದನ್ನು ಮೀನುಗಾರರು ಪ್ರತಿಭಟಿಸಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಸಮುದ್ರಕ್ಕೆ ಧುಮುಕಿದ್ದಾರೆ. ಈ ಘಟನೆ ಅಷ್ಟೇ ನೂ ದೊಡ್ಡ ಸುದ್ದಿಯಾಗಿಲ್ಲ. ಕೆಲವು ಸ್ಥಳಿಯ ಪತ್ರಿಕೆಗಳಲ್ಲಿ ಮತ್ತು ಯಾವುದೋ ಒಂದೆರಡು ವಾಹಿನಿಗಳಲ್ಲಿ ಸಣ್ಣದಾಗಿ ಸುದ್ದಿಯಾಗಿರುವುದು ಕಂಡುಬಂದಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಈ ಬಗೆಗೆ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಅಂದರೆ ಗಂಭೀರ ಸಮಸ್ಯೆಯೊಂದು ಎಷ್ಟು ಚರ್ಚೆಯಾಗಬೇಕಿತ್ತೋ ಆ ಪ್ರಮಾಣದಲ್ಲಿ ಸುದ್ದಿಯಾಗದಿರುವುದು ಜನರ ಗಮನ ಸೆಳೆಯದಿರುವುದು ಕಾಣಿಸುತ್ತಿದೆ.ಈ ಕಾಲದ ಆಳುವವರ ಸ್ವಾರ್ಥದ ಯೋಜನೆಗಳು ಮತ್ತು ನೀತಿಗಳು ಜನಸಾಮಾನ್ಯರನ್ನು ಬಲಿತೆಗೆದುಕೊಳ್ಳುವ ಉದ್ದೇಶಕ್ಕೆ ತಕ್ಕಂತೆ ಹೊನ್ನಾವರದ ಬಂದರಿನ ಖಾಸಗೀಕರಣವೂ ನಡೆದಿದೆ. ರಾಜ್ಯದ ವಿಮಾನ ನಿಲ್ದಾಣಗಳನ್ನು ಖಾಸಗಿಕರಣ ಮಾಡಿದಾಗ ಎದುರಾಗದ ಪ್ರತಿರೋಧ ಬಂದರಿನ ಖಾಸಗೀಕರಣದಿಂದ ಎದುರಾಗಿದೆ. ಇದಕ್ಕೆ ಕಾರಣ ಬಂದರಿನ ಖಾಸಗೀಕರಣ ನೇರವಾಗಿ ಮೀನುಗಾರರ ಉದ್ಯೋಗವನ್ನು ಭೂಮಿಯನ್ನು ಕಡಲಿನ ಮೇಲಿನ ಸ್ವಾಮ್ಯವನ್ನು ಕಸಿದುಕೊಳ್ಳುತ್ತದೆ. ಇದರಿಂದ ಮೀನುಗಾರರ ಬದುಕು ಮೂರಾಬಟ್ಟೆಯಾಗುತ್ತದೆ. ಹಾಗಾಗಿ ಸಹಜವಾಗಿಯೇ ಪ್ರತಿರೋಧ ಸ್ಪೋಟಗೊಂಡಿದೆ.

ಕೃಶಿ ಕಾಯಿದೆಗಳು ರೈತರನ್ನು ಭೂಮಿಯಿಂದ ಒಕ್ಕಲೆಬ್ಬಿಸುವಂತೆ ಕಡಲು ಮತ್ತು ಬಂದರುಗಳ ಖಾಸಗೀಕರಣ ಮೀನುಗಾರರನ್ನು ನಾಶಮಾಡುತ್ತದೆ. ಕಿರು ಮತ್ತು ನಾಡದೋಣಿಗಳ ಮೂಲಕ ಮೀನುಗಾರಿಕೆ ನಡೆಸುವ ಮೀನುಗಾರರು ಈ ಮೊದಲೇ ವಿಪರೀತ ನಷ್ಟದಲ್ಲಿದ್ದರು. ಮೀನಿನ ಸಂಪತ್ತು ಕಡಿಮೆಯಾಗಿ ಆದಾಯ ಕುಗ್ಗಿತ್ತು. ಅಂತಹದ್ದರಲ್ಲಿ ಬಂದರಿನ ಖಾಸಗೀಕರಣವು ಮೀನುಗಾರರನ್ನು ಖಾಯಮ್ಮಾಗಿ ನಾಶಮಾಡಲಿದೆ. ಈಗಾಗಲೇ ಹಲವು ಯೋಜನೆಗಳು ಕಡಲಂಚಿನ ಪಟ್ಟಣಗಳಲ್ಲಿ ಜಾರಿಯಾಗಿ ಅದರಿಂದ ಮೀನುಗಾರರು ವಿಪರೀತ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೆ ಕಡಲಿನ ವಿಪರೀತ ಮಾಲಿನ್ಯದಿಂದ ಮೀನಿನ ಸಂತತಿ ನಶಿಸುತ್ತಿದೆ. ದೊಡ್ಡ ಉದ್ದಿಮೆಗಳು ನಡೆಸುವ ಆಳ ಸಮುದ್ರದ ಮೀನುಗಾರಿಕೆಯಿಂದ ಪಾರಂಪರಿಕ ಮೀನುಗಾರರಿಗೆ ತೊಂದರೆಯಾಗುತ್ತಿದೆ. ಅಂದರೆ ಅನೇಕ ಸಮಸ್ಯೆಗಳು ಮೀನುಗಾರರನ್ನು ಬಾಧಿಸುತ್ತಿವೆ. ರಾಜಕೀಯ ಮತ್ತು ಶೈಕ್ಶಣಿಕ ಅರಿವಿನ ಕೊರತೆಯಿಂದ ಮೀನುಗಾರ ಸಮುದಾಯ ಬಳಲು ತ್ತಿದೆ. ಆದರೆ ತನ್ನ ಸಮಸ್ಯೆಗಳಿಗಿಂತ ಹೆಚ್ಚಾಗಿ ಮೀನುಗಾರ ಸಮುದಾಯ ಮತೀಯ ರಾಜಕಾರಣದ ಕಡೆಗೆ ಆಸಕ್ತಿ ತಾಳಿರುವುದು ಸುಳ್ಳಲ್ಲ. ಮತೀಯ ರಾಜಕಾರಣದ ಕಾಲಾಳುಗಳಂತೆ ಮೀನುಗಾರ ಸಮುದಾಯದ ಯುವಕರು ದುಡಿಯುತ್ತಿದ್ದಾರೆ. ಉಳಿದವರು ಮತವೊತ್ತುವ ಯಂತ್ರಗಳಾಗಿದ್ದಾರೆ. ಅಂದರೆ ತಮ್ಮ ನಿಜವಾದ ಸಮಸ್ಯೆಗಳ ಬಗೆಗೆ ಹೆಚ್ಚು ತಲೆ ಕೆಡಿಸಿಕೊಂಡವರಲ್ಲ. ಈಗ ತಮ್ಮ ಬುಡಕ್ಕೆ ಬೆಂಕಿಬಿದ್ದಿರುವ ಕಾರಣ ಆತಂಕಗೊಂಡು ಪ್ರತಿಭಟನೆಗಿಳಿದಿದ್ದಾರೆ. ಇದು ಸಹಜವಾದ ಬೆಳವಣಿಗೆಯೇ ಸರಿ. ಈಗಲಾದರೂ ಮೀನುಗಾರ ಸಮುದಾಯ ಎಚ್ಚೆತ್ತು ಸಂಘಟಿತ ಪ್ರಯತ್ನದಿಂದ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಒಮ್ಮೆ ಸಾರ್ವಜನಿಕ ಸಂಪತ್ತು ಖಾಸಗಿಯವರಿಗೆ ಪರಭಾರೆಯಾದರೆ ಅದು ಮತ್ತೆಂದೂ ಸಾರ್ವಜನಿಕ ಬಳಕೆ ಇಲ್ಲದಂತೆ ಆಗಿಹೋಗುತ್ತದೆ. ಹಾಗಾಗಿ ಸಾರ್ವಜನಿಕರೂ ಕೂಡ ಈ ಬಗ್ಗೆ ಎಚ್ಚತ್ತು ಮೀನುಗಾರ ಸಮುದಾಯವನ್ನು ಬೆಂಬಲಿಸಬೇಕು. ಬದುಕುವ ಹಕ್ಕುಗಳನ್ನು ಎತ್ತಿಹಿಡಿಯಬೇಕು. ಸದ್ಯ ಬಂದರಿನ ಖಾಸಗಿಕರಣ ಯೋಜನೆಯನ್ನು ನಿಲ್ಲಿಸಿ ಅದನ್ನು ಸ್ಥಳಿಯರ ಅಭಿವೃದ್ದಿಗೆ, ಮೀನುಗಾರ ಸಮುದಾಯ ಒಳಿತಿಗೆ ತಕ್ಕಂತೆ ಉಳಿಸಿ ಬೆಳೆಸಬೇಕು. ಯಾವುದೇ ಯೋಜನೆಯು ಸ್ಥಳೀಯ ಜನಸಮುದಾಯಗಳ ಒಳಿತಿಗೆ ತಕ್ಕಂತೆ ಅಭಿವೃದ್ಧಿ ಪಡಿಸದೆ, ಸ್ಥಳಿಯರನ್ನು ಪರಕೀಯಗೊಳಿಸಿ ‘ಅಭಿವೃದ್ಧಿ’ ಯೋಜನೆಗಳನ್ನು ರೂಪಿಸಿದರೆ ಅವು ದಮನಿತ ಸಮುದಾಯಗಳ ಸಮಾಧಿ ಮೇಲೆ ಕಟ್ಟಿದ ಮೋಸಗಾರರ ದಂತಗೋಪುರಗಳಾಗಿರುತ್ತವೆ. ದುರಂತವೆಂದರೆ ಜನರ ಒಳಿತಿಗೆ ಕೆಲಸ ಮಾಡಬೇಕಾದ ಆಡಳಿತ ಯಂತ್ರಾಂಗ ಬಲಿತವರ ಪರವಾಗಿ ನಿಂತು ದಮನಿತರ ಮೇಲೆ ದಬ್ಬಾಳಿಕೆ ನಡೆಸುವುದು ಅಕ್ಶಮ್ಯ. ಸದ್ಯ ಎದ್ದಿರುವ ಪ್ರತಿಭಟನೆಯ ಆಕ್ರೋಶದಿಂದಲಾದರೂ ಪಾಠ ಕಲಿತು ಸ್ಥಳೀಯ ಮೀನುಗಾರರು ಮತ್ತು ಇತರೆ ಜನರ ಹಿತಾಸಕ್ತಿಯನ್ನು ಕಾಪಾಡುವ ಬುದ್ಧಿ ಆಡಳಿತ ಯಂತ್ರಾಂಗಕ್ಕೆ ಬರಲಿ ಎಂದು ಎಲ್ಲರೂ ಒತ್ತಾಯಿಸಬೇಕಿದೆ.

-ರಂಗನಾಥ ಕೋಣನಕುಂಟೆ, ಹೊನ್ನಾವರ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *