ಬ್ರಾಹ್ಮಣ್ಯವಲ್ಲದಿದ್ದರೆ ಮತ್ತೇನು? ಭಾಗ-02

1990 ರ ಅಂತ್ಯದ ಅವಧಿಯಲ್ಲಿ ನಾವೆಲ್ಲಾ ವಿದ್ಯಾರ್ಥಿಗಳು.ನಾವು ಕಾರವಾರದಲ್ಲಿ ಅಧ್ಯಯನ ಮಾಡಿದ್ದರಿಂದಾಗಿ ನಮಗೆ ಜಾತಿ-ಧರ್ಮ,ಪ್ರಾದೇಶಿಕತೆಗಳ ಸಂಕುಚಿತತೆಗಳಿರಲಿಲ್ಲ. ಇದೇ ಅವಧಿಯಲ್ಲಿ ಕಾರವಾರದ ವೈಶಿಷ್ಟ್ಯದ ಬಗ್ಗೆ ಒಂದೆರಡು ಅನಿಸಿಕೆ ಬರೆದರೆ ಅದು ಅಪ್ರಸ್ತುತವಾಗಲಾರದು ಕೂಡಾ. ನನ್ನ ನೆಚ್ಚಿನ ಸಾಹಿತಿ ಜಯಂತ ಕಾಯ್ಕಿಣಿ ಕಾರವಾರದ ರಸ್ತೆಗಳೆಲ್ಲಾ ಸಮುದ್ರ ಸೇರುತ್ತವೆ ಎಂದು ಬರೆದಿದ್ದಾರೆ. ಹೌದು ಕಾರವಾರದ ರಸ್ತೆಗಳೆಲ್ಲಾ ಕೊನೆಗೆ ವಿಶಾಲಸಮುದ್ರ ಸೇರಿ ಅಂತ್ಯವಾಗುತ್ತವೆ. ಹಾಗಾಗಿ ಅಲ್ಲಿಯ ಜನರಲ್ಲಿ ಜಾತಿಯತೆಯ ಸಂಕುಚಿತತೆ ಕಡಿಮೆ. ಕೊಂಕಣಿ ಮಾತನಾಡಿ, ಮೀನುತಿಂದು ಅವರೊಳಗೆ ಒಂದಾಗಿಬಿಟ್ಟರೆ ಕಾರವಾರಕ್ಕೆ ಯಾವ ಪರದೇಶಿಯೂ ಹಂಮ್ಗೆಲೆ (ನಮ್ಮವ ) ಆಗಿಬಿಡುವ ಹಿಂದೆ ಕಾರವಾರದ ಜನರ ವೈಶಿಷ್ಟ್ಯ,ಮಿತಿಗಳಿವೆ. ಈ ವಾತಾವರಣದಲ್ಲಿ ಎಂಟ್ಹತ್ತು ವರ್ಷ ಕಳೆದ ನನಗೆ ಉತ್ತರ ಕನ್ನಡ ಜಿಲ್ಲೆಯ ಜಾತೀವಾದ, ಧರ್ಮಾಂಧತೆ, ಮತಾಂಧತೆ ಅರಿವಿಗೆ ಬಂದದ್ದೇ ಶಿರಸಿಗೆ ಬಂದ ಮೇಲೆ.

ಮೊದಲ ಕಂತಿನಲ್ಲಿ ಶಿರಸಿಯ ಮಾಧ್ಯಮಜೀವಿಗಳ ಪರಿವಾರದ ಸಂಕುಚಿತತೆ ಬಗ್ಗೆ ಬರೆದಿದ್ದೇನಿ. ಈ ಪರಿವಾರದ ಕೆಲವರು ಈಗ ಕಾಲಲಯದಲ್ಲಿ ಸವೆದು ಹೋಗಿದ್ದಾರೆ. ಕೆಲವರು ಈಗಲೂ ವರದಿಗಾರರಾಗಿ ಜೀವಂತವಾಗಿದ್ದಾರೆ. ಇವರ ಒಂದು ತಂಡಕ್ಕೆ ಆರ್.ಎಸ್.ಎಸ್. ಹಿನ್ನೆಲೆಯ ಸಚ್ಚಿದಾನಂದ ಹೆಗಡೆ ಭತ್ತಗುತ್ತಿಗೆ ದಂಡನಾಯಕನಾದರೆ ಇನ್ನೊಂದು ತಂಡದಲ್ಲಿ ಲೋಕಧ್ವನಿಯ ಅಂದಿನ ಸಂಪಾದಕ ಗೋಪಾಲಕೃಷ್ಣ ಆನವಟ್ಟಿ ಪ್ರಮುಖರು, ಇವರ ಮಧ್ಯೆ ಜನಮಾಧ್ಯಮದ ಜಯರಾಮ ಹೆಗಡೆಯವರೂ ಇದ್ದರೆನ್ನಿ.

ಜಯರಾಮ ಹೆಗಡೆ ಇಂದು, ಅಂದು ಎಂದೆಂದೂ ಜಾತ್ಯಾತೀತವಾಗಿ, ಪ್ರಗತಿಪರವಾಗಿ ಯೋಚಿಸುವ ಮನುಷ್ಯ. ಗೋಪಾಲಕೃಷ್ಣ ಆನವಟ್ಟಿ ಸಂಘದ ಸಂಪರ್ಕದ ವರಾದರೂ ಭತ್ತಗುತ್ತಿಗೆ ಜನರಷ್ಟು ಧರ್ಮಾಂಧರು,ಜಾತ್ಯಾಂಧರು ಆಡುವುದೊಂದು ಮಾಡುವುದೊಂದು ಗುಣಗಳ ಬೂಟಾಟಿಕೆ (ವ್ಯಕ್ತಿಯಾಗಿರಲಿಲ್ಲ) ವ್ಯಕ್ತಿಯಾಗಿರಲಿಲ್ಲ.

ಹೊಸದಾಗಿ ಶಿರಸಿ ಮಾಧ್ಯಮಲೋಕ ಸೇರಿದ ನಮ್ಮಂಥವರು ಅವರೆದುರು ಮಾತನಾಡದ ಸ್ಥಿತಿ. ಮೊದಮೊದಲು ನಮಗೆ ಈ ಪರಿವಾರದ ಗುಂಪುಗಳ ಮಾಹಿತಿ ಅಷ್ಟಾಗಿರಲಿಲ್ಲ. ಶೂದ್ರರನ್ನು ನೋಡಿ ವಿಚಿತ್ರವಾಗಿ ಆಡುತಿದ್ದ ಸಚ್ಚಿದಾನಂದ ಹೆಗಡೆ ತನ್ನ ಪರಿವಾರದ ಹಿನ್ನೆಲೆಯ ಗುಂಪಿನೊಂದಿಗೆ ಗುಂಪುಗಾರಿಕೆ ಮಾಡುವುದು,ಸತ್ಯವನ್ನು ಸುಳ್ಳುಮಾಡುವುದು, ಸುಳ್ಳನ್ನು ಸತ್ಯ ಮಾಡುವ ವೈದಿಕ ಹೀನತನವೇ ಪತ್ರಿಕೋದ್ಯಮ ಎಂದುಕೊಂಡಂಗಿದ್ದ. ಈ ವೈದಿಕ ಕುಟಿಲತೆಯ ಸಮರ್ಥನೆಗೆ ತನ್ನ ಅಳಿಯ ವಿಶ್ವೇಶ್ವರ ಭಟ್ಟ, ಅವರ ಚೇಲಾ ಪ್ರತಾಪಸಿಂಹನಂಥ ಮತಾಂಧರನ್ನು ಅತಿಥಿಗಳಾಗಿ ಕರೆಸುತಿದ್ದ! ಇದಕ್ಕೆ ಚಪ್ಪಾಳೆ ತಟ್ಟಲು ಎ.ಬಿ.ವಿ.ಪಿ. ಹುಡುಗರು,ಪತ್ರಕರ್ತ ಬಳಗದಲ್ಲಿ ತರಬೇತಿ ಪಡೆದಿದ್ದ ಅಡ್ಡಕಸಬಿಗಳನ್ನು ಬಳಸುತಿದ್ದ. ಇವರ ಈ ವೈದಿಕ ಕುಟಿಲತೆಗೆ ಅಂದಿನ ಎಂ.ಇ.ಎಸ್. ಅಧ್ಯಕ್ಷರಾಗಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಾಂತರಾಮ ಹೆಗಡೆ ಸೇರಿದಂತೆ ಯಾರೂ ವಿರೋಧಿಸುತ್ತಿರಲಿಲ್ಲ.?!

ಇದೇ ಸಂದರ್ಭದಲ್ಲಿ ಎದುರಾದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷತೆಗೆ ನಾನೂ ಸ್ಫರ್ಧಿಸಿದೆ. ನನಗೆ ಎದುರಾಗಿದ್ದ ಪ್ರತಿಸ್ಫರ್ಧಿ ಸುಬ್ರಾಯ ಭಟ್ಟರಿಗೆ ಸಚ್ಚಿ ಪರಿವಾರದ ಬೆಂಬಲ ಅವರ ವಿರುದ್ಧವಿದ್ದ ಕೆಲವರು ನನ್ನ ಬೆಂಬಲಕ್ಕೆ ನಿಂತು ಚುನಾವಣೆ ನಡೆದು ಎರಡ್ಮೂರು ಗುಂಪುಗಳಾಗಿ ಜಾತಿ-ಧರ್ಮಾಂಧತೆಯ ಅವರ ಕುಟಿಲತೆಯ ವಿರುದ್ಧ ನಾನು ಸೋಲಬೇಕಾಯಿತು. ಚುನಾವಣೆ ನಂತರ “ಅಲ್ಲಾ ಭಟ್ರೆ ಇದು ಮಾಧ್ಯಮಲೋಕದ ಚುನಾವಣೆ ನೀವು ನೋಡಿದ್ರೆ ಜಾತಿ-ಧರ್ಮ,ಹಣ ಎಲ್ಲವನ್ನೂ ಪ್ರಯೋಗಿಸಿಬಿಟ್ಟರಲ್ರೀ , ಅಂದೆ ಅದಕ್ಕವರು ‘ಚುನಾವಣೆ ಅಂದ್ರೆ ಚುನಾವಣೆ, ಅಂದ್ರು. ಅಷ್ಟರಮೇಲೆ ಮತ್ತೊಂದೆರಡು ಚುನಾವಣೆ ಎದುರಿಸಿದ ಮೇಲೆ ನಮಗೆ ಅರ್ಥವಾದದ್ದು ‘ಚುನಾವಣೆ ಅಂದ್ರೆ ಚುನಾವಣೆ’!

ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಎಲ್ಲವನ್ನೂ ಪ್ರಯೋಗಿಸಿ ಗೆದ್ದ ಸಚ್ಚಿಯ ವೈದಿಕ ಪರಿವಾರ ನಮ್ಮ ತೋಜೋವಧೆಗೂ ಅಹರ್ನಿಸಿ ಪ್ರಯತ್ನಿಸಿತ್ತು. ಅದೇ ಪರಿವಾರ ನಂತರ ನಮ್ಮ ಜಿ.ಪಂ. ಚುನಾವಣೆಗಳಲ್ಲೂ ಬೇನಾಮಿ ಪತ್ರ ಪ್ರಕಟಿಸಿ, ಮಾಧ್ಯಮಗಳಲ್ಲಿ, ಭಿತ್ತಿಚಿತ್ರಗಳಲ್ಲಿ ಬರೆದು ಅವರ ಹಿಂದುತ್ವವಾದಿ ವೈದಿಕ ಕುಟಿಲತೆಗಳನ್ನು ಪ್ರತಿಬಿಂಬಿಸಿತ್ತು. ಬಾಯಲ್ಲಿ ಹಿಂದುತ್ವ, ಆಚರಣೆಯಲ್ಲಿ ವೈದಿಕತೆ, ಹೆಸರಿಗೆ ರಾಷ್ಟ್ರೀಯವಾದ ವಾಸ್ತವದಲ್ಲಿ ಹಿಂದುತ್ವದ ಸೋಗಿನಲ್ಲಿ ಜಾತ್ಯಾಂಧತೆ,ಧರ್ಮಾಂಧತೆ ಇವೆಲ್ಲಾ ಬ್ರಾಹಮಣ್ಯದ ಅಸಹ್ಯಗಳಾಗದಿದ್ದರೆ ಇವೆಕ್ಕೆ ಬೇರೆ ಎನೆಂದು ಹೆಸರಿಸಬೇಕು?

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *