ವಿನಾಶದ ಅಂಚಿನಲ್ಲಿರುವ ಸಸ್ಯ-ಪ್ರಾಣಿ ಪ್ರಭೇದ, ಜೋಗ ಜಲಪಾತಗಳ ರಕ್ಷಿಸಿ

ವಿನಾಶದ ಅಂಚಿನಲ್ಲಿರುವ ಸಸ್ಯ-ಪ್ರಾಣಿ ಪ್ರಭೇದ, ಜೋಗ ಜಲಪಾತಗಳ ರಕ್ಷಿಸಿ: ಜೀವವೈವಿಧ್ಯ ಮಂಡಳಿ

ಜೋಗ ಜಲಪಾತಗಳ ಜೀವಂತವಾಗಿಡಲು ಹಾಗೂ ಅವುಗಳು ತುಂಬಿ ಹರಿಯುವಂತಿರಲು, ವಿನಾಶದ ಅಂಚಿನ ವೃಕ್ಷ, ಪ್ರಾಣಿ ಪ್ರಭೇದಗಳ ಸಂರಕ್ಷಣೆ ಮಾಡುವ ಅಗತ್ಯಗಳಿವೆ ಜೀವವೈವಿಧ್ಯ ಮಂಡಳಿ ಹೇಳಿದೆ. 

ಜೀವವೈವಿಧ್ಯತೆಗಳನ್ನು ರಕ್ಷಿಸುವ ಗುರುತರ ಜವಾಬ್ಧಾರಿ ಹೋಂದಿರುವ ರಾಜ್ಯ ಜೀವವೈವಿಧ್ಯತಾ ಮಂಡಳಿ ಈ ವರ್ಷ ಕೆರೆಗಳ ಸಂರಕ್ಷಣೆಗೆ ಆದ್ಯತೆ ನೀಡಿದ್ದು ಈ ಕೆಲಸದ ಜೊತೆಗೆ ಜೀವವೈವಿಧ್ಯತೆ ರಕ್ಷಣೆಯ ನಿರಂತರ ಕೆಲಸವನ್ನೂ ಮುಂದುವರಿಸಲಿದೆ ಎಂದು ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಜೀವವೈ ವಿಧ್ಯತಾ ಜಾಗೃತಿ ಅಭಿಯಾನದ ಬಗ್ಗೆ ಸಿದ್ಧಾಪುರದಲ್ಲಿ ಪೂರ್ವತಯಾರಿ ಸಭೆಯ ಬಳಿಕ  ಸಮಾಜಮುಖಿ ಡಾಟ್ ನೆಟ್. ದೊಂದಿಗೆ ಮಾತನಾಡಿದ ಅವರು ರಾಜ್ಯದ ಕೆರೆಗಳ ರಕ್ಷಣೆ ಅದರ ಜೊತೆಗೆ ಜೀವವೈವಿಧ್ಯತಾ ರಕ್ಷಣೆ ವಿಚಾರಗಳ ಹಿನ್ನೆಲೆಯಲ್ಲಿ ರಾಜ್ಯ  ಅರಣ್ಯ ಮತ್ತು ಪರಿಸರ ಸಚಿವರಿಗೆ ಮನವಿ ನೀಡಿದ್ದೇವೆ. ಆ ಮನವಿಯಲ್ಲಿ 2010 ರ ಶಿಫಾರಸ್ಸುಗಳನ್ನು ಪರಿಷ್ಕರಿಸಿ ನೀಡಲಾಗಿದೆ. ಇದೇ ತಿಂಗಳಲ್ಲಿ ರಾಜ್ಯದಾದ್ಯಂತ ಜೀವವೈವಿಧ್ಯತಾ ಜಾಗೃತಿ ಅಭಿಯಾನ ನಡೆಯಲಿದ್ದು ಅದಕ್ಕಾಗಿ ಪೂರ್ವತಯಾರಿ ಸಭೆಗಳನ್ನು ನಡೆಸುತಿದ್ದೇವೆ. ಕೆಲವು ವರ್ಷಗಳಿಂದ ಕುಂಟಿತವಾಗಿದ್ದ ಜೀವವೈವಿಧ್ಯತಾ ಮಂಡಳಿ ಚಟುವಟಿಕೆಗಳನ್ನು ಈಗ ಚುರುಕುಗೊಳಿಸಿದ್ದೇವೆ ಎಂದರು.

file photo

ಜೀವ ವೈವಿಧ್ಯ ಜಾಗೃತಿ ಅಭಿಯಾನ
ಸಿದ್ದಾಪುರ,
ಕರ್ನಾಟಕ ಜೀವ ವೈವಿಧ್ಯ ಮಂಡಳಿಯು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜೀವ ವೈವಿಧ್ಯದ ಕುರಿತಾಗಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅದಕ್ಕೆ ಈಗಾಗಲೇ ಚಾಲನೆ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿಈ ಜಾಗೃತಿ ಅಭಿಯಾನಕ್ಕೆ ಜು.೧೨ರಂದು ತಾಲೂಕಿನ ಹೇರೂರಿನ ಶ್ರೀ ಸಿದ್ದಿವಿನಾಯಕ ದೇವರ ಪವಿತ್ರವನದಲ್ಲಿ ಚಾಲನೆ ನೀಡಲಿದ್ದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲ್ಗೊಳ್ಳಲಿದ್ದಾರೆ. ಅದೇ ಸಂದರ್ಭದಲ್ಲಿ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಜೀ ವೃಕ್ಷರೋಪಣ ನೆರವೇರಿಸಲಿದ್ದಾರೆ. ಹೇರೂರಿನ ಗುಡ್ಡದ ಅತಿಕ್ರಮಣ ತಡೆದು, ಅದನ್ನುಸಂರಕ್ಷಿಸಿ ೨೫ ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಅದಕ್ಕೆ ದೇವರಕಾಡು ಎನ್ನುವ ಪಟ್ಟವನ್ನು ಕೊಟ್ಟು ಹೆಚ್ಚಿನ ಸಂರಕ್ಷಣೆಗೆ ಚಾಲನೆ ನೀಡಲಾಗುವದು ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.

ಅವರು ತಾಪಂ ಸಭಾಭವನದಲ್ಲಿ ಈ ಕುರಿತ ಪೂರ್ವಭಾವಿ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದ ಎಲ್ಲೆಡೆ ಈಗಾಗಲೇ ಜೀವ ವೈವಿಧ್ಯ ಜಾಗೃತಿ ಅಭಿಯಾನ ಆರಂಭಗೊಂಡಿದೆ. ಅರಣ್ಯ ಸಚಿವರು, ಗ್ರಾಮೀಣಾಭಿವೃದ್ಧಿ ಸಚಿವರು ಇದರಲ್ಲಿ ಪಾಲ್ಗೊಳ್ಳುವವರಿದ್ದಾರೆ. ಈ ಅಭಿಯಾನದ ಮುಖ್ಯ ಉದ್ದೇಶ ಗ್ರಾಮ,ತಾಲೂಕು,ಜಿಲ್ಲೆ ಹಾಗೂ ನಗರ ವ್ಯಾಪ್ತಿಯ ಜೀವ ವೈವಿಧ್ಯ ಸಮಿತಿಗಳನ್ನು ಇನ್ನಷ್ಟು ಬಲಗೊಳಿಸುವದು. ಈ ಸಂದರ್ಭದಲ್ಲಿ ಸಭೆ ನಡೆಸಿ ಈವರೆಗೆ ಸಂಗ್ರಹಿಸಲಾದ ದಾಖಲಾತಿಗಳ ಮಾಹಿತಿ ನೀಡುವದು.ಪ್ರತಿ ಗ್ರಾಪಂನಲ್ಲೂ ಎಷ್ಟು ಕೆರೆಗಳಿವೆ, ಅತಿಕ್ರಮಣವಾಗಿರುವದು ಎಷ್ಟು, ಅದನ್ನು ತೆರವುಗೊಳಿಸಲು ಏನು ಮಾಡಬಹುದು ಎನ್ನುವದನ್ನು ಗಮನಸುವದು ಮತ್ತು ಅಲ್ಲಿನ ಜೀವ ವೈವಿಧ್ಯದ ಕುರಿತಂತೆ ಸಾಧನೆ ಮಾಡಿದವರನ್ನು ಸನ್ಮಾನಿಸುವದು ಮುಂತಾದ ಉದ್ದೇಶಗಳನ್ನು ಹೊಂದಿದೆ ಎಂದರು.

ಸಿದ್ದಾಪುರ ತಾಲೂಕು ರಾಜ್ಯದ ೧೦ ಮಾದರಿ ಜೀವ ವೈವಿಧ್ಯ ಸಮಿತಿಗಳ ಪಟ್ಟಿಯಲ್ಲಿ ಸೇರಿಸಲಾಗಿದ್ದು ಕಳೆದ ೧ ವರ್ಷದ ಚಟುವಟಿಕೆಗಳ ಹಿನ್ನೆಲೆಯಲ್ಲಿ ವಿಶೇಷ ಚಾಲನೆ ನೀಡಲಾಗುತ್ತಿದೆ. ತಾಲೂಕಿನ ಕತ್ತಲೆಕಾನಿಗೆ ಜೀವ ವೈವಿಧ್ಯ ಪಾರಂಪರಿಕ ತಾಣ ಎನ್ನುವ ಮಾನ್ಯತೆ ನೀಡಲಾಗಿದೆ. ಭಾನ್ಕುಳಿಯ ಗೋಸ್ವರ್ಗವನ್ನು ಸ್ಥಳೀಯ ಜಾನುವಾರು ತಳಿ ಸಂರಕ್ಷಣಾ ಕೇಂದ್ರವೆಂದು ಮಾನ್ಯತೆ ನೀಡಲಾಗಿದೆ ಎಂದರು. ಕಳೆದ ೨೦೦೯-೧೦ರಲ್ಲಿ ಸಮೀಕ್ಷೆ ಮಾಡಿದಾಗ ೧೬ ವಿನಾಶದಂಚಿನಲ್ಲಿರುವ ಸಸ್ಯ ಪ್ರಬೇಧಗಳನ್ನು ಗುರುತಿಸಿ ವರದಿ ಮಾಡಲಾಗಿತ್ತು. ಈಗ ಮತ್ತೆ ೧೬ ವಿನಾಶದಂಚಿನಲ್ಲಿರುವ ಸಸ್ಯ ಪ್ರಬೇಧಗಳನ್ನು ಗುರುತಿಸಲಾಗಿದ್ದು ಇದೊಂದು ಅತ್ಯಂತ ಅಪಾಯಕಾರಿ ಸಂಗತಿಯಾಗಿದ್ದು ಆ ಬಗ್ಗೆ ಜಾಗೃತರಾಗಬೇಕಿದೆ ಎಂದರು. ಜು.೧೨ರ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಸಂಘ,ಸಂಸ್ಥೆಗಳು, ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಕೋರಿಕೊಂಡರು.
ಮಂಡಳಿಯ ಸದಸ್ಯ ಗಣಪತಿ ಹೆಗಡೆ ಬಿಸಲಕೊಪ್ಪ, ಪರಿಸರ ಕಾರ್ಯಕರ್ತ ಗೋಪಾಲಕೃಷ್ಣ ತಂಗರ‍್ಮನೆ,ತಾಪಂ ಇಒ ಪ್ರಶಾಂತರಾವ್, ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಚೆನ್ನಣ್ಣನವರ್, ಪಿಡಿಓಗಳಾದ ಸುಬ್ರಹ್ಮಣ್ಯ ಹೆಗಡೆ, ನಟರಾಜ್, ಗೌರೀಶ ಹೆಗಡೆ ಇದ್ದರು.

btr

ಬೆಂಗಳೂರು: ಜೋಗ ಜಲಪಾತಗಳ ಜೀವಂತವಾಗಿಡಲು ಹಾಗೂ ಅವುಗಳು ತುಂಬಿ ಹರಿಯುವಂತಿರಲು, ವಿನಾಶದ ಅಂಚಿನ ವೃಕ್ಷ, ಪ್ರಾಣಿ ಪ್ರಭೇದಗಳ ಸಂರಕ್ಷಣೆ ಮಾಡುವ ಅಗತ್ಯಗಳಿವೆ ಎಂದು ಜೀವವೈವಿಧ್ಯ ಮಂಡಳಿ ಹೇಳಿದೆ. 

ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ನೇತೃತ್ವದ ಸಮಿತಿಯು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಬುಧವಾರ ವರದಿ ಸಲ್ಲಿಸಿತು. 

https://imasdk.googleapis.com/js/core/bridge3.470.1_en.html#goog_1674447211

https://imasdk.googleapis.com/js/core/bridge3.470.1_en.html#goog_1674447213

ವರದಿಯಲ್ಲಿ ವಿನಾಶದ ಅಂಚಿನಲ್ಲಿರುವ ಪುನಗಿನ ಬೆಕ್ಕು, ಕಾಡುಪಾಪ, ನೀರಾನೆ, ಬಾವಲಿ, ತಿಮಿಂಗಿಲ ಪ್ರಭೇದಗಳು ಸೇರಿದಂತೆ, ಒಟ್ಟೂ 40 ಸಸ್ತನಿಗಳನ್ನು ವಿನಾಶದಂಚಿಗೆ ತಲುಪಿದವು. ಸೀತಾ ಅಶೋಕ, ಮರದರಶಿನ, ಭೂತಾಳಗಿಡ, ಎಣ್ಣೆಮರ, ನೀರನೇರಳೆ ಇತ್ಯಾದಿ ಪ್ರಭೇದಗಳು ಸೇರಿದಂತೆ, ಒಟ್ಟೂ 16 ಪ್ರಭೇದಗಳಿವೆ. ವಿನಾಶದ ಅಂಚಿನ ಸಸ್ಯ-ಪ್ರಾಣಿ ಪ್ರಭೇದ ಗಳ ಪರಿಷ್ಕೃ ತ ಪಟ್ಟಿಯನ್ನು ಎಲ್ಲ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೂ ತಲುಪಿಸಬೇಕು. 

ಅರಣ್ಯ ಸಂರಕ್ಷಣಾ ಯೋಜನೆಗಳಲ್ಲಿ ವಿನಾಶದ ಅಂಚಿನ ಸಸ್ಯ-ಪ್ರಾಣಿ ವೈವಿಧ್ಯ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕು. ತೋಟಗಾರಿಕೆ, ಮೀನುಗಾರಿಕಾ ಇಲಾಖೆ ಸೇರಿ ತಮ್ಮ ವ್ಯಾಪ್ತಿಯಲ್ಲಿನ ಈ ಪ್ರಭೇದಗಳ ರಕ್ಷಣೆಗೆ ಮತ್ತು ಸಂವರ್ಧನೆಗೆ ಆದ್ಯತೆ ನೀಡಬೇಕು. ಅರಣ್ಯ ಇಲಾಖೆಯ ನರ್ಸರಿ ಯೋಜನೆಯಲ್ಲಿ, ಔಷಧಿ ಸಸ್ಯ ಸಂರಕ್ಷಿತ ಪ್ರದೇಶ, ಪವಿತ್ರವನ ಯೋಜನೆಗಳಲ್ಲಿ ವಿನಾಶದ ಅಂಚಿನ ಸಸ್ಯ ಪ್ರಭೇದಗಳಿಗೆ ಪುರಸ್ಕಾರ ಸಿಗಬೇಕು ಎಂದು ಶಿಫಾರಸು ಮಾಡಿದೆ. 

ಜೀವವೈವಿಧ್ಯ ಕಾಯಿದೆ ಅನ್ವಯ-2010ರಲ್ಲಿ ವಿನಾಶದ ಅಂಚಿನ ಹೂ ಬಿಡುವ ಸಸ್ಯಗಳು ಹಾಗೂ ಕಶೇರುಕ ಪ್ರಾಣಿಗಳನ್ನು ಮಂಡಳಿಯ ತಜ್ಞರ ಸಹಾಯದೊಂದಿಗೆ ಗುರುತಿಸಲಾಗಿತ್ತು. ಈ ಪಟ್ಟಿಯನ್ನು ಕೇಂದ್ರದ ಅರಣ್ಯ ಮಂತ್ರಾಲಯ ಗೆಜೆಟ್‍ನಲ್ಲಿ ಪ್ರಕಟಿಸಿತ್ತು. ಇದೀಗ 2020-21ರಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿ ತಜ್ಞರ ಸಮಿತಿ ರಚಿಸಿ 2010ರ ಪಟ್ಟಿಯನ್ನು ಪರಿಷ್ಕಾರ ಮಾಡಿದೆ. 

ಈ ತಜ್ಞ ಸಮಿತಿ ನೀಡಿದ ವರದಿಯನ್ನು ಮಂಡಳಿ ಜನವರಿ 2021ರಲ್ಲಿ ಅಂಗೀಕರಿಸಿದೆ. ಪರಿಷ್ಕರಿಸಿರುವ ಪಟ್ಟಿಯನ್ನು ಕೇಂದ್ರ ಅರಣ್ಯ ಪರಿಸರ ಮಂತ್ರಾಲಯಕ್ಕೆ, ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರಕ್ಕೆ ಸಲ್ಲಿಸಲಿದೆ. ಕೇಂದ್ರ ಸರ್ಕಾರ ಅಧಿಕೃತ ಘೋಷಣೆ ಮಾಡಲಿದೆ.

2010ರಲ್ಲಿ 16 ವಿನಾಶದ ಅಂಚಿನ ಸಸ್ಯ ಪ್ರಭೇದ ಗುರುತಿಸಲಾಗಿತ್ತು. 2021ರಲ್ಲಿ ಇದೀಗ ಹಿಂದಿನ 16 ಪ್ರಭೇದ ಸೇರಿ ಒಟ್ಟು 32 ಪ್ರಭೇದಗಳನ್ನು ವಿನಾಶದ ಅಂಚಿನಲ್ಲಿದೆ ಎಂದು ಗುರುತಿಸಲಾಗಿದೆ. ವ್ಯಾಪಕ ವಾಣೀಜ್ಯೀಕರಣಕ್ಕೆ ಒಳಗಾಗಿರುವ ಕಾಡಿನ ಸಸ್ಯಪ್ರಭೇದಗಳ ಸಂಖ್ಯೆ 7. ರಾಜ್ಯದ 40 ಸಸ್ತನಿಗಳನ್ನು 2021ರಲ್ಲಿ ವಿನಾಶದ ಅಂಚಿನ ಪ್ರಭೇದಗಳು ಎಂದು ಗುರುತಿಸಲಾಗಿದೆ. ಅಪಾಯದ ಅಂಚಿನ ಪಕ್ಷಿ ಪ್ರಭೇದಗಳು 23. ಸರೀಸೃಪ ಪ್ರಭೇದಗಳು 26, ಉಭಯವಾಸಿ ಪ್ರಭೇದಗಳು 21, ಸಿಹಿನೀರು ಮೀನುಪ್ರಭೇದಗಳು 53, ಸಮುದ್ರ ಮೀನಿನ ಪ್ರಭೇದಗಳು 35. ವಿನಾಶದ ಅಂಚಿನ ಅಕಶೇರುಕ ಪ್ರಭೇದಗಳನ್ನು ಗುರುತಿಸಬೇಕು ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ.

ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಲೇ ಇರುವ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಒತ್ತಡದಿಂದಾಗಿ, ನಾಡಿನ ಅಪಾರ ಬಗೆಯ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳು ಕಣ್ಮರೆಯಾಗುತ್ತಿವೆ. ಇದು ಭವಿಷ್ಯದ ನೀರು, ಆಹಾರ, ಪರಿಸರ ಸುರಕ್ಷತೆ ಇತ್ಯಾದಿಗಳ ಸುರಕ್ಷತೆಗೆ ಮಾರಕವಾಗಬಲ್ಲ ಸಂಗತಿ. ಹೀಗಾಗಿ, `ಜೀವವೈವಿಧ್ಯ ಕಾನೂನು’ ಅಡಿ, ಈ ಬಗೆಯ ವಿನಾಶದಂಚಿಗೆ ತಲುಪಿರುವ ಪ್ರಭೇದಗಳನ್ನು ಕಾಲಕಾಲಕ್ಕೆ ಗುರುತಿಸಿ, ಸಂರಕ್ಷಿಸುವ ಜವಾಬ್ದಾರಿಯಿದೆ. ಈ ಹಿನ್ನೆಲೆಯಲ್ಲಿ, `ಕರ್ನಾಟಕ ಜೀವವೈವಿಧ್ಯ ಮಂಡಳಿ’ಯು ರಾಜ್ಯದ ವಿನಾಶದಂಚಿನ ಸಸ್ಯ ಹಾಗೂ ಪ್ರಾಣಿಪ್ರಭೇದಗಳ ಪಟ್ಟಿಯನ್ನು ತಜ್ಞರ ಸಮಿತಿಯ ಮೂಲಕ ಪರಿಷ್ಕರಿಸಿದೆ. 

ಕರ್ನಾಟಕ ಜೀವವೈವಿಧ್ಯ ಮಂಡಳಿಯ ಸದಸ್ಯ-ಕಾರ್ಯದರ್ಶಿ ಪುನೀತ್ ಪಾಠಕ್ ಅವರು ಮಾತನಾಡಿ, ಯಾವುದನ್ನು ಉತ್ತಮವಾಗಿ ಸಂರಕ್ಷಿಸಬೇಕು ಎಂಬುದರ ಬಗ್ಗೆ ಗಮನ ಹರಿಸಲು ಸರ್ಕಾರ ಮತ್ತು ನಾಗರೀಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಮುಂಬರುವ ವರ್ಷಗಳಲ್ಲಿ ಪಟ್ಟಿಯನ್ನು ಪರಿಷ್ಕರಿಸಲಾಗುತ್ತದೆ ಎಂದು ಹೇಳಿದ್ದಾರೆ.  (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *