ಗ್ರಾಮೀಣ ರೈತರ ಸಿಗಂದಿನಿಗೆ ಪೇಟೆಂಟ್ ಗೌರವ,15 ನೇ ಶತಮಾನದ ಹಿನ್ನೆಲೆಯ ಉ.ಕ. ಕರಿಮೆಣಸಿಗೆ ಅಂತರಾಷ್ಟ್ರೀಯ ಮಾನ್ಯತೆ..

ಕೃಷಿ ಉತ್ಫನ್ನಗಳ ಪೇಟೆಂಟ್ ಪಡೆದು ಲಾಭ,ಹೆಸರು ಗಳಿಸುವುದು ಸುಲಭದ ಕೆಲಸವಲ್ಲ ಹಾಗೆಂದು ಈ ಕಷ್ಟದ ಕೆಲಸ ಮಾಡಿದವರಿಗೇನೂ ಕೊರತೆಇಲ್ಲ.    ಇಂಥ ವಿರಳ ಸಾಧಕರ ಪಟ್ಟಿಗೆ ಸೇರ್ಪಡೆಯಾದ ಹೊಸ ಹೆಸರು ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಕೃಷಿಕನದ್ದು.

ಸಿದ್ಧಾಪುರ ತಾಲೂಕಿನ ಕಾನಸೂರು ಸಮೀಪದ ಕೊಡ್ಸರ ಹುಣಸೆಕೊಪ್ಪದ ಗ್ರಾಮೀಣ ರೈತ ರಮಾಕಾಂತ ಹೆಗಡೆ ತಮ್ಮ ವೆನಿಲ್ಲಾ ಬೆಳೆ ಕೈಕೊಟ್ಟ ನಂತರ ಕೈಕಟ್ಟಿ ಕೂತುಕೊಳ್ಳಲಿಲ್ಲ. ತಮ್ಮ ತೋಟದಲ್ಲಿ ಎಲ್ಲಾ ತೊಂದರೆಗಳ ಮಧ್ಯೆ ಹುಲುಸಾಗಿ ಬೆಳೆದಿದ್ದ ಕರಿಮೆಣಸಿನ ಬಳ್ಳಿಯ ವೈಶಿಷ್ಟ್ಯ ತಿಳಿಯತೊಡಗಿದರು. ತಜ್ಞರು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಲಹೆ ಮಾರ್ಗದರ್ಶನ ಪಡೆದು ಕರಿಮೆಣಸಿನ ಕೃಷಿ ವಿಸ್ತರಣೆ ಮಾಡಿದರು.
ಬಳ್ಳಿಯ ಗಿಡಗಳ ನರ್ಸರಿ ಮಾಡಿದರು. ಹೆಚ್ಚಿನ ಮಳೆಗೆ ಹೆದರದ ರೋಗನಿರೋಧಕ ಶಕ್ತಿ ಇರುವ ಸ್ಥಳಿಯ ಕರಿಮೆಣಸಿನ ಪ್ರಬೇಧವನ್ನು ಬೆಳೆದು ಮಾರುಕಟ್ಟೆಗೆ ಕಳುಹಿಸಿದರು. ಸ್ಥಳಿಯ ಮಾರುಕಟ್ಟೆಯಲ್ಲಿ ರಮಾಕಾಂತ ಹೆಗಡೆಯವರ ಬಿಳಿ ಬೋಳುಕಾಳು,ಕರಿಮೆಣಸಿನ ಬೆಳೆಗೆ ಹೆಚ್ಚಿನ ಬೆಲೆಯೂ ದೊರೆಯಿತು. ಈ ಬಗ್ಗೆ ಕರಿಮೆಣಸು ತಜ್ಞ ಡಾ. ವೇಣುಗೋಪಾಲರ ಮಾರ್ಗದರ್ಶನ ಪಡೆದು ಪೇಟೆಂಟ್ ಗೆ ಪ್ರಯತ್ನಿಸಿದರು. ಈ ಪ್ರಯತ್ನ ಈಗ ಫಲ ಕೊಟ್ಟಿದ್ದು ಗ್ರಾಮೀಣ ರೈತ ರಮಾಕಾಂತ್ ಹೆಗಡೆಯವರಿಗೆ ತಮ್ಮ ಸಿಗಂದಿನಿ ಕರಿಮೆಣಸು ತಳಿಗೆ ಪೇಟೆಂಟ್ ಸಿಕ್ಕಿದೆ.


ಉತ್ತರ ಕನ್ನಡ ಜಿಲ್ಲೆಯ ನೂರಕ್ಕೂ ಹೆಚ್ಚು ಪ್ರಬೇಧಗಳಲ್ಲಿ ಶಿರಸಿ ಭಾಗದ 65 ರಲ್ಲಿ ಸಿದ್ಧಾಪುರ ತಾಲೂಕಿನಲ್ಲಿರುವ 28 ವಿಧಗಳಲ್ಲಿ ಸಿಗಂದಿನಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಮೂರನೇ ತಳಿಯಾಗಿ ರಾಜ್ಯದ ಪ್ರಮುಖ ತಳಿಯಾಗಿ ಗುರುತಿಸಲ್ಪಟ್ಟಿದೆ. ಈ ಬಗ್ಗೆ ಸಂಬಂಧಿಸಿದವರಿಂದ ಗುರುತು ಮತ್ತು ಅಭಿನಂದನೆಯ ಗೌರವ ಪಡೆದಿರುವ ಈ ಗ್ರಾಮೀಣ ರೈತನ ಪ್ರಯತ್ನ ರಾಜ್ಯಕ್ಕೂ ಹೆಸರು ತಂದುಕೊಟ್ಟಿದೆ. 15 ನೇ ಶತಮಾನದಲ್ಲಿ ಪ್ರಪಂಚಕ್ಕೆ ಕಾಳುಮೆಣಸು ಪರಿಚಯಿಸಿದ ಉತ್ತರ ಕನ್ನಡ ಜಿಲ್ಲೆಯ ರೈತರೊಬ್ಬರು ಈ ಸಾಂಬಾರಪದಾರ್ಥಕ್ಕೆ ಪೇಟೆಂಟ್ ಪಡೆದಿರುವುದು ಉತ್ತರ ಕನ್ನಡ ಜಿಲ್ಲೆಗೂ ವಿಶೇಶವೆನಿಸಿದೆ.

  • ಭಾರೀ ಮಳೆಗೂ ಹೆದರದ ಸಿಗಂಧಿನಿ ಕಾಳುಮೆಣಸಿನ ಕದುರು ಉಳಿದ ಕೆಲವು ತಳಿಗಳಂತೆ ತುದಿಯಲ್ಲ ಸಣ್ಣ ಕಾಳುಗಳನ್ನು ಹೊಂದಿರುವುದಿಲ್ಲ
  • * ಸಶಕ್ತತೆ, ಗುಣಮಟ್ಟ, ಪ್ರಮಾಣ ಎಲ್ಲದರಲ್ಲೂ ಸಿಗಂದಿನಿ ಅನನ್ಯ.
  • ಪ್ರತಿಕೂಲ ಹವಾಮಾನದಲ್ಲಿ ಗುಣಮಟ್ಟದ ಕಾಳು ನೀಡುವ ಸಿಗಂದಿನಿ ಮಲೆನಾಡಿನ ಅನನ್ಯ ಪ್ರಬೇಧ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ನಮಗೆ ಗ್ಯಾರಂಟಿ ಸಹಾಯಕ…

ಸರ್ಕಾರದ ಗ್ಯಾರಂಟಿ ಯೋಜನೆಗಳು ನನ್ನ ಗೆಲುವಿಗೆ ಸಹಕಾರಿಯಾಗಲಿದೆ: ಗೀತಾ ಶಿವರಾಜ್’ಕುಮಾರ್ (ಸಂದರ್ಶನ) ಬೆಂಗಳೂರು: 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ ಗೀತಾ ಶಿವರಾಜಕುಮಾರ್ ಅವರು,...

ಸಚಿವ ಮಧು ಬಂಗಾರಪ್ಪ ಮತ್ತೊಮ್ಮೆ ಪ್ರಾಥಮಿಕ ಶಿಕ್ಷಣ ಓದುವ ಅಗತ್ಯವಿದೆ: ಕುಮಾರ್ ಬಂಗಾರಪ್ಪ

ಹಿರಿಯರಿಗೆ ಗೌರವ ನೀಡದ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಇಲ್ಲದಾಗಿದ್ದು, ಮತ್ತೊಮ್ಮೆ ಅವರು ಪ್ರಾಥಮಿಕ ಶಿಕ್ಷಣ...

modi namskar!- ಮೋದಿ ನಮಸ್ಕಾರ! ಇದು ಪಂಗನಾಮ….?

ಸುಳ್ಳು ಮತ್ತು ಅಹಂಕಾರದಿಂದ ಮೋದಿ ಜನರಿಗೆ ದ್ರೋಹ ಮಾಡುತಿದ್ದಾರೆ ಎಂದು ಆರೋಪಿಸಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್‌ ಮೋದಿ...

ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಮತದಾನ ಹೆಚ್ಚಳ: ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿ ನಿರೀಕ್ಷೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವ ಅಂಶ, ಸೌಜನ್ಯಾ ಹತ್ಯೆ ಪ್ರಕರಣದಿಂದಾಗಿ ಮತದಾನದಲ್ಲಿ ಮತದಾರರಿಂದ ಹೆಚ್ಚಿನ ಪ್ರಮಾಣದಲ್ಲಿ ನೋಟಾ ಅಭಿಯಾನ, ಎಸ್‌ಡಿಪಿಐ ಸ್ಪರ್ಧೆಯಲ್ಲಿ ಇಲ್ಲದಿರುವುದು ಮತ್ತು...

ಅಂಜಲಿ ನಿಂಬಾಳ್ಕರ್ ಭರ್ಜರಿ ಪ್ರಚಾರ

ಶಿರಸಿಯಲ್ಲಿ ಕಾಗೇರಿ ವಿರುದ್ಧ ವಾಗ್ದಾಳಿ ನಡೆಸಿದ ಆರ್ ವಿ ದೇಶಪಾಂಡೆ. ಪರೇಶ್ ಮೆಸ್ತಾ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ನಮ್ಮ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *