ಉತ್ತರ ಕನ್ನಡ ಜಿಲ್ಲೆ 15 ನೇ ಶತಮಾನದಲ್ಲಿ ಜಗತ್ತಿಗೆ ಕಾಳುಮೆಣಸನ್ನು ಪರಿಚಯಿಸಿದ ಖ್ಯಾತಿ ಹೊಂದಿದೆ. ಈ ಜಿಲ್ಲೆಯಲ್ಲಿ ಕಾಳು ಮೆಣಸಿನ ನೂರಾರು ತಳಿಗಳಿವೆ. ಜಿಲ್ಲೆಯ ಮಲೆನಾಡಿನ 65 ತಳಿಗಳಲ್ಲಿ ಸಿದ್ಧಾಪುರ ತಾಲೂಕಿನಲ್ಲೇ ಇರುವ 28 ಅನನ್ಯ ತಳಿಗಳೂ ಸೇರಿವೆ. ಹೀಗೆ ಊರಿಗೊಂದು ಮಾರಿಗೊಂದು ಕಾಳುಮೆಣಸಿನ ತಳಿ ಸಾಕಿಕೊಂಡಿರುವ ಉತ್ತರ ಕನ್ನಡದ ಕಾಳು ಮೆಣಸು ಗುರುತಿಸಲ್ಪಟ್ಟಿದ್ದು ಕಡಿಮೆ. ಆದರೆ ಪಣಿಯೂರು ತಳಿಗೆ ಸ್ಫರ್ಧೆ ನೀಡಬಲ್ಲ ಸಿಗಂದಿನಿ ತಳಿ ಬಹುವೈಶಿಷ್ಟ್ಯದಿಂದ ಹೆಸರು ಮಾಡಿದ್ದರೂ ಅದರ ಪೇಟೆಂಟ್ ಸಿಗುವುದು ಅಷ್ಟು ಸುಲಭಸಾಧ್ಯವಿರಲಿಲ್ಲ.
ಈ ಕಷ್ಟದ ಕೆಲಸವನ್ನು ಮಾಡಿ ಗ್ರಾಮೀಣ ರೈತನನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗುವಂತೆ ಮಾಡಿದ್ದು ಸ್ಥಳಿಯ ಅಧಿಕಾರಿಗಳ ತಂಡ. ಕೊಚ್ಚಿಯ ಡಾ. ವೇಣುಗೋಪಾಲ ಈ ಸಾಹಸದ ಹಿಂದಿನ ಶಕ್ತಿ. ಈ ತಳಿಯ ಹೆಸರು ದಾಖಲಿಸಲು ಕೇರಳಕ್ಕೆ ಹಲವು ಬಾರಿ ಭೇಟಿ ನೀಡಿದ ರಮಾಕಾಂತ ಹೆಗಡೆ ಜೊತೆಗಿದ್ದವರು ಸಿದ್ಧಾಪುರ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಾದ ಮಹಾಬಲೇಶ್ವರ ಬಿ.ಎಸ್. ಮತ್ತು ದಾದಾಸಾಹೇಬ್ ದೇಸಾಯಿ. ಈ ಅಧಿಕಾರಿಗಳ ಆಸಕ್ತಿ, ಮುತುವರ್ಜಿ, ಶ್ರಮದಿಂದ ಪೇಟೆಂಟ್ ಮಾಡಿಸಿಕೊಂಡ ರಮಾಕಾಂತ್ ಹೆಗಡೆ ಈಗ ಬೆಳೆಯುತ್ತಿರುವ ಗಿಡಗಳಿಂದ ನರ್ಸರಿ ಮಾಡಿ ಉತ್ತಮ ಆದಾಯವನ್ನೂ ಪಡೆಯುತಿದ್ದಾರೆ. ಅವರೇ ಹೇಳುವ ಪ್ರಕಾರ ಸಿಗಂದಿನಿಯ ವೈಶಿಷ್ಟ್ಯ ಮತ್ತು ಈ ವೈಶಿಷ್ಟ್ಯವನ್ನು ದಾಖಲು ಮಾಡಲು ಪಟ್ಟ ಶ್ರಮವನ್ನು. ದಿನಬೆಳಗಾಗುವುದರೊಳಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾದ ಹಳ್ಳಿಯ ರೈತ ರಮಾಕಾಂತ್ ಹೆಗಡೆ ತಮ್ಮ ಹತ್ತು ವರ್ಷಗಳ ಶ್ರಮ ಅದಕ್ಕೆ ತೋಟಗಾರಿಕಾ ಇಲಾಖೆ ಅಲ್ಲಿಯ ಅಧಿಕಾರಿಗಳ ಶ್ರಮವನ್ನು ಪ್ರಶಂಸಿಸುವುದನ್ನು ಮರೆಯುವುದಿಲ್ಲ. ಈ ಪರಿಶ್ರಮದಿಂದ ರಾಜ್ಯದ ವಿಶಿಷ್ಟ ತಳಿಯೆಂದು ಗುರುತಿಸಲ್ಪಟ್ಟ ಸಿಗಂದಿನಿ ದೇಶದ ಬಹುವೈಶಿಷ್ಟ್ಯದ ಮೂರನೇ ತಳಿಯೆಂದು ಗುರುತಿಸಲ್ಪಟ್ಟಿದೆ.
- ಸಿಗಂದಿನಿ ತಳಿ ಬೆಳೆಸಿ ಪೇಟೆಂಟ್ ಪಡೆದ ರಮಾಕಾಂತ ಹೆಗಡೆ ಹುಣಸೆಕೊಪ್ಪ ರಿಗೆ ತೋಟಗಾರಿಕೆ ಇಲಾಖೆಯಿಂದ ಸನ್ಮಾನ.
- ಡಾ. ವೇಣುಗೋಪಾಲ, ಮಹಾಬಲೇಶ್ವರ್ ಬಿ.ಎಸ್. ಮತ್ತು ದಾದಾಸಾಹೇಬ್ ದೇಸಾಯಿಯವರ ಸಹಕಾರಕ್ಕೆ ರಮಾಕಾಂತ್ ಹೆಗಡೆಯವರಿಂದ ಉಪಕಾರ ಸ್ಮರಣೆ, ಕೃತಜ್ಞತೆ ಅರ್ಪಣೆ.
- ತೋಟಗಾರಿಕಾ ನಿರ್ಧೇಶನಾಲಯದಿಂದ ರಮಾಕಾಂತ ಹೆಗಡೆಯವರ ಜೊತೆಗೆ ವ್ಯಾವಹಾರಿಕ ಒಪ್ಪಂದ
ಕ್ಕೆ ಕರಾರು