

ಗೌರಿ ಗಣೇಶ ಹಬ್ಬವೆಂದರೆ ಎತ್ತರದ ಮೂರ್ತಿ,ವಾರವಿಡೀ ಸಂಬ್ರಮ ಹಲವು ದಿನಗಳ ತಯಾರಿ ಕಣ್ಮುಂದೆ ಬರುತ್ತದೆ. ಆದರೆ ಕಳೆದ ವರ್ಷದಿಂದ ಕುಗ್ಗಿದ ಗಣೇಶ ಚತುರ್ಥಿ ಸಂಬ್ರಮ ಈ ವರ್ಷ ಮರುಕಳಿಸುವ ಸಾಧ್ಯತೆ ಇದೆಯಾ ಎನ್ನುವ ಪ್ರಶ್ನೆ ಹಲವರಲ್ಲಿದೆ. ರಾಜ್ಯದಾದ್ಯಂತ ಗಣೇಶ್ ಚತುರ್ಥಿಯ ಮಾರ್ಗಸೂಚಿ ಇನ್ನೂ ಪ್ರಕಟವಾಗಿಲ್ಲ ಆದರೆ ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ ಸಾರ್ವಜನಿಕ ಗಣೇಶ್ ಚತುರ್ಥಿಗೆ ಅವಕಾಶವಿಲ್ಲ ಎಂದು ಜಿಲ್ಲಾಡಳಿತ ಪ್ರಕಟಿಸಿದೆ.
ಈ ಅನಿಶ್ಚಿತತೆ ದ್ವಂದ್ವಗಳ ನಡುವೆ ಉತ್ತರ ಕನ್ನಡ ಜಿಲ್ಲೆಯ ಗಣೇಶ ಚತುರ್ಥಿಯ ತಯಾರಿ ವಿಶೇಶವೆನಿಸಿದೆ. ಮಲೆನಾಡಿನಲ್ಲಿ ಮನೆಮನೆಯಲ್ಲಿ ಗೌರಿ ಪೂಜಿಸುವ ರೂಢಿಇದೆಯಾದರೂ ಗಣೇಶನ ಆರಾಧನೆಗಾಗಿ ಇಲ್ಲಿ ಸಾರ್ವಜನಿಕ ಗಣೇಶೋತ್ಸವಗಳನ್ನು ಸಂಘಟಿಸುವುದು ಸಾಮಾನ್ಯ. ಕಳೆದ ವರ್ಷ ಕಳೆಗುಂದಿದ್ದ ಗೌರಿ- ಗಣೇಶ ಹಬ್ಬ ಕರೋನಾ ಆತಂಕ, ಸರ್ಕಾರದ ನಿರ್ಬಂಧಗಳ ನಡುವೆ ಕೂಡಾ ಈ ವರ್ಷ ಸರಾಗವಾಗಿ ನಡೆಯುವ ಸಾಧ್ಯತೆ ಎದ್ದು ಕಾಣುತ್ತಿದೆ. ಗಣೇಶ ಚತುರ್ಥಿಯ ಗಣಪತಿ ಮೂರ್ತಿ ನಿರ್ಮಾಣದ ಕೆಲಸ ಎರಡ್ಮೂರು ತಿಂಗಳ ಕಾಯಕದ ಹವ್ಯಾಸ. ಈ ವರ್ಷ ಕೂಡಾ ಜಿಲ್ಲೆಯಲ್ಲಿ ಗಣೇಶ ಚತುರ್ಥಿಗಾಗಿ ಮೂರ್ತಿಗಳ ನಿರ್ಮಾಣ ನಡೆಯುತ್ತಿದೆ.
ಉತ್ತರ ಕನ್ನಡ ಸೇರಿದಂತೆ ರಾಜ್ಯದಾದ್ಯಂತ ಈ ವರ್ಷ ಸಾರ್ವಜನಿಕ ಗಣೇಶ ಉತ್ಸವ ಆಚರಣೆಯನ್ನು ಸರ್ಕಾರ ನಿಷೇಧಿಸಿದೆ. ಮನೆ, ದೇವಸ್ಥಾನಗಳಲ್ಲಿ ಕೋವಿಡ್ ನಿಯಮ ಪಾಲನೆ, ಪರಿಸರ ಪೂರಕ ವ್ಯವಸ್ಥೆಗಳೊಂದಿಗೆ ಸರಳವಾಗಿ ಗೌರಿ-ಗಣೇಶ ಹಬ್ಬ ಆಚರಿಸಲು ಕೋವಿಡ್ ಮಾರ್ಗಸೂಚಿಯಲ್ಲಿ ನಿರ್ಧೇಶಿಸಲಾಗಿದೆ. ಜನದಟ್ಟಣಿ,ಪೆಂಡಾಲ್ ನಿರ್ಮಾಣ,ಮೈಕ್ ವ್ಯವಸ್ಥೆ,ಜನಸಂದಣಿಗೆ ಅವಕಾಶ ಮಾಡಿಕೊಡುವ ಸಂಘಟಕರು, ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಲು ಮಾರ್ಗಸೂಚಿಯಲ್ಲಿ ಆದೇಶಿಸಲಾಗಿದೆ.
ಹಿಂದೆಲ್ಲಾ ದೊಡ್ಡ, ಎತ್ತರದ ಹೇರಂಬನ ಮೂರ್ತಿ ಕೊಂಡು ಸಾರ್ವಜನಿಕ ಗಣೇಶೋತ್ಸವ ಆಚರಿಸುತಿದ್ದ ಜನರು ಈಗ ಕಾಲ-ಪರಿಸ್ಥಿತಿಯ ಅನಿವಾರ್ಯತೆಗೆ ತಕ್ಕಂತೆ ಬದಲಾಗುತಿದ್ದಾರೆ. ಕಳೆದ ವರ್ಷ ತಯಾರಿಸಿದ್ದ ಗಜಮುಖನನ್ನು ಶಾಸ್ತ್ರದಂತೆ ಪ್ರತಿಷ್ಠಾಪಿಸಿ ಅಲ್ಲೇ ವಿಸರ್ಜಿಸಿದ್ದ ದೃಷ್ಟಾಂತ ಈಗ ನೆನಪು ಮತ್ತು ಚರಿತ್ರೆ. ಕರೋನಾ ಭಯ, ಸರ್ಕಾರದ ನಿಯಮ,ನಿರ್ಬಂಧಗಳ ಹಿನ್ನೆಲೆಯಲ್ಲಿ ಗಣೇಶ ಚತುರ್ಥಿಯ ಆಚರಣೆ ಪಕ್ಕಾ ಆಗದಿದ್ದರೂ ಜನರು ದೊಡ್ಡ ಗಣೇಶನ ಬದಲು ಕುಳ್ಳ ಗಜಾನನನನ್ನು ತಯಾರಿಸಲು ಹೇಳಿದ್ದಾರೆ. ಎನ್ನುವುದು ಈ ವರ್ಷದ ಬದಲಾವಣೆ.
ಗಾತ್ರ-ವೈಭವ, ಅದ್ಧೂರಿಯ ನಿರ್ಮಾಣದ ಬದಲು ಚಿಕ್ಕ ಏಕದಂತನನ್ನು ಪ್ರತಿಷ್ಠಾಪಿಸಲು ಯೋಜಿಸಿರುವ ಆಸ್ತಿಕರು ಪರಿಸ್ಥಿತಿಗೆ ತಕ್ಕಂತೆ ಬದಲಾಗುವ ವಿದ್ಯಮಾನಕ್ಕೆ ಅಣಿಯಾಗಿದ್ದಾರೆ.ಸರ್ಕಾರದ ನಿಯಮ, ನಿರ್ಬಂಧದ ಆತಂಕದ ನಡುವೆ ಕೂಡಾ ಗಣೇಶ ಮೂರ್ತಿಗಳ ನಿರ್ಮಾಣಕ್ಕೆ ಬುಕ್ ಆಗಿರುವ ಸಂಖ್ಯೆ ಹಿಂದಿನ ವರ್ಷಗಳಿಗಿಂತ ಕಡಿಮೆ ಏನಲ್ಲ. ಎಲ್ಲಾ ಅನಿಶ್ಚಿತತೆಗಳ ನಡುವೆ ಕಳೆದ ಎರಡು ತಿಂಗಳುಗಳಿಂದ ಅವಿರತವಾಗಿ ದುಡಿಯುತ್ತಿರುವ ಗಣೇಶ ಮೂರ್ತಿ ತಯಾರಕರು ನೂರಾರು ವಿಭಿನ್ನ, ವಿಶೇಶ ಗಣಪತಿಗಳನ್ನು ಸಿದ್ಧಗೊಳಿಸಿದ್ದಾರೆ. ಸಾರ್ವಜನಿಕ ಪ್ರದೇಶ, ಅವರವರ ಮನೆ,ವಟಾರಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಪೂರ್ವತಯಾರಿಯಲ್ಲಿರುವ ಜನರಿಗೆ ಗಣೇಶ ಮೂರ್ತಿಗಳು ಸಿದ್ಧವಾಗಿವೆ, ಕೋವಿಡ್ ನಿಯಮ-ನಿರ್ಬಂಧಗಳ ಪ್ರಕಾರವಾದರೂ ಗೌರಿ-ಗಣೇಶ ಹಬ್ಬ ಆಚರಿಸುವ ಮುನ್ಸೂಚನೆ ಇದು ಎನ್ನುತ್ತಾರೆ ಗಣಪತಿ ಮೂರ್ತಿ ತಯಾರಿಸುವ ಕಲಾವಿದ ಸತ್ಯನಾರಾಯಣ ಹೆಗಡೆ.
ಗಣೇಶ್ ಚತುರ್ಥಿ ಸಮಯದಲ್ಲಿ ವಾತಾವರಣ, ಕರೋನಾ ಸ್ಥಿತಿ-ಗತಿ ಹೇಗಿರುತ್ತೋ ಗೊತ್ತಿಲ್ಲ. ಆದರೆ ನಾವು ಈ ಹಿಂದಿನ ವರ್ಷಗಳಂತೆ ಈ ವರ್ಷ ಕೂಡಾ ಗಣಪತಿ ಮೂರ್ತಿ ನಿರ್ಮಾಣಕ್ಕೆ ಮೂರು ತಿಂಗಳು ಮೀಸಲಿಟ್ಟಿದ್ದೇವೆ. ಆರೇಳು ಜನರು ಮೂರು ತಿಂಗಳು ನಿರಂತರವಾಗಿ ಸಮಯಕೊಟ್ಟು ಶೃ ದ್ಧೆಯಿಂದ ಮಾಡುವ ಗಣಪತಿ ಮೂರ್ತಿಗಳ ನಿರ್ಮಾಣ ಕಾರ್ಯ ನಡೆದಿದೆ. ತುಸು ವ್ಯತ್ಯಾಸವೆಂದರೆ…. ಈ ವರ್ಷ ದೊಡ್ಡ ಗಣೇ ಶನ ಮೂರ್ತಿಗಳಿಗೆ ಬೇಡಿಕೆ ಇಲ್ಲ. ಗಾತ್ರದಲ್ಲಿ ಬದಲಾವಣೆಯಾದರೂ ಸಂಖ್ಯಾ ಪ್ರಮಾಣ ಕಡಿಮೆ ಆಗಿಲ್ಲ. ಬೇರೆ ಹಬ್ಬಗಳಂತೆ ಗಣೇಶನ ಹಬ್ಬವನ್ನು ಆಚರಿಸದೆ ಇರುವುದು, ಮುಂದೂಡುವುದು ಕಡಿಮೆ. – ಸತ್ಯಾನಾರಾಯಣ ಹೆಗಡೆ ಗೋಡೆ, ಕಲಾವಿದ.






