ಓದುಗರು, ವೀಕ್ಷಕರೊಂದಿಗೆ ಸಂವಾದದತ್ತ ಒಂದು ನೋಟ

ಪತ್ರಿಕೆಗಳಲ್ಲಿ ಓದುಗ ಮತ್ತು ದೃಶ್ಯಮಾಧ್ಯಮದಲ್ಲಿ ವೀಕ್ಷಕ ಇವರೊಂದಿಗೆ ಸಂಪಾದಕ ಅಥವಾ ಮಾಧ್ಯಮ ಮಾಲಿಕರ ನೇರ ಸಂಪರ್ಕ, ಸಂವಹನ ಸಾಧ್ಯವೆ? ಇಂಥದ್ದೊಂದು ಅಪರೂಪದ ಸಂಪರ್ಕ ಸೇತು,ಸಂವಹನ ಪ್ರಕ್ರೀಯೆ ಸಣ್ಣ ಪತ್ರಿಕೆಗಳಲ್ಲಿ, ಮಾಸಿಕ,ಪಾಕ್ಷಿಕ, ವಾರಪತ್ರಿಕೆಗಳಲ್ಲಿ ಸಾಧ್ಯವಾಗುತ್ತದೆ.

ನಾವೆಲ್ಲಾ ಪತ್ರಿಕೋದ್ಯಮ,ಮಾಧ್ಯಮಲೋಕವನ್ನು ಬೆರಗುಗಣ್ಣಿನಿಂದ ನೋಡುತಿದ್ದಾಗ ನಮಗೆಲ್ಲಾ ಲಂಕೇಶ್, ಜಾಣಗೆರೆ ವೆಂಕಟರಾಮಯ್ಯ,ಹಾಮಾ ನಾಯಕ,ಸಂತೋಷ್ ಕುಮಾರ ಗುಲ್ವಾಡಿ,ವಿಷ್ಣು ನಾಯಕ, ವೈಎನ್ಕೆ, ರವಿಬೆಳಗೆರೆ,ಅಗ್ನಿ ಶ್ರೀಧರ್ ಜಯಂತ್ ಕಾಯ್ಕಿಣಿ, ವೆಂಕಟ್ರಮಣಗೌಡ, ಶಶಿಧರ್ ಭಟ್,ನಾಗೇಶ್ ಹೆಗಡೆ, ಸೇರಿದ ಇನ್ನೂ ಅನೇಕರು ಬೆಳಗುವ ಸೂರ್ಯನಂತೆ ರಾಚುತಿದ್ದರು.

ಪತ್ರಿಕೋದ್ಯಮ, ಮಾಧ್ಯಮಲೋಕದ ಬಗ್ಗೆ ಅಷ್ಟಾಗಿ ತಿಳಿದಿರದ ನನ್ನಂಥ ಅನೇಕರಿಗೆ ಮಾಧ್ಯಮಕ್ಷೇತ್ರವೆಂದರೆ ನಮ್ಮ ಐಡೆಂಟಿಟಿ ಕ್ರೈಸಿಸ್ ನ ಒಂದು ಮೂಲವಾಗಿತ್ತಷ್ಟೇ…

ಈ ಹುಡುಕಾಟ,ಹುಡುಗಾಟಿಕೆಯ ಸಮಯದಲ್ಲಿ ಸರಿಯಾಗಿ ಕನ್ನಡ ಓದಲು ಬರೆಯಲು ಬರುತಿದ್ದ ನಮ್ಮ ಕೆಲವೇ ಸ್ನೇಹಿತರಿಗೆ ನಮ್ಮ ಗುರುಗಳಾಗಿದ್ದ ರಾಜೇಂದ್ರ ನಾಯ್ಕ, ವಿ.ಜಿ.ಗಣೇಶ್, ಮಹೇಶ್ ನಾಯಕ, ಜಯಕರಭಂಡಾರಿ, ಮಾಂಗ್ಳೇಕರ್ ಸೇರಿದ ಕೆಲವರು ತರಗತಿಯ ಒಳಗೆ ಮತ್ತು ಎನ್.ಎಸ್.ಎಸ್, ಕನ್ನಡ ಚಿಂತನ ವೇದಿಕೆಗಳಲ್ಲಿ ಕ್ಲಾಸ್ ರೂಮ್ ಹೊರಗೆ ಬರೆಯುವುದು, ಭಾಷಣ, ಚರ್ಚೆ ಮಾಡುವ ಅವಕಾಶ ಮಾಡಿಕೊಡುತಿದ್ದರು.

ಇದೇ ಅವಧಿಯಲ್ಲಿ ನಮ್ಮ ಹಿರಿಯಣ್ಣನಂತಿದ್ದ ಎಮ್.ಎಚ್. ನಾಯ್ಕ ಯಾನೆ ಮಂಜುಕಾನಗೋಡು, ದೇವರಾಯ ನಾಯ್ಕ,ಸಿ.ಜೆ.ಗೌಡ, ಅಣ್ಣಯ್ಯ ಹೆಗಡೆಯವರನ್ನೊಳಗೊಂಡ ಕೆಲವರು ಪತ್ರಿಕೆ ಓದುತ್ತಾ, ಕೆಲವರು ಹಂಚುತ್ತಾ,ತಮಗರಿವಿಲ್ಲದಂತೆ ಒಂದು ಸಂವಹನಕೂಟವನ್ನು ಚಾಲ್ತಿಗೆ ತಂದಿದ್ದರು. ಈ ಬಳಗದಲ್ಲಿ ಕಿರಿಯ, ಕೆಲವೊಮ್ಮೆ ತಮಾಶೆಯ ಮಟೀರಿಯಲ್ ಗಳಾಗಿ ಬಳಕೆಯಾಗುತ್ತಾ ನಾವೆಲ್ಲಾ ಈ ಸಂವಹನ ಸಂಸ್ಕೃತಿಯ ಭಾಗವಾಗುತಿದ್ದೆವು…. ಹೀಗೆ ನಮ್ಮ ಪತ್ರಿಕೋದ್ಯಮ, ಟಿ.ವಿ.ಲೋಕ, ಈಗಿನ ನ್ಯೂಸ್ ಪೋರ್ಟಲ್ ಯುಟ್ಯೂಬ್ ಗಳ ವರೆಗೆ ನಾವು ಸವೆಸಿದ್ದು ಸರಿಸುಮಾರು 30 ವರ್ಷಗಳ ಸುದೀರ್ಘ ಸಮಯ!

ಈ ಅವಧಿಯಲ್ಲಿ ನಮಗೆ ಮಾನಸಗುರುಗಳಂತಿದ್ದು ದೂರದಿಂದಲೇ ಆಶೀವರ್ದಿಸಿದವರು ಕುವೆಂಪು, ತೇಜಸ್ವಿ, ಜಯಕರ ಭಂಡಾರಿ,ಯಶವಂತ ಚಿತ್ತಾಲ,ಲಂಕೇಶ್,ದಿನೇಶ್ ಅಮ್ಮಿನಮಟ್ಟು, ಜೋಗಿ, ನಾಗೇಶ್ ಹೆಗಡೆ ಇಂಥ ಅನೇಕರು ಇವರೊಂದಿಗೆಲ್ಲಾ ನಾವು ಓದುಗರಾಗಿ ಸಂವಹನ ನಡೆಸಿದ್ದೇವಾ? ಇಂಥ ಬರಹಗಾರರು ಸಂಪಾದಕರು, ಅಂಕಣಕಾರರು, ಸಾಹಿತಿಗಳ ಜೊತೆಗೆ ನಮ್ಮ ನೇರ ಸಂವಹನ ಪರೋಕ್ಷವಾಗೇ ಆಗುತಿತ್ತಾ… ಇವೆಲ್ಲಾ ಬರೆದರೆ ಕಾದಂಬರಿಯಾಗಬಹುದು… ಈ ಬರಹಕ್ಕೆ ಪ್ರೇರಣೆಯಾದ ದಿನೇಶ್ ಅಮ್ಮಿನಮಟ್ಟು ಅವರ ಒಂದು ಬರಹದೊಂದಿಗೆ ಈ ಬರವಣಿಗೆಗೆ ಅಲ್ಪವಿರಾಮ ಈ ಓದು ನನ್ನಲ್ಲಿ ಹುಟ್ಟಿಸಿದ ಆಸ್ಫೋಟವನ್ನು ಆಗಾಗ ಕಣಕಣಗಳಂತೆ ಹಂಚಿಕೊಳ್ಳೋಣವೆ?

ಈ ನಡುವೆ ನಮ್ಮ ಜಿಲ್ಲೆಯ ನಮ್ಮೂರ ಉತ್ತಮ ಪತ್ರಕರ್ತ ಜಯರಾಮ ಹೆಗಡೆ ತಮ್ಮ ಜನಮಾಧ್ಯಮದಲ್ಲಿ ವಿಭಿನ್ನ ಬರಹ ಅಂಕಣಗಳ ಮೂಲಕ ಓದುಗರನ್ನು educate ಮಾಡುತಿದ್ದರು. ಇಂಥ ಅನೇಕ ವಿಚಾರಗಳನ್ನು ಉದ್ದೀಪಿಸಿದ ಅಮ್ಮಿನಮಟ್ಟು ಬರಹ ಓದಿ ನಂತರ ನಾವು ಆಗೊಮ್ಮೆ… ಈಗೊಮ್ಮೆ ಎನ್ನುವಂತಾದರೂ ತೆರೆದುಕೊಳ್ಳೋಣವೆ?. ಸಂ.(-ಕನ್ನೇಶ್ ಕೋಲಶಿರ್ಸಿ)

ಪತ್ರಿಕೆ, ಚಾನೆಲ್ ಗಳು ಸೇರಿದಂತೆ ಒಟ್ಟು ಮಾಧ್ಯಮದ ಅಂತರಂಗದ ಕಾರ್ಯವ್ಯವಸ್ಥೆಯ ಬಗ್ಗೆ ಬಹುತೇಕ ಓದುಗರು/ವೀಕ್ಷಕರಲ್ಲಿ ಅಜ್ಞಾನವಿದೆ. ಇವರಿಗೆ ಪತ್ರಿಕೆಗಳೆಂದರೆ ವರದಿಗಾರರು, ಅಂಕಣಕಾರರು, ಕೆಲವೊಮ್ಮೆ ಸಂಪಾದಕರು ಮಾತ್ರ, ಅದೇ ರೀತಿ ಚಾನೆಲ್ ಗಳೆಂದರೆ ವರದಿಗಾರರು ಮತ್ತು ಆ್ಯಂಕರ್ ಗಳು.ಪತ್ರಿಕೆಯಲ್ಲಿ ಸಂಪಾದಕನ ನಂತರದ ಸ್ಥಾನ ಉಪಸಂಪಾದಕನೆಂದೇ ತಿಳಿದುಕೊಂಡವರಿದ್ದಾರೆ. ನನಗೆ ಉಪಸಂಪಾದಕ ಹುದ್ದೆಯಿಂದ ಮುಖ್ಯ ವರದಿಗಾರ ಸ್ಥಾನಕ್ಕೆ ಬಡ್ತಿ ನೀಡಿದಾಗ ‘ಯಾಕೆ ಸಾರ್, ಸಂಪಾದಕ ಹುದ್ದೆಯಿಂದ ತೆಗೆದಿದ್ದು? ಎಂದು ಕೇಳಿದ ಅಮಾಯಕ ಓದುಗರಿದ್ದಾರೆ.

ಪತ್ರಿಕೆ/ಚಾನೆಲ್ ಗಳೊಳಗೆ ಬೇರೆಬೇರೆ ಹಂತದಲ್ಲಿ ನರಮಂಡಲದಂತೆ ಕೆಲಸ ಮಾಡುವ ನೂರಾರು ಉದ್ಯೋಗಿಗಳಿದ್ದಾರೆ. ಚಾನೆಲ್ ಗಳ ಕಾರ್ಯವಿಧಾನದ ಬಗ್ಗೆ ನನಗೂ ಹೆಚ್ಚು ಗೊತ್ತಿಲ್ಲ. ಪತ್ರಿಕೆಗಳಲ್ಲಿ ಸುದ್ದಿ, ಸಂಪಾದಕೀಯ, ಸಾಪ್ತಾಹಿಕ, ಸಿನೆಮಾ, ನಗರ,ಗ್ರಾಮಾಂತರ, ಆರ್ಥಿಕ, ಮಹಿಳೆ.. ಹೀಗೆ ಹತ್ತಾರು ವಿಭಾಗಗಳಿರುತ್ತವೆ, ಅಲ್ಲಿ ಮುಖ್ಯಸ್ಥರಾಗಿ ಕೆಲಸಮಾಡುವವರಿದ್ದಾರೆ. ನಮಗೆ ವರದಿಗಾರರು ಪುರವಣಿಗಳ ಮುಖ್ಯಸ್ಥರನ್ನು ಹೊರತುಪಡಿಸಿದರೆ ಉಳಿದವರ ಪರಿಚಯವೇ ಇರುವುದಿಲ್ಲ. ಸೋಷಿಯಲ್ ಮೀಡಿಯಾ ಪ್ರವೇಶವಾದ ನಂತರ ಅದರಲ್ಲಿ ಸಕ್ರಿಯರಾಗಿರುವ ಪತ್ರಿಕೆಯ ಉದ್ಯೋಗಿಗಳೇ ಪತ್ರಿಕೆಯ ಸಂಪಾದಕರೆಂದು ತಿಳಿದುಕೊಂಡವರಿದ್ದಾರೆ.ಸಂಪಾದಕೀಯ ಪುಟದ ಉಸ್ತುವಾರಿ ನೋಡಿಕೊಳ್ಳುವವರಿಗೆ ಸಂಪಾದಕರ ಜೊತೆ ನೇರ ಸಂಬಂಧ ಇರುತ್ತದೆ.ಯಾವ ಸಂಪಾದಕ ಕೂಡಾ ಪ್ರತಿದಿನ ಸಂಪಾದಕೀಯ ಬರೆಯುವುದಿಲ್ಲ. (ಬರವಣಿಗೆ ಗೊತ್ತಿದ್ದವರು ಆಗೊಮ್ಮೆ ಈಗೊಮ್ಮೆ ಬರೆಯಬಹುದು) ಸಂಪಾದಕೀಯ ಪುಟದ ಉಸ್ತುವಾರಿ ವಹಿಸಿರುವ ಸಹಾಯಕ ಸಂಪಾದಕ, ಪ್ರತಿದಿನ ಬೆಳಿಗ್ಗೆ ಸಂಪಾದಕರ ಜೊತೆ ಚರ್ಚಿಸಿ ವಿಷಯವನ್ನು ಆಯ್ದುಕೊಂಡು ಅವರು ಸೂಚಿಸುವ ನಿಲುವಿಗೆ ತಕ್ಕ ಹಾಗೆ ಬರೆಯುತ್ತಾನೆ, ಇಲ್ಲವೇ ಬೇರೆಯವರಿಂದ ಬರೆಸುತ್ತಾನೆ.

ಸಂಪಾದಕೀಯದ ನಿಲುವು ಬರೆಯುವವನ ನಿಲುವು ಆಗಬೇಕಾಗಿಲ್ಲ. ಇಂಗ್ಲೀಷ್ ಪತ್ರಿಕೆಗಳಲ್ಲಿ ಸಂಪಾದಕೀಯ ಬರವಣಿಗೆಗಾಗಿಯೇ ಹಿರಿಯ ಸಂಪಾದಕರು/ಸಂಪಾದಕೀಯ ಸಲಹೆಗಾರರನ್ನು ನೇಮಕ ಮಾಡಿಕೊಂಡಿರುತ್ತಾರೆ. ಅವರು ನಿತ್ಯ ಕಚೇರಿಯಲ್ಲಿ ಹಾಜರಿ ಹಾಕದೆ ಸಂಪಾದಕ ಸೂಚಿಸುವ ವಿಷಯದ ಮೇಲೆ 300-400 ಶಬ್ದಗಳ ಸಂಪಾದಕೀಯ ಬರೆದು ಲಕ್ಷಗಟ್ಟಳೆ ಸಂಬಳ ತೆಗೆದುಕೊಳ್ಳುತ್ತಾರೆ. ಸಂಪಾದಕೀಯದ ನಿಲುವು ಅವನದ್ದಲ್ಲ, ಸಂಪಾದಕರದ್ದು. ಆತನಿಗೆ ಅದು ಕೆಲಸದ ಭಾಗ ಅಷ್ಟೆ.

ನಾನು ಪ್ರಜಾವಾಣಿಯಲ್ಲಿ ಬರೆದಿರುವ ಅಂಕಣಗಳ ಬಗ್ಗೆ ಈಗಲೂ ಚರ್ಚೆ ನಡೆಯುತ್ತಿದೆ. ಆದರೆ ಮೊದಲು ಆಗೊಮ್ಮೆ ಈಗೊಮ್ಮೆ ಸಂಪಾದಕೀಯ ಬರೆಯುತ್ತಿದ್ದರೂ , 2000 ವರ್ಷದ ಏಪ್ರಿಲ್ ನಿಂದ 2013ರ ಮೇ ತಿಂಗಳ ವರೆಗೆ ನಿರಂತರವಾಗಿ ನೂರಾರು ಸಂಪಾದಕೀಯ ಬರೆದಿದ್ದೇನೆ. (ಆದರೆ ನನ್ನ ಆತ್ಮಸಾಕ್ಷಿಗೆ ಇಲ್ಲವೇ ನನ್ನ ಸೈದ್ಧಾಂತಿಕ ನಿಲುವಿಗೆ ವಿರುದ್ದವಾಗಿ ಒಂದೇ ಒಂದು ಸಂಪಾದಕೀಯ ಬರೆದಿಲ್ಲ, ಕೆಲವೊಮ್ಮೆ ಸಹಮತ ಇಲ್ಲದೆ ಇದ್ದರೂ ನನ್ನ ಸಂಪಾದಕರು ಆಕ್ಷೇಪ ಎತ್ತಿರಲಿಲ್ಲ, ಹೀಗೆಯೆ ಬರೆಯಬೇಕೆಂದು ಒತ್ತಡವನ್ನು ಅವರು ಎಂದೂ ಹಾಕಿಲ್ಲ.)ಈ ಅಂತರಂಗದ ವಿಷಯಗಳ ಬಗ್ಗೆ ನಮ್ಮ ಓದುಗರಿಗೆ ತಿಳಿದೇ ಇಲ್ಲ. ಇದಕ್ಕೆ ಕಾರಣ ನಮ್ಮ ಸಂಪಾದಕರು ಮತ್ತು ಮಾಲೀಕರು ತಮ್ಮ ಕೋಣೆಗಳ ಬಾಗಿಲು ಮುಚ್ಚಿಕೊಂಡಿರುವುದು.

ಸಂಪಾದಕೀಯ ವ್ಯವಸ್ಥೆಯ ಬಗ್ಗೆ ಬಿಡಿ ಸಂಪಾದಕೀಯ ನಿಲುವು, ಮಾಲೀಕರ ಕಷ್ಟ-ನಷ್ಟಗಳ ಬಗ್ಗೆಯೂ ಸಂಪಾದಕರು/ಮಾಲೀಕರು ಓದುಗರ ಜೊತೆ ಚರ್ಚಿಸುವುದಿಲ್ಲ. ಇದರಿಂದಾಗಿ ಓದುಗರು ಮತ್ತು ಪತ್ರಿಕೆಯ ನಡುವಿನ ಸಂವಹನಕ್ಕೆ ಸೇತುವೆಯೇ ಇಲ್ಲ. ತಾವು ಕೊಡುವ ನಾಲ್ಕೈದು ರೂಪಾಯಿಯಲ್ಲಿಯೇ ಪತ್ರಿಕೆಗಳು ಕೋಟಿಗಟ್ಟಲೆ ದುಡ್ಡು ಮಾಡ್ತಿವೆ ಎಂದೇ ನಮ್ಮ ಬಹಳಷ್ಟು ಓದುಗರು ತಿಳಿದುಕೊಂಡಿದ್ದಾರೆ. ನಾನು ತಿಳಿದುಕೊಂಡ ಹಾಗೆ ಕನ್ನಡದ ಯಾವ ಪತ್ರಿಕೆಯೂ ಕೋಟ್ಯಂತರ ರೂಪಾಯಿ ಲಾಭದಲ್ಲಿ ಇಲ್ಲ. ಕೊರೊನಾ ಕಾಲದ ನಂತರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.

ಲಂಕೇಶ್ ತಮ್ಮ ಪತ್ರಿಕೆಯ ಮಾರಾಟ ದರವನ್ನು 50 ಪೈಸೆ ಹೆಚ್ಚು ಮಾಡಿದರೆ ಅದರ ಬಗ್ಗೆ ಟಿಪ್ಪಣಿಯೊಂದನ್ನು ಬರೆದು ಆರ್ಥಿಕ ನಷ್ಟವನ್ನು ವಿವರಿಸಿ ಯಾಕೆ ದರ ಏರಿಕೆ ಅನಿವಾರ್ಯ ಎಂದು ಓದುಗರಿಗೆ ಮನದಟ್ಟು ಮಾಡಿಕೊಡುತ್ತಿದ್ದರು. ಓದುಗರು ಅರ್ಥಮಾಡಿಕೊಂಡು ಬೆಂಬಲಿಸುತ್ತಿದ್ದರು.ಈ ರೀತಿ ಅಂತರಂಗವನ್ನು ಬಿಚ್ಚಿಡುವ ಪ್ರಯತ್ನವನ್ನು ನಮ್ಮ ಯಾವ ಸಂಪಾದಕರೂ ಸರಿಯಾಗಿ ಮಾಡಿಲ್ಲ. ವಡ್ಡರ್ಸೆ ರಘುರಾಮ ಶೆಟ್ಟಿಯವರು ‘ಓದುಗರೊಡನೆ ಸಂಪಾದಕ’ ಎಂಬ ಅಂಕಣವನ್ನೇ ಬರೆದು ಓದುಗರೊಡನೆ ಸಂವಾದ ನಡೆಸುತ್ತಿದ್ದರು. ಮುಂಗಾರು ಪತ್ರಿಕೆ ಆಗಾಗ ಓದುಗರ ಸಮಾವೇಶ ನಡೆಸುತ್ತಿತ್ತು. ದಿ ಹಿಂದೂ ಪತ್ರಿಕೆ ಓದುಗರ ಸಂಪಾದಕನನ್ನು ನೇಮಿಸಿದ್ದಾರೆ. ಅವರು ಓದುಗರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸುತ್ತಾರೆ. (ಇದೇನು ಹೊಸತಲ್ಲ, ಇದಕ್ಕೊಂದು ಇತಿಹಾಸ ಇದೆ, ಮುಂದೆಂದಾದರೂ ದೀರ್ಘವಾಗಿ ಬರೆಯುತ್ತೇನೆ)ನಾನು ಪ್ರಜಾವಾಣಿಯಲ್ಲಿದ್ದಾಗ ನಮ್ಮ ಸಂಪಾದಕರನ್ನು ‘ಓದುಗರೊಂದಿಗೆ ಸಂಪಾದಕ’ ಅಂಕಣ ಪ್ರಾರಂಭಿಸಿ, ‘ಓದುಗರ ಸಂಪಾದಕ’ ನೇಮಿಸಿ ಎಂದೆಲ್ಲ ಬೆನ್ನುಬಿದ್ದಿದ್ದೆ.

ಒಂದು ಹಂತದಲ್ಲಿ ಓದುಗರ ಸಂಪಾದಕನನ್ನು ನೇಮಿಸಲು ಸಂಪಾದಕರು ಒಪ್ಪಿಕೊಂಡಿದ್ದರು. ನನ್ನ ಎಲ್ಲ ಸಲಹೆಗಳಿಗೆ ಕಲ್ಲು ಹಾಕುವುದನ್ನೇ ಚಾಳಿ ಮಾಡಿಕೊಂಡಿದ್ದ ದಂಡಪಿಂಡನೊಬ್ಬನ ಕಿತಾಪತಿಯಿಂದ ಅದು ಕಾರ್ಯರೂಪಕ್ಕೆ ಬರಲಿಲ್ಲ.ವಾರ್ತಾಭಾರತಿಯ ಇತ್ತೀಚಿನ ಸಂಪಾದಕೀಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆಯನ್ನು ಗಮನಿಸಿ ಇದನ್ನು ಬರೆದೆ. ಸಂಪಾದಕೀಯದ ಬಗ್ಗೆ ಭಿನ್ನಾಭಿಪ್ರಾಯವಿದ್ದರೆ ಮೊದಲು ಆ ಪತ್ರಿಕೆಯ ಸಂಪಾದಕರಿಗೆ ಬರೆಯಿರಿ, ಅವರು ಪ್ರಕಟಿಸದೆ ಇದ್ದರೆ ಅವಕಾಶ ಇದ್ದಲ್ಲಿ ಪ್ರಕಟಿಸಿ ಎನ್ನುವುದು ನನ್ನ ಕೋರಿಕೆ.ಇದೇ ರೀತಿ ವಾರ್ತಾಭಾರತಿ ಪತ್ರಿಕೆಯ ಸಂಪಾದಕರು “ಓದುಗರೊಡನೆ ಸಂಪಾದಕ’ ಎಂಬ ಅಂಕಣ ಪ್ರಾರಂಭಿಸಿ ಓದುಗರ ಜೊತೆ ಸಂವಹನಕ್ಕೆ ಸೇತುವೆಯೊಂದನ್ನು ಕಟ್ಟಬೇಕೆಂದು ಮನವಿ. (-ದಿನೇಶ್ ಅಮ್ಮಿನಮಟ್ಟು.)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *