ಇಂದು ಬಹುತೇಕ ಪ್ರದೇಶಗಳಲ್ಲಿ ಒಂದು ಅರ್ಧಕಪ್ ಕಾಫಿ, ಟೀ, ಕಷಾಯಗಳಂಥ ಪೇಯಗಳಿಗೆ ಕನಿಷ್ಟ ಹತ್ತು ರೂಪಾಯಿಯಿಂದ ನೂರು ರೂಪಾಯಿಯ ವರೆಗೆ ದರ ನಿಗದಿಯಾಗಿದೆ. ಒಂದು ಕೇಜಿ ಎಣ್ಣೆ, ಅಥವಾ ಲೀಟರ್ ಅಡುಗೆ ಎಣ್ಣೆಯ ಬೆಲೆ 100 ರಿಂದ ಎರಡು ನೂರು ರೂಪಾಯಿ. ಮೀನು ಕಿಲೋ ಗೆ ಕನಿಷ್ಟ ನೂರರಿಂದ ಸಾವಿರ ರೂಪಾಯಿ, ಕೋಳಿಮಾಂಸ, ಕುರಿಮಾಂಸಗಳ ಬೆಲೆ ಕನಿಷ್ಟ 200 ರಿಂದ ಸಾವಿರದ ಹತ್ತಿರ. ಹೀಗೆ ದಿನಬಳಕೆಯ ವಸ್ತುಗಳ ಬೆಲೆ-ದರ,ಮೌಲ್ಯ ಏರುತ್ತಲೇ ಸಾಗಿದೆ.
ನಾವು 2000-2001 ರಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಓದಿಕೊಂಡು ಕೆಲಸಕ್ಕೆಂದು ಹೋದಾಗ ನಮಗೆ 3ರಿಂದ 5 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಮಾಸಿಕ ವೇತನ ಸಿಗುವ ಸಾಧ್ಯತೆಗಳೇ ಇರಲಿಲ್ಲ. ಈಗ ನಿಶ್ಚಿತ ಅರ್ಹತೆ,ಶಿಕ್ಷಣ, ಅನುಭವ,ಯೋಗ್ಯತೆಗಳ್ಯಾವೂ ಇರದ ಉದ್ಯೋಗಾಕಾಂಕ್ಷಿಗಳು ತಮಗೆ 15 ರಿಂದ 30 ಸಾವಿರ ಮಾಸಿಕ ವೇತನ ಕೇಳುತ್ತಾರೆ.
ತಾಲೂಕಾ ಮಟ್ಟದ ಮಾಧ್ಯಮ ಪ್ರತಿನಿಧಿಗಳಿಗೆ ಈಗಲೂ 5 ಸಾವಿರಕ್ಕಿಂತ ಹೆಚ್ಚು ವೇತನ ನೀಡುವ ಪತ್ರಿಕೆಗಳು ವಿರಳ. ಈ ಸ್ಥಿತಿಯಲ್ಲಿ ಮಾಧ್ಯಮಲೋಕದ ಗಂಧ-ಗಾಳಿ ಇಲ್ಲದ ಸಾರ್ವಜನಿಕರು ಮಾಧ್ಯಮಗಳಿಗೆ ಬುದ್ಧಿ ಹೇಳುವುದು, ಮಾಧ್ಯಮಗಳು ನ್ಯಾಯಾಧೀಶರಂತೆ ವರ್ತಿಸುವುದುಮಾಮೂಲು.
ಈ ಸ್ಥಿತಿಯಲ್ಲಿ ಪತ್ರಿಕೋದ್ಯಮ, ಮಾಧ್ಯಮ ನಡೆಸುವ ಕರ್ಚು ಮಿತಿಮೀರಿ ಏರುತ್ತಿವೆ. ನಾವು 2006 ರಲ್ಲಿ ಸಮಾಜಮುಖಿ ಪಾಕ್ಷಿಕ ಪತ್ರಿಕೆ ಪ್ರಾರಂಭಿಸಿದ್ದಾಗ ಅದರ ಬೆಲೆ5 ರೂಪಾಯಿ ನಂತರ ಐದು ವರ್ಷಗಳ ನಂತರ ಇಂಥದ್ದೇ 12 ಪುಟಗಳ ವಾರಪತ್ರಿಕೆ ಮುದ್ರಿಸಿ ಹಂಚಬೇಕಾದರೆ ಅದರ ಮುಖಬೆಲೆ 8 ರಿಂದ ಹತ್ತು ರೂಪಾಯಿ ನಂತರ 12 ಪುಟಗಳ ಒಂದು ವಾರಪತ್ರಿಕೆಗೆ 12 ರೂಪಾಯಿ ಸಂಗ್ರಹಿಸದೆ ಬೇರೆ ದಾರಿ ಇರಲಿಲ್ಲ.
ಈ ಅವಧಿಯಲ್ಲೆಲ್ಲಾ ನಾವು ಅಂಚೆಮುಖಾಂತರ ನಮ್ಮ ಓದುಗ ದೊರೆಗಳಿಗೆ ಕಳುಹಿಸುತಿದ್ದ ಪತ್ರಿಕೆಗಳಿಗೆ ಪ್ರತಿಯಾಗಿ ನಮಗೆ ತಲುಪುತಿದ್ದ ಚಂದಾಹಣ ನಮ್ಮ ವೆಚ್ಚದ ಪ್ರತಿಶತ50% ರಷ್ಟೂ ಅಲ್ಲ. 2015 ರ ನಂತರ ರಾಷ್ಟ್ರೀಯವಾದಿಗಳ ಅಧಿಕಾರ, ಆಡಳಿತದಲ್ಲಿ ಲಕ್ಷಾಂತರ ಪಾಕ್ಷಿಕ, ವಾರಪತ್ರಿಕೆಗಳು ಮುಚ್ಚಿಹೋದವು. ತಮ್ಮ ಪರವಾಗಿ ಬರೆಯುವ, ಬೆಂಬಲಿಸುವ ಮಾಧ್ಯಮಗಳನ್ನು ಸಾಕಿದ ದೇಶಪ್ರೇಮಿಗಳು ಸ್ಥಳಿಯ ಪತ್ರಿಕೆ, ಮಾಧ್ಯಮ ಕ್ಷೇತ್ರವನ್ನು ಕತ್ತು ಹಿಚುಕಿ ಕೊಂದುಬಿಟ್ಟರು. ಈ ಅವಧಿಯಲ್ಲಿ ಕೂಡಾ ಅಧಿಕಾರಸ್ಥರು,ಜನಪ್ರತಿನಿಧಿಗಳ ಮೂಲಕ ಹರಸಾಹಸ ಮಾಡಿ ಮಾಸಪತ್ರಿಕೆ,ಪಾಕ್ಷಿಕ, ವಾರಪತ್ರಿಕೆಗಳನ್ನು ಉಳಿಸಿಕೊಂಡವರಿದ್ದಾರೆ.ಇವೆಲ್ಲಾ ಆಗುತಿದ್ದಾಗ ಭಾರತದ ನೀರೋ ಈಗಿನಂತೆಯೇ ಪಿಟೀಲು ಬಾರಿಸುತಿದ್ದ.
ದೇಶಪ್ರೇಮದ ಸೋಗಿನ ಈ ನಾಟಕಕಾರರ ಪರಿವಾರಕ್ಕೆ ಬಾರಿಸಿ ಬುದ್ಧಿಕಲಿಸಿ ತಿದ್ದಬೇಕಾದ ಮಾಧ್ಯಮರಂಗ ಮಂಡಿಯೂರಿ ಸಾಷ್ಟಾಂಗನಮಸ್ಕಾರ ಮಾಡುವ ಅನಿವಾರ್ಯತೆ ಉಂಟಾಯಿತು. ಇದನ್ನು ಸುವರ್ಣಯುಗ ಎನ್ನುವ ಕೆಲವು ಜನರು, ಮಾಧ್ಯಮಗಳು ತಿನ್ನುವ ಅನ್ನ ಮಾತಾಂಧತೆಯ ವಾರಸುದಾರರು ನೀಡುವ ಭಿಕ್ಷೆ ಎನ್ನುವ ಸತ್ಯ ಒಪ್ಪಿಕೊಳ್ಳುವುದು ಹಾಗಿರಲಿ ಆ ಬಗ್ಗೆ ಚರ್ಚಿಸದೆ ಪಲಾಯನ ಮಾಡುತ್ತಾರೆ.
ಇದೆಲ್ಲಾ ನಡೆಯುತಿದ್ದಾಗ ಪತ್ರಕರ್ತರು ಅದೇ ಕವಡೆಕಾಸಿನಲ್ಲಿ ಬದುಕುತಿದ್ದರು. ಓದುಗದೊರೆ ಮಾತ್ರ ಭಾರತದ ನೀರೋನಂತೆ ಮಾಧ್ಯಮಗಳ ಬಗ್ಗೆ ಮಾತನಾಡದೆ, ಪತ್ರಿಕಾಗೋಷ್ಠಿ, ನಡೆಸದೆ ಕನಿಷ್ಠ ಪ್ರತಿಕ್ರೀಯೆ ಕೂಡಾ ನೀಡದೆ ನಿರ್ಲಿಪ್ತರಾಗಿದ್ದರು. ಇದು ಕೇವಲ ಮಾಧ್ಯಮ ರಂಗದ ಕತೆಯೆ? ರೈತರನ್ನು ಕೇಳಿ ದೆಹಲಿಯಲ್ಲಿ ಹಲವು ತಿಂಗಳುಗಳಿಂದ ಸರ್ಕಾರ, ವ್ಯವಸ್ಥೆಯ ವಿರುದ್ಧ ಪ್ರತಿಭಟಿಸುತಿದ್ದವರಿಗೆ ಯಾವ ಪಟ್ಟ ನೀಡಲಾಯಿತು.
ಪತ್ರಕರ್ತ, ಉದ್ಯಮಿ, ರಾಜಕಾರಣಿ, ವ್ಯಾಪಾರಸ್ಥ ಪ್ರಾಮಾಣಿಕವಾಗಿದ್ದರೆ ಆತನನ್ನು ಗಾಂಧಿ ಎಂದು ಹೀಗಳೆಯವ ಜನ ಬರಿಕಾಲಲ್ಲಿ ಭಾರತ ಸುತ್ತಿ ವಿವೇಕ ತುಂಬಿದ ಗಾಂಧಿಜಿಯವರನ್ನು ಬಿಟ್ಟಿದ್ದಾರಾ? ಗಾಂಧೀಜಿ ಈ ಹೊಣೆಗೇಡಿ, ಮತದಾರ, ಜನಸಾಮಾನ್ಯ, ಮತದಾರನಂತೆ ನಿರ್ಲಿಪ್ತರಾಗಿದ್ದರೆ ನಾವ್ಯಾಕೆ ಅವರನ್ನು ಮತ್ತೆ ಮತ್ತೆ ದೃಷ್ಟಾಂತವಾಗಿ ಬಳಸುತಿದ್ದೆವು. ಕಳೆದ 25 ವರ್ಷಗಳಲ್ಲಿ ಶ್ರಮಿಕನ ದಿನಗೂಲಿ 50 ರಿಂದ 500 ರೂಪಾಯಿಯಾಗಿದೆ. ಭಾರತದ ಪ್ರಧಾನ ಮಂತ್ರಿ ವಿದೇಶಿ ಪ್ರವಾಸಕ್ಕಾಗಿ ಬಳಸಿದ್ದು ಲಕ್ಷಾಂತರ ಕೋಟಿ,
ಶ್ರೀರಾಮುಲು, ಜನಾರ್ಧನ ರೆಡ್ಡಿ, ಯಡಿಯೂರಪ್ಪ, ಅನಂತಕುಮಾರ ಹೆಗಡೆ, ಶಿವಕುಮಾರ, ಕುಮಾರಸ್ವಾಮಿ ಸೇರಿದ ಅನೇಕರು 25 ವರ್ಷಗಳ ಕೆಳಗೆ ಬಿಕ್ಷಾಧಿಪತಿ, ಲಕ್ಷಾಧಿಪತಿಗಳಾಗಿದ್ದವರು ಈಗ ಕನಿಷ್ಟ ನೂರು ಕೋಟಿಯಿಂದ ಲಕ್ಷಾಂತರ ಕೋಟಿಗಳ ವರೆಗೆ ತಮ್ಮ ಆದಾಯ ಹೆಚ್ಚಿಸಿಕೊಂಡಿದ್ದಾರೆ. ಮತ ಮಾರಿಕೊಳ್ಳುವ ಮತದಾರ ಒಂದು ಮತಕ್ಕೆ 10 ರೂಪಾಯಿಯಿಂದ ಹತ್ತುಸಾವಿರದ ವರೆಗೆ ಹೆಚ್ಚಿಸಿಕೊಂಡಿದ್ದಾನೆ! ಪತ್ರಿಕೋದ್ಯಮದಲ್ಲಿ ವಿಷ ಬಿತ್ತುತ್ತಿರುವ ಉದ್ಯಮಿ ಸಂಕೇಶ್ವರ ತನ್ನ ಕಪ್ಪುಹಣದ, ರದ್ದಿಪತ್ರಿಕೆಯನ್ನು ಒಂದು ರೂಪಾಯಿಗೆ ಮಾರುತಿದ್ದ! ಮತ್ತುಳಿದ ಪತ್ರಿಕೆಗಳು ಈಗಲೂ ತಮ್ಮ ಪತ್ರಿಕೆಗಳ ಬೆಲೆಯನ್ನು ಐದು ರೂಪಾಯಿಯಿಂದ 6-7 ರೂಪಾಯಿಗಳಿಗಿಂತ ಹೆಚ್ಚು ಏರಿಸಿಲ್ಲ. ಈ 8-10 ಪುಟಗಳ ಒಂದು ಪತ್ರಿಕೆಗೆ ತಗುಲುವ ಉತ್ಪಾದನಾ ವೆಚ್ಚಕಡಿಮೆಯೆಂದರೂ 40 ರಿಂದ 50 ರೂಪಾಯಿ.
ಗೌರವಾನ್ವಿತ ಓದುಗ, ವೀಕ್ಷಕ ದೊರೆ ಈಗಲೂ ದೇಶದ ಭವಿಷ್ಯ, ಮಾಧ್ಯಮಗಳ ಚೀರಾಟ,ರಾಜಕಾರಣಿಗಳ ಸ್ವೇಚ್ಛಾಚಾರಗಳ ಬಗ್ಗೆ ಮಾತನಾಡುತ್ತಲೇ ಇದ್ದಾನೆ. ಬಹುಶ: ಮಾತನಾಡುತ್ತಲೇ ಇರುತ್ತಾನೆ ಕೂಡಾ. ಬ್ರಟೀಷರು ಬಂದು ಮೂಲನಿವಾಸಿಗಳಿಗೆ ಶಿಕ್ಷಣ, ಇಂಗ್ಲೀಷ್ ಕಲಿಸಬೇಕಾಯಿತು. ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ತಂದು ಏನೆಲ್ಲಾ ಮಾಡಿದರೋ ಅದರ ಹತ್ತರಷ್ಟು ತುರ್ತುಪರಿಸ್ಥಿತಿ ಈಗ ಅನಧೀಕೃತವಾಗಿ ಜಾರಿಯಾಗಿದೆ. ಇದನ್ನು ಪ್ರಶ್ನಿಸಿದರೆ,ಪ್ರತಿಭಟಿಸಿದರೆ ಆಳುವವರು ದೇಶದ್ರೋಹಿಗಳೆನ್ನುತ್ತಾರೆ. ಇದನ್ನೆಲ್ಲಾ ಓದುಗ, ವೀಕ್ಷಕ ದೊರೆಗಳಾದ ಗೌರವಾನ್ವಿತ ಜನಸಾಮಾನ್ಯರು ಗಮನಿಸುತಿದ್ದಾರೆ ಎಂದುಕೊಳ್ಳೋಣವೆ? ಮತ್ತೆ ಮುಂದುವರಿಯೋಣ……
ಸಾಲ ಕೊಡದ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ…!!
ನಾಡು ಕಂಡ ಹಿರಿಯ ಮುತ್ಸದ್ದಿ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಕಳೆದ ಎರಡು ವರ್ಷಗಳಿಂದ ಹಿಂದುಳಿದವರಿಗೆ ಸಾಲ ಸೌಲಭ್ಯ ನೀಡದಿರುವ ವಿಷಯ ವಿಧಾನಸಭೆಯಲ್ಲಿಂದು ಕಾವೇರಿದ ಚರ್ಚೆಗೆ ಕಾರಣವಾಗಿ ಮಾತಿನ ಚಕಮಕಿ ಜರುಗಿತು.
ಬೆಂಗಳೂರು: ನಾಡು ಕಂಡ ಹಿರಿಯ ಮುತ್ಸದ್ದಿ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಕಳೆದ ಎರಡು ವರ್ಷಗಳಿಂದ ಹಿಂದುಳಿದವರಿಗೆ ಸಾಲ ಸೌಲಭ್ಯ ನೀಡದಿರುವ ವಿಷಯ ವಿಧಾನಸಭೆಯಲ್ಲಿಂದು ಕಾವೇರಿದ ಚರ್ಚೆಗೆ ಕಾರಣವಾಗಿ ಮಾತಿನ ಚಕಮಕಿ ಜರುಗಿತು.
ಚಿಂತಾಮಣಿ ಶಾಸಕ ಕೃಷ್ಣ ರೆಡ್ಡಿ ಪ್ರಶ್ನೋತ್ತರ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಸರ್ಕಾರ ಯಾರ ಪರ ಕೆಲಸ ಮಾಡುತ್ತಿದೆ. ಅರಸು ನಿಗಮದ ಧ್ಯೇಯ ಮತ್ತು ಉದ್ದೇಶ ಏನು ? ಈ ರೀತಿ ನಿರ್ಲಕ್ಷಿಸುವುದಾದರೆ ನಿಗಮ ಯಾಕಿರಬೇಕು ಎಂದು ಏರಿದ ದನಿಯಲ್ಲಿ ಪ್ರಶ್ನಿಸಿದರು.
ಇದಕ್ಕೆ ದನಿಗೂಡಿಸಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಕೆಂಡಾಮಂಡಲರಾಗಿ ಅರಸು ಅವರಿಗೆ ಈ ರೀತಿ ಸರ್ಕಾವೇ ಅಪಮಾನ ಮತ್ತು ನಿರ್ಲಕ್ಷ್ಯ ಮಾಡುವುದಾದರೆ ಶಾಸಕರಾಗಿ ನಾವು ಹೇಗೆ ಜನರಿಗೆ ಮುಖ ತೋರಿಸಬೇಕು.
ಸಾಲಸೌಲಭ್ಯಕ್ಕೆ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಸರ್ಕಾರ ಹಣವನ್ನೇ ನೀಡುವುದಿಲ್ಲ. ಗ್ರಾಮೀಣ ಭಾಗದಲ್ಲಿ ಶಾಸಕರ ಪರಿಸ್ಥಿತಿ ಏನಾಗುತ್ತದೆ ಯೋಚಿಸಿ ಎಂದರು. ಪ್ರಜಾಪ್ರಭುತ್ವದಲ್ಲಿ ಅಧಿಕಾರಿಗಳ ಮನೆಗೆ ಹೋಗಿ ಯಾರು ಕೇಳುವುದಿಲ್ಲ. ಶಾಸಕರ ಮನೆಗೆ ಬಂದು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಈ ಸುಖಕ್ಕೆ ನಾವು ಶಾಸಕರಾಗಿ ಪ್ರಯೋಜನವೇನು ಎಂದು ಅಸಮಾಧಾನ ಹೊರಹಾಕಿದರು.
ಮಳವಳ್ಳಿ ಕ್ಷೇತ್ರದ ಶಾಸಕ ಅನ್ನದಾನಿ ನಿಗಮದ ಅಧ್ಯಕ್ಷನಾಗಿದ್ದೆ. ಹಿಂದುಳಿದವರ ಅಭಿವೃದ್ಧಿಗಾಗಿ 250 ಕೋಟಿ ರೂಪಾಯಿ ಸಾಲ ಸೌಲಭ್ಯ ಕಲ್ಪಿಸಲಾಗಿತ್ತು. ಈಗಿನ ಸರ್ಕಾರಕ್ಕೆ ಏನಾಗಿದೆ. ಯಾಕೆ ಹಣ ಬಿಡುಗಡೆ ಮಾಡಲಿಲ್ಲ. ಇದೇನಾ ಸಾಮಾಜಿಕ ನ್ಯಾಯ ಎಂದರು.
ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ 2019-2020, 2020-2021ರ ಸಾಲಿಗೆ ಈಗಾಗಲೇ ಅನುದಾನ ಮಂಜೂರು ಮಾಡಲಾಗಿದೆ. 2019-2020ನೇ ಸಾಲಿನಲ್ಲಿ 250 ಕೋಟಿ ರೂಪಾಯಿ ಪೈಕಿ 165 ಕೋಟಿ ರೂಪಾಯಿ ಹಾಗೂ 2020-2021ನೇ ಸಾಲಿನಲ್ಲಿ 127 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಆದರೆ ಹೆಚ್ಚುವರಿ ವೆಚ್ಚವನ್ನು ಸಾಲ ಮರುಪಾವತಿ ಮತ್ತು ಹಿಂದಿನ ಸಾಲಿನ ಉಳಿಕೆ ಮೊತ್ತದಿಂದ ಭರಿಸಲಾಗಿದೆ. ಈಗ ಸರ್ಕಾರಕ್ಕೆ ಸದಸ್ಯರ ಭಾವನೆ ಅರ್ಥವಾಗಿದ್ದು ಮುಖ್ಯಮಂತ್ರಿ ಜತೆ ಮಾತನಾಡಿ ಹಣಕಾಸಿನ ಇತಿ-ಮಿತಿ ಅರಿತು ನಿಗಮಕ್ಕೆ ಹಣ ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವ ಶ್ರೀನಿವಾಸ ಪೂಜಾರಿ ಹೇಳಿದರು. ಈ ಸಂದರ್ಭದಲ್ಲಿ ಕೆಲ ಸದಸ್ಯರು ಪಕ್ಷಬೇಧ ಮರೆತು ಮಾತಿನ ಚಕಮಕಿ, ವಾಗ್ವಾದದಲ್ಲಿ ನಿರತರಾದ ಪರಿಣಾಮ ಸದನದಲ್ಲಿ ಕೆಲ ಕಾಲ ಕೋಲಾಹಲದ ವಾತಾವರಣ ಏರ್ಪಟ್ಟಿತು. (kpc)