

ಕಾಡುಪ್ರಾಣಿ ಸೆರೆಗೆ ಹಾಕಿದ್ದ ಉರುಳಿಗೆ ಸಿಲುಕಿ ಅಪರೂಪದ ಕಪ್ಪು ಚಿರತೆಯೊಂದು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೆಂಗಳೆ ಗ್ರಾಮದ ಮಂಟಕಾಲ ರಸ್ತೆ ಬಳಿ ನಡೆದಿದೆ.

ಶಿರಸಿ: ಕಾಡುಪ್ರಾಣಿ ಸೆರೆಗೆ ಹಾಕಿದ್ದ ಉರುಳಿಗೆ ಸಿಲುಕಿ ಅಪರೂಪದ ಕಪ್ಪು ಚಿರತೆಯೊಂದು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೆಂಗಳೆ ಗ್ರಾಮದ ಮಂಟಕಾಲ ರಸ್ತೆ ಬಳಿ ನಡೆದಿದೆ.
4 ವರ್ಷದ ಹೆಣ್ಣು ಕಪ್ಪು ಚಿರತೆ ಮೃತಪಟ್ಟಿದ್ದು, ಬನವಾಸಿ ಅರಣ್ಯ ವ್ಯಾಪ್ತಿಯಲ್ಲಿ ಪತ್ತೆಯಾದ ಮೊದಲ ಕಪ್ಪು ಚಿರತೆ ಇದಾಗಿದೆ ಎಂದು ತಿಳಿದು ಬಂದಿದೆ.


ನಸುಕಿನ ಜಾವ ಕಪ್ಪು ಚಿರತೆಯು ಬೇಲಿಗೆ ಸಿಲುಕಿ ಒದ್ದಾಡುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ರವಾನಿಸಿದ್ದರು. ಉರುಳು ತಂತಿಯಿಂದ ಸೊಂಟದ ಭಾಗಕ್ಕೆ ತೀವ್ರ ಪೆಟ್ಟಾದ್ದ ಪರಿಣಾಮ ಚಿರತೆ ಮೃತಪಟ್ಟಿದೆ. (kpc)



