ನಾಡಿನ ಸಿಂಹದ ಅವಕಾಶವಾದಿತನ ಮತ್ತು ಕಾಡಿನ ಹುಲಿಯ ತ್ಯಾಗದ ಸ್ಮರಣೆ

ಅಕ್ಷರ ಮಾಂತ್ರಿಕ ಲಂಕೇಶ್ ಪ್ರಭಾವಕ್ಕೊಳಗಾಗದವರಿಲ್ಲ ಎನ್ನುವ ಕಾಲದಲ್ಲಿ ಕಣ್ಣುಬಿಟ್ಟ ನನ್ನಂಥ ಅನೇಕರಿಗೆ ಲಂಕೇಶ್ ಮಾನಸಗುರು. ಪ್ರಜಾವಾಣಿಯಲ್ಲಿ ಲಂಕೇಶ್ ಅಂಕಣ ಬರೆಯುತಿದ್ದರು ಎಂದು ಕೇಳಿದ್ದ ನಮಗೆ ಲಂಕೇಶ್ ಇಂಗ್ಲೀಷ್ ಉಪನ್ಯಾಸಕರಾಗಿದ್ದರು ಎನ್ನುವುದು ಅರಿವಿತ್ತಷ್ಟೇ. ಒಂದೆರಡು ದಶಕ ಲಂಕೇಶ್ ಪ್ರಭಾವಳಿಯ ಗಾಳಿ ತಾಕಿಸಿಕೊಂಡ ನಮ್ಮಂ ಥ ಅನೇಕರು ಸೇರಿ ವೈದಿಕ ಮನಸ್ಥಿತಿಯ ತಥಾಕಥಿತ ಹಿಂದುತ್ವವಾದಿಗಳೊಂದಿಗೆ ಜಗಳಕ್ಕೆ ಬೀಳುತಿದ್ದೆವು. ಕಾರವಾರದ ಕಾಲೇಜಿನಲ್ಲಿ ಲಂಕೇಶ್ ಪತ್ರಿಕೆ ಅಂಚೆಯಲ್ಲಿ ಬರುವುದನ್ನೇ ಕಾಯುತ್ತಾ ಕುಳಿತು ತುಂಟಾಟ, ಟೀಕೆ ಟಿಪ್ಪಣಿ, ಈ ವಾರ ಓದಿದ ಮೇಲೆ ಲಂಕೇಶ್ ಬೇರೆಯವರ ಕೈವಶವಾಗುತಿತ್ತು. ನೆಲ್ಸನ್ ಮಂಡೇಲಾ, ಕಾಫ್ಕಾ, ಬೋದಿಲೇರ್, ಶೇಕ್ಸ್ಫಯರ್ ಶೆಲ್ಲಿಗಳ ಬಗ್ಗೆ ಲಂಕೇಶ್ ನಲ್ಲಿ ಓದಿ ಬೆರಗು ಮೂಡಿಸಿಕೊಂಡಿದ್ದ ನಮಗೆ ಇಂಗ್ಲೀಷ್ ಸಾಹಿತ್ಯ ಓದಲಾಗಲಿಲ್ಲವಲ್ಲ ಎನ್ನುವ ಕೊರಗೊಂದು ಲಾಗಾಯ್ತಿನಿಂದಲೂ ಭದ್ರವಾಗಿದೆ.

ವಿಚಿತ್ರವೆಂದರೆ ನಾವೆಲ್ಲಾ ಲಂಕೇಶ್ ಬಗ್ಗೆ ಒಲವಿನಿಂದ ಬದುಕುತಿದ್ದ ಕಾಲದಲ್ಲಿ ಲಂಕೇಶ್ ಬ್ರಷ್ಟರಾಗಿದ್ದರು ಎಂದು ಒಬ್ಬ ವೈದಿಕ ಪತ್ರಕರ್ತ ದೂರಿದ್ದ,ಲಂಕೇಶ್ ಬಗ್ಗೆ ಓದಿಕೊಂಡಿದ್ದ ಪ್ರತಾಪ ಸಿಂಹ ಲಂಕೇಶ್ ಪಥದಲ್ಲಿ ಸಾಗಿದರೆ ಲಾಭವಿಲ್ಲ ಎಂದರಿತು ವೈದಿಕರ ಸೇವೆಗೆ ಸಿದ್ಧನಾಗಿದ್ದಾಗ ನಾವೆಲ್ಲಾ ಸಿಂಹನನ್ನು ಕೆಣಕುತಿದ್ದೆವು. ಸತೀಶ ಅಡಿಂಜೆ ಥರದವರಿಗೆ ಬ್ರಾಹ್ಮಣನೆಂಬ ಕಾರಣಕ್ಕೆ ಮಂಗಳೂರು ವಿಶ್ವವಿದ್ಯಾಲಯ ಚಿನ್ನದ ಪದಕ ಕೊಡುತ್ತೆ ಎಂದು ಅಲವತ್ತುಕೊಳ್ಳುತಿದ್ದ ಆತ ಅವರಿಗೆ ಅವರ ಶೈಲಿಯಲ್ಲೇ ಪಾಠ ಕಲಿಸಬೇಕು ಎಂದು ಗೊಣಗುತಿದ್ದ. ಆಗಲೇ ಸುರಕ್ಷಿತ ವಲಯದವರ ಸ್ನೇಹ ಗಿಟ್ಟಿಸಿಕೊಂಡಿದ್ದ ಸಿಂಹ ಬರುಬರುತ್ತಾ ವೈದಿಕರ ಸೇವಕನಾಗಿ ಬದಲಾಗಿ ಹೋದ.

ಇವೆಲ್ಲಾ ಘಟಿಸುತಿದ್ದ ಕಾಲದಲ್ಲೇ ನಾವು ಕ್ರಾಂತಿಗೆ ಹಂಬಲಿಸುತಿದ್ದೆವು. ಲಂಕೇಶರ ಬರಹ, ಬಂಗಾರಪ್ಪ, ಇಬ್ರಾಹಿಂ, ಹೆಗಡೆಗಳ ಭಾಷಣಕ್ಕೆ ಮರುಳಾಗುತಿದ್ದೆವು. ಹೆಗಡೆ ಜನತಾ ದಳ ಯು ಪಕ್ಷವನ್ನು ಬಿ.ಜೆ.ಪಿ.ಜೊತೆ ಹೊಂದಾಣಿಕೆ ಮಾಡಿಸಿ ಜನತಾದಳ, ಕಾಂಗ್ರೆಸ್ ಬೆನ್ನುಮುರಿದ ಸಮಯದಲ್ಲಿ ನಾವು ಗೌಡರ ಪರ ವಾದ ಮಾಡುತಿದ್ದೆವು. ಹೀಗೆ ನಮ್ಮ ವೈಚಾರಿಕತೆ, ಬದುಕು ಕುಂಟುತ್ತಾ ಸಾಗುತಿದ್ದಾಗ ನಮಗೆ ಸ್ಫೂರ್ತಿಯಾಗಿದ್ದ ಲಂಕೇಶ್ ಮರೆಯಾದರು. ಅದಕ್ಕೂ ಮೊದಲೇ ಕುವೆಂಪು ಕಾಲವಾಗಿದ್ದರು. ಈ ದಶಕಗಳಲ್ಲೇ ತೇಜಸ್ವಿ ನಿಧನರಾದರು, ಕೊನೆಗೆ ಅನಂತಮೂರ್ತಿ.

ಈ ಸಾವುಗಳೆಲ್ಲಾ ಮರೆಯದ ಸಮಯದಲ್ಲಿ ಗೌರಿ ಲಂಕೇಶ್ ದುಷ್ಕರ್ಮಿಗಳ ಗುಂಡಿಗೆ ಬಲಿಯಾದರು. ಲಂಕೇಶ್ ರ ಬೌದ್ಧಿಕತೆ ಆಪ್ತವಾಗಿದ್ದ ನಮಗೆ ಗೌರಿ ಲಂಕೇಶ್ ಸಾಹಿತ್ಯಿಕವಾಗಿ ಅಷ್ಟು ಆಪ್ತವಾಗದಿದ್ದರೂಗೌರಿ ಬದ್ಧತೆ ಲಂಕೇ ಶ್ ರಿಗಿಂತ ತುಸು ಹೆಚ್ಚೇ ಇಷ್ಟವಾಗತೊಡಗಿತು.

ಈ ವಾತಾವರಣದ ಮಧ್ಯೆ ಚಿಕ್ಕಮಂಗಳೂರಿನಲ್ಲಿ ಗೌರಿ ನಕ್ಸಲ್ ಗಳ ಭೇಟಿ ಮಾಡಿ ಕೆಲವರನ್ನು ಮನ ಒಲಿಸತೊಡಗಿದರಲ್ಲ ಆಗ ಸ್ನೇಹಿತ ಆನಂದ ಗೌರಿ ಜೊತೆ ತೆರಳಿದ್ದ. ಆನಂದ ಗೌರಿ ಬಗ್ಗೆ ಹೇಳಿದ್ದ ಅವನ ಅನುಭವ ಗೌರಿ ಮೇಲೆ ನಮಗೆ ವಿಶೇಶ ಅಭಿಮಾನ ತರಿಸಿತ್ತು. ಕೇವಲ ಶಾಂತಿ, ಸೌಹಾರ್ಧತೆಗೆ ಮಿಡಿಯುವ ಗೌರಿ ನಕ್ಸಲೈಟ್ ಗಳು, ಧಮನಿತರು, ಹೋರಾಟಗಾರರನ್ನು ತನ್ನ ತಮ್ಮ,ಮಗ ಎಂದು ಭಾವಿಸುತಿದ್ದ ಅವರ ಪ್ರೀತಿಗೆ ಸಿಕ್ಕ ಹೊಸ ತಲೆಮಾರಿನವರಲ್ಲಿ ನಾನೂ ಒಬ್ಬ ಎಂದುಕೊಳ್ಳಲು ನನಗಂತೂ ಹೆಮ್ಮೆ.

ಗೌರಿ ಲಂಕೇಶ್ ಹಿತಶತ್ರುಗಳು, ಮತಾಂಧರು,ಸೋಗಲಾಡಿಗಳನ್ನು ಜಾಡಿಸುತಿದ್ದಾಗ ಕೋಮುವಾದಿಗಳು ಅವರ ವಿರುದ್ಧ ವ್ಯೂಹ ರಚಿಸಿದ್ದರೆ ಎನ್ನುವ ಅನುಮಾನ ಬರುವ ರೀತಿ ದುಷ್ಟರ ಧರ್ಮಾಂಧತೆಗೆ ಬಲಿಯಾದರು. ಹೀಗೆ ಅವರ ದುರಂತ ಅಂತ್ಯದ ಸುದ್ದಿಕೇಳುವ ಸರಿಸುಮಾರ ಐದಾರು ವರ್ಷಗಳ ಕೆಳಗೆ ಹೊಸನಗರದ ಸ್ವಾಮಿಯೊಬ್ಬರ ಭಕ್ತರೆನ್ನುವ ಕೆಲವು ವ್ಯಕ್ತಿಗಳು ದಾಖಲಿಸಿದ ಪ್ರಕರಣಗಳ ವಿಚಾರಣೆಗೆ ಉತ್ತರ ಕನ್ನಡ, ಶಿವಮೊಗ್ಗಕ್ಕೆ ಬರುತಿದ್ದಾಗ ಹಿರಿಯ ವಕೀಲ ಎನ್.ಡಿ. ನಾಯ್ಕರ ಮಾಹಿತಿ ಮೇರೆಗೆ ಗೌರಕ್ಕನನ್ನು ಸಿದ್ಧಾಪುರ ನ್ಯಾಯಾಲಯದಲ್ಲಿ ಮೊದಲು ಭೇಟಿಯಾದೆ.

ನ್ಯಾಯಾಲಯದಲ್ಲಿ ನಂತರ ಕೋರ್ಟ್ ಆವರಣದ ಹೊರಗೆ ಹರಟುತ್ತಾ ಲಂಕೇಶ್ ಪತ್ರಿಕೆ ಓದದಿದ್ದರೆ ನಾನಂತೂ ಪತ್ರಿಕೋದ್ಯಮ ಪ್ರವೇಶಿಸುತ್ತಿರಲಿಲ್ಲ ಎಂದೆ, ಫೈನ್ ಎಂದ ಗೌರಿ ಪತ್ರಿಕೋದ್ಯಮ ಯಾವ ಕಾಲದಲ್ಲೂ ಬಡವರು, ಇಲ್ಲದವರ ಪರವಾಗಿರಲಿಲ್ಲ ಅಲ್ವೆ ಎಂದರು. ಅಪ್ಪನ ಕುರಿತು ಹೆಚ್ಚೇನೂ ಮಾತನಾಡದೆ ಮುಂದೆ ಸಾಗಬೇಕಾದ ದಾರಿ ದೂರ ಎಂದರು. ಇದಾದ ನಂತರ ಮತ್ತೆ ಶಿರಸಿ-ಸಿದ್ದಾಪುರ ಉತ್ತರ ಕನ್ನಡ ಶಿವಮೊಗ್ಗ ಕಡೆ ಬಂದಾಗಲೆಲ್ಲ ನೆನಪು ಮಾಡುತಿದ್ದರು. ಸಿದ್ಧಾಪುರ ತಾಲೂಕಾ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿದ್ದರಿಂದ ನನಗೆ ಸಿದ್ಧಾಪುರದಲ್ಲಿ ಗೌರಿ ಲಂಕೇಶ್ ಜೊತೆಗೆ ಒಂದು ಸಂವಾದ ಕಾರ್ಯಕ್ರಮ ಮಾಡುವ ಅವಕಾಶವಾಯಿತು. ಸಮಾಜ, ಸೌಹಾರ್ಧತೆ, ಬದ್ಧತೆ, ಪ್ರಾಮಾಣಿಕತೆ, ಸಮಾಜವಾದಗಳೇ ಆಸ್ತಿ ಕನಸಾಗಿದ್ದ ಗೌರಿ ನಮ್ಮ ಜೊತೆ ಸಣ್ಣದೊಂದು ಹೋಟೆಲ್ ನಲ್ಲಿ ಮೀನಿನೂಟ ಸವಿದಿದ್ದರು. ಅದನ್ನು ಸ್ಮರಿಸುತಿದ್ದ ಗೌರಕ್ಕ ನಾನು ಭೇಟಿಗೆ ಸಿಗದಿದ್ದಾಗಲೂ ಗಣೇಶ್ ಹೋಟೆಲ್ ನಲ್ಲಿ ಮೀನೂಟ ಮಾಡಿ ಸಾಗುತಿದ್ದ ಬಗ್ಗೆ ಹೇಳುತಿದ್ದರು.

ಲಂಕೇಶ್ ಬಿಟ್ಟುಹೋದ ಶೂನ್ಯದಲ್ಲಿ ಉಲ್ಕೆಯಂತೆ ಉರಿದು ತಂಪು ನೀಡಿದ ಗೌರಿ ಮೇಲೆ ಮತಾಂಧರ ಕಣ್ಣು ಬಿದ್ದದ್ದು ಅವರ ಅವಸಾನಕ್ಕೆ ಕಾರಣವಾದ ದುರಂತವೇ ಕೋಮುವಾದಿಗಳಿಗೆ ಅಂತ್ಯ ಬರೆಯುವ ಮುನ್ನುಡಿಯಾಗಿದ್ದು ಅವರ ಜೀವನದ ಸಾರ್ಥಕತೆ. ಸರಳತೆ, ಬದ್ಧತೆ, ವಿಶ್ವಮಾನವತ್ವದ ಚಿಂತನಾಕ್ರಮ ಗೌರಕ್ಕನ ಆಸ್ತಿಯಾಗಿತ್ತೆಂದರೆ ಅದು ಉತ್ಪ್ರೇಕ್ಷೆಯಂತೂ ಅಲ್ಲ.

ಲಂಕೇಶ್ ರನ್ನು ತಿಳಿದುಕೊಂಡ ಸಿಂಹ ಅವಕಾಶವಾದಿಯಾಗುವುದು, ಲಂಕೇಶ್ ರನ್ನು ಮೈಗೂಡಿಸಿಕೊಂಡಿದ್ದ ಗೌರಿ ಹೋರಾಟಗಾರ್ತಿಯಾಗುವುದು ಸಮಾಜದ ಎರಡು ಧಾರೆಗಳು. ಗೌರಿ ಸತ್ತಿಲ್ಲ ಬೀಜವಾಗಿ ಕುಡಿ ಒಡೆದಿದ್ದಾಳೆ ಮತ್ತು ಮರವಾಗುತ್ತಾಳೆ ಕೂಡಾ. ಯಾಕೋ ಸೆ. 5 ರ ವೀರಲಿಂಗನಗೌಡ್ರ ಕವನ, ಸಾಮಾಜಿಕ ಜಾಲತಾಣದಲ್ಲಿ ಅನೇಕರು ಗೌರಕ್ಕನನ್ನು ಸ್ಮರಿಸಿಕೊಂಡ ಕಾರಣಕ್ಕೆ ನನ್ನ ನೆನಪುಗಳನ್ನೂ ದಾಖಲಿಸಿದೆ. ಬಸವಣ್ಣ,ಅಕ್ಕಮಹಾದೇವಿಯ ಶರಣತ್ವದ ಕುಡಿಯಾಗಿದ್ದ ಗೌರಿ ಲಿಂಗಾಯತರಾಗಿದ್ದು ಕಾಕತಾಳೀಯ. (ಲಂಕೇಶ್ ದಲಿತರೆಂದು ಭಾವಿಸಿದ್ದ ಅನೇಕರಲ್ಲಿ ಲಿಂಗಾಯತರಿದ್ದುದು ಅವರ ಜಾತ್ಯಾತೀತತೆಗೆ ಸಾಕ್ಷಿ)

ತಾಲಿಬಾನಿಗಳ ಮತಾಂಧತೆಯ ಅಟ್ಟಹಾಸದ ರಾಷ್ಟ್ರೀಯ ಸುಳ್ಳುಕೋರರ ಯುಗದಲ್ಲಿ ಗೌರಿ, ಲಂಕೇಶ್, ಅನಂತಮೂರ್ತಿ, ಕುವೆಂಪು, ಶಶಿಧರ ಭಟ್, ನಾಗೇಶ್ ಹೆಗಡೆ ಇಂಥವರ ಪಥದ ಪ್ರಾಮುಖ್ಯತೆ ಅರಿಯಬೇಕಿದೆ ಅಷ್ಟೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *