ಮುಖವಿಲ್ಲದ ಹಂದಿ ನೋಡಿ ಓಡಿ ಹೋದ…..ಕಪ್ಪು ನಾಯಿ,ಬಿಳಿ ಎತ್ತು! p-2

ಈಗೀಗ ಕಾಡು ಹಂದಿ ಬೇಟೆ ನಿಷೇಧಿಸಿದ ಮೇಲೆ ಹಿಂದಿನ ಬೇಟೆ ರೋಚಕತೆಗಳೆಲ್ಲಾ ಮಾಯವಾಗಿವೆ. ಈ ರೋಚಕ ಭೇಟೆ ಅನುಭವಕ್ಕೆ ಹಾತೊರೆದು ನಾವೆಲ್ಲಾ ಕಾಡು ಹಂದಿ ಬೇಟೆಗೆ ಅವಕಾಶ ಕೊಡಬೇಕೆಂದು ಬಿಗಿಪಟ್ಟು ಹಿಡಿದಿರುವ ಹಿಂದೆ ನಮ್ಮ ಮರೆಯದ ಕತೆಗಳಿವೆ.

ಬಹುಶ: ನಮ್ಮ ದೊಡ್ಡೆತ್ತಿನ ಜೋಡಿ ಇದ್ದ ಸಮಯವದು. ನನ್ನಪ್ಪನಿಗೆ ರಾತ್ರಿವೇಳೆ ಯಾರಾದರೊಬ್ಬರ ನೆರವು ಬೇಕೇ ಬೇಕು. ಹಗಲಿನಲ್ಲಿ ಎಲ್ಲೆಂದರಲ್ಲಿ ನಿರ್ಭೀಡೆಯಿಂದ ತಿರುಗಾಡುತಿದ್ದ ನಮ್ಮಪ್ಪ ರಾತ್ರಿಯಾಗುತ್ತಲೇ ನನ್ನನ್ನು ಆಶ್ರಯಿಸುತಿದ್ದ. ನನಗೂ ಎತ್ತಿನ ಗಾಡಿ,ರೋಮಾಂಚಕ ಕೆಲಸಗಳೆಂದರೆ ಆಸಕ್ತಿ. ಅಪ್ಪ ಕರೆಯುವ ಮೊದಲೇ ನನ್ನ ಸವಾರಿ ಗಾಡಿ ಏರಾಗಿರುತಿತ್ತು.

ಬೇರೆಯವರಿಗಿಂತ ಸರಳವಾಗಿ ಸುಲಭಕ್ಕೆ ಸಿಗುತಿದ್ದ ಸಾಥಿ ನಾನಾಗಿದ್ದುದರಿಂದ ನಮ್ಮಪ್ಪನಿಗೆ ಬೇರೆ ನೆರವು ಹುಡುಕುವ ಕಷ್ಟವೂ ಇರಲಿಲ್ಲ. ಮೊದಮೊದಲೆಲ್ಲಾ ಸಾಂಕ್ರಾಮಿಕ ಪ್ಲೇಗ್, ಕಾಲರಾ, ಮೈಲಮ್ಮನ ಜ್ವರ, ಗುತ್ತೆಮ್ಮನ ಜಡ ಬಂದಾಗಲೆಲ್ಲಾ ಜನ ತಾತ್ಕಾಲಿಕವಾಗಿ ಊರು ಬಿಡುತಿದ್ದರಂತೆ. ಇಂಥ ಊರು ಬಿಟ್ಹೋದವರರಲ್ಲಿ ನಮ್ಮೂರಿನ ಸಂಬಂಧಿಯೊಬ್ಬರು ಮರಳಿ ಬರಲೇ ಇಲ್ಲ ಎನ್ನುತ್ತಿದ್ದ ನಮ್ಮಜ್ಜಿ ರೋಗಕ್ಕೆ ಹೆದರಿ ಗುಳೇ ಹೋಗುವುದು, ಮಳೆಗಾಲದಲ್ಲಿ ಮನೆ ಸೇರುವುದು, ಗಾಳಿಬಂದಾಗ ಮರ ಬಿಗಿಹಿಡಿದು ಪಾರಾಗುವುದು ಇಂಥ ರೋಚಕ ಕತೆಗಳನ್ನೆಲ್ಲಾ ಹೇಳುತಿದ್ದರು.

ಇಂಥ ಕತೆಗಳು, ದಂತಕತೆಗಳ ನಡುವೆ ಮಾರಿ ರಾತ್ರಿಯಲ್ಲಿ ನಮ್ಮೂರಿಗೆ ಬರುತ್ತಾಳೆ ಅವಳು ಬಂದಾಗ ಎದುರಿಗೆ ಸಿಕ್ಕವರು ರಕ್ತಕಾರಿ ಸಾಯುತ್ತಾರೆ!ಎನ್ನುವುದರಿಂದ ಹಿಡಿದು ಸ್ಮಶಾನದಲ್ಲಿ ಸತ್ತವರು (ದೆವ್ವ!) ರಾತ್ರಿ ಕೊಳ್ಳಿಹಿಡಿದು ಕುಣಿಯುತ್ತಾರೆ ಎನ್ನುವ ವರೆಗೆ ನಮ್ಮಜ್ಜಿ ಹೇಳಿದ ಕತೆಗಳೂ ನಮ್ಮ ಭಯಕ್ಕೆ ಅಡಪಾಯ ಹಾಕಿದ್ದವು. ಮುಸ್ಲಿಂರು ಸತ್ತಾಗ ನಗುತ್ತಾರೆ! ಹುಟ್ಟಿದಾಗ ಅಳುತ್ತಾರೆ ಎನ್ನುವ ಹುಸಿ ನಂಬಿಕೆಗಳನ್ನೇ ಸತ್ಯ ಎಂದುಕೊಂಡಿದ್ದ ನಮ್ಮಪ್ಪ ನಮ್ಮಜ್ಜಿಯ ರಾತ್ರಿ ಹೆದರಿಕೆಯ ಅಜ್ಜಿಕತೆಗಳನ್ನು ಕೇಳಿ ಕತ್ತಲಿಗೆ ಹೆದರುತಿದ್ದನೋ? ಏನೋ? ಅಂತೂ ನಮ್ಮಣ್ಣನಂತಿದ್ದ ನಮ್ಮ ಕುಟುಂಬದ ಆಳು ಧರ್ಮಣ್ಣ ಜೊತೆಗಿಲ್ಲದಿದ್ದರೆ ನಮ್ಮಪ್ಪ ನನ್ನನ್ನೇ ಆಶ್ರಯಿಸುತಿದ್ದ.

ಒಂದು ಹುಣ್ಣಿಮೆಯ ರಾತ್ರಿಯದು ಕಲಾವಿದ ಚಿತ್ರಿಸುವ ಸೂರ್ಯ, ಎತ್ತಿನ ಬಂಡಿ, ಗಾಡಿಯ ಕೆಳಗೆ ಲಾಟೀನು, ಅದರ ಜೊತೆ ನಮ್ಮನೆ ಕರಿನಾಯಿ ಜೊತೆಗೆ ನಾನು ನಮ್ಮಪ್ಪ ಊರಿಗೆ ಬಂದಿದ್ದ ಕೋಳಿಜಡದಿಂದ ನಮ್ಮ ಕೋಳಿಗಳನ್ನು ಉಳಿಸಲು ಕುಣಜಿಗದ್ದೆ ಕಣಕ್ಕೆ ನಮ್ಮ ಕೋಳಿಗಳನ್ನು ಸಾಗಿಸುತಿದ್ದೆವು. ಅದೇ ದಿನವೋ ಅಂಥದ್ದೇ ಮತ್ತೊಂದು ದಿನವೋ ನಮ್ಮದೆರು ಹಂದಿಗಳ ದಂಡೊಂದು ಸಾಲುಗಟ್ಟಿ ಓಡುವ ಕೋಳಿಗಳೋ… ಮುಳ್ಳುಹಂದಿಗಳೋ ಎಂದು ಅರಿಯದ ರೀತಿ ನಮ್ಮೆದುರೇ ನಾಗಾಲೋಟದ ಅನುಭವ ನೀಡಿದ್ದವು. https://samajamukhi.net/2021/08/12/an-experince-k-kannesh/

ಅದು ಬಿಟ್ಟರೆ ನಾನು ಹಂದಿಗಳನ್ನು ಹತ್ತಿರದಿಂದ ನೋಡಿದ್ದೇ ಅಪರೂಪ ಬೇಟೆಯಾದಾಗಲೂ ಎಳೆ ಹುಡುಗರು ಶವ ನೋಡಬಾರದು ಎಂದು ದೂರ ತಳ್ಳುತಿದ್ದ ನಮ್ಮೂರ ಹಿರಿಯರು ಜನ ಸತ್ತಾಗಲೂ ಮಕ್ಕಳನ್ನು ಶವದಿಂದ ಸುರಕ್ಷಿತ ಅಂತರದಲ್ಲಿರುವಂತೆಯೇ ನಿರ್ಬಂಧಿಸುತಿದ್ದರು. ಇಂಥ ಊರಿನ ನಿರ್ಬಂಧಗಳು, ರಿವಾಜುಗಳ ಮದ್ದೆ ಕದ್ದು ಶವ ನೋಡುವ ನಮ್ಮ ಹುಡುಗಾಟದ ಕುತೂಹಲ ನಮ್ಮನ್ನು ಪೇಚಿಗೆ ಸಿಕ್ಕಿಸಿದ್ದಿದೆ.

ಮುಕ್ರಿ ಕೊಂಬಿನ ಕರಿಎತ್ತಿನ ಜೋಡಿ ಕತೆಯ ನಂತರ ನಮ್ಮ ಮನೆಗೆ ಬಂದ ಬಿಳಿ ಎತ್ತಿನ ಜೋಡಿಯನ್ನು ನಮ್ಮಪ್ಪ ಹಳದೋಟದ ಕತ್ರಿಗಾಲ ರಾಮ ಹೆಗಡೆಯವರಿಂದ ಖರೀದಿಸಿದ್ದ ಆ ಎತ್ತುಗಳೋ ಸೀಮೆಯಿಂದ ಬಂದು ತಮ್ಮ ಚೆಂದನೆಯ ರೊಣೆ ಕಳಚಿಕೊಂಡ ಮೇಲೆ ನಮ್ಮನೆಗೆ ಬಂದಿದ್ದವು. ಪ್ರಾಮಾಣಿಕರನ್ನೇ ಹೆಚ್ಚು ಪರೀಕ್ಷಿಸುವ ಮನುಷ್ಯ ಸಹಜ ಗುಣದಂತೆ ನಮ್ಮ ಬಿಳಿ ಜೋಡಿ ಎತ್ತಿನ ಕಗ್ಗಗಳಲ್ಲಿ ತುಸು ಗಿಡ್ಡ ಕೊಂಬಿನ ಬಲಿಷ್ಠ ಎತ್ತಿನ ಬಗ್ಗೆ ನನಗೆ ಕತೂಹಲ. ಕೆಂಪು ಕಣ್ಣಿನ ಗುಡ್ಡೆಗಳ ಆ ಎತ್ತು ಪರಿಚಿತರು, ಅಪರಿಚಿತರು ಎಲ್ಲರನ್ನೂ ಕೆಂಗಣ್ಣಲ್ಲೇ ದಿಟ್ಟಿಸುವ ಕೋಪದ ಕೋಡಿಯಂತಿತ್ತು. ನಾನಾಗ ಇನ್ನೂ ಹೈಸ್ಕೂಲ್ ಓದುತಿದ್ದ ದಿನಗಳು ಕಾರವಾರದಿಂದ ರಜಾ ಎಂದು ಊರಿಗೆ ಬರುತಿದ್ದ ನನಗೆ ಊರಿಗಾಗಮಿಸಿದ ಮಾರನೇಯ ದಿನದಿಂದಲೇ ದನ-ಎಮ್ಮೆ- ಎತ್ತು ಕಾಯುವ ಕೆಲಸ ಖಾಯಂ ಆಗಿರುತಿತ್ತು.

ಹೊಸ ಎತ್ತಿನ ಜೋಡಿ ಹೊಸ ಪ್ರದೇಶ.ಎತ್ತುಗಳನ್ನು ಹೋಳೆದಾಟಿಸಿ ರಸ್ತೆಮಾರ್ಗ ಸೇರಿಸಿ ಬೆಟ್ಟದ ಬಯಲಿಗೆ ಮೇವಿಗೆ ಒಯ್ಯಬೇಕು. ಚಿಕ್ಕಕೊಂಬಿನ ದಪ್ಪ ಎತ್ತು ನನಗೆ ಹೆದರಿಸಿದರೂ ಉದ್ದ ಕೊಂಬಿನ ಸಭ್ಯ ಎತ್ತಿನ ಜೊತೆ ಆ ಕೆಂಗಣ್ಣಿನ ಎತ್ತನ್ನೂ ಸಂಭಾಳಿಸುತಿದ್ದೆ. ಸಭ್ಯ ಎತ್ತಿನ ಮರೆಯಲ್ಲಿ ನಿಂತು ಇನ್ನೊಂದು ಎತ್ತಿಗೆ ಹೊಡೆಯುವುದು. ಸಣ್ಣ ಕೊಂಬುಗಳಿಂದ ತಿವಿಯಲು ಹವಣಿಸುವ ಎತ್ತಿಗೆ ಮರದ ಕೊಂಬೆಯ ಮರೆಯಲ್ಲಿ ನಿಂತು ಹೊಡೆಯುವುದು ಮಾಡುತ್ತಾ ಕೆಂಗಣ್ಣಿನ ಎತ್ತಿಗೆ ತೊಂದರೆ ಕೊಡುತಿದ್ದೆ. ಒಮ್ಮೆಮ್ಮೆ ಆ ಎತ್ತಿಗೆ ಹಿಂದಿನಿಂದ ಹೊಡೆದು ಅದು ತಿವಿಯಲು ಬಂದಾಗ ತಕ್ಷಣ ನೆಲಕ್ಕೊರಗಿ ಅದರಿಂದ ತಪ್ಪಿಸಿಕೊಳ್ಳುತಿದ್ದೆ. ನಾಲ್ಕಾರು ಬಾರಿ ಉಪಾಯದಿಂದ ತಪ್ಪಿಸಿಕೊಳ್ಳುತ್ತಾ ಕಪಿಚೇಷ್ಠೆ ಮಾಡುತಿದ್ದ ನನ್ನ ಕಿರುಕುಳ ತಾಳದೆ ಬಂದ ಎತ್ತು ಒಮ್ಮೆಲೆ ನನ್ನ ಮೇಲೆರಗಿ ಮುಖದಿಂದ ಗುದ್ದುತ್ತಾ.. ಕೊಂಬಿನಿಂದ ತಿವಿಯುವ ಕಸರತ್ತಿಗೆ ನನಗೆ ಗಾಯಗಳಾಗಿ ನನ್ನ ಬಟ್ಟೆಗಳೆಲ್ಲಾ ಚಿಂದಿಯಾದವು. ಜೀವಭಯದಿಂದ ನಲುಗಿ ಹೋದ ನನ್ನನ್ನು ಸೋಲಿಸಿದ ಹೆಮ್ಮೆಯಿಂದಲೋ ಬದುಕಿಕೊ ಬಡಪಾಯಿ ಎಂದು ಬಿಟ್ಟುನಡೆಯುವವರೆಗೂ ನಾನು ಹೆದರಿಕೊಂಡು ಚೀರುತ್ತಲೇ ಇದ್ದೆ. ಇವೆಲ್ಲಾ ನಾವು ನಮ್ಮ ಹುಟ್ಟೂರು ಕೋಲಶಿರ್ಶಿ ಬಿಟ್ಟು ಹಳದೋಟಕ್ಕೆ ಹೋದ ಮೇಲೆ ಆದ ಘಟನೆಗಳು.

ಇದಕ್ಕೂ ಮೊದಲು ಕೋಲಶಿರ್ಸಿಯಲ್ಲಿ ನಾವೊಂದಿಷ್ಟು ಮನೆಯವರು ನಮ್ಮ ಎತ್ತುಗಳನ್ನು ಜೋರಿಮನೆಯ ಬೇಣಕ್ಕೆ ಮೇಯಲು ಬಿಡುತಿದ್ದೆವು. ಶಾಲಾರಜಾ ದಿನಗಳಲ್ಲಿ ಈ ಎತ್ತುಗಳನ್ನು ಮೇವಿನ ಬಯಲಿಗೆ ಹೊಡೆದು ಬರುವುದು ನಮ್ಮ ಜವಾಬ್ಧಾರಿ. ಕಾಡು-ಮೇಡುಗಳಲ್ಲಿ ಪೋಲಿ ಅಲೆಯುವ ಸೌಭಾಗ್ಯಕ್ಕಾಗಿ ಅತ್ಯುತ್ಸಾಹದಿಂದ ತೆರಳುತಿದ್ದ ನನಗೆ ಆನಂದನೋ? ಬಾಲಕೃಷ್ಣನೋ. ಶಿವಪ್ಪನೋ, ಸುರೇಶನೋ ಯಾರಾದರೂ ಜೊತೆಗಾರರು ಸಿಕ್ಕೇ ಸಿಗುತಿದ್ದರು. ಇಂಥದ್ದೊಂದು ದಿನ ಹುಡುಗಾಟ ಮಾಡುತ್ತಾ ಎತ್ತಿನ ಹಿಂಬಾಲಕರಾಗಿ ಜೂರಿಮನೆ ಬೇಣಕ್ಕೆ ಹೋಗುತಿದ್ದಾಗ ಕಸ್ತೂರಿನ ಅರಣ್ಯದ ಜೀಡಿನಿಂದ ಗುರ್…ಅ..ಬ್ ಎನ್ನುವಂಥ ಶಬ್ಧ ನಮ್ಮ ಗಮನ ಸೆಳೆಯಿತು.

ಬಾಲಲೀಲೆಯ ಹೆದರಿಕೆ ಬೇರೆ ಧ್ವನಿ ಬಂದ ಕಡೆ ನೋಡಲೂ ಭಯ! ಗತ್ಯಂತರವಿಲ್ಲ… ಹೆದರಿಕೆ,ತಡವರಿಕೆಗಳ ಜೊತೆಗೇ ಧೈರ್ಯ ಒಟ್ಟುಗೂಡಿಸಿ ಪರಾಂಬರಿಸಿದೆ ಹಿಂದೆಂದೂ ನೋಡದ ಆಕೃತಿ! ಹೃದಯ ಬಡಿತ ಹೆಚ್ಚಿ ಕಾಲುಗಳ ಶಕ್ತಿ ಇಮ್ಮಡಿಯಾಯಿತು ಓಡಿದೆ ಜೊತೆಗಿದ್ದವನೂ ನನ್ನೊಂದಿಗೆ ಸ್ಫರ್ಧೆಗೆ ಬಿದ್ದವನಂತೆ ಓಡಿದ ಅನಾಮತ್ತು ಮೂರು ಕಿಲೋ ಮೀಟರ್ ಕಾಲಿಗೆ ಬುದ್ದಿ ಹೇಳಿ ಓಡಿದ್ದೇ ಓಡಿದ್ದು. ಊರಿಗೆ ವರ್ತಮಾನ ತಿಳಿಸಿ ಕೆಲವರು ಭೆಟೆಯ ತಯಾರಿಯೊಂದಿಗೇ ಜೂರಿಮನೆ ಕಡೆ ಓಡಿರಬೇಕು. ಸಂಜೆಯ ಸಮಯಕ್ಕೆ ಕಸ್ತೂರ್ ಬಳಿ ಭೆಟೆಯಾದ ಸುದ್ದಿ ತಿಳಿಯಿತು. ಅನಾಯಾಸವಾಗಿ ನಮ್ಮೂರಿನ ಬೇಟೆಗಾರರಿಗೆ ಸಿಕ್ಕ ಹಂದಿಗೆ ತಲೆಯೇ ಇರಲಿಲ್ಲವಂತೆ. ಯಾರೋ ರೈತರು ತಮ್ಮ ಬೆಳೆಯ ನಡುವೆ ಬಾಂಬ್ ಇಟ್ಟು ಹಂದಿಯ ಬಾಯಿ ತಲೆಯನ್ನೇ ಉಡಾಯಿಸಿದ್ದರು. ಕಣ್ಣು ಕಾಣದೆ, ಓಡಲು ತೃಣವಿಲ್ಲದೆ ಗುರಗೆ ಜೀಡಿನಲ್ಲಿ ಮರೆಯಾಗಿದ್ದ ಕಾಡುಹಂದಿ ಅ..ಬ್ ಅಬ್ಬ್ ಎಂದು ಅಬ್ಬರಿಸುತಿತ್ತು. ಕೆಲವು ಘಂಟೆಗಳ ನಂತರದ ಹಂದಿ ಮಾಂಸದ ರುಚಿ-ಸೊಗಸಿನ ಮುಂದೆ ನಮ್ಮ ಸಾಹಸ, ಭಯಗಳೆಲ್ಲಾ ನಾಮಾವಶೇಶವಾಗಿದ್ದವು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *