equator prize- ಸ್ನೇಹಕುಂಜದಿಂದ ರಾಮಪತ್ರೆ ಜಡ್ಡಿ ಗುರುತಿಸಿದ ವಿಶ್ವಸಂಸ್ಥೆ

Karnataka's Snehakunja Trust bags prestigious Equator Prize 2021 given by UN

ಅಪರೂಪದ ರಾಮಪತ್ರೆ ಜಡ್ಡಿಗೆ ವಿಶ್ವಸಂಸ್ಥೆಯಲ್ಲಿ ಸ್ಥಾನಮಾನ: ಪ್ರಶಸ್ತಿ ಪಡೆದು ರಾಜ್ಯಕ್ಕೆ ಹೆಮ್ಮೆ ತಂದ ‘ಸ್ನೇಹಕುಂಜ’

ಅಳಿವಿನಂಚಿನಲ್ಲಿರುವ ವಿಶೇಷ ಸಸ್ಯರಾಶಿಗಳ ನೆಲೆಯಾದ ರಾಮಪತ್ರೆ ಜಡ್ಡಿಯ ಸಂರಕ್ಷಣಾ ಕಾರ್ಯ, ಸ್ಥಳೀಯರ ಸಹಭಾಗಿತ್ವ, ಅರಣ್ಯ ಉತ್ಪನ್ನಗಳ ಪರಿಚಯಿಸುವಿಕೆ ಹಾಗೂ ಬಯೋ ಬ್ಲ್ಯೂ ಕಾರ್ಬನ್ ಝೋನ್ ನ ಉಳಿಸುವಿಕೆಯಲ್ಲಿ ಮಹತ್ವ ಪಾತ್ರ ವಹಿಸಿದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಾಸರಕೋಡಿನ ಸ್ನೇಹಕುಂಜ ಸಂಸ್ಥೆಯು ವಿಶ್ವಸಂಸ್ಥೆ ನೀಡುವ ‘ಈಕ್ವೆಟರ್ 2021’ ಪ್ರಶಸ್ತಿಗೆ ಭಾಜನವಾಗಿದೆ.

ಶಿರಸಿ (ಉತ್ತರ ಕನ್ನಡ): ದೇಶದ ಹೆಮ್ಮೆ ಎನಿಸಿಕೊಂಡಿರೋ ರಾಜ್ಯದ ಪಶ್ಚಿಮ ಘಟ್ಟಗಳು ಹಲವಾರು ವಿಶೇಷತೆಗಳಿಗೆ ಸಾಕ್ಷಿಯಾಗಿವೆ. ಅದ್ರಲ್ಲೂ ವಿಶ್ವದಲ್ಲೇ ಎಲ್ಲೂ ಕಾಣಲಾರದ ಅಪರೂಪದ ಕತ್ತಲೆಕಾನು ಹಾಗೂ ರಾಮಪತ್ರೆ ಜಡ್ಡಿ ಅನ್ನೋ ನಿಸರ್ಗದ ವಿಶೇಷ ಸ್ಥಳಗಳ ತವರೂರು ಅನ್ನೋ ಹೆಮ್ಮೆ ಕೂಡ ಉತ್ತರ ಕನ್ನಡ ಜಿಲ್ಲೆಯದು. ಇದೀಗ ವಿಶ್ವದಲ್ಲೇ ಅಪರೂಪವಾದ ರಾಮಪತ್ರೆ ಜಡ್ಡಿಗೆ ವಿಶ್ವಸಂಸ್ಥೆಯಲ್ಲಿ ಸ್ಥಾನಮಾನ ದೊರೆತಿದೆ. ರಾಮಪತ್ರೆ ಜಡ್ಡಿಗಳ ಸಂರಕ್ಷಣೆಗೆ ಇಲ್ಲಿನ ಜನರು ಮಾಡಿದ ಕಾರ್ಯಗಳನ್ನ ನೋಡಿ ವಿಶ್ವಸಂಸ್ಥೆಯೇ ಬೆರಗುಗೊಂಡಿದ್ದು, ಜಿಲ್ಲೆಯ ಒಂದು ಸಂಸ್ಥೆಗೆ ವಿಶ್ವಸಂಸ್ಥೆಯ ಪ್ರಶಸ್ತಿ ಒಲಿದಿದೆ.

‘ಈಕ್ವೆಟರ್ 2021’ ಪ್ರಶಸ್ತಿ

ರಾಮಪತ್ರೆ ಜಡ್ಡಿ ಕಾಡು, ಇದು ಒಂದು ಅಳಿವಿನಂಚಿನಲ್ಲಿರುವ ವಿಶೇಷ ಸಸ್ಯರಾಶಿಗಳ ನೆಲೆಯಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿನ ಪಶ್ಚಿಮ ಘಟ್ಟಗಳು ಹಲವಾರು ಪ್ರಥಮಗಳಿಗೆ ಹಾಗೂ ನಿಸರ್ಗದ ಕೌತುಕಗಳಿಗೆ ಕಾರಣವಾಗಿವೆ. ಇವುಗಳಲ್ಲಿ ರಾಮಪತ್ರೆ ಜಡ್ಡಿಯೂ ಒಂದು. ಜಿಲ್ಲೆಯಲ್ಲಿರುವ ರಾಮಪತ್ರೆ ಜಡ್ಡಿಯ ಸಂರಕ್ಷಣಾ ಕಾರ್ಯ, ಸ್ಥಳೀಯರ ಸಹಭಾಗಿತ್ವ, ಅರಣ್ಯ ಉತ್ಪನ್ನಗಳ ಪರಿಚಯಿಸುವಿಕೆ ಹಾಗೂ ಬಯೋ ಬ್ಲ್ಯೂ ಕಾರ್ಬನ್ ಝೋನ್ ನ ಉಳಿಸುವಿಕೆಯಲ್ಲಿ ಮಹತ್ವ ಪಾತ್ರ ವಹಿಸಿದ ಜಿಲ್ಲೆಯ ಹೊನ್ನಾವರದ ಕಾಸರಕೋಡಿನ ಸ್ನೇಹಕುಂಜ ಸಂಸ್ಥೆಯು ವಿಶ್ವಸಂಸ್ಥೆ ನೀಡುವ ‘ಈಕ್ವೆಟರ್ 2021’ ಪ್ರಶಸ್ತಿಗೆ ಭಾಜನವಾಗಿದೆ.

ಅಪರೂಪದ ರಾಮಪತ್ರೆ ಜಡ್ಡಿಗೆ ವಿಶ್ವಸಂಸ್ಥೆಯಲ್ಲಿ ಸ್ಥಾನಮಾನ

ನರಸಿಂಹ ಹೆಗಡೆ ನೇತೃತ್ವದ ಸ್ನೇಹಕುಂಜ ಸಂಸ್ಥೆ

ಸಿದ್ದಾಪುರ ಹಾಗೂ ಶಿರಸಿ ತಾಲೂಕಿನ ಸುಮಾರು 60ಕ್ಕೂ ಹೆಚ್ಚು ಕಡೆಗಳಲ್ಲಿ ಸೇರಿದಂತೆ ಜಿಲ್ಲೆಯ ನೂರಕ್ಕೂ ಹೆಚ್ಚು ಕಡೆಗಳಲ್ಲಿ ಈ ರಾಮಪತ್ರೆ ಜಡ್ಡಿಗಳಿವೆ. ಅಪರೂಪದ ಅತ್ಯಂತ ಪ್ರಾಚೀನಕಾಲದ ಜೌಗು ಪ್ರದೇಶ ಇದಾಗಿದ್ದು, ಅನೇಕ ರೀತಿಯ ಅವನತಿಯ ಅಂಚಿನಲ್ಲಿರುವ ಕೀಟ ಪ್ರಬೇಧಗಳು ಇಲ್ಲಿವೆ. ಇಲ್ಲಿನ ರಾಮಪತ್ರೆ ಮರಗಳು ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ವಿಶಾಲವಾಗಿ ತಮ್ಮ ಬೇರುಗಳನ್ನು ಹರಡಿ ಮಣ್ಣು ಸವಕಳಿಯನ್ನು ತಡೆಯಲು ಯಶಸ್ವಿಯಾಗಿವೆ. ಅಲ್ಲದೇ ಇವು ಉಸಿರಾಟ ನಡೆಸುವುದಕ್ಕಾಗಿಯೇ ಬೇರುಗಳು ಮಣ್ಣಿನಿಂದ ಮೇಲೆ ಬರುತ್ತವೆ. ಇನ್ನೊಂದು ರೀತಿಯ ಒಂದಂಕಿ ಮರ ಕೂಡಾ ಬೇರೆಲ್ಲೂ ಸಿಗದ ಮತ್ತು ಬೆಳೆಯದ ಗಿಡವಾಗಿದ್ದು, ಇಲ್ಲಿನ ಕೀಟ, ಪ್ರಾಣಿ ಪ್ರಬೇಧಕ್ಕೆ ಪೂರಕವಾಗಿದೆ. ನರಸಿಂಹ ಹೆಗಡೆ ನೇತೃತ್ವದ ತಂಡ ಹಲವು ವರ್ಷಗಳ ಕಾಲ ಸ್ನೇಹಕುಂಜ ಸಂಸ್ಥೆಯ ಮುಖೇನ ರಾಮಪತ್ರೆ ಜಡ್ಡಿ ಪಾರಿಸಾರಿಕ ಪುನಶ್ಚೇತನ ಕೆಲಸವನ್ನು ಜನ ಸಹಭಾಗಿತ್ವದಲ್ಲಿ ಕೈಗೊಂಡು ಯಶಸ್ವಿಯಾಗಿತ್ತು.

ಸಂಸ್ಥೆಯ ಕಾರ್ಯ ಅಗಾಧ

ರಾಮಪತ್ರೆ ಜಡ್ಡಿ ಕಾಡುಗಳನ್ನು ಗುರುತಿಸಿ ನಕಾಶೆ ತಯಾರಿಸಿರುವುದು, ಅವುಗಳು ಎದುರಿಸುತ್ತಿರುವ ಸಮಸ್ಯೆ ಮತ್ತು ಪರಿಹಾರೋಪಾಯಗಳು, ಸ್ಥಳೀಯರೊಡನೆ ಸೇರಿ ಅಲ್ಲಿಯದೇ ಸಸ್ಯಗಳ ನರ್ಸರಿ ತಯಾರಿಕೆ, ಅವುಗಳನ್ನು ಸೂಕ್ತ ಮತ್ತು ಅವನತಿ ಹೊಂದುತ್ತಿರುವ ಜಡ್ಡಿ ಕಾಡುಗಳಲ್ಲಿ ವೈಜ್ಞಾನಿಕವಾಗಿ ನೆಟ್ಟು ಬೆಳೆಸುವ ಕೆಲಸವನ್ನು ಈ ಸಂಸ್ಥೆ ಮಾಡಿತ್ತು. ಅಲ್ಲದೇ ನಿರಂತರವಾಗಿ ಅವುಗಳ ಸಂರಕ್ಷಣಾ ಮಹತ್ವವನ್ನು ಕಾರ್ಯಾಗಾರ, ತರಬೇತಿ ಏರ್ಪಡಿಸುವ ಮುಖಾಂತರ ತಿಳಿಸೋ ಪ್ರಯತ್ನ ಮಾಡಿತ್ತು. ಇದರ ಜೊತೆಯಲ್ಲಿ ಅರಣ್ಯಾವಲಂಬಿ ಜೀವನಾಭಿವೃದ್ದಿ ಕ್ರಮಗಳನ್ನು ಪ್ರೋತ್ಸಾಹಿಸುವುದು, ಸಾಂಘಿಕ ಜೇನು ಕೃಷಿ, ಉಪವನ ಉತ್ಪನ್ನಗಳ ಮೌಲ್ಯವರ್ಧನೆ, ಶುದ್ಧ ಇಂಧನ ಬಳಸಿ ಕಿರು ಉದ್ದಿಮೆಗಳನ್ನು ಪ್ರೋತ್ಸಾಹಿಸಿರುವ ಕೆಲಸಗಳನ್ನ ಕೈಗೊಂಡಿತ್ತು.

ಅಪರೂಪದ ಜೌಗು ಪ್ರದೇಶದ ಕಾಡಿನ ಸಂರಕ್ಷಣೆ, ಜಾಗತಿಕ ಹವಾಮಾನ ವೈಪರೀತ್ಯ ತಡೆಗೆ ಪ್ರಯತ್ನ, ಆರ್ಥಿಕ ಹಾಗೂ ಅಭಿವೃದ್ಧಿ ಮಾದರಿಯಲ್ಲಿ ಧನಾತ್ಮಕ ಬದಲಾವಣೆಯನ್ನು ತಳಮಟ್ಟದಿಂದ ಹಿಡಿದು ನೀತಿ ನಿರೂಪಕರವರೆಗೆ ಕೊಂಡೊಯ್ದದ್ದು ಹಾಗೂ ಭೂಗೃಹ ಎದುರಿಸುತ್ತಿರುವ ಸವಾಲು ಎದುರಿಸಲು ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಪುನಶ್ಚೇತನಕ್ಕೆ ಪೂರಕ ಅಂಶಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. 130 ದೇಶಗಳ 600ಕ್ಕೂ ಹೆಚ್ಚು ನಾಮ ನಿರ್ದೇಶಿತಗೊಂಡವುಗಳಲ್ಲಿ ಅಂತಿಮವಾಗಿ ಸ್ನೇಹಕುಂಜ ಸಂಸ್ಥೆ ಆಯ್ಕೆಯಾಗಿದೆ. ಒಟ್ಟಿನಲ್ಲಿ ವಿಶ್ವಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿಗೆ ರಾಜ್ಯದ ಸಂಸ್ಥೆಯೊಂದು ಆಯ್ಕೆಯಾಗಿದ್ದು ಇದೇ ಮೊದಲಾಗಿದೆ. (etbk)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *