

ಅಡಿಕೆ ಬೆಳೆಗಾರರಿಗೆ ಸರ್ಕಾರದ ಹೊಡೆತ: ರೈತ ಮಾಹಿತಿ ಕೇಂದ್ರ ಹಾರ್ಟಿ ಕ್ಲಿನಿಕ್ ಬಂದ್
ತೋಟಗಾರಿಕೆ ಬೆಳೆಗಳ ಸಂರಕ್ಷಣೆ, ಇಳುವರಿ ಹೆಚ್ಚಳ, ತಾಂತ್ರಿಕ ಸುಧಾರಣೆ ಸೇರಿದಂತೆ ವಿವಿಧ ಮಾಹಿತಿ ಒದಗಿಸಲು ಆರಂಭಿಸಲಾಗಿದ್ದ ತೋಟಗಾರಿಕಾ ಇಲಾಖೆ ಮಾಹಿತಿ ಮತ್ತು ಸಲಹಾ ಕೇಂದ್ರ (ಹಾರ್ಟಿ ಕ್ಲಿನಿಕ್) ಅನುದಾನದ ಕೊರತೆಯಿಂದ ಸದ್ಯ ಬಾಗಿಲು ಮುಚ್ಚಿದೆ.
ಶಿರಸಿ: ಮಲೆನಾಡಿನ ಅಡಿಕೆ ಬೆಳೆಗಾರರ ಪಾಲಿಗಿದು ಮತ್ತೊಂದು ಕಹಿಸುದ್ದಿ. ಕೊಳೆ ರೋಗದಂತಹ ಹಲವಾರು ರೋಗಗಳಿಗೆ ತುತ್ತಾಗುತ್ತಿರೋ ಅಡಿಕೆಯ ಬಗೆಗಿನ ಸಂಶೋಧನಾ ಕ್ಲಿನಿಕ್ ಇದೀಗ ಮುಚ್ಚಿದೆ.
ಆಸ್ಪತ್ರೆಯ ಹೊರರೋಗಿ ವಿಭಾಗದಂತಿದ್ದ ಅಡಿಕೆಯ ಹಾರ್ಟಿ ಕ್ಲಿನಿಕ್‌ನ ಬಾಗಿಲನ್ನು ಸರ್ಕಾರದ ಅನುದಾನ ಇಲ್ಲದೆ ಮುಚ್ಚುವಂತಾಗಿದೆ. ಇದು ಸಾವಿರಾರು ಅಡಿಕೆ ಬೆಳೆಗಾರರಿಗೆ ಸಂಕಷ್ಟ ತಂದಿದೆ.
ರೈತರ ಮಾಹಿತಿ ಕೇಂದ್ರ ಹಾರ್ಟಿ ಕ್ಲಿನಿಕ್ ಕ್ಲೋಸ್
ತೋಟಗಾರಿಕೆ ಬೆಳೆಗಳ ಸಂರಕ್ಷಣೆ, ಇಳುವರಿ ಹೆಚ್ಚಳ ಹಾಗು ತಾಂತ್ರಿಕ ಸುಧಾರಣೆ ಸೇರಿದಂತೆ ವಿವಿಧ ಮಾಹಿತಿ ಒದಗಿಸಲು ಆರಂಭಿಸಲಾಗಿದ್ದ ತೋಟಗಾರಿಕಾ ಇಲಾಖೆ ಮಾಹಿತಿ ಮತ್ತು ಸಲಹಾ ಕೇಂದ್ರ (ಹಾರ್ಟಿ ಕ್ಲಿನಿಕ್) ಅನುದಾನದ ಕೊರತೆಯಿಂದ ಸದ್ಯ ಬಾಗಿಲು ಹಾಕಿಕೊಂಡಿದೆ.
ಪ್ರತಿಜಿಲ್ಲೆಗೆ ಒಂದರಂತೆ ತೋಟಗಾರಿಕಾ ಕ್ಷೇತ್ರ ಹೆಚ್ಚಿರೋ 26 ಜಿಲ್ಲೆಗಳಲ್ಲಿ 2010-11ರಲ್ಲಿ ಹಾರ್ಟಿ ಕ್ಲಿನಿಕ್ ಆರಂಭಿಸಲಾಗಿತ್ತು. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳು, ಹವಾಮಾನ ವೈಪರೀತ್ಯದ ಪರಿಣಾಮ, ಉತ್ಪನ್ನಗಳ ಇಳುವರಿ ಮೇಲೆ ಉಂಟಾಗಬಹುದಾದ ದುಷ್ಪರಿಣಾಮ ಮತ್ತು ಅದಕ್ಕೆ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮ ಸೇರಿದಂತೆ ಉಪಯುಕ್ತ ಮಾಹಿತಿ ಒದಗಿಸೋದು ಈ ಕೇಂದ್ರದ ಕೆಲಸವಾಗಿತ್ತು.
ಹಾರ್ಟಿ ಕ್ಲಿನಿಕ್ ಉತ್ತರ ಕನ್ನಡ ಜಿಲ್ಲೆಯ ಕೇಂದ್ರ ಶಿರಸಿಯ ತೋಟಗಾರಿಕಾ ಇಲಾಖೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಇದೆ. ಹತ್ತು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅನುದಾನ ಬಿಡುಗಡೆಯಾಗದ ಕಾರಣ ಅದು ತಾತ್ಕಾಲಿಕವಾಗಿ ಕೆಲಸ ನಿಲ್ಲಿಸಿದೆ.
ಜಿಲ್ಲೆಗೆ ಒಂದರಂತೆ ಸ್ಥಾಪಿಸಲಾದ ಹಾರ್ಟಿ ಕ್ಲಿನಿಕ್‍ಗೆ ವಾರ್ಷಿಕ ಕೇವಲ ₹2 ಲಕ್ಷ ಅನುದಾನ ಬಿಡುಗಡೆಗೊಳ್ಳುತ್ತಿತ್ತು. ಮಾಸಿಕ ₹20 ಸಾವಿರ ಗೌರವಧನ ಪಡೆಯುತ್ತಿದ್ದ, ಕೃಷಿ ವಿಷಯದಲ್ಲಿ ಪದವಿ ಪಡೆದ ವಿಷಯ ತಜ್ಞರೊಬ್ಬರನ್ನು ಹೊರತುಪಡಿಸಿ ಬೇರೆ ಸಿಬ್ಬಂದಿ ನೇಮಕಾತಿ ಇರಲ್ಲಿಲ್ಲ. ಕೃಷಿ ವಿಷಯದಲ್ಲಿ ಪದವಿ ಪಡೆದವರೊಬ್ಬರನ್ನು ವಿಷಯ ತಜ್ಞರೆಂದು ಈ ಕ್ಲಿನಿಕ್ ಗೆ ನೇಮಿಸಲಾಗಿತ್ತು.
ಜಿಲ್ಲೆಯಲ್ಲಿ ಪ್ರಮುಖವಾಗಿ ಅಡಿಕೆ, ಕಾಳುಮೆಣಸು, ಶುಂಠಿ, ಮಾವು, ಗೇರು, ಅನಾನಸ್, ತೆಂಗು ಸೇರಿದಂತೆ ಮುಖ್ಯ ಬೆಳೆಗಳ ಸಂರಕ್ಷಣೆ, ಪೋಷಣೆ ಕುರಿತು ಅವರು ರೈತರಿಗೆ ಸಕಾಲಕ್ಕೆ ಸಲಹೆ ನೀಡಲು ಅನುಕೂಲವಾಗಿತ್ತು.
ತೋಟಗಾರಿಕಾ ಬೆಳೆಗಳಿಗೆ ಕಾಡುವ ರೋಗ, ಇಳುವರಿ ಕುಂಠಿತ ಸಮಸ್ಯೆಗೆ ವಿಷಯ ತಜ್ಞರಿಂದ ಸಲಹೆ ಪಡೆದುಕೊಳ್ಳಲು ಹಾರ್ಟಿ ಕ್ಲಿನಿಕ್ ಅಗತ್ಯವಿತ್ತು. ಕೃಷಿಗೆ ಒತ್ತು ನೀಡುವುದಾಗಿ ಹೇಳುವ ಸರ್ಕಾರ ರೈತಪರ ಯೋಜನೆ ಸ್ಥಗಿತಗೊಳಿಸುವುದು ಸರಿಯಲ್ಲ. ಬೇರೆ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿ ಹಾರ್ಟಿ ಕ್ಲಿನಿಕ್‌ನಂತಹ ರೈತಪರ ಸೌಲಭ್ಯ ಪುನರಾರಂಭಿಸಲಿ ಅನ್ನೋದು ರೈತರ ಒತ್ತಾಯ.
ಇಂತಹ ಹಾರ್ಟಿ ಕ್ಲಿನಿಕ್ ಉತ್ತರ ಕನ್ನಡ ಜಿಲ್ಲೆಗೆ ಅತಿ ಅಗತ್ಯವಿದೆ. ಕೋವಿಡ್ ಪರಿಸ್ಥಿತಿಯಲ್ಲೂ ಸರ್ಕಾರ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿಲ್ಲ. ಅಲ್ಪ ಅನುದಾನದಲ್ಲಿ ರೈತರಿಗೆ ಅನುಕೂಲವಾಗಿರೋ ಯೋಜನೆ ಒಂದನ್ನ ಸ್ಥಗಿತಗೊಳಿಸುತ್ತಿರುವುದು ದುರದೃಷ್ಟಕರ. ಪ್ರಾರಂಭ ಮಾಡಿದ ಒಳ್ಳೇ ಯೋಜನೆಯೊಂದನ್ನ ಏಕಾಏಕಿ ನಿಲ್ಲಿಸೋದು ಎಷ್ಟರಮಟ್ಟಿಗೆ ಸರಿ? ಅನ್ನೋದು ರೈತರ ಪ್ರಶ್ನೆ. (etbk)
ನೆಟ್ವರ್ಕ್ ಇಲ್ಲದೆ ಆನ್ಲೈನ್ ಕ್ಲಾಸ್, ವರ್ಕ್ ಫ್ರಂ ಹೋಂ ಮಾಡುವುದು ಕಷ್ಟಕರವಾಗಿದೆ. ಅಲ್ಲದೆ ವೈದ್ಯಕೀಯ ಸೇವೆಗಾಗಿ 108ಕ್ಕೆ ಕರೆ ಮಾಡುವುದು ಕಷ್ಟಕರವಾಗಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು..
ಶಿವಮೊಗ್ಗ : ನೋ ನೆಟ್ವರ್ಕ್, ನೋ ವೋಟಿಂಗ್ ಎಂಬ ಅಭಿಯಾನದ ಭಾಗವಾಗಿ ಶರಾವತಿ ಮುಳುಗಡೆಯ ಸಂತ್ರಸ್ತರು ಕಟ್ಟಿನಕಾರು ಗ್ರಾಮದಿಂದ ಕೋಗಾರು ಗ್ರಾಮದವರೆಗೂ ಪಾದಯಾತ್ರೆ ನಡೆಸಿ ಮೊಬೈಲ್ ನೆಟ್ವರ್ಕ್ಗಾಗಿ ಆಗ್ರಹಿಸಿದರು.
ಕಟ್ಟಿನಕಾರು ಸೇರಿ ಸುತ್ತಮುತ್ತಲ ಗ್ರಾಮಗಳ ಸುಮಾರು 15 ಕಿ.ಮೀ ದೂರದಲ್ಲಿ ಯಾವುದೇ ಮೊಬೈಲ್ ಕಂಪನಿಯ ನೆಟ್ವರ್ಕ್ ಲಭ್ಯವಾಗುವುದಿಲ್ಲ. ಇದರಿಂದ ಈ ಭಾಗದ ಜನರಿಗೆ ಹೊರ ಜಗತ್ತಿನೊಂದಿಗೆ ಸಂಪರ್ಕವೇ ಇಲ್ಲದಂತಾಗಿದೆ. ಇದರಿಂದ ತಮಗೆ ಮೊಬೈಲ್ ನೆಟ್ವರ್ಕ್ ಸೌಲಭ್ಯ ವದಗಿಸಬೇಕೆಂದು ಆಗ್ರಹಿಸಿದರು.
ನೋ ನೆಟ್ ವರ್ಕ್, ನೋ ವೋಟಿಂಗ್ ಅಭಿಯಾನ : ಚನ್ನಗೊಂಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟಿನಕಾರು, ಕಾರಣಿ, ಹಾಳಸಸಿ ಭಾಗದ ಜನರು ಕಳೆದ ಆರು ತಿಂಗಳಿಂದ ಜನತೆ ಅಭಿಯಾನ ಆರಂಭಿಸಿದ್ದಾರೆ. ಗಾಂಧಿ ಜಯಂತಿ ಪ್ರಯುಕ್ತ ಪಾದಯಾತ್ರೆ, ರಸ್ತೆ ತಡೆ ನಡೆಸಿ ಕಟ್ಟಿನಕಾರು ಗ್ರಾಮದಿಂದ ಚನ್ನಗೊಂಡ ಗ್ರಾಮ ಪಂಚಾಯತ್‌ವರೆಗೆ ಪಾದಯಾತ್ರೆ ನಡೆಸಿದರು.
ಸಮಸ್ಯೆಯ ಸುಳಿಯಲ್ಲಿ ಜನತೆ : ನೆಟ್ವರ್ಕ್ ಇಲ್ಲದೆ ಆನ್ಲೈನ್ ಕ್ಲಾಸ್, ವರ್ಕ್ ಫ್ರಂ ಹೋಂ ಮಾಡುವುದು ಕಷ್ಟಕರವಾಗಿದೆ. ಅಲ್ಲದೆ ವೈದ್ಯಕೀಯ ಸೇವೆಗಾಗಿ 108ಕ್ಕೆ ಕರೆ ಮಾಡುವುದು ಕಷ್ಟಕರವಾಗಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.
ಪಾದಯಾತ್ರೆಯಲ್ಲಿ 6 ವರ್ಷದ ಬಾಲಕನಿಂದ 70 ವರ್ಷದ ವಯೋವೃದ್ದರು ಸಹ ಭಾಗಿಯಾಗಿದ್ದರು. ಚನ್ನಗೊಂಡ ಗ್ರಾಮ ಪಂಚಾಯಿತಿ ಮುಂಭಾಗ ಭಟ್ಕಳ ರಸ್ತೆಯಲ್ಲಿ ಸಾಂಕೇತಿಕ ಧರಣಿ ಮಾಡಿ ಪ್ರತಿಭಟನೆ ನಡೆಸಿದರು. (etbk)
