ಸಿದ್ಧಾಪುರ ಮೂಲದ ಉತ್ತರ ಕನ್ನಡ ಜಿಲ್ಲಾ ಪಶುಸಂಗೋಪನಾ ಇಲಾಖೆಯ ಉಪ ನಿರ್ಧೇಶಕ ನಂದಕುಮಾರ್ ಪೈ ಅಕ್ಟೋಬರ್ 31 ರಂದು ನಿವೃತ್ತರಾಗಿದ್ದಾರೆ. ಸಿದ್ಧಾಪುರ ಬಿಳಗಿಯ ಪೈ 35 ವರ್ಷಗಳು ಒಂದು ತಿಂಗಳುಗಳ ಸುದೀರ್ಘ ಸೇವೆಯುದ್ದಕ್ಕೂ ಪ್ರಾಮಾಣಿಕ ಅಧಿಕಾರಿಯಾಗಿ ಹೆಸರುಮಾಡಿದ್ದರು. ಪಶುವೈದ್ಯಾಧಿಕಾರಿಯಾಗಿ ಭಟ್ಕಳದಿಂದ ಸೇವೆ ಪ್ರಾರಂಭಿಸಿದ ನಂದಕುಮಾರ್ ಪೈ ಹಾರ್ಸಿಕಟ್ಟಾ, ತಾಳಗುಪ್ಪಾ, ಸಿದ್ಧಾಪುರಗಳ ಸೇವಾವಧಿ ನಂತರ ಸಹಾಯಕ ನಿರ್ಧೇಶಕ,ಉಪನಿರ್ಧೇಶಕರಾಗಿ ಭಡ್ತಿ ಪಡೆದಿದ್ದರು.
ಪತ್ನಿ,ಮಗನೊಂದಿಗಿನ ಸಾಂಸಾರಿಕ ಜೀವನದ ಜೊತೆಗೆ ಸಾರ್ವಜನಿಕ ಜೀವನದಲ್ಲೂ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದ ಪೈ ಕಲಾವಿದರಾಗಿ, ಸಾಂಸ್ಕೃತಿಕ ವ್ಯಕ್ತಿಯಾಗಿ ಕೂಡಾ ಹೆಸರು ಮಾಡಿದ್ದರು.
ಇಲಾಖೆಯ ಕೆಲಸ, ಪ್ರಗತಿಗಳಲ್ಲಿ ಟಾರ್ಗೆಟ್ ಮೀರಿ ಸಾಧನೆ ಮಾಡುತಿದ್ದ ಪೈ ತಮ್ಮ ಕೆಲಸ,ಜನಸ್ಪಂದನದೊಂದಿಗೆ ಸಮಾಜಮುಖಿ ವ್ಯಕ್ತಿಯಾಗಿ ಪ್ರಸಿದ್ಧರಾಗಿದ್ದರು.ರವಿವಾರ ಕಾರವಾರದಲ್ಲಿ ನಿವೃತ್ತರಾಗಿ ಇಲಾಖೆಯ ಸೇವೆಯಿಂದ ಹೊರಬಂದ ಪೈ ಕೃಷಿಕರಾಗಿ ಕೂಡಾ ಸಾಧನೆ ದಾಖಲಿಸಿದ್ದಾರೆ. ಮೂಕಪ್ರಾಣಿಗಳ ನಿಸ್ವಾರ್ಥ ಸೇವೆಯ ಜೊತೆಗೆ ಜನಮಾನಸದ ಜನಪ್ರೀಯ ಅಧಿಕಾರಿಯಾಗಿದ್ದ ನಂದಕುಮಾರ್ ಪೈ ನಿವೃತ್ತಿ ಜೀವನಕ್ಕೆ ಅನೇಕರು ಶುಭಕೋರಿದ್ದಾರೆ.