
ಪರಿಸರ ಹೋರಾಟಕ್ಕೂ ಜೈ ಜನಪದ ಗಾಯನಕ್ಕೂ ಸೈ : ಮಹಾದೇವ ವೇಳಿಪಾರಿಗೆ ರಾಜ್ಯೋತ್ಸವ ಪ್ರಶಸ್ತಿ
ಇದೀಗ ಮಾದೇವ ವೇಳಿಪಾ ಅವರ ಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದ್ದು, ಇದು ಜೊಯಿಡಾ ತಾಲೂಕಿಗೆ ಮತ್ತು ಕುಣಬಿ ಸಮಾಜಕ್ಕೆ ಸಂದ ಗೌರವವಾಗಿದೆ..
ಕಾರವಾರ : ಪರಿಸರದ ಬಗೆಗೆ ಅಪಾರ ಕಾಳಜಿ ಹೊಂದಿರುವ ತಮ್ಮ ಸುತ್ತಮುತ್ತಲಿನ ಹಳ್ಳಿಗಳ ಅಭಿವೃದ್ಧಿಗೆ ನಿರಂತ ಹೋರಾಟ ನಡೆಸುತ್ತಿರುವ, ಜಾನಪದ ಭಂಡಾರ ಜೋಯಡಾ ತಾಲೂಕಿನ ಕಾರ್ಟೋಳಿ ಗ್ರಾಮದ ಮಹಾದೇವ ವೇಳಿಪಾ ಅವರಿಗೆ ಪರಿಸರ ವಿಭಾಗದಿಂದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಸುಮಾರು 92 ವರ್ಷದ ಮಹಾದೇವ ವೇಳಿಪಾ ಕುಣಬಿ ಸಮುದಾಯದವರು. ಕಾಡಂಚಿನಲ್ಲಿಯೇ ಜೀವನ ಕಟ್ಟಿಕೊಂಡಿರುವ ಅವರು ಪರಿಸರ ಹೋರಾಟದಲ್ಲಿ ಮುಂಚುಣಿಯಲ್ಲಿದ್ದಂತವರು.
