

ಸಿದ್ಧಾಪುರ, ನಗರದಲ್ಲಿ ಕಳೆದುಹೋಗಿದ್ದ ಎರಡು ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳ ಚೀಲವೊಂದನ್ನು ಪೊಲೀಸರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಇಲ್ಲಿಯ ತರಕಾರಿ ವ್ಯಾಪಾರಿಗೆ ಸಾರ್ವಜನಿಕ ಪ್ರಶಂಸೆ ದೊರೆತಿದೆ.

ಬನವಾಸಿ ಮೂಲದ ವ್ಯಾಪಾರಿ ವಿದ್ಯಾಧರ್ ಕೊಚೇರಿ ಈಗ ಇಲ್ಲಿಯ ಹಾಳದಕಟ್ಟಾ ನಿವಾಸಿಯಾಗಿದ್ದು ಸಿದ್ಧಾಪುರ ಸಂತೆ ಮಾರುಕಟ್ಟೆಯಲ್ಲಿ ತಮ್ಮ ಆಭರಣಗಳ ಚೀಲ ಕಳೆದುಕೊಂಡಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಹುಡುಕುತಿದ್ದಾಗ ಇಲ್ಲಿಯ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರುವ ಅವರಗುಪ್ಪಾದ ಗಣಪತಿ ಬಾಳಾ ನಾಯ್ಕ ತಮಗೆ ದೊರೆತ ಈ ಆಭರಣಗಳ ಚೀಲವನ್ನು ಪೊಲೀಸರಿಗೆ ನೀಡಿ ಸನ್ಮತಿ ವಿದ್ಯಾಧರ್ ಕೊಚೇರಿಯವರಿಗೆ ಹಸ್ತಾಂತರಿಸಿದರು.
ತರಕಾರಿ ವ್ಯಾಪಾರಿಯ ಪ್ರಾಮಾಣಿಕತೆಗೆ ಪೊಲೀಸರು ಮತ್ತು ಸಾರ್ವಜನಿಕರು ಪ್ರಶಂಸಿಸಿದ್ದಾರೆ.


ಕೃಷಿ ಕಾನೂನುಗಳ ವರದಿಯನ್ನು ನ್ಯಾಯಾಲಯ ಬಿಡುಗಡೆ ಮಾಡದಿದ್ದರೆ ನಾವೇ ಬಿಡುಗಡೆ ಮಾಡುತ್ತೇವೆ: ಸುಪ್ರೀಂ ಕೋರ್ಟ್ ಸಮಿತಿ ಸದಸ್ಯ!
ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸುತ್ತಿದ್ದಂತೆ ಸುಪ್ರೀಂ ಕೋರ್ಟ್ ನೇಮಿಸಿರುವ ತಂಡದ ಸದಸ್ಯರೊಬ್ಬರು ವರದಿಯನ್ನು ಸಾರ್ವಜನಿಕರ ಮುಂದೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ನವದೆಹಲಿ: ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸುತ್ತಿದ್ದಂತೆ ಸುಪ್ರೀಂ ಕೋರ್ಟ್ ನೇಮಿಸಿರುವ ತಂಡದ ಸದಸ್ಯರೊಬ್ಬರು ವರದಿಯನ್ನು ಸಾರ್ವಜನಿಕರ ಮುಂದೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿ ಈಗಾಗಲೇ ಕಾಯ್ದೆಗೆ ಸಂಬಂಧಿಸಿದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು.ಇದೀಗ ಕೇಂದ್ರ ಸರ್ಕಾರವೇ ಕಾಯ್ದೆಯನ್ನು ಹಿಂಪಡೆಯುವುದರಿಂದ ಈ ವರದಿಯ ಉದ್ದೇಶವೇನೂ ಇಲ್ಲದಾಗಿದೆ, ಸುಪ್ರೀಂ ಕೋರ್ಟ್ ವರದಿ ಬಿಡುಗಡೆ ಮಾಡದಿದ್ದರೆ ನಾವೇ ಸಾರ್ವಜನಿಕರ ಮುಂದಿಡುತ್ತೇವೆ ಎಂದಿದ್ದಾರೆ.
ಸಮಿತಿಯ ವರದಿ ರೈತರ ಪರವಾಗಿದ್ದಿತ್ತು. ಮುಂದಿನ ವಾರ ವರದಿಯನ್ನು ಬಿಡುಗಡೆ ಮಾಡುವುದಾಗಿ ಶೆಟ್ಕರಿ ಸಂಘಟನೆ ಅಧ್ಯಕ್ಷ ಅನಿಲ್ ಜೆ ಘನ್ವಾಟ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ಸಾಧಕ-ಬಾಧಕಗಳ ಬಗ್ಗೆ ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಿ ಅಧ್ಯಯನ ಮಾಡಿ ಮೂವರು ಸದಸ್ಯರನ್ನೊಳಗೊಂಡ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಸಮಿತಿ ಕಳೆದ ಮಾರ್ಚ್ 19ರಂದು ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿತ್ತು.
ಸಮಿತಿಯ ವರದಿಯನ್ನು ಬಿಡುಗಡೆ ಮಾಡಿದರೆ ರೈತರಿಗೆ ಮನದಟ್ಟಾಗುತ್ತದೆ, ಸರ್ಕಾರ ವಿರುದ್ಧ ಮಾಡುತ್ತಿರುವ ಪ್ರತಿಭಟನೆ ನಿಲ್ಲುತ್ತದೆ ಎಂದು ಘನವಟ್ ಕಳೆದ ಸೆಪ್ಟೆಂಬರ್ 1 ರಂದು ಭಾರತದ ಮುಖ್ಯ ನ್ಯಾಯಾಧೀಶರಿಗೆ ಪತ್ರದ ಮೂಲಕ ವಿನಂತಿ ಮಾಡಿಕೊಂಡಿದ್ದರು. ಆದರೆ ವರದಿಯನ್ನು ಇನ್ನೂ ಸಾರ್ವಜನಿಕಗೊಳಿಸಲಾಗಿಲ್ಲ.
ಈ ಬಗ್ಗೆ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಘನವಟ್, ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದರೆ ನಾವು ಸಲ್ಲಿಸಿರುವ ವರದಿಗೆ ಯಾವುದೇ ಅರ್ಥವಿಲ್ಲ. ಸುಪ್ರೀಂ ಕೋರ್ಟ್ ಜನರಿಗೆ ನಮ್ಮ ವರದಿಯನ್ನು ಬಿಡುಗಡೆ ಮಾಡದಿದ್ದರೆ ನಾನು ಬಹಿರಂಗಪಡಿಸುತ್ತೇನೆ ಎಂದಿರುವ ಅವರು ವರದಿ ತಯಾರಿಸಲು ಮೂರು ತಿಂಗಳು ತೆಗೆದುಕೊಂಡಿದ್ದೆವು ಎನ್ನುತ್ತಾರೆ.
ರೈತರ ಹಿತದೃಷ್ಟಿಯಿಂದ ಸಮಿತಿಗಳ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ಮುಂದಾಗುತ್ತೇನೆ. ಸಮಿತಿ ಮಾಡಿರುವ ಶಿಫಾರಸ್ಸುಗಳನ್ನು ರೈತರು, ಪತ್ರಿಕೆಗಳು ಮತ್ತು ಸರಕಾರ ಅರಿಯಬೇಕು,’’ ಎಂದು ಹೇಳಿದ ಅವರು, ವರದಿಯು ರೈತರ ಪರವಾಗಿದೆ. ಕೃಷಿಗೆ ಸಂಬಂಧಿಸಿದ ಭವಿಷ್ಯದ ಕಾನೂನುಗಳನ್ನು ರೂಪಿಸಲು ವರದಿಯು ಉತ್ತಮ ಉಲ್ಲೇಖವಾಗಲಿದೆ ಎಂದು ಹೇಳಿದ್ದಾರೆ. (ಕಪ್ರಡಾ)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
