
ಶಿವಮೊಗ್ಗ: ಪೂರ್ವಜರ ಜೀವನ ಶೈಲಿಯನ್ನು ಭವಿಷ್ಯದ ಪೀಳಿಗೆಗೆ ತಿಳಿಸುವ ವಸ್ತು ಸಂಗ್ರಹಾಲಯ
ವಸ್ತು ಸಂಗ್ರಹಾಲಯವೆಂದರೆ ಹಿಂದಿನದ್ದನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ಕಲಿಯುವುದಕ್ಕೆ ಹಾಗೂ ಅಂದಿನ ದಿನಗಳ ಬಗ್ಗೆ ಅರಿತುಕೊಳ್ಳುವುದಕ್ಕೆ ಸಹಾಯ ಮಾಡುವ ಪ್ರದೇಶ.

ವಸ್ತು ಸಂಗ್ರಹಾಲಯವೆಂದರೆ ಹಿಂದಿನದ್ದನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ಕಲಿಯುವುದಕ್ಕೆ ಹಾಗೂ ಅಂದಿನ ದಿನಗಳ ಬಗ್ಗೆ ಅರಿತುಕೊಳ್ಳುವುದಕ್ಕೆ ಸಹಾಯ ಮಾಡುವ ಪ್ರದೇಶ. ಈಗ ಶಿವಮೊಗ್ಗದ ಕಾಲೇಜು ವಿದ್ಯಾರ್ಥಿಗಳು ಮಲೆನಾಡು ಜನರ ಮರೆಯಾಗುತ್ತಿರುವ ಜೀವನ ಶೈಲಿಯನ್ನು ಮತ್ತೆ ನೆನೆಪಿಸುವ ಪ್ರಯತ್ನದ ಭಾಗವಾಗಿ ಜಾನಪದ ವಸ್ತುಸಂಗ್ರಹಾಲಯವನ್ನು ಪ್ರಾರಂಭಿಸಿದ್ದಾರೆ.
ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು ಮಲೆನಾಡು ಭಾಗಗಳಲ್ಲಿ ಹಿಂದಿನ ಪೀಳಿಗೆಯವರು ಬಳಕೆ ಮಾಡುತ್ತಿದ್ದ ವಸ್ತುಗಳು, ಕಲಾಕೃತಿಗಳು ಮತ್ತು ದೈನಂದಿನ ವಸ್ತುಗಳನ್ನು ಮೂರು ಗ್ರಾಮಗಳಿಂದ ಸಂಗ್ರಹಿಸಿ ಕನ್ನಡದ ಸಹಾಯಕ ಪ್ರಾಧ್ಯಾಪಕ ಡಾ.ಮೋಹನ್ ಚಂದ್ರಗುತ್ತಿ ಅವರ ಮಾರ್ಗದರ್ಶನದಲ್ಲಿ ಜಾನಪದ ವಸ್ತು ಸಂಗ್ರಹಾಲಯವನ್ನಾಗಿಸಿದ್ದಾರೆ.

https://imasdk.googleapis.com/js/core/bridge3.495.1_en.html#goog_646078151

https://imasdk.googleapis.com/js/core/bridge3.495.1_en.html#goog_646078153

https://imasdk.googleapis.com/js/core/bridge3.495.1_en.html#goog_646078155
ಕಾಲೇಜಿನ ಆವರಣದಲ್ಲೇ ಈ ವಸ್ತು ಸಂಗ್ರಹಾಲಯವಿದ್ದು, 200 ಕ್ಕೂ ಹೆಚ್ಚು ಪ್ರದರ್ಶನ ಯೋಗ್ಯ ವಸ್ತುಗಳನ್ನು ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಭಾಗವಾಗಿರುವ ವಿದ್ಯಾರ್ಥಿಗಳು 2016, 2017, 2018, 2019 ರಲ್ಲಿ ತಮ್ಮ ಎನ್ಎಸ್ಎಸ್ ಕ್ಯಾಂಪ್ ಗಳ ಸಂದರ್ಭದಲ್ಲಿ ರೇಚಿ ಕೊಪ್ಪ (ಶಿವಮೊಗ್ಗ ತಾಲೂಕು) ಹನಗೆರೆ ಕಟ್ಟೆಯ ಬಳಿ ಇರುವ ಕೆರೆಗಳ್ಳಿ, ಆಡಿಕ ಕೊಟ್ಟಿಗೆಗಳಿಂದ ಸಂಗ್ರಹಿಸಿದ್ದಾರೆ.
ಕ್ಯಾಂಪ್ ಗಳ ಸಂದರ್ಭದಲ್ಲಿ ಒಂದು ವಾರಗಳ ಕಾಲ ಸ್ಥಳೀಯರ ನಿವಾಸದಲ್ಲಿದ್ದು ಸ್ಥಳೀಯರೊಂದಿಗೆ ಉತ್ತಮ ಸಂಪರ್ಕ ಸಾಧಿಸುತ್ತಿದ್ದರು. ಅಲ್ಲಿಂದ ತೆರಳುವುದಕ್ಕೂ ಮುನ್ನ ಸ್ಥಳೀಯರಿಗೆ ಅಲ್ಲಿನ ವಿಶಿಷ್ಠ, ಪುರಾತನ ವಸ್ತುಗಳನ್ನು ನೀಡುವಂತೆ ಮನವಿ ಮಾಡುತ್ತಿದ್ದರು.
ಎನ್ಎಸ್ ಎಸ್ ಅಧಿಕಾರಿಯಾಗಿದ್ದ ಡಾ. ಮೋಹನ್, ಜಾನಪದ ವಿದ್ಯಾರ್ಥಿಯೂ ಆಗಿದ್ದು, ಈ ವಿಷಯದ ಬಗ್ಗೆ ಹಲವು ಪುಸ್ತಕಗಳನ್ನೂ ಬರೆದಿದ್ದಾರೆ. ಅವರು ಈ ವಸ್ತು ಸಂಗ್ರಹಾಲಯದ ಬಗ್ಗೆ ಮಾತನಾಡಿದ್ದು, “ಗ್ರಾಮಗಳಿಗೆ ತೆರಳಿದ ಬಳಿಕ ನನ್ನ ಆಸಕ್ತಿ ಹಳೆಯ ಹಾಗೂ ಸಾಂಪ್ರದಾಯಿಕ ವಸ್ತುಗಳನ್ನು ವಸ್ತು ಸಂಗ್ರಹಾಲಯಕ್ಕಾಗಿ ಸಂಗ್ರಹಿಸುವುದರತ್ತ ಬೆಳೆಯಿತು. ಮೊದಲ ಕ್ಯಾಂಪ್ ನಲ್ಲಿ ಆಡಿನ ಕೊಟ್ಟಿಗೆ ಗ್ರಾಮದಿ 40 ಮನೆಗಳಿಂದ 60 ಕ್ಕೂ ಹೆಚ್ಚು ವಸ್ತುಗಳನ್ನು ಸಂಗ್ರಹಿಸಿದೆವು. ಇಲ್ಲಿನ ಗ್ರಾಮದ ಬಹುತೇಕ ಮಂದಿ ಶರಾವತಿ ಅಣೆಕಟ್ಟು ಯೋಜನೆಯ ತೆರವು ಕಾರ್ಯಾಚರಣೆಯಿಂದ ಸ್ಥಳಾಂತರಗೊಂಡವರಾಗಿದ್ದಾರೆ. ಅವರೆಲ್ಲರೂ ಶರಾವತಿ ಹಿನ್ನೀರಿನ ಪ್ರದೇಶದಲ್ಲಿದ್ದವರು. ಈಗ ಆಡಿನ ಕೊಟ್ಟಿಗೆಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಈ ಹಳೆಯ ವಸ್ತುಗಳನ್ನು ತಮ್ಮೊಂದಿಗೆ ತಂದು ಈಗ ಅಲ್ಲಲ್ಲೇ ಎಸೆದಿದ್ದರು. ಈ ರೀತಿ ನಿರ್ಲಕ್ಷ್ಯಕ್ಕೊಳಗಾಗಿದ್ದ ವಸ್ತುಗಳನ್ನು ನಾವು ಸಂಗ್ರಹಿಸಿ ಪ್ರದರ್ಶನ ಯೋಗ್ಯವನ್ನಾಗಿಸಿದೆವು. ಹಲವು ವಿದ್ಯಾರ್ಥಿಗಳಿಗೆ ಈ ಸಾಂಪ್ರದಾಯಿಕ ವಸ್ತುಗಳ ಬಗ್ಗೆ ಅರಿವು ಇಲ್ಲ ಹಾಗೂ ಈ ವಸ್ತು ಸಂಗ್ರಹಾಲಯದಿಂದ ಅವರಿಗೆ ಜ್ಞಾನವನ್ನು ಗಳಿಸಲು ಸಾಧ್ಯವಾಗಿದೆ” ಎಂದು ಹೇಳಿದ್ದಾರೆ. ಪ್ರಾಂಶುಪಾಲರು ಈ ಜಾನಪದ ವಸ್ತು ಸಂಗ್ರಹಾಲಯಕ್ಕಾಗಿ ವಿಶೇಷವಾದ ಕೊಠಡಿಗೆ ವ್ಯವಸ್ಥೆ ಮಾಡಿದರು. ನಾನು ಗೋಡೆಗಳಿಗೆ ಬಣ್ಣ ಹಾಕಿದೆ. ಈಗ ಕಲಾಚಿತ್ರಗಳಿಂದ ಅವುಗಳನ್ನು ಸಿಂಗರಿಸಲಾಗುತ್ತದೆ. ಈ ವಸ್ತು ಸಂಗ್ರಹಾಲಯ ನಮ್ಮ ಪೂರ್ವಜರ ಬದುಕಿನ ಶೈಲಿಯನ್ನು ಪ್ರತಿನಿಧಿಸುತ್ತದೆ ಎನ್ನುತ್ತಾರೆ ಮೋಹನ್.
ವಿದ್ಯಾರ್ಥಿಗಳು ಈ ಅಪರೂಪದ ವಸ್ತುಗಳನ್ನು ಸಂಗ್ರಹಿಸಿದಾಗ ಆ ವಸ್ತುಗಳ ಹಿಂದಿನ ಕಥೆಗಳು ಇತಿಹಾಸವೆಲ್ಲವನ್ನೂ ಸ್ಥಳೀಯರು ವಿವರಿಸುತ್ತಿದ್ದರು. ಕ್ಯಾಂಪ್ ನ ಕೊನೆಯ ದಿನ ವಿದ್ಯಾರ್ಥಿಗಳಿಗೆ ಅವೆಲ್ಲವನ್ನೂ ಕ್ರಮಬದ್ಧವಾದ ರೀತಿಯಲ್ಲಿ ಇಡಲು ಸೂಚಿಸಲಾಗುತ್ತಿತ್ತು. ಪ್ರತಿಯೊಬ್ಬ ವಿದ್ಯಾರ್ಥಿಯೂ ತಾನು ಸಂಗ್ರಹಿಸಿದ ವಸ್ತು ಹಾಗೂ ಅದರ ವಿವರಗಳನ್ನು ತಿಳಿಸಲು ಸೂಚಿಸಲಾಗುತ್ತಿತ್ತು. ಇದರಿಂದ ಇಂತಹ ಹೆಚ್ಚು ವಸ್ತುಗಳ ಸಂಗ್ರಹಣೆಗೆ ಉತ್ತೇಜನ ಸಿಗುತ್ತಿತ್ತು ಎಂದು ಮೋಹನ್ ವಿವರಿಸಿದ್ದಾರೆ.
ಈ ರೀತಿ ಸಂಗ್ರಹಿಸಿದ ವಸ್ತುಗಳ ಪೈಕಿ ತೇಗ (ಸಾಗುವಾನಿ ಮರ) ದಿಂದ ಮಾಡಿದ 300 ವರ್ಷಗಳಷ್ಟು ಹಳೆಯ ಚೌಕಟ್ಟನ್ನು ಹೊಂದಿರುವ ಮರದ ಬಾಗಿಲು ಇದೆ. ಹಲವು ವಸ್ತುಗಳಿಗೆ ಶತಮಾನಗಳ ಇತಿಹಾಸ ಇದೆ ಎಂದು ಮೋಹನ್ ಹೇಳಿದ್ದಾರೆ. (ಕಪಡಾ)
