ಸಹಕಾರಿ ರತ್ನ- ಸ್ಮರಣೆ,ಪರಿಚಯ,ಸನ್ಮಾನ…ಇತ್ಯಾದಿ

ಸಿದ್ದಾಪುರ
ಸಾಹಿತಿಗಳು, ಕವಿಗಳು ಕೂಡ ತಮ್ಮ ಬರೆಹಗಳ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುತ್ತ ಬಂದಿದ್ದಾರೆ. ಅವರಿಂದ ಹೊಸ ಪ್ರಜ್ಞೆ ಪ್ರಾಪ್ತವಾಗುತ್ತದೆ. ಅಂಥ ಬರಹಗಾರರ ಕುರಿತಾಗಿ ಓದುಗರು ಆಸ್ಥೆ ವಹಿಸಬೇಕು ಎಂದು ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ಹೇಳಿದರು.


ಅವರು ಜಿಲ್ಲಾ ಗ್ರಂಥಾಲಯದ ಮಾರ್ಗದರ್ಶನದಲ್ಲಿ ಸ್ಥಳೀಯ ಗ್ರಂಥಾಲಯ ಶಾಖೆಯಲ್ಲಿ ಆಯೋಜಿಸಿದ ರಾಷ್ಟçಕವಿ ಜಿ.ಎಸ್.ಶಿವರುದ್ರಪ್ಪ ಅವರ ಕೃತಿಗಳ ವಿಮರ್ಶೆ,ಚರ್ಚೆ,ವ್ಯಕ್ತಿ ಪರಿಚಯದ ಓದುಗರಿಂದಲೇ ಓದುಗರಿಗೆ ಹೇಳುವ ವಿನೂತನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಇಲ್ಲಿನ ಗ್ರಂಥಾಲಯಕ್ಕೆ ಸಮರ್ಪಕ ಕಟ್ಟಡದ ಕೊರತೆ ಇದ್ದು ಜನಪ್ರತಿನಿಧಿಗಳು ಉತ್ತಮ ಕಟ್ಟಡ ನಿರ‍್ಮಾಣ ಮಾಡುವಲ್ಲಿ ಪ್ರಯತ್ನಿಸಬೇಕು ಎಂದರು.


ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ, ಪತ್ರಕರ್ತ ಗಂಗಾಧರ ಕೊಳಗಿ ಮಾತನಾಡಿ ಗ್ರಂಥಾಲಯಗಳು ಜ್ಞಾನದ ದೇವಾಲಯವಿದ್ದಂತೆ. ಸ್ವಂತ ಗ್ರಂಥಾಲಯವಿದ್ದರೂ ಸಾರ್ವಜನಿಕ ಗ್ರಂಥಾಲಯದಲ್ಲಿ ದೊರೆಯುವ ನೆಮ್ಮದಿ, ಖುಷಿ, ಅರಿವನ್ನು ಹಿಗ್ಗಿಸುವ ಮೌನ ಅಲ್ಲಿ ದೊರೆಯುವದಿಲ್ಲ. ಗ್ರಂಥಾಲಯ ಇಲಾಖೆ ರಾಷ್ಟçಕವಿ ಶಿವರುದ್ರಪ್ಪನವರೂ ಸೇರಿದಂತೆ ಕನ್ನಡದ ಕವಿ,ಬರೆಹಗಾರರ ಕುರಿತಾಗಿ ಕಾರ್ಯಕ್ರಮ ಆಯೋಜಿಸಿರುವದು ಶಾಘ್ಲನೀಯ. ಇಂಥ ಕಾರ್ಯಕ್ರಮಗಳು ಬರೆಹಗಾರರ ಕುರಿತು ಹೆಚ್ಚಿನ ಮಾಹಿತಿ ಒದಗಿಸುವದಲ್ಲದೇ ಓದುಗರನ್ನೂ, ಇಲಾಖೆಯ ನಡುವೆ ಹಾರ್ದಿಕ ಸಂಪರ್ಕವನ್ನು ಕಲ್ಪಿಸುತ್ತದೆ ಎಂದರು.

edh


ವಿಶೇಷ ಉಪನ್ಯಾಸ ನೀಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲ ನಾಯ್ಕ ಬಾಶಿ ಮಾತನಾಡಿ ಸಮಾಜವನ್ನು ಅಕ್ಷರಗಳ ಮೂಲಕ ತಿದ್ದುವ ಪ್ರಯತ್ನ ಮಾಡಿದ ಜಿ.ಎಸ್.ಶಿವರುದ್ರಪ್ಪ ವೈಚಾರಿಕ ಚಿಂತನೆಯ ಸಾಹಿತಿ,ಕವಿ, ವಿಮರ್ಶಕರೂ ಕೂಡ. ಕನ್ನಡಕ್ಕೆ ವಿಶಿಷ್ಠವಾದ ಕಾವ್ಯ, ಲೇಖನಗಳನ್ನು ಕೊಟ್ಟವರು ಅವರು. ಅವರ ಭಾವಗೀತೆಗಳು ಹೃದಯಸ್ಪರ್ಶಿಯಾಗಿವೆ. ಅವರ ಸೃಜನಶೀಲತೆಗೆ ಅನೇಕ ಶ್ರೇಷ್ಠ ಪ್ರಶಸ್ತಿಗಳು ಸಂದಿವೆ ಎಂದರು.


ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಮಾತನಾಡಿ ಬೆಳಕಿನ ಕವಿ ಎಂದೇ ಹೆಸರಾದ ಶಿವರುದ್ರಪ್ಪ ಕನ್ನಡದ ಕುರಿತಾಗಿ ತುಂಬು ಕಾಳಜಿ ಹೊಂದಿದ್ದರು. ಸಮನ್ವಯದ ಕವಿಯಾದ ಅವರು ಸಾಕಷ್ಟು ಅತ್ಯುತ್ತಮ ಕವಿತಾ ಸಂಕಲನ, ವಿಮರ್ಶಾ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಸಮಾಜದ ವಿಕಾಸಕ್ಕೆ ಕಾರಣರಾಗಿದ್ದಾರೆ ಎಂದರು.
ಸಾಹಿತಿ ಜಿ.ಜಿ.ಹೆಗಡೆ ಬಾಳಗೋಡ ಸ್ವಾಗತಿಸಿ ನಿರೂಪಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಶೋಭಾ ಜಿ.ವಂದಿಸಿದರು. ಸಹಾಯಕಿ ಕುಸುಮಾ ಸಹಕರಿಸಿದರು.

ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು
ಉ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಿದ್ದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗಳ ಸಂಯೋಗದಲ್ಲಿ ಸಾಧಕರಿಗೆ ಗೌರವ ಸಮರ್ಪಣೆ‘ ಕಾರ್ಯಕ್ರಮದ ಅಂಗವಾಗಿ
ಇತ್ತೀಚೆಗೆ ಮಾನ್ಯ ಮುಖ್ಯಮಂತ್ರಿಯವರಿಂದ ಸಹಕಾರ ರತ್ನ ಪ್ರಶಸ್ತಿ ಸ್ವೀಕರಿಸಿದ ತಾಲ್ಲೂಕಿನ ಹಿರಿಯ ನ್ಯಾಯವಾದಿಗಳು, ಸಾಹಿತ್ಯ ಸಂಘಟಕರು, ಸಹಕಾರಿ ಧುರೀಣರೂ, ಪ್ರಸ್ತುತ ಸಿದ್ದಾಪುರ ಟಿ.ಎಮ್.ಎಸ್.‌ಅಧ್ಯಕ್ಷರಾದ ಶ್ರೀ ಆರ್.ಎಮ್.ಹೆಗಡೆ ಬಾಳೇಸರ ಅವರನ್ನು ಜಿಲ್ಲಾ ಕಸಾಪ ಹಾಗೂ ತಾಲೂಕು ಕಸಾಪ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ, ಆರ್.ಎಮ್ ಹೆಗಡೆಯವರ ಪ್ರೌಢಶಾಲಾ ನಿವೃತ್ತ ಗುರುಗಳೂ, ಉ.ಕ.ಜಿಲ್ಲಾ ಕಸಾಪ ಮಾಜಿ ಗೌರವ ಕಾರ್ಯದರ್ಶಿ ಡಿ,ಎಮ್ ಶೇಟ್ , ಜಿ ಜಿ ಹೆಗಡೆ ಬಾಳಗೋಡು, ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಗೌಡರ್, ಮಾಜಿ ಗೌರವ ಕಾರ್ಯದರ್ಶಿ ಕಮಲಾಕರ ಭಂಡಾರಿ. ಕೋಶಾಧ್ಯಕ್ಷರಾದ ಪ್ರಕಾಶ ಬಿ ಹೊಸೂರು, ನಿಕಟ ಪೂರ್ವ ಅಧ್ಯಕ್ಷ ನಾಗರಾಜ ಮಾಳ್ಕೋಡ, ಗೌರವ ಕಾರ್ಯದರ್ಶಿಗಳಾದ ಅಣ್ಣಪ್ಪ ನಾಯ್ಕ ಶೀರಳಗಿ, ಪ್ರಶಾಂತ ಶೇಟ್, ಪದಾಧಿಕಾರಿಗಳಾದ ಗಣೇಶ ಭಟ್ಟ ಹೊಸೂರು, ಪ್ರಶಾಂತ ಹೆಗಡೆ ಭುವನಗಿರಿ, ಟಿ.ಕೆ. ಎಮ್ ಅಜಾದ್, ಮಹಿಳಾ ಪ್ರತಿನಿಧಿ ಗಳಾದ ಸುಧಾರಾಣಿ ರಾಘವೇಂದ್ರ ನಾಯ್ಕ, ಸುಜಾತಾ ಹೆಗಡೆ ದಂಟಕಲ್, ಶಂಕರಮೂರ್ತಿ, ರಂಗನಾಥ ಶೇಟ್ ಮುಂತಾದವರು ಉಪಸ್ಥಿತರಿದ್ದರು.

ಸಿದ್ದಾಪುರ
ಮನುಷ್ಯ ಸಮಾಜ ಜೀವಿ. ಎಲ್ಲ ಸಮಾಜದ ಜೊತೆಗೆ ಸಹಬಾಳ್ವೆ ನಡೆಸುತ್ತ, ಶಿಕ್ಷಣದ ಕುರಿತಾಗಿ ಹೆಚ್ಚಿನ ಗಮನ ನೀಡಿದಾಗ ಯಾವುದೇ ಸಮಾಜವೂ ಅಭಿವೃದ್ಧಿ ಹೊಂದುತ್ತದೆ ಎಂದು ತಹಸೀಲದಾರ ಸಂತೋಷ ಕೆ.ಭಂಡಾರಿ ಹೇಳಿದರು.
ಅವರು ಪಟ್ಟಣದ ಬಾಲಭವನದಲ್ಲಿ ತಾಲೂಕ ಭಂಡಾರಿ ಸಮಾಜದ ವತಿಯಿಂದ ನೀಡಲಾದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಾನು ಬೇಡವೆಂದರೂ ಆಗ್ರಹಪೂರ್ವಕವಾಗಿ, ಸಂತೋಷದಿಂದ ಸಮಾಜ ಬಾಂಧವರು ಈ ಸನ್ಮಾನ ಮಾಡಿದ್ದಾರೆ. ಈ ಸನ್ಮಾನ ಜವಾಬ್ದಾರಿಯನ್ನು ಹೆಚ್ಚಿಸುವದರ ಜೊತೆಗೆ ಇನ್ನೂ ಉತ್ತಮ ಕೆಲಸ ಮಾಡಲು ಪ್ರೆರೇಪಣೆ ನೀಡಿದೆ. ನಮ್ಮ ಸಮಾಜ ಅತಿ ಚಿಕ್ಕ ಸಮುದಾಯ.ಹೆಚ್ಚು ಸಂಘಟನೆಗೊಂಡಿಲ್ಲ. ಸಮನ್ವಯದ ಕೊರತೆಯ ಜೊತೆಗೆ ಮುಂದುವರಿದ ಅನೇಕರಿದ್ದರೂ ಒಗ್ಗಟ್ಟಾಗುತ್ತಿಲ್ಲ. ಎಲ್ಲ ಸಮಾಜ ಬಾಂಧವರ ಜೊತೆ ಹತ್ಪೂರ್ವಕವಾದ ಸಂಪರ್ಕವಿಟ್ಟುಕೊಂಡು ಎಲ್ಲ ವಿಭಾಗದ ಕ್ರೀಯಾಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವದು ನಮ್ಮನ್ನು ಬೆಳೆಸುತ್ತದೆ. ಈ ಹಿಂದೆ ನಿರ್ವಹಿಸಿದಂತೆ ಮುಂದೆಯೂ ಕಾನೂನು ಮಿತಿಗೆ ಒಳಪಟ್ಟು ಏನೇ ಅಗತ್ಯ ಕಾರ್ಯವಿದ್ದರೂ ನಿರ್ವಹಿಸುತ್ತೇನೆ. ಕಾನೂನುಬಾಹಿರವಾಗಿ ಯಾವುದೇ ಕಾರ್ಯ ಮಾಡುವದಿಲ್ಲ. ಮಕ್ಕಳ ಶಿಕ್ಷಣದ ಕುರಿತು ಹೆಚ್ಚಿನ ಗಮನ ನೀಡಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ತಾಲೂಕು ಭಂಡಾರಿ ಸಮಾಜದ ಅಧ್ಯಕ್ಷ ಎನ್.ಆರ್.ಹೆಗಡೇಕರ್ ಮಾತನಾಡಿ ಈ ತಾಲೂಕಿನ ಜನ ಹೃದಯವಂತರು. ಇತಿ,ಮಿತಿ ಹೋಗುವ ಮನಸ್ಸಿನವರಲ್ಲ. ಜನಪರ ಮನಸ್ಸಿದ್ದರೆ ಸರಕಾರಿ ಅಧಿಕಾರಿಗಳಿಗೆ ಇಲ್ಲಿ ಕೆಲಸ ನಿರ್ವಹಿಸುವದು ಕಷ್ಟವೇನಲ್ಲ. ನೀತಿ,ನಿಯಮಾವಳಿ ಪಾಲಿಸುವದರ ಜೊತೆಗೆ ಜನರ ಸಮಸ್ಯೆಗೆ ಪರಿಹಾರ ಹುಡುಕಿ ಅದನ್ನು ನಿವಾರಿಸಿದಾಗ ಸೇವೆ ಸಾರ್ಥಕವಾಗುತ್ತದೆ. ಹಿರಿಯ ಅಧಿಕಾರಿಯಾದವರಿಗೆ ತಮ್ಮ ಸಿಬ್ಬಂದಿಗಳ ಕಾರ್ಯನಿರ್ವಹಣೆ ಕುರಿತು ಗಮನ ಹರಿಸುವದು ಮುಖ್ಯ. ನಮ್ಮ ಸಮಾಜದ ಓರ್ವ ಯುವಕ ಹಿರಿಯ ಅಧಿಕಾರಿಯಾದ ಕುರಿತು ಹೆಮ್ಮೆಯಾದ ಕಾರಣದಿಂದ ಸನ್ಮಾನಿಸಿದ್ದೇವೆ ಹೊರತು ಮತ್ತೆ ಯಾವ ಕಾರಣವೂ ಇಲ್ಲ. ಅವರು ಜನರ ಕೆಲಸ ಕಾರ್ಯದ ಮೂಲಕ ಇನ್ನಷ್ಟು ಉತ್ತಮ ಹುದ್ದೆ ಪಡೆಯಲಿ ಎಂದರು.
ಈ ಸಂದರ್ಭದಲ್ಲಿ ಸಂತೋಷ ಭಂಡಾರಿ,ಜ್ಯೋತಿ ಭಂಡಾರಿ ದಂಪತಿಗಳನ್ನು ಸನ್ಮಾನಿಸಲಾಯಿತು.
ಕಮಲಾಕರ ಭಂಡಾರಿ ಸನ್ಮಾನಪತ್ರ ವಾಚಿಸಿದರು. ಪ್ರಭಾಕರ ಭಂಡಾರಿ ಪ್ರಾಸ್ತಾವಿಕ ಮಾತನಾಡಿದರು. ಸೌಮ್ಯ ಭಂಡಾರಿ ಸ್ವಾಗತಿಸಿದರು. ರೇಖಾ ಭಂಡಾರಿ ವಂದಿಸಿದರು. ಸುಜಾತಾ ಭಂಡಾರಿ ನಿರೂಪಿಸಿದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *