ನಾಡು- ನುಡಿಯ ರಕ್ಷಣೆಯಲ್ಲಿ ಯಕ್ಷಗಾನದ ಪಾತ್ರ ದೊಡ್ಡದು- ಬಿ.ಎನ್. ವಾಸರೆ
ಸಮೃದ್ಧ ಸಾಹಿತ್ಯದಿಂದ ಕೂಡಿ, ನಾಟ್ಯ, ವೇಷಭೂಷಣ, ಚಿತ್ರಕಲೆ, ಸ್ವಾರಸ್ಯಕರ ಸಂಭಾಷಣೆಗಳನ್ನೊಳಗೊಂಡ ಕಲಾಪ್ರಕಾರವೊಂದಿದ್ದರೆ ಅದು ನಮ್ಮ ಹೆಮ್ಮೆಯ ಯಕ್ಷಗಾನ. ಹಲವಾರು ಶತಮಾನಗಳನ್ನು ದಾಟಿ ಹಲವು ಪೀಳಿಗೆಯವರನ್ನು ಸಂಸ್ಕಾರಗೋಳಿಸುತ್ತ ಸಾಗಿ ಬಂದ ಈ ಕಲೆಯು ಒಂದು ಅದ್ಭುತ ಆಕೃತಿಯಾಗಿದೆ. ನಾಡಿನ ಸಂಸ್ಕೃತಿ ಹಾಗೂ ಕನ್ನಡ ಭಾಷೆಯನ್ನು ಬೆಳೆಸುವಲ್ಲಿ ಯಕ್ಷಗಾನದ ಪಾಲು ಬಲು ದೊಡ್ಡದು. ಇದನ್ನು ನಾವು ಉಳಿಸಿ ಬೆಳೆಸಿಕೊಳ್ಳುವತ್ತ ಮುತುವರ್ಜಿ ವಹಿಸಬೇಕು ಎಂದು ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್. ವಾಸರೆಯವರು ಹೇಳಿದರು. ತಾಲೂಕಿನ ಸಾಂಸ್ಕೃತಿಕ ಸಂಘಟನೆಯಾದ ಕಲಾಭಾಸ್ಕರ ಇಟಗಿಯವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಇತರ ದಾನಿಗಳ ಸಹಕಾರದೊಂದಿಗೆ, ಕವಲಕೊಪ್ಪ ವಿನಾಯಕ ದೇವಾಲಯದ ಆವಾರದಲ್ಲಿ ನಾಲ್ಕು ದಿನಗಳ ಕಾಲ ಹಮ್ಮಿಕೊಂಡ “ವಸಂತ ಯಕ್ಷೋತ್ಸವ-೨೦೨೨”ನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ನಡುಗನ್ನಡ ಭಾಷೆಯ ಸಂಪೂರ್ಣ ಸೊಗಡನ್ನು ಉಳಿಸಿಕೊಂಡು ಯಕ್ಷಗಾನದ ಮೂಲ ಪಠ್ಯ ಸಿದ್ಧವಾಗುತ್ತದೆ. ಸುಮಾರು ಆರುನೂರು ವರ್ಷಗಳಿಂದಲೂ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳದೆ ಇಂದಿಗೂ ಆದೇ ಶೈಲಿಯಲ್ಲಿ ಯಕ್ಷ ಕಾವ್ಯಗಳು ಮೈದಳೆಯುತ್ತಿವೆ. ಕನ್ನಡ ಸಾಹಿತ್ಯದ ಮುಖ್ಯವಾಹಿನಿಯಲ್ಲಿ ಯಕ್ಷಗಾನ ಸಾಹಿತ್ಯವನ್ನು ಗಮನಿಸುವುದಿಲ್ಲ ಎಂಬ ಬೇಸರವು ಯಕ್ಷಗಾನ ತಜ್ಞರಲ್ಲಿದೆ. ಈ ಎಲ್ಲ ವಿಷಯಗಳನ್ನು ಕ್ರೂಢಿಕರಿಸಿ ಜಿಲ್ಲಾ ಮಟ್ಟದಲ್ಲಿ ಒಂದು ದಿನದ ಯಕ್ಷಗಾನ ಸಾಹಿತ್ಯ ಸಮ್ಮೇಳನವನ್ನು ಮಾಡುವ ಉದ್ದೇಶವಿದೆ. ಆ ಮೂಲಕವಾಗಿ ಒಂದು ವಿಧಾಯಕ ಕಾರ್ಯಕ್ರಮವನ್ನು ಸಂಘಟಿಸುತ್ತೇವೆ ಎಂದೂ ಹೇಳಿದರು.
ಹಿರಿಯ ನ್ಯಾಯವಾದಿಗಳೂ ಸಾಮಾಜಿಕ ಮುಖಂಡರೂ ಸಹಕಾರೀ ಧುರೀಣರೂ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರೂ ಆದ ಆರ್.ಎಮ್.ಹೆಗಡೆ ಬಾಳೆಸರ ಅವರನ್ನು ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಯತೆಯನ್ನು ವಹಿಸಿಕೊಂಡಿದ್ದ ಜಿಲ್ಲಾ ಫೇವಾಡ್ ಅಧ್ಯಕ್ಷರಾದ ನಾಗರಾಜ ಮಾಳ್ಕೋಡ ಇವರು ಮಾತನಾಡಿ ಜತಿ ಮತಗಳ ಬೇಧವಿಲ್ಲದೇ ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಯಕ್ಷಗಾನವು ನಮ್ಮ ಬದುಕಿನ ಜೀವಾಳವೇ ಆಗಿದೆ ಎಂದರು. ಮುಂದಿನ ತಲೆಮಾರಿಗೆ ಇದನ್ನು ದಾಟಿಸುವ ಕೆಲಸವು ಅತ್ಯಂತ ಪರಿಣಾಮಕರಿಯಾಗಿ ಆಗಬೇಕಾದ ಜರೂರತ್ತು ಇಂದು ಇದೆ. ಆ ಕೆಲಸ ಸಾವಧಾನವಾಗಿಯೇ ಆದರೂ ವ್ಯಾಪಕವಾಗಿ ನಡೆಯುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಹಿರಿಯ ತಾಳಮದ್ದಳೆ ಅರ್ಥಧಾರಿ ಮಂಜುನಾಥ ಹೆಗಡೆ ಹಳದೋಟ ಉಪಸ್ಥಿತರಿದ್ದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಸ್ಥೆಯ ಅಧ್ಯಕ್ಷ ಇಟಗಿ ಮಹಾಬಲೇಶ್ವರ ಭಟ್ಟ ವೇದಿಕೆಯಲ್ಲಿರುವ ಗಣ್ಯರನ್ನು ಸಭಾಸದರನ್ನು ಸ್ವಾಗತಿಸಿದರು. ಕಾರ್ಯದರ್ಶಿ ವಿನಾಯಕ ಹೆಗಡೆ ಕವಲಕೊಪ್ಪ ನಿರ್ವಹಿಸಿ ಆಭಾರಮನ್ನಣೆಯನ್ನು ಸಲ್ಲಿಸಿದರು. ನಂತರ ಸರಸ್ವತಿ ಕಲಾಬಳಗ ಹೊಸಗದ್ದೆ ಇವರು ನಂದಳಿಕೆ ಲಕ್ಷಿನಾರಾಣಪ್ಪ (೯ಕವಿ ಮುದ್ದಣ್ಣ) ರಚಿಸಿದ “ರತ್ನವತಿ ಕಲ್ಯಾಣ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು. ರಾಜಾ ದೃಢವರ್ಮನಾಗಿ ಈಶ್ವರ ಭಟ್ಟ ಹಸರಗೋಡು, ಭದ್ರಸೇನನಾಗಿ ಬಾಬಣ್ಣ ಬಿಳೆಕಲ್, ಬ್ರಾಹ್ಮಣ ಹಾಗೂಗೂ ವಿದ್ಯುಲ್ಲೋಚನನಾಗಿ ಗೋಡೆ ಪ್ರಶಾಂತ ಹೆಗಡೆ, ರತ್ನಾವತಿಯಾಗಿ ಇಟಗಿ ಮಹಾಬಲೇಶ್ವರ, ಚಿತ್ರಧ್ವಜನಾಗಿ ಕು| ಭೂಮಿಕಾ ಹೊಸಗದ್ದೆ ಹಾಗೂ ರಾಜಾ ವತ್ಸಾಖ್ಯನಾಗಿ ಮಂಜುನಾಥ ಶೆಟ್ಟಿ ಕಾಳೆನಳ್ಳಿ ಪಾತ್ರಗಳನ್ನು ನಿರ್ವಹಿಸಿದರು. ಭಾಗವತರಾಗಿ ಎಮ್.ಪಿ.ಹೆಗಡೆ ಉಳ್ಳಾಲಗದ್ದೆ, ಮದ್ದಳೆವಾದಕರಾಗಿ ಮೂಡಗಾರು ಶ್ರೀಪಾದ ಬಟ್ಟ, ಚಂಡೆವಾದಕರಾಗಿ ಉಮೇಶ ಹೆಗಡೆ ಹಲಸಿನಘಟ್ಟ ಹಿಮ್ಮೇಳದಲ್ಲಿ ಕಾಣಿಸಿಕೊಂಡರು.
ಸಮಾಜ ಕಟ್ಟುವ ಕೆಲಸವನ್ನು ಸಂಘಟನೆಗಳು ಮಡುತ್ತಿವೆ.- ಆರ್.ಟಿ.ಹೆಗಡೆ ಅಳಗೋಡ್
ಯಾವುದೇ ರಂಗದಲ್ಲಿರಲಿ ಸಂಘಟನೆಯ ಪಾತ್ರ ಹಿರಿದು. ಬಿಡಿ ಹೂವುಗಳನ್ನು ಒಂದು ದಂಡೆಯಾಗಿಸುವ ದಾರದಂತೆ ಈ ಸಂಘಟನೆಯ ಹುರಿಯಾಳುಗಳು. ಕಣ್ಣಿಗೆ ಕಾಣಿಸಿಕೊಳ್ಳದಿದ್ದರೂ ಏಕತ್ರವಾಗಿಸುವ ಅವರ ಶ್ರಮ ಸಾಮಾನ್ಯವಾದುದಲ್ಲ. ಸಾವಿರಾರು ವಿಘ್ನಗಳ ಮಧ್ಯೆ ಸುಸೂತ್ರವಾಗಿಸುವ ಕೌಶಲ ತಿಳಿದಿರಬೇಕು. ಆ ಕ್ಷಣಕೆ ಹಲವಾರು ಬದಲಾವಣೆಗಳು ಬರಬಹುದು. ಹಾಗೆಂದು ಎದೆಗುಂದದೇ ಮುಂದುವರೆಯಬೇಕಾದ ಅನಿವಾರ್ಯತೆ ಇದೆ. ಅದರಲ್ಲೂ ಕಲ ಸಂಘಟನೆ ಮತ್ತೂ ಕಷ್ಟ. ಇಂತಹದ್ದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನವೆಲ್ಲರೂ ಸಾಧ್ಯವಾದಷ್ಟು ಕೈಜೋಡಿಸೋಣ ಎಂದು ರಾಮಕೃಷ್ಣ. ಟಿ. ಹೆಗಡೆ ಅಳಗೋಡ್ ಹೇಳಿದರ.
ತಾಲೂಕಿನ ಕವಲಕೊಪ್ಪ ವಿನಾಯಕ ದೇವಾಲಯದ ಆವಾರದಲ್ಲಿ ಕಲಾಭಾಸ್ಕರ ಇಟಗಿಯವರು ಹಮ್ಮಿಕೊಂಡ ನಾಲ್ಕು ದಿನಗಳ “ವಸಂತ ಯಕ್ಷೋ ತ್ಸವ-೨೦೨೨”ದ ಎರಡನೇ ದಿನದ ಸಭಾ ಕಾರ್ಯಕ್ರಮದಲ್ಲಿ ಅತಿಥಿಯಗಿ ಮಾತನಡುತ್ತಿದ್ದರು. ಯಕ್ಷಗಾನ ಕಲೆಯು ಒಂದು ಅದ್ಭುತವೇ ಸರಿ. ಪೌರಾಣಿಕ ಕಥಾನಕಗಳ ಅನಾವರಣವಗುವ ರೀತಿ ಅತ್ಯಂತ ಸೊಗಸಾಗಿದೆ. ನಮ್ಮ ಮನಸ್ಸಿಗೆ ಸಂಸ್ಕಾರವನ್ನು ನೀಡಿ ಬದುಕನ್ನು ಹಸನು ಗೊಳಿಸುವ ಯಕ್ಷಗಾನವನ್ನು ಮುಂದಿ ತಲೆಮಾರಿಗೂ ಕೊಂಡೊಯ್ಯಲು ಮಕ್ಕಳಲ್ಲಿ ಇದರ ಅಭಿರುಚಿಯನ್ನು ಹುಟ್ಟಿಸ ಬೇಕು. ಮತ್ತು ವ್ಯವಸ್ಥಿತವಗಿ ಯಕ್ಷಶಿಕ್ಷಣವನ್ನು ನೀಡಬೇಕು. ಮತ್ತಲ್ಲದೇ ವೇದಿಕೆಯನ್ನು ಒದಗಿಸಿ ಪ್ರೋತ್ಸಾಹಿಸಬೇಕು ಎಂದರು.
ನಾವೆಲ್ಲರೂ ಪ್ರಾಣದಂತೆ ಪ್ರೀತಿಸುವ ಯಕ್ಷಗಾನ ಸರಣಿಯನ್ನು ನಮ್ಮ ಮನೆಯಂಗಳದಲ್ಲಿಯೇ ಹಮ್ಮಿಕೊಂಡು ಬಂದ ಕಲಾಭಾಸ್ಕರ ಸಂಸ್ಥೆಯವರ ಉದ್ದೇಶ ಸಫಲವಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ದೇವಾಲಯದ ಅಧ್ಯಕ್ಷ ಎಮ್.ಎಸ್.ಹೆಗಡೆ ಕವಲಕೊಪ್ಪ ಹೇಳಿದರು.
ಬಿದ್ರಕಾನು ಸೇವಾಸಹಕಾರಿ ಸಂಘದ ಅಧ್ಯಕ್ಷ ಪಿ.ಎಸ್.ಹೆಗಡೆ ಯವರು ಅತಿಥಿಯಾಗಿದ್ದು ಉಪಸ್ಥಿತರಿದ್ದರು. ಕಾರ್ಯದರ್ಶಿ ವಿನಾಯಕ ಹೆಗಡೆ ಕವಲಕೊಪ್ಪ ಸ್ವಾಗತಿಸಿದರು. ನಂತರ ಕವಿ ಕಂದಾವರ ರಘುರಾಮ ಶೆಟ್ಟಿಯವರು ರಚಿಸಿದ “ವಸುವರಾಂಗಿ- ಗಂಗಾAತರಂಗ” ಎಂಬ ಯಕ್ಷಗಾನ ಪ್ರದರ್ಶನವು ನಡೆಯಿತು. ತುಳಿಗೇರೆ ಗಜಾನನ ಭಟ್ಟ ಭಾಗವತರಾಗಿ, ಕೆ.ಎನ್. ಭಾರ್ಗವ ಹೆಗ್ಗೋಡು ಚಂಡೆವಾದನದಲ್ಲೂ ಹಾಗೂ ಕೆ.ಎಸ್. ನಾಗಭೂಷಣ ರಾವ್ ಕೇಡಲೆಸರ ಅವರು ಮದ್ದಳೆಯ ವಾದನದಲ್ಲಿ ನಿರ್ವಹಿಸಿದರು. ನಾಟ್ಯಾಚಾರ್ಯ ಶಂಕರಭಟ್ಟ ಸಿದ್ಧಾಪುರರವರು ಶಂತನುವಾಗಿ, ಗಂಗೆಯಾಗಿ ಇಟಗಿ ಮಹಾಬಲೇಶ್ವರ, ವಸು ಪ್ರಭಾಸನಗಿ ವಿನಯ ಭಟ್ಟ ಬೇರೊಳ್ಳಿ, ವರಾಂಗಿಯಾಗಿ ದೀಪಕ ಕುಂಕಿ, ವಸುಗಳಾಗಿ ಹೊನ್ನೆಕೈ ಗಣಪತಿ, ಕೆರೆಗದ್ದೆ ಗಣಪತಿ ಹೇಗಡೆ, ಭರತ ಗೋಳಿಕೈ, ಪೃಥ್ವಿ ಜಿ.ನಾಯ್ಕ, ಭೂಮಿಕಾ ಹೆಗಡೆ ಹೊಸಗದ್ದೆ, ಅಮಿತ ಹೆಗಡೆ, ಆದಿತ್ಯ ಹೆಗಡೆ ಪತ್ರಗಳನ್ನು ನಿರ್ವಹಿಸಿದರು, ವಿವಿಧ ಹಾಸ್ಯ ಪತ್ರಗಳಲ್ಲಿ ವೆಂಕಟರಮಣ ಹೆಗಡೆ ಮಾದನ್‌ಕಳ್, ಅಭಯ ಹೆಗಡೆ ಹೊಸಗದ್ದೆ, ಕು| ಕುಶ ಹೆಗಡೆ ಕಾಣಿಸಿಕೊಂಡು ರಂಗವನ್ನು ರಂಗಾಗಿಸಿದರ.
ಐಸೂರು ವರದಿ
ಶ್ರೀ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾ ಸಂಘ(ರಿ) ದೊಡ್ಮನೆ ಹಾಗೂ ಶ್ರೀ ವೀರಭದ್ರ ಸಹಿತ ಗೌರಿಶಂಕರ ದೇವಾಲಯ ಇವರ ಸಹಯೋಗದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ದಿನಾಂಕ ೨೧-೦೫-೨೦೨೨ ರ ಶನಿವಾರ ರಾತ್ರಿ ೮ ಘಂಟೆಯಿAದ ಸಿದ್ದಾಪುರ ತಾಲೂಕ ಐಸೂರಿನ ಗೌರಿಶಂಕರ ದೇವಾಲಯದ ಆವರಣದಲ್ಲಿ ಗೌರವ ಸನ್ಮಾನ ಹಾಗೂ ಯಕ್ಷಗಾನ ಪ್ರದರ್ಶನ ನಡೆಸಲಾಯಿತು. ಕಾರ್ಯಕ್ರಮವನ್ನು ಸೆಲ್ಕೊ ಸಂಸ್ಥೆಯ ಅ.ಇ.ಔ ಮೋಹನ ಹೆಗಡೆ ಹೆರವಟ್ಟಾ ಇವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿ, ಇಂದು ಸನ್ಮಾನಿಸಲ್ಪಡುವ ಶ್ರೀ ಗಣಪತಿ ಹೆಗಡೆ ತಲಕೇರಿ ಇವರು ಉತ್ತಮ ಸಾಧನೆಯನ್ನು ಗುರುತಿಸಿ ಅವರ ಸ್ವಕ್ಷೇತ್ರದಲ್ಲಿ ಗೌರವಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಬಣ್ಣಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶೀಯುತರು ಶ್ರೀ ಮೂಕಾಂಬಿಕಾ ಸಂಘಕ್ಕೆ ಅಭಿನಂದನೆಯನ್ನು ಸಲ್ಲಿಸಿ, ಯಕ್ಷಗಾನ ಕಲೆಯ ಮೇಲಿನ ತಮಗಿರುವ ಪ್ರೀತಿಯನ್ನು ಹಾಗೂ ತಮ್ಮ ವಕೀಲ ವೃತ್ತಿಯ ಸುಧೀರ್ಘವಾದ ಅನುಭವವನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಏ.ಆ.ಅ.ಅ ಬ್ಯಾಂಕಿಗೆ ನಿರ್ದೇಶಕರಾಗಿ ನೂತನವಾಗಿ ಆಯ್ಕೆಯಾದ ರಾಘವೇಂದ್ರ ಶಾಸ್ತ್ರೀ ಕೋಡಿಗದ್ದೆ ಇವರನ್ನು ಸ್ಥಳೀಯ ಮುಖಂಡರಾದ ಒ.ಓ ಹೆಗಡೆ ತ¯ಕೇರಿ, ಕೃಷ್ಣಮೂರ್ತಿ ಐಸೂರು, ಗೋಪಾಲ ಹೆಗಡೆ ಮನ್ಮಾಂವ್ ಮುಂತದವರೆಲ್ಲ ಸೇರಿ ಗೌರವಿಸಿದರು. ಈ ಸಂದರ್ಭದಲ್ಲಿ ಶಾಂತಕುಮಾರ ಭಟ್ ಕಲಕೈ, ರಾಘವೇಂದ್ರ ಶಾಸ್ತಿçà ಕೋಡಿಗದ್ದೆ, ಸಾಂದರ್ಭಿಕವಾಗಿ ಮಾತನ್ನಾಡಿದರು. ದೇವಾಲಯ ಕಮಿಟಿ ಅಧ್ಯಕ್ಷರಾದ ರಾಮನಾಥ ಹೆಗಡೆ ತಲಕೇರಿ ಉಪಸ್ಥಿತರಿದ್ದರು ಶಿಕ್ಷಕರು, ಕಲಾಭಿಮಾನಿಗಳಾದ ಒ.ಆ ಹೆಗಡೆ ಕುಡಗೋಡ ಇವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಶ್ರೀ ಮೂಕಾಂಬಿಕಾ ಮಂಡಳಿಯವರು ಅನೇಕ ವರ್ಷಗಳಿಂದ ಹಿರಿಯ ಕಲಾವಿದರನ್ನು ಹಾಗೂ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ, ಮಹನೀಯರನ್ನು ಗುರುತಿಸಿ ಗೌರವಿಸುತ್ತಾ ಬಂದಿರುವುದು ಶ್ಲಾಘನೀಯವಾದ ಕಾರ್ಯವೆಂದು ಬಣ್ಣಿಸಿದರು. ಮುಂದಿನ ದಿನಗಳಲ್ಲಿ ನಾವೂ ನಿಮ್ಮೊಂದಿಗೆ ಕೈ ಜೋಡಿಸುತ್ತೇವೆ. ಎಂಬ ಭರವಸೆಯ ಮಾತನಾಡಿದರು. ಕಾರ್ಯಕ್ರಮದಲ್ಲಿ ವೆ.ಯೂ ತಿಮ್ಮಪ್ಪ ಭಟ್ ಸಾರಂಗ , ಮಹೇಶ ಭಟ್ ದಾನ್ಮಾಂವ್ ಇವರ ವೇದಘೋಶದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಸಂಘದ ಅಧ್ಯಕ್ಷರಾದ ಶಂಕರ ನಾರಾಯಣ ಹೆಗಡೆ ದಾನ್ಮಾಂವ್, ಪ್ರಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸಾಗತಿಸಿದರು. ಕಾರ್ಯದರ್ಶಿ ಕೇಶವ ಹೆಗಡೆ ಕಿಬ್ಳೆ ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆಗೈದರು. ದೇವಾಲಯದ ಆಡಳಿತ ಮಂಡಳಿಯವರು ಹಾಗೂ ಊರನಾಗರಿಕರು ಸಹಕಾರನೀಡಿದರು. ನಂತರ ರಾಮಾವಧೆ ಎಂಬ ಪೌರಾಣಿಕ ಯಕ್ಷಗಾನವನ್ನು ಪ್ರದರ್ಶಿಸಲಾಯಿತು. ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಮಂಜುನಾಥ ಗುಡ್ಡೆದಿಂಬ ಏ.ಓ ಭಾರ್ಗವ ಹೆಗ್ಗೋಡು, ಮುಮ್ಮೇಳದಲ್ಲಿ ವಿನಾಯಕ ಹೆಗಡೆ ಕಲಗದ್ದೆ, ಮೋಹನ ಹೆಗಡೆ ಹೆರವಟ್ಟಾ, ಪ್ರದೀಪ ಹೆಗಡೆ ಹಣಜಿಬೈಲ್, ಗಣಪತಿ ಹೆಗಡೆ ಹೊನ್ನೇಕೈ, ಪ್ರಸಾದನ ವ್ಯವಸ್ಥೆಯಲ್ಲಿ ಮಹಾಬ್ಲೇಶ್ವರ ಗೌಡ ಹಾರೇಕೊಪ್ಪ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯಲ್ಲಿ ಗಜಾನನ ಏ. ವಂದಾನೆ ಸಹಕರಿಸಿದರು.