ಸ್ವಾತಂತ್ರ್ಯ ಅಮೃತಮಹೋತ್ಸವ-ಮರೆಯದ ಮರೆಯಾದ ರತ್ನಗಳು

ಉತ್ತರ ಕನ್ನಡ ಜಿಲ್ಲೆ ಹಲವು ವೈಶಿಷ್ಟ್ಯಗಳ ಜಿಲ್ಲೆ. ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿಯ ಅಂಕೋಲಾದಲ್ಲಿ ರೈತ ಹೋರಾಟ ನಡೆಯಿತು.

ಸ್ವಾತಂತ್ರ್ಯ ಹೋರಾಟವಂತೂ ಈ ಜಿಲ್ಲೆಯ ಸಿದ್ಧಾಪುರ, ಅಂಕೋಲಾ ತಾಲೂಕುಗಳ ಉಸಿರಾಗಿತ್ತು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಕಾರಣಕ್ಕಾಗಿ ಮೊಟ್ಟಮೊದಲು ಬಂಧಿತರಾದವರು ಸಿದ್ಧಾಪುರದ ಬೇಡ್ಕಣಿಯ ಚೌಡಾ ನಾಯ್ಕರು. ಚೌಡಾ ನಾಯ್ಕರ ತಂದೆ ಪೊಲೀಸ್ ಪಟೇಲ್ ಆಗಿದ್ದರು. ತಂದೆ ಮತ್ತು ಕುಟುಂಬದ ಬ್ರಟೀಷ್ ಸೇವೆಯ ವಿರುದ್ಧ ಸಿಡಿದೆದ್ದ ಚೌಡಾ ನಾಯ್ಕ ಸ್ವಾತಂತ್ರ್ಯ ಹೋರಾಟಕ್ಕಿಳಿದು ಬೀದಿಪಾಲಾದ ರೋಚಕ ಕಥೆ ಉತ್ತರ ಕನ್ನಡ ಸ್ವಾತಂತ್ರ್ಯ ಹೋರಾಟದ ಪ್ರಮುಖ ಅಧ್ಯಾಯ.

ಈ ಚೌಡಾ ನಾಯ್ಕರ ಕುಟುಂಬದ ಸಹೋದರ ಸಂಬಂಧಿ ಗಣಪತಿ ನಾಯ್ಕ, ಚೌಡಾ ನಾಯ್ಕರಂತೆಯೇ ಅಧ್ಯಯನ ಮಾಡಿ ಸ್ವಾತಂತ್ರ್ಯ ಚಳವಳಿಯ ಕಾರಣಕ್ಕೆ ಬ್ರಟೀಷ್ ಸರ್ಕಾರದ ನೌಕರಿ ತಿರಸ್ಕರಿಸಿ ಸ್ವಾತಂತ್ರ್ಯ ಹೋರಾಟಕ್ಕಿಳಿಯುತ್ತಾರೆ. ಸಿದ್ಧಾಪುರದ ಯುವಕ ಸಿದ್ಧಾಪುರದಿಂದ ಅಂಕೋಲಾ ವರೆಗೆ ಕಾಲ್ನಡಿಗೆಯ ಪ್ರವಾಸ ಮಾಡುತಿದ್ದಾಗ ಅಂಕೋಲಾದ ರೈತ ಹೋರಾಟ ಕಣ್ಣಿಗೆ ಗೋಚರಿಸುತ್ತದೆ. ಅಂಕೋಲಾದಲ್ಲಿ ಜಮೀನ್ಧಾರರು, ಶ್ರೀಮಂತರು ಆದ ಕೆಲವರು ಬ್ರಟೀಷರ ನೆರವು ಪಡೆದು ಬಡ ರೈತ ಗೇಣಿದಾರರನ್ನು ಹಿಂಸಿಸುತ್ತಿರುತ್ತಾರೆ.

ಈ ಪ್ರಭುತ್ವ ಪ್ರೇರಿತ ಹಿಂಸೆಯ ವಿರುದ್ಧ ಕರ್ಕಿಯ ನಾಯ್ಕರು, ಅಂಕೋಲಾದ ನಾಡಕರ್ಣಿ,ದಿನಕರದೇಸಾಯಿ ಸಂಘಟನೆ ಮಾಡುತಿದ್ದಾಗ ಹೋರಾಟದ ಕಿಚ್ಚು ಕಟ್ಟಿಕೊಂಡು ತಿರುಗಾಡುತಿದ್ದ ಹೊಸೂರಿನ ಗಣಪತಿ ಸ್ವಾತಂತ್ರ್ಯ ಹೋರಾಟಕ್ಕೆ ವರದಿ ಮುಟ್ಟಿಸುತ್ತಾ ಕರಪತ್ರ ಹಂಚುತಿದ್ದಾಗ ಕಂಪನಿ ಸರ್ಕಾರದ ಪೊಲೀಸರಿಂದ ಬಂಧನಕ್ಕೊಳಗಾಗುತ್ತಾರೆ.

ಹೀಗೆ ಬಂಧನ, ಬಂಧನದ ಭೀತಿಯಿಂದ ಮೈಸೂರು ರಾಜ್ಯದ ಗಡಿ ಶಿವಮೊಗ್ಗದ ಸಾಗರ ತಾಲೂಕು ಹಿರೆನೆಲ್ಲೂರಿನಲ್ಲಿ ಅಡಗಿದ್ದಾಗ ಅಲ್ಲಿಯ ಬಡರೈತರ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವ ಗಾಂವಟಿಶಾಲೆ ಮಾಸ್ತರ್ ಆಗಿ ರೈತರಿಗೆ ಶಿಕ್ಷಣ ಕೊಡುತ್ತಾ ಕಾಗೋಡು ರೈತ ಚಳವಳಿಗೆ ನಾಂದಿ ಹಾಡುತ್ತಾರೆ. ಅವರೇ ಮುಂದೆ ಎಚ್. ಗಣಪತಿಯಪ್ಪ ಎಂದು ಪ್ರಸಿದ್ಧರಾಗುತ್ತಾರೆ.

ಹೀಗೆ ಎಳೆವಯಸ್ಸಿನಲ್ಲಿ ಹೋರಾಟಕ್ಕಿಳಿದ ಎಚ್. ಗಣಪತಿಯಪ್ಪ ಸಿದ್ಧಾಪುರದ ಹೊಸೂರಿನ ಕುರವಂತೆಯವರ ಮನೆಯ ಗಣಪತಿ ಎನ್ನುವುದು ಈಗ ಚರಿತ್ರೆ.

ಉಳ್ಳವರು ಉಳ್ಳವರ ಅನುಕಂಪ ಪ್ರೇರಿತ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಧೀರ ಹೋರಾಟಗಾರನೆಂದೇ ಕರೆಸಿಕೊಳ್ಳುತಿದ್ದ ಬೇಡ್ಕಣಿ ಚೌಡಾ ನಾಯ್ಕ, ಹೊಸೂರಿನ ಗಣಪತಿಯಪ್ಪ ಪ್ರಾಮುಖ್ಯತೆ ಪಡೆಯದಿದ್ದುದು ಈಗಿನ ಮತೀಯವಾದಿಗಳು ಹೇಳುವಂತೆ ಕಮ್ಯುನಿಸ್ಟ್ ಪ್ರೇರಿತ ಚರಿತ್ರೆಯ ಕಾರಣವಲ್ಲ.

ಆಗಿದ್ದುದು ಉಳ್ಳವರ ಪರವಾಗಿನ ಹೋರಾಟದ ಚರಿತ್ರೆ. ಈ ಚರಿತ್ರೆಯಲ್ಲಿ ಚೌಡಾ ನಾಯ್ಕ, ಗಣಪತಿಯಪ್ಪ ತೆರೆಮರೆಗೆ ಸರಿದದ್ದು ಕಾಕತಾಳೀಯವಲ್ಲ. ಬದಲಾಗಿ ಆರ್ಯರ ಬಲಪಂಥೀಯ ವೈಭವೀಕರಣದ ಉಳ್ಳವರ ಚರಿತ್ರೆಯ ತಾರತಮ್ಯದ ಗುಣವಿಶೇಷಗಳಿಂದ.

ಇಂಥ ವಸ್ತನಿಷ್ಟವಲ್ಲದ ಐತಿಹಾಸಿಕ ದಾಖಲೆಗಳಲ್ಲಿ ಸಿಗದ ಈ ವ್ಯಕ್ತಿಗಳು ಮರೆತವರ ಕತೆಯಂತೆ ಎಲ್ಲೆಲ್ಲೋ ಮರಳಿಮರಳಿ ಪ್ರಸ್ತಾಪವಾಗಿದ್ದಾರೆ. ಇಂಥ ಹಿನ್ನೆಲೆಯ ಎಚ್. ಗಣಪತಿಯಪ್ಪ ಈಗಿನ ವೈದಿಕ ಕುರುಡುಅನುಯಾಯಿಗಳ ಉಪೇಕ್ಷೆ ವಿರೋಧಕ್ಕೆ ಒಳಗಾಗಿ ಇತಿಹಾಸದ ಪುಟ ಸೇರಿದ್ದಾರೆ. ಇಂಥ ಗಣಪತಿಯಪ್ಪ ಅಂಕೋಲಾ ರೈತ ಚಳವಳಿ ಪ್ರೇರಣೆಯಿಂದ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಸ್ವಾತಂತ್ರ್ಯಾನಂತರ ಕಾಗೋಡು ಹೋರಾಟ ಕಟ್ಟುತ್ತಾರೆ.

ಕಾಗೋಡು ಹೋರಾಟದ ಪ್ರೇರಣೆ,ಫಲಶೃತಿಯಾಗಿ ರಾಜ್ಯದ ಬಡ ರೈತ ಗೇಣಿದಾರರಿಗೆ ಊಳುವವನೇ ಒಡೆಯನಾಗುವ ಹಕ್ಕು ದೊರೆತದ್ದು ಈಗ ಇತಿಹಾಸ.

ಈ ಹೋರಾಟ, ರೈತ ಚಳವಳಿಯ ನಾಯಕ ಎಚ್. ಗಣಪತಿಯಪ್ಪ ಸಾಗರವನ್ನು ಕೇಂದ್ರೀಕರಿಸಿಕೊಂಡು ನ್ಯಾಯ(ದ)ಪಥ ಎನ್ನುವ ಪತ್ರಿಕೆ ಹೊರತರುತಿದ್ದರು. ಹೋರಾಟ, ಪತ್ರಿಕೋದ್ಯಮ, ಸ್ವಾತಂತ್ರ್ಯ ಚಳವಳಿ, ಧಾರ್ಮಿಕ ಮೂಲಭೂತವಾದದ ವಿರುದ್ಧದ ಹೋರಾಟ ಹೀಗೆ ಜೀವನವನ್ನೇ ಹೋರಾಟವಾಗಿಸಿಕೊಂಡಿದ್ದ ಎಚ್. ಗಣಪತಿಯಪ್ಪ ಆಯಾ ಕಾಲದ ಪ್ರಭುತ್ವದ ವಿರೋಧ, ತುಳಿತಕ್ಕೆ ಸಿಕ್ಕು ನಲುಗಿರುವುದೂ ಒಂದು ವಿಸ್ತಾರ ಚರಿತ್ರೆಯೇ.

(ಇಂಥ ಗಣಪತಿಯಪ್ಪನವರನ್ನು ಸಿದ್ಧಾಪುರಕ್ಕೆ ಮತ್ತೆ ನೆನಪಿಸಿ, ಸನ್ಮಾನಿಸಿದ್ದು. ಅವರ ಬಗ್ಗೆ ಸಮಾಜಮುಖಿ ಬರೆದು ವಾಸ್ತವ ತಿಳಿಸಿದ್ದು ಇದರ ಮುಂದುವರಿದ ಭಾಗದಂತೆ ಸಿದ್ದಾಪುರದ ಸಾಹಿತ್ಯ ಪರಿಷತ್ತಿನ ಭವಿಷ್ಯದ ಯೋಜನೆಯಲ್ಲಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ಸಲಹೆ ಸೂಚನೆ ನೀಡಿದ್ದು ಸಮಾಜಮುಖಿ ಒಂದು ಪತ್ರಿಕೆಯಷ್ಟೇ ಅಲ್ಲ ಇದೊಂದು ವಾಸ್ತವ, ಸತ್ಯ, ನಿಷ್ಠೂರತೆಗಳ ಪಕ್ಷಪಾತಿಯಾಗಿರುವ ಹೋರಾಟದ ಅಸ್ತ್ರ ಎನ್ನುವ ದಾಖಲೆಗೂ ದೃಷ್ಟಾಂತ.)

ಟಿ.ಕೆ. ಮಹಮೂದ್- ಉತ್ತರ ಕನ್ನಡ ಮಣ್ಣಿನಲ್ಲಿ ದಿನಕರ ದೇಸಾಯಿ, ಎಚ್. ಗಣಪತಿಯಪ್ಪ, ಜಿ.ದೇವರಾಯ ನಾಯಕ ಸೇರಿದಂತೆ ಅಸಂಖ್ಯ ಜನರು ರೈತ ಹೋರಾಟದಲ್ಲಿ ಪಾಲ್ಗೊಂಡ ಸವಿಸ್ತಾರ ಚರಿತ್ರೆಯೇ ಇದೆ. ( ವಿಷ್ಣು ನಾಯ್ಕರ ದುಡಿಯುವ ಕೈಗಳ ಹೋರಾಟದ ಕತೆ)

ಇಂಥ ಚರಿತ್ರೆಯ ಕೊಂಡಿ ಕಾಸರಗೋಡಿನ ಕೈಯ್ಯೂರಿನ ವರೆಗೆ ವಿಸ್ತರಿಸಿಕೊಂಡಿದೆ. ಪ್ರಾಯಶ: ಮೊದಲು ಅಂಕೋಲಾ, ನಂತರ ಸಾಗರ (ಕಾಗೋಡು) ಇವುಗಳ ನಡುವಿನ ಅವಧಿಯಲ್ಲಿ ಕೈಯ್ಯೂರಿನಲ್ಲಿ ರೈತ ಹೋರಾಟ ಪ್ರಾರಂಭವಾಗುತ್ತದೆ. ಇಂಥ ಹೋರಾಟಗಳಿಗೆ ಅಂದಿನ ದಿನಗಳಲ್ಲಿ ಪ್ರೇರಣೆಯಾದವರು ರಾಜಕೀಯ ಮುಂದಾಳುಗಳು, ಸ್ವಾತಂತ್ರ್ಯ ಹೋರಾಟದ ಸೇನಾನಿಗಳು ಮತ್ತು ಸಮಾಜವಾದಿ ಹೋರಾಟಗಾರರು. ಅಂಕೋಲಾ, ಕಾಗೋಡು, ಕೈಯ್ಯೂರುಗಳ ನಡುವೆ ಸಿದ್ದಾಪುರ ಸ್ವಾತಂತ್ರ್ಯ ಹೋರಾಟ, ಕಾಗೋಡು ಚಳವಳಿ ಸೇರಿದಂತೆ ಅನೇಕ ಹೋರಾಟಗಳ ತೌರೂರು.

ಆ ಅವಧಿಯಲ್ಲಿ ಕೇರಳಮೂಲದ ಮುಸ್ಲಿಂ ವ್ಯಕ್ತಿಯೊಬ್ಬ ಇಂಥ ಹೋರಾಟಗಳ ಬಗ್ಗೆ ಮಾತನಾಡುತ್ತಾ ಸಾಹಿತ್ಯ, ಸಾಂಸ್ಕೃ ತಿಕತೆ, ರಾಜಕಾರಣಗಳ ಮಧ್ಯೆ ಸಮಾಜವಾದದ ಕೆಲಸಮಾಡುತಿದ್ದ. ಈತ ವಲಸೆ ಮುಸ್ಲಿಂ ಬೇರೆ. ಸ್ವಾತಂತ್ರ್ಯ ಹೋರಾಟದ ಕೆಲವು ಮೇಲ್ವರ್ಗದವರು, ಕಾಗೋಡು ರೈತ ಚಳವಳಿಯ ಬಹುಸಂಖ್ಯಾತರ ನಡುವೆ ಮಲಿಯಾಳಿ ಮುಸ್ಲಿಂ ಸಿದ್ಧಾಪುರದಂಥ ಪ್ರಖರ ರಾಜಕೀಯದ ವಾತಾವರಣದಲ್ಲಿ ಸಮಾಜವಾದದ ಬಗ್ಗೆ ಮಾತನಾಡುತಿದ್ದ. ಲೋಹಿಯಾವಾದಿಗಳಾದ ಅನೇಕ ಹೋರಾಟಗಾರರ ಸಂಪರ್ಕ, ಸಂಬಂಧ ದಲ್ಲಿದ್ದ ಅವರೇ ಸಿದ್ಧಾಪುರದ ಟಿ.ಕೆ. ಮಹಮೂದ್.

ಸಮಾಜವಾದ, ಕಾಂಗ್ರೆಸ್ ರಾಜಕಾರಣಗಳ ನಡುವೆ ಎಸ್. ಎಂ. ಕೃಷ್ಣ, ಬಂಗಾರಪ್ಪ, ಗೋಪಾಲಗೌಡ, ಗಣಪತಿಯಪ್ಪನವರಂಥ ಅನೇಕ ಸಮಾಜವಾದಿ ಹಿನ್ನೆಲೆಯ, ಎಸ್.ಎಂ. ಯಾಹ್ಯಾ, ದೇವರಾಜ ಅರಸುರಂಥ ಅಧಿಕಾರರೂಢರ ಸ್ನೇಹದ ನಡುವೆ ಅಧಿಕಾರ, ಅಂತಸ್ತುಗಳ ವ್ಯಾಮೋಹ ತೊರೆದು ಸಮಾಜವಾದ, ಸಾಹಿತ್ಯ, ಸಾಂಸ್ಕೃ ತಿಕತೆಗಳೊಂದಿಗೆ ಸಿದ್ಧಾಪುರದಂಥ ಚಿಕ್ಕ ತಾಲೂಕಿನಲ್ಲಿ ಒಂಟಿ ಸಲಗದಂತೆ ಬದುಕಿ, ಬಾಳಿ ಹೋದವರು ಟಿ.ಕೆ.ಎಂ.

ಅವರು ಮನಸ್ಸು ಮಾಡಿದ್ದರೆ ಶಾಸಕರು, ಸಂಸದರು, ಸಚಿವರಾಗುವ ಅವಕಾಶವಿತ್ತು. ಆದರೆ ನೈಜ ಸಮಾಜವಾದಿಯಾಗಿ ಸಮಾಜದ ಅಂಕುಡೊಂಕುಗಳನ್ನು ವಿಮರ್ಶಿಸುತ್ತಾ, ಟೀಕಿಸುತ್ತಾ ಟೀಕೆ ಮಹಮದ್ ಎಂದು ಪ್ರಸಿದ್ಧರಾದರೂ ಕೊನೆಯವರೆಗೂ ಆರ್ಥಿಕ, ಸಾಮಾಜಿಕ ಸ್ಥಾ ನ ಮಾನಗಳಿಲ್ಲದೆ ನಿರ್ಗಮಿಸಿದ ಸಮಾಜವಾದಿ.ಅವರ ಹೋರಾಟದ ಬದುಕು, ಛಲ, ಬದ್ಧತೆ ಈಗಿನ ಜನಾಂಗಕ್ಕೆ ಮಾದರಿ, ಮಾರ್ಗದರ್ಶಿ. ಟಿ.ಕೆ. ಮಹಮದ್ ಉತ್ತರ ಕನ್ನಡ ವಿಶೇಶವಾಗಿ ಸಿದ್ದಾಪುರ ತಾಲೂಕು ಸದಾ ಸ್ಮರಿಸಬೇಕಾದ ಅಪರೂಪದ ಸಮತಾವಾದಿ. ಸಿದ್ದಾಪುರದ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃ ತಿಕ ಮನಸುಗಳಿಗೆ ಟಿ.ಕೆ. ಮಹಮದ್ ಸದಾ ಸ್ಮರಣೀಯ ವ್ಯಕ್ತಿ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *