

ತಳ ಸಮುದಾಯದ ದಿಕ್ಕನ್ನೇ ಬದಲಿಸಿದ 1935 ರ ಕೇರಳದ ಸಂಯುಕ್ತ ರಾಜಕೀಯ ಸಂಘಟನೆ
- ಲೋಹಿತ್ ನಾಯಕ
- 1928 ರಲ್ಲಿ ನಾರಾಯಣ ಗುರುಗಳು
ದೈವಾದಿನರಾದ ನಂತರ ಗುರುಗಳ ಶಿಷ್ಯರಾದ
ಸಿ ಕೇಶವನ್ ನೇತ್ರ ತ್ವದಲ್ಲಿ ತಳ ವರ್ಗದ ರಾಜಕೀಯ ಪ್ರಾತಿನಿಧ್ಯ ಕ್ಕಾಗಿ ಹೋರಾಟ ಕಟ್ಟಲಾಯಿತು.
ಈ ಹೋರಾಟದಲ್ಲಿ ಅವರಿಗೆ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಜನಾಂಗಗಳು ಜೊತೆಯಾದವು. ಈ ಮೂರು ಜನಾಂಗಗಳ ಒಟ್ಟು ಜನಸಂಖ್ಯೆ ತಿರುವಾಂಕೂರು ಸಂಸ್ಥಾನದ ಒಟ್ಟು ಜನಸಂಖ್ಯೆಯ ಮೂರನೇ ಎರಡರಷ್ಟಿತ್ತು. ತಿರುವಾಂಕೂರು ಸಂಸ್ಥಾನದಲ್ಲಿ 1888ರಲ್ಲಿಯೇ ವಿಧಾನಸಭೆ ರಚನೆಯಾಗಿ ಚುನಾವಣೆಗಳು ನಡೆಯುತ್ತಾ ಬಂದಿದ್ದರೂ, 1935ರವರೆಗೆ ನಡೆದ 15 ಚುನಾವಣೆಗಳಲ್ಲಿ ಶೇ.26ರಷ್ಟಿದ್ದ ಈಳವರಲ್ಲಿ (ಈಡಿಗ) ಒಬ್ಬರೂ ಕೂಡ ಆಯ್ಕೆಯಾಗಿರಲಿಲ್ಲ. ಶೇ.22ರಷ್ಟಿದ್ದ ಕ್ರಿಶ್ಚಿಯನ್ ಮತ್ತು ಶೇ.18ರಷ್ಟಿದ್ದ ಮುಸ್ಲಿಮರ ಪ್ರಾತಿನಿಧ್ಯ ಮೂರು-ನಾಲ್ಕರ ಗಡಿ ದಾಟಿರಲಿಲ್ಲ. ಐದು ರೂಪಾಯಿ ತೆರಿಗೆ ನೀಡುವವರು ಮಾತ್ರ ಮತದಾನದ ಹಕ್ಕು ಪಡೆದಿರುವುದು ಈ ಅನ್ಯಾಯಕ್ಕೆ ಕಾರಣವಾಗಿತ್ತು.
- ಆ ಕಾಲದ ಭೂಒಡೆತನ ಬಹುಪಾಲು ನಾಯರ್ ಮತ್ತು ನಂಬೂದಿರಿಗಳ ( ಬ್ರಾಹ್ಮಣರ ) ಕೈಯಲ್ಲಿದ್ದ ಕಾರಣ ಉಳಿದ ಜನಾಂಗ ಮತದಾನದ ಹಕ್ಕನ್ನು ಪಡೆಯುವುದು ಅಸಾಧ್ಯವಾಗಿತ್ತು. ಇದನ್ನು ಪ್ರತಿಭಟಿಸಲೆಂದೇ ಮೂರು ಜನಾಂಗಗಳು ಕೂಡಿ “ಸಂಯುಕ್ತ ರಾಜಕೀಯ ಸಂಘಟನೆ” ಯನ್ನು ರಚಿಸಿಕೊಂಡು 1935ರ ಚುನಾವಣೆಯನ್ನು ಬಹಿಷ್ಕರಿಸಿದವು. ಈ ಹೋರಾಟದ ಕಾವಿಗೆ ಮಣಿದ ತಿರುವಾಂಕೂರು ಸಂಸ್ಥಾನ ಜಾತಿ ಪ್ರಮಾಣಕ್ಕೆ ಅನುಗುಣವಾಗಿ ರಾಜಕೀಯ ಮೀಸಲಾತಿ ಘೋಷಿಸಿತು. ಇದರ ಪರಿಣಾಮ ಈಡಿಗರು,ಮುಸಲ್ಮಾನರು, ಕ್ರಿಶ್ಚಿಯನರು
ರಾಜಕೀಯ ಪ್ರಾತಿನಿಧ್ಯ ಪಡೆದರು.
ಮುಂದೆ ಈಡಿಗ ಸಿ ಕೇಶವನ್ 1950 ರಲ್ಲಿ ತಿರುವಾಂಕೂರ – ಕೋಚಿನ್ ಪ್ರಾಂತ್ಯದ ಮುಖ್ಯಮಂತ್ರಿಗಳಾದರು. ಚುನಾವಣೆಗೆ ನಿಲ್ಲುವ ಹಕ್ಕು ಸಹ ಇಲ್ಲದೆ ಬಳುತ್ತಿದ್ದ ಸಮುದಾಯವೊಂದರ ವ್ಯಕ್ತಿಯೊಬ್ಬ ಕೇವಲ 15 ವರ್ಷಗಳಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿಯಾಗುತ್ತಾನೆ.
ಇದು ಸಾಧ್ಯವಾದದ್ದು ನಾರಾಯಣ ಗುರುಗಳ ಚಳುವಳಿಯ ಶಿಕ್ಷಣ ಮತ್ತು ಸಂಘಟನೆಯ ಮಾರ್ಗದಿಂದ. ಕೇರಳಿಗರಿಗೆ ಶಿಕ್ಷಣ ಶತ್ರುಗಳ ಮತ್ತು ಮಿತ್ರರ ಸರಿಯಾದ ಪರಿಚಯಮಾಡಿಸಿತ್ತು. ಸಂಘಟನೆ ಮಿತ್ರರೆಲ್ಲ ಸೇರಿ ಹಕ್ಕಿನ ಹೋರಾಟಕ್ಕೆ ಪ್ರೆರೇಪಿಸಿತ್ತು.
ಶಿಕ್ಷಣ ಪಡೆದು ಪ್ರಜ್ಞಾವಂತರಾಗಿ ನಿಮ್ಮ ಶತ್ರುಗಳ ಮಿತ್ರರ ಸರಿಯಾದ ಪರಿಚಯ ಮಾಡಿಕೊಳ್ಳಿ.
ಲೋಹಿತ್ ನಾಯಕ.

