
ಬಹಳ ವರ್ಷಗಳ ಬೇಡಿಕೆ ನಂತರ ಕಾಡು ಕುರುಬರಿಗೆ ಪರಿಶಿಷ್ಟ ಪಂಗಡದ ಸ್ಥಾನ ಮಾನ ನೀಡಿದ ನಂತರ ರಾಜ್ಯದ ಕಾನ್ ದೀವರಿಗೆ ಎಸ್.ಟಿ. ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆ ಈಗ ಬಲಗೊಳ್ಳುತ್ತಿದೆ.
ಚಿಕ್ಕಮಂಗಳೂರು,ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವಿಶೇ ಶವಾಗಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವಾಸಿಸುವ ದೀವರನ್ನು ಮೊದಲಿನಿಂದಲೂ ಕಾಡು ದೀವರು, ಕಾನು ದೀವರು, ಬಗನೆ ದೀವರು ಎಂದು ಕರೆಯುವುದು ರೂಢಿ. ಸುಮಾರು೨೦ಲಕ್ಷ ದಷ್ಟು ಜನಸಂಖ್ಯೆ ಹೊಂದಿರುವ ಈ ದೀವರ ಬಗ್ಗೆ ಸಮಾಜವಾದಿ ಮುಖಂಡ ಮಾಜಿ ಶಾಸಕ ದಿ. ಗೋಪಾಲಗೌಡರು ೭೦-೮೦ ರ ದಶಕದಲ್ಲೇ ಮಲೆನಾಡಿನ ಕಾನುದೀವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ರಾಜ್ಯ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು.
ಇದೇ ಅವಧಿಯಲ್ಲಿ ಕಾಗೋಡು ಹೋರಾಟದ ರೂವಾರಿ ಎಚ್. ಗಣಪತಿಯಪ್ಪ ಕೂಡಾ ಈಡಿಗರ ಉಪಪಂಗಡ ಎನ್ನುವ ಕಾನುದೀವರು ಅರಣ್ಯ ವಾಸಿಗಳು, ರೈತರು,ಬುಡಕಟ್ಟುಗಳಾಗಿರುವ ಕಾನ್ ದೀವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಪ್ರತಿಪಾದಿಸಿದ್ದರು.
ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ಕಾಡುವಾಸಿಗಳಾಗಿ,೧೯೭೦ ರ ದಶಕದ ವರೆಗೂ ಗೇಣಿದಾರರೂ ಬಡವರಾಗಿದ್ದ ದೀವರಲ್ಲಿ ಸೊರಬಾದ ಬಂಗಾರಪ್ಪ ಮುಖ್ಯಮಂತ್ರಿಗಳಾಗಿರುವುದು ಕಾಗೋಡು ತಿಮ್ಮಪ್ಪ ಹಿರಿಯ ನಾಯಕ, ಮಾಜಿಸಚಿವರಾಗಿರುವುದು ಸೇರಿ ತಮ್ಮ ಜನಸಂಖ್ಯೆ ಇರುವ ಅನೇಕ ಕ್ಷೇತ್ರಗಳಲ್ಲಿ ಕನಿಷ್ಟ ಶಾಸಕರು, ಸಂಸದರೂ ಆಗಿರದ ಕಾನ್ ದೀವರ ಆಚರಣೆ, ರೂಢಿ ಸಂಪ್ರದಾಯಗಳು ನೈಜ ಬುಡಕಟ್ಟುಗಳಾದ ಹಾಲಕ್ಕಿ ಒಕ್ಕಲಿಗರು,ಕಾಡು ಕುರುಬರ ರೀತಿಯಲ್ಲಿವೆ.
ಜನಾಂಗೀಯ ಅಧ್ಯಯನಗಳು, ಸಾಹಿತ್ಯಕ ದಾಖಲೆಗಳು ಮತ್ತು ರಾಷ್ಟ್ರಕವಿ ಕುವೆಂಪು ಮತ್ತು ನಾ.ಡಿಸೋಜಾರ ಸಾಹಿತ್ಯಗಳಲ್ಲಿ ಕೂಡಾ ನೈಜ ಬುಡುಕಟ್ಟುಗಳಾಗಿ ಚಿತ್ರಿತವಾಗಿರುವ ಮಲೆನಾಡಿನ ದೀವರು ಕಾಡುವಾಸಿಗಳಾಗಿ ಕೆಲವು ಕಾಲಸೈನಿಕರಾಗಿ ಕೆಲಸಮಾಡಿದ್ದಾರೆ. ಇದೇ ಆಧಾರದಲ್ಲಿ ಕಾನ್ ದೀವರನ್ನು ಹಳೆಪೈಕರು ಎಂದು ಕೂಡಾ ಕರೆಯಲಾಗುತ್ತದೆ .https://m.youtube.com/watch?v=30oxVRVlhpk
ಅಚಲ ಸ್ವಾಭಿಮಾನಿಗಳೂ,ಧೈರ್ಯವಂತರೂ ಆದ ಕಾನ್ ದೀವರು ನಿಸ್ಸೀಮ ಬೇಟೆಗಾರರು ಬೇಟೆ ಮತ್ತು ಬಗನೆ ಕಳ್ಳು ಅಥವಾ ಕಾಡು ಸೇಂದಿ ಇಳಿಸುವ ಈ ಸಮದಾಯ ಪರಿಶಿಷ್ಟ ಪಂಗಡವರೆನ್ನುವುದಕ್ಕೆ ಬೇಡರಂತೆ ಅವರು ಆರಾಧಿಸುವ ಕುಮಾರ ರಾಮನ ಚರಿತ್ರೆ ಕೂಡಾ ಪೂರಕವಾಗಿದೆ. ರಾಜರ ಆಳ್ವಿಕೆಯಲ್ಲಿ ಸೈನಿಕರಾಗಿ ಬಿಡುವುನ ವೇಳೆಯಲ್ಲಿ ಕೃಷಿಕರಾಗಿ ಹವ್ಯಾಸಿ ಬೇಟೆ ಮತ್ತು ಕಾಡು ಉತ್ಫನ್ನ ಸಂಗ್ರಹಿಸುವ ಅಲೆಮಾರಿಗಳಾಗಿ ತಮ್ಮ ವಿಕಾಸದ ವೀಶಿಷ್ಟ್ಯಮಯ ಪಥದ ವೈಭವದ ಚರಿತ್ರೆಯ ತುಂಬಾ ಬುಡಕಟ್ಟು ಜಾನಪದವೇ ತುಂಬಿರುವ ಈ ಕಾನ್ ದೀವರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ಮೂಲಕ ಅವರಲ್ಲಿನ ಅತಿ ಬಡವರ ಅಭಿವೃದ್ಧಿಗೆ ನೆರವಾಗಬೇಕಾದ ಅನಿವಾರ್ಯತೆ ಬಗ್ಗೆ ಈಗ ಎಲ್ಲೆಡೆ ಚರ್ಚೆ ಪ್ರಾರಂಭವಾಗಿದೆ. https://m.youtube.com/watch?v=kGkjklqtYiE&t=3s
