

ಮೊದಲೇ ನಾನು ನಿಮಗೆ ಹೇಳುವ ವಿಚಾರವೆಂದರೆ…. ಭಾರತ ಮತ್ತು ತಾಂಜೇನಿಯಾದಲ್ಲಿ ಶಿಶು ಮರಣ ಪ್ರಮಾಣ ಅಧಿಕವಾಗಿದೆ. ೨೦೦೦ ನೇ ಇಸ್ವಿಯಲ್ಲಿ ಭಾರತದಲ್ಲಿ ೨೫ ಲಕ್ಷ ಮಕ್ಕಳು (ಐದು ವರ್ಷದ ಒಳಗಿನ) ಮೃತಪಟ್ಟಿದ್ದು ಜಾಗತಿಕ ದಾಖಲೆಯಾದರೆ ೨೦೧೫ ರ ವೇಳೆಗೆ ಭಾರತದ ಶಿಶುಗಳ ಮರಣ ಪ್ರಮಾಣ೫೦% ಕಡಿಮೆಯಾಗಿದೆ.
೨೦೦೦ ನೇ ವರ್ಷದಿಂದ ಪ್ರಾರಂಭವಾಗಿ ೨೦೧೦, ೨೦೨೦ ರ ವೆರೆಗೆ ಹಾಗೂ ೨೦೧೯ ರಿಂದ ೨೦೨೨ ರ ವರೆಗೆ ಭಾರತದ ಶಿಶುಮರಣ ಪ್ರಮಾಣವನ್ನು ನೋಡಿದರೆ ಯಾರಿಗೂ ಆಘಾತವಾಗದೇ ಇರದು.
ಮೊದಲು ಭಾರತ ಅಥವಾ ವಿಶ್ವದಲ್ಲಿ ಶಿಶುಮರಣ ಪ್ರಮಾಣ ಯಾಕೆ ಹೆಚ್ಚುತ್ತಿದೆ ಎನ್ನುವುದಕ್ಕೆ ಮೇಲ್ನೋಟಕ್ಕೆ ಎರಡು ಪ್ರಬಲ ಕಾರಣಗಳನ್ನು ಗುರುತಿಸಬಹುದು ಒಂದು- ಪ್ಲಾಸ್ಟಿಕ್ ಬಳಕೆ ಮತ್ತು ದಹನ!?
ಎರಡು- ಕರೋನಾ ನಂತರದ ವಿಚಿತ್ರ ಸ್ಥಿತಿ.
ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನನ್ನ ಕಿರಿಯ ಮಿತ್ರನೊಬ್ಬ ಶಿಶು ಮರಣ ಪ್ರಮಾಣದ ಬಗ್ಗೆ ನನ್ನ ಗಮನ ಸೆಳೆದ. ಆತನ ಕಾಳಜಿ, ಆಸಕ್ತಿ- ಬದ್ಧತೆ ಕಾರಣಕ್ಕೆ ನನ್ನ ತಲೆಯೊಳಗೆ ನುಸುಳಿದ ಈ ವಿಚಾರ ನನಗೆ ಮಲಗಲು ಬಿಡಲಿಲ್ಲ!
ಛೆ, ಭಾರತ ವಿಶ್ವದಲ್ಲಿ ಕೊಟ್ಯಾಂತರ ಮಕ್ಕಳು ಹುಟ್ಟುತ್ತಲೇ ಹಾಗೂ ಜನಿಸಿ ಐದು ವರ್ಷಗಳೊಳಗೆ ಸಾಯುತ್ತಾರೆಂದರೆ…. (ಮುಂದುವರಿದಿದೆ
