ಕಸಾಪ ಎಡವಟ್ಟುಗಳು….

ಕನ್ನಡ ಸಾಹಿತ್ಯ ಪರಿಷತ್‌ ನಡೆಸುವ ತಾಲೂಕಾ ಸಾಹಿತ್ಯ ಸಮ್ಮೇಳನಗಳಿಂದ ಹಿಡಿದು ರಾಜ್ಯ,ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಅವುಗಳದ್ದೇ ಆದ ಮಹತ್ವವಿದೆ.

ಸ್ವಾಯುತ್ತ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್‌ ನ ಚಟುವಟಿಕೆಗಳಲ್ಲಿ ಸರ್ಕಾರ ಮೂಗುತೂರಿಸುವುದು, ಕೆಲವು ಸ್ಥಾಪಿತ ಹಿತಾಸಕ್ತಿಗಳು ಸಾಹಿತ್ಯ ಪರಿಷತ್‌ ವ್ಯವಸ್ಥೆಯನ್ನು ತಮ್ಮ ಮೂಗಿನ ನೇರಕ್ಕೆ ನಡೆಸುವುದನ್ನು ಅನೇಕರು ಈ ಹಿಂದೆ ವಿರೋಧಿಸಿದ್ದಾರೆ. ಸಾಹಿತ್ಯ ಪರಿಷತ್‌ ನ ಗೌರವ,ಅನನ್ಯತೆಗಳನ್ನು ಉಳಿಸುವ ಹಿನ್ನೆಲೆಯಲ್ಲಿ ಸಾಹಿತ್ಯ ಪರಿಷತ್‌ ಘಟಕಗಳು ಶ್ರಮಿಸಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯ ಪರಿಷತ್‌ ಹಿಡಿದಿರುವ ಹಾದಿ ಅಚ್ಚೇ ದಿನದ ಪ್ರಚಾರದಲ್ಲಿ ಬುರೇ ದಿನಗಳನ್ನು ಪೋಶಿಸುವ ಸನಾತನ ಹುನ್ನಾರಗಳಂತಿದೆ.‌

ಇತ್ತೀಚೆಗೆ ಕ.ಸಾ.ಪ. ದ ಸಾಹಿತ್ಯ ಸಮ್ಮೇಳನ ಪೂರ್ವತಯಾರಿಯ ಸಭೆಯೊಂದರಲ್ಲಿ ನಾನೂ ಪಾಲ್ಗೊಂಡಿದ್ದೆ. ಸಾಹಿತ್ಯ ಪರಿಷತ್‌ ಸಂಘಟಿಸಿದ ಸಭೆಯಲ್ಲಿ ಸ್ಥಳಿಯರ ತಹಸಿಲ್ಧಾರರಿಗೆ ಅಧ್ಯಕ್ಷತೆ ನೀಡುವುದು,ಸರ್ಕಾರದ ರಾಷ್ಟ್ರೀಯ ಹಬ್ಬಗಳ ಮಾದರಿಯ ಸಭೆ ನಡೆಸಿ ಸಾಹಿತ್ಯ ಪರಿಷತ್‌ ನಿಯಮ ನಿಬಂಧನೆಗಳನ್ನು ಗಾಳಿಗೆ ತೂರಿದ್ದನ್ನು ನಾನಂತೂಗಮನಿಸಿದೆ.

ಮುಂದುವರಿದು ಕೆಲವು ಪ್ರಬೃತಿಗಳು ಸಾಹಿತ್ಯ ಸಮ್ಮೇಳಗಳ ಅಧ್ಯಕ್ಷತೆ ವಹಿಸುವವರು ಕಸಾಪ ಆಜೀವ ಸದಸ್ಯರಾಗಿರಬೇಕೆಂಬ ನಿಯಮ ಮಾಡಲಾಗಿದೆ ಎಂದಿದ್ದು!, ಕೆಲವರು ಸರ್ಕಾರ,ಸಾಹಿತ್ಯ ಪರಿಷತ್‌ ನಿಯಮಗಳು ಸಂಬಂಧಿಲ್ಲ ಇಲ್ಲಿ ಹಣಸಂಗ್ರಹಿಸಿ, ಕಾರ್ಯಕ್ರಮ ಮಾಡಲು ಅನುಕೂಲವಾಗುವ ರೀತಿ ಸಿದ್ಧತೆ ಮಾಡಿಕೊಳ್ಳಿ ಎಂದಿದ್ದು! ಇನ್ನಿಬ್ಬರು ಶಶಿಧರ ಭಟ್‌ ಪುಸ್ತಕ ಪ್ರಕಟಿಸಿಲ್ಲ,ಅವರು ಪತ್ರಕರ್ತರು ಅವರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿಸುವುದು ಬೇಡ!!! ಎಂದದ್ದು. ಇವೆಲ್ಲಾ… ಅಡ್ಡಕಸುಬಿ ಕಾರ್ಯಮರೆತ ಪತ್ರಕರ್ತರ ನೀತಿಗೆಟ್ಟ ವರ್ತನೆಗಳು ಎನ್ನುವುದಕ್ಕೆ ಯಾವ ಅನುಮಾನಗಳೂ ಇಲ್ಲ. ಇಂಥ ಪಟ್ಟಭದ್ರ ಅಡ್ಡಕಸುಬಿ ಗಳೆಲ್ಲಾ ಸಾಹಿತ್ಯ ಪರಿಷತ್‌ ಗೆ ಸಲಹೆಗಾರರು, ಇವರ ಸಲಹೆಗಳನ್ನು ಕೇಳುವ ಅಧ್ಯಕ್ಷನೆಂಬ ಕೋಲೆಬಸವ. ಇವು ಸಾಹಿತ್ಯ ಪರಿಷತ್‌ ಈಗ ಹೊರಟಿರುವ ದಾರಿಯನ್ನು ಸೂಚಿಸುತ್ತದೆ. ಇಂಥ ತಕರಾರುಗಳೊಂದಿಗೆ ಹಾವೇರಿಯಲ್ಲಿ ನಡೆಯುತ್ತಿರುವ ಅ.ಭಾ ಕನ್ನಡ ಸಾಹಿತ್ಯ ಸಮ್ಮೇಳನದ ಬಗೆಗಿನ ಒಂದು ತಕರಾರನ್ನೂ ಪ್ರಕಟಿಸಿದ್ದೇನಿ. ನಾವೆಲ್ಲಾ ಜೀವತೆಯ್ದ ಸಾಹಿತ್ಯ ಪರಿಷತ್‌ ವ್ಯವಸ್ಥೆ ಹೀಗಾಗಬಾರದು ಎನ್ನುವ ಪ್ರಾಮಾಣಿಕ ಕಳಕಳಿ ನಮ್ಮದು. (ಕನ್ನೇಶ್)

ಪರಿಷತ್ತಿನ ಹಾವೇರಿ ಸಮ್ಮೇಳನದಿಂದ ಆಗಲೇ ಕೆಲವರು ಹೊರಬಂದಿದ್ದಾರೆ. ನಾನ್ಯಾಕೆ ಹೊರಬಂದೆ ಎಂದು ಕವಿ ಚಾಂದ್‌ ಪಾಷಾ ಬರೆಯುತ್ತಾರೆ-

(ಇವತ್ತು ಬಹಳ ಮಾರ್ಮಿಕವಾಗಿ ಬರೆಯುವ ಕವಿಗಳಲ್ಲಿ ಚಾಂದ್ ಪಾಷ ಕೂಡಾ ಒಬ್ಬರು. ಮೂಲತಃ ಜೇವರ್ಗಿಯವರಾದ ಅವರಿಗೆ ಹೈದರಾಬಾದ್‌ ಕರ್ನಾಟಕದ ಕಷ್ಟ ಸುಖಗಳೆಲ್ಲ ಗೊತ್ತು. ಅವರ ‘ಮೌನದ ಮಳೆ’ ಕವನ ಸಂಕಲನ ನನ್ನಲ್ಲಿದೆ. ʼಚಿತ್ರ ಚಿಗುರುವ ಹೊತ್ತುʼ ಅವರ ಇನ್ನೊಂದು ಸಂಕಲನ. ೨೦೨೧ರ ಸಾಲಿನ ಅವ್ವ ಪ್ರಶಸ್ತಿ ಅವರಿಗೆ ಲಭಿಸಿದೆ)

ಪಾಶಾ ಅವರು ಕಸಾಪ ಅಧ್ಯಕ್ಷರಿಗೆ ಬರೆದ ಪತ್ರ ಓದುಗರ ಗಮನಕ್ಕೆ-

ಕನ್ನಡ ಸಾಹಿತ್ಯ ಪರಿಷತ್ ಸಮಸ್ತ ಕನ್ನಡಿಗರನ್ನು ಪ್ರತಿನಿಧಿಸುವ ಪ್ರಜ್ಞೆ. ಅದೊಂದು ಜಾತಿ, ಧರ್ಮವನ್ನು ಪ್ರತಿನಿಧಿಸುವ ಮತ್ತು ಧರ್ಮದ ವಿಶೇಷಣವನ್ನು ಹೊತ್ತು ಮೆರೆಸುವ ಧಾರ್ಮಿಕ ಕೇಂದ್ರವಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯ ಪರಿಷತ್ ಸಂಪೂರ್ಣವಾಗಿ ಜಾತಿ ಮತ್ತು ಧರ್ಮ ಕೇಂದ್ರಿತ ಹಾಗೂ ಪುರುಷ ಪ್ರಧಾನತೆಯನ್ನೆ ಪ್ರತಿಪಾದಿಸುವ ಮನುಸಂಸ್ಕೃತಿಯನ್ನು ಚಲಾವಣೆಗೆ ತರಲು ಹಾತೊರೆಯುತ್ತಿರುವುದು ದುರಂತವೇ ಸರಿ. ಮನುಷ್ಯ ಕೇಂದ್ರಿತ ಪ್ರಜ್ಞೆಯನ್ನು ಇಲ್ಲವಾಗಿಸಿ, ಸಮುದಾಯವೊಂದರ ಮೇಲಿನ ರಾಜಕೀಯ ಪ್ರೇರಿತ ದ್ವೇಷವನ್ನು ಇಮ್ಮಡಿಗೊಳಿಸುವ ಹಿಡನ್ ಅಜೆಂಡಾವನ್ನು ಇಟ್ಟುಕೊಂಡು ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು, “ಸರ್ವ ಜನಾಂಗದ ಶಾಂತಿಯ ತೋಟ”ಕ್ಕೆ ಬೆಂಕಿ ಹಚ್ಚಿದ ಹಾಗಿದೆ. ಹಾವೇರಿಯಂತಹ ಸಾಮರಸ್ಯ ಉಳ್ಳ ಸ್ಥಳದಲ್ಲಿ ನಡೆಯುವ ಸಮ್ಮೇಳನವು ದಲಿತ ಮತ್ತು ಮುಸ್ಲಿಂ ಸಮುದಾಯದ ಬರಹಗಾರನ್ನು ವ್ಯವಸ್ಥಿತವಾಗಿ ಹೊರಗಿಟ್ಟಿದ್ದು, ಉಡುಪಿ ಮಠದಿಂದ ಕನಕದಾಸನನ್ನು ಹೊರಗಿಟ್ಟ ಹಾಗೆಯೇ ಇದೆ.

ಕನ್ನಡ ಸಾಹಿತ್ಯಕ್ಕೆ ಜೀವ ವಿರೋಧಿತನ ಎಂದಿಗೂ ಅಂಟಿಕೊಂಡೆ ಇಲ್ಲ, ವಿಶ್ವಕ್ಕೆ ವಿಶ್ವಮಾನವತ್ವ ಸಂದೇಶ ಸಾರಿದೆ ಕುವೆಂಪು ನೆಲದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಅಲ್ಪಮಾನವತ್ವವನ್ನು ಪ್ರತಿಯೊಂದು ಕಾರ್ಯಕ್ರಮದಲಿ ಪರೋಕ್ಷವಾಗಿ ಪ್ರತಿಪಾದಿಸುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ವಿಪರೀತವಾಗಿರುವ ದಲಿತರ ಮೇಲಿನ ದೌರ್ಜನ್ಯ, ಸ್ತ್ರೀ ಶೋಷಣೆ, ಮುಸ್ಲಿಂ ಫೋಬಿಯವನ್ನು ಹಬ್ಬಿಸುತ್ತಿರುವುದು, ಸರ್ಕಾರಿ ಶಾಲೆಗಳ ಸ್ಥಿತಿ ಗತಿ…. ಹೀಗೆ ಅನೇಕ ಜ್ವಲಂತ ಸಮಸ್ಯೆಗಳಿದರೂ ಕೂಡ ಸಮ್ಮೇಳನದಲ್ಲಿ ಇದರ ಕುರಿತ ಒಂದು ಗೋಷ್ಠಿಯೂ ಇಲ್ಲದಿರುವುದು, ಸಾಹಿತ್ಯ ಪರಿಷತ್ತಿನ ಜಾಣ ಕುರುಡುತನಕ್ಕೆ ಸಾಕ್ಷಿಯಂತಿದೆ. ಇಂಥ ದುರಿತ ಕಾಲದಲ್ಲಿ ಸಾಮರಸ್ಯವನ್ನು ಹಬ್ಬಿಸಬೇಕೇ ಹೊರತು, ಅದನ್ನು ಇಲ್ಲವಾಗಿಸುವ ಸಾಹಿತ್ಯ ಸಮ್ಮೇಳವನ್ನು ಬಹಿಷ್ಕರಿಸುವುದು ಸಾಮಾಜಿಕ ಜವಾಬ್ದಾರಿ ಇರುವ ಪ್ರತಿಯೊಬ್ಬರ ಹೊಣೆಗಾರಿಕೆ ಎಂದು ನಾನು ನಂಬುತ್ತೇನೆ. “ಹಿಂದಿ ಭಾರತದ ರಾಷ್ಟ್ರೀಯ ಭಾಷೆ” ಎಂದು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ದೊಡ್ಡರಂಗೇಗೌಡರು ಸಂದರ್ಶನದಲ್ಲಿ ಹೇಳಿದ್ದಾರೆ. ಇಂಥ ಕನ್ನಡ ಭಾಷಾ ವಿರೋಧಿಯನ್ನು ಅಧ್ಯಕ್ಷ ಸ್ಥಾನದಲ್ಲಿರಿಸುವ ಸಮ್ಮೇಳನದಲ್ಲಿ ಆಹ್ವಾನಿತ ಕವಿಯಾಗಿರುವ ನಾನು ಖಂಡಿತವಾಗಿಯು ಕವಿತೆ ಓದಲಾರೆ, ಭಾಗವಹಿಸಿಲಾರೆ.

ಸಮುದಾಯವನ್ನು ದೂರವಿಟ್ಟ ಸಮ್ಮೇಳನದ ಸಂಭ್ರಮ ಸೂತಕದ ಹಾಗೆಯೇ ಇದೆ. ಅಷ್ಟಕ್ಕೂ ಷರೀಫನನ್ನು ಹೊರಗಿಟ್ಟಿದ್ದನೇ ಗುರು ಗೋವಿಂದ?

ಚಾಂದ್ ಪಾಷ ಎನ್ ಎಸ್, ಬೆಂಗಳೂರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *