

ಇಂಥದ್ದೊಂದು ಪ್ರಶ್ನೆ ಈಗ ಹುಟ್ಟಿದ್ದಲ್ಲ ಕಳೆದ ಎರಡು ದಶಕಗಳಿಂದ ನಾಮಧಾರಿಗಳು ಯ್ಯಾನೆ ಉತ್ತರ ಕನ್ನಡ ಜಿಲ್ಲೆಯ ದೀವರು ಕೇಳುತ್ತಲೇ ಬಂದಿದ್ದಾರೆ. ಈ ಪ್ರಶ್ನೆಯನ್ನು.

ದೇಶಪಾಂಡೆ ಮತ್ತು ಬಹುಸಂಖ್ಯಾತ ದೀವರು ಹಾಗೂ ಹಿಂದುಳಿದವರ ನಡುವಿನ ವಿರಸ ಇಂದು ನಿನ್ನೆಯದಲ್ಲ. ದೇಶಪಾಂಡೆ ಕಾಂಗ್ರೆಸ್ ನಿಂದ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ್ದಾಗ ನಾಮಧಾರಿಗಳಿಗೆ ಸೊಂಟದಲ್ಲಿ ಕಸುವಿರಲಿಲ್ಲ ಗೇಣಿದಾರರಾದ ದೀವರು ಹಾಗೂ ಹಿಂದುಳಿದವರ ಉಡದಾರಕ್ಕೆ ಹಗ್ಗ ಹಾಕಿ ಕಟ್ಟಿಕೊಂಡಿದ್ದ ಮೇಲ್ವರ್ಗದವರು ರಾಜಕೀಯ, ಸಾಮಾಜಿಕ,ಧಾರ್ಮಿಕ
ಯಾವುದೇ ಕ್ಷೇತ್ರದಲ್ಲಿ ಬಹುಸಂಖ್ಯಾತ ಹಿಂದುಳಿದವರನ್ನು ಕುಡಿಸಿ, ಕುಣಿಸಿ ಮಜಾ ನೋಡುತಿದ್ದರು.
ಈ ಕಾಲಘಟ್ಟವನ್ನು ಮುಗಿಸಿದವರು ಹಿಂದುಳಿದವರ ಚಾಂಪಿಯನ್ ದೇವರಾಜ್ ಅರಸು. ಅರಸು, ಭಟ್ಕಳದ ಮುಸ್ಲಿಂರು ಉತ್ತರ ಕನ್ನಡದ ದೀವರನ್ನು ಸೇರಿಸಿ ರಾಜಕೀಯ ಅಖಾಡ ಸಿದ್ಧಪಡಿಸಿದರು ನೋಡಿ ಉತ್ತರ ಕನ್ನಡದಲ್ಲಿ ರಾಮಕೃಷ್ಣ ಹೆಗಡೆ, ದೇಶಪಾಂಡೆ ಸೇರಿದ ಮೇಲ್ವರ್ಗದವರ ಜಮೀನ್ಧಾರಿ ರಾಜಕೀಯ ಅಧ್ಯಾಯದ ಅಂತ್ಯಕ್ಕೆ ಮುನ್ನುಡಿ ಸಿಕ್ಕಿಬಿಟ್ಟಿತ್ತು. ಈ ಅವಧಿಯಲ್ಲಿ ಬೆಳಕಿಗೆ ಬಂದವರೇ ದೇವರಾಯ ನಾಯ್ಕ, ಎಸ್ .ಎಮ್. ಯಾಹ್ಯಾ, ಎಸ್.ವಿ.ನಾಯ್ಕ, ಬಿ.ವಿ.ನಾಯಕ, ಆರ್. ಎನ್. ನಾಯಕ್, ಪ್ರಭಾಕರ ರಾಣೆ,ಕೆ.ಎಚ್.ಗೌಡ ಮುಂತಾದ ಹಿಂದುಳಿದ ವರ್ಗಗಳ ಮುಖಂಡರು.
ನಂತರ ರಾಮಕೃಷ್ಣ ಹೆಗಡೆ, ಆರ್.ವಿ. ದೇಶಪಾಂಡೆ ಜನತಾದಳದಲ್ಲಿ ಆಡಿದ್ದೇ ಆಟ. ಇದೇ ಮೇಲ್ವರ್ಗದ ಆಟಾಟೋಪದ ರಾಜಕೀಯ ಷಡ್ಯಂತ್ರದ ಸೊಂಟ ಮುರಿದವರು ಎಸ್. ಬಂಗಾರಪ್ಪ ರಾಜ್ಯದಲ್ಲಿ ಕಾಂಗ್ರೆಸ್ ಇರಲಿ, ಜನತಾ ದಳವಿರಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲುವ ಸಾಧ್ಯತೆಗಳೇ ಇರಲಿಲ್ಲ. ಒನ್ಸಾಗೇನ್ ಉತ್ತರ ಕನ್ನಡ ಜಿಲ್ಲೆಯ ಕೆಳವರ್ಗದ ರಾಜಕಾರಣವನ್ನು ಮುರಿದವರು ರಾಮಕೃಷ್ಣ ಹೆಗಡೆ ಜನತಾದಳ ಯು ಮೂಲಕ ಬಿ.ಜೆ.ಪಿ.ಯೊಂದಿಗೆ ಹೊಂದಾಣಿಕೆ ಮಾಡಿಕೊಂಡ ರಾಮಕೃಷ್ಣ ಹೆಗಡೆ ಜಿಲ್ಲೆ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ರಾಜಕಾರಣದ ವೇಗಕ್ಕೆ ನಿಯಂತ್ರಣ ಹಾಕಿ ಬಿಟ್ಟರು. ನಂತರ ಮಾರ್ಗರೇಟ್ ಆಳ್ವ ಎಂಟ್ರಿ
೧೯೯೦ ರ ದಶಕದಲ್ಲಿ ಮಾರ್ಗರೇಟ್ ಆಳ್ವ ಜಿಲ್ಲೆಗೆ ಪ್ರವೇಶಿಸುತಿದ್ದಂತೆ ಪ್ರಭಾಕರ ರಾಣೆ, ವಸಂತಅಸ್ನೋಟಿಕರ್, ಆರ್.ವಿ. ದೇಶಪಾಂಡೆಯವರನ್ನು ಕಾಂಗ್ರೆಸ್ ಗೆ ಕರೆ ತಂದ ಆಳ್ವ ಎಸ್. ಬಂಗಾರಪ್ಪ ವಿರುದ್ಧ ದೀವರ ವಿರೋಧಿ ಕಾಂಗ್ರೆಸ್ ರಾಜಕಾರಣ ಶುರು ಹಚ್ಚಿಕೊಂಡರು. ಅಲ್ಲಿಂದ ಶಿಥಲವಾಗತೊಡಗಿದ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ನ ಉಕ್ಕಿನ ಕೋಟೆ ಈಗ ದೇಶಪಾಂಡೆಯವರ ಸರ್ವಾಧಿಕಾರದಿಂದಾಗಿ ಕೊನೆಯ ಮೊಳೆ ಹೊಡೆಸಿಕೊಳ್ಳುವ ಹಂತಕ್ಕೆ ಬಂದು ನಿಂತಿದೆ.
ಬಹುಸಂಖ್ಯಾತ ನಾಮಧಾರಿಗಳು, ಹಿಂದುಳಿದವರ ವಿರುದ್ಧ ಮತ್ತು ಹವ್ಯಕರ ವಿರುದ್ಧ ಮೌನ ಸಮರ ಸಾರಿದ್ದ ದೇಶಪಾಂಡೆ ಅಂತರಂಗದ ಗೆಳೆಯರಾಗ ಅನಂತಕುಮಾರ ಹೆಗಡೆ ಮತ್ತು ವಿಶ್ವೇಶ್ವರ ಹೆಗಡೆ ಎಂಬ ಅನ್ಯ ಪಕ್ಷದ ರಾಜಕಾಣಿಗಳಿಗೆ ನೆರವಾಗುತ್ತಾ ಕಾಂಗ್ರೆಸ್ ಚಿಗುರದಂತೆ ಮಾಡಿಬಿಟ್ಟರು. ಇದರ ಪರಿಣಾಮ ಕಳೆದ ಮೂವತ್ತು ವರ್ಷಗಳಲ್ಲಿ ಉತ್ತರ ಕನ್ನಡದಲ್ಲಿ ಉಳಿದವರು ಇದೇ ಮೂವರು ಬ್ರಾಹ್ಮಣರು.
ಇಂಥ ಚತುರ ಬಹುಸಂಖ್ಯಾತರ ವಿರೋಧಿ ರಾಜಕಾರಣ ಮಾಡಿದ ದೇಶಪಾಂಡೆ ಸಾಕ್ಷಾತ್ ಬಂಗಾರಪ್ಪನವರ ಭಾವ ಭೀಮಣ್ಣ ನಾಯ್ಕರನ್ನು ತನ್ನ ಜೊತೆಯಲ್ಲಿಟ್ಟುಕೊಂಡೇ ಉಂಡೆನಾಮ ಸುತ್ತಿದರು ಎನ್ನುವ ಆರೋಪಗಳಿವೆ.
ಈಗ ಮತ್ತೆ ಚುನಾವಣೆಯ ಕಾಲ ಒಂದು ಕಾಲದಲ್ಲಿ ಒಂದು ಸಂಸದ ಸ್ಥಾನ, ಕನಿಷ್ಟ ಮೂರು ಶಾಸಕರ ಸ್ಥಾನಗಳನ್ನು ನೀಡುತಿದ್ದ ಉತ್ತರ ಕನ್ನಡ ಜಿಲ್ಲೆಯ ನಾಮಧಾರಿಗಳಿಗೆ ಒಂದೆರಡು ಟಿಕೇಟ್ ನೀಡದಂತೆ ದೇಶಪಾಂಡೆ ಅಡ್ಡ ಹಾಕಿದ್ದಾರೆ ಎನ್ನುವ ಗುರುತರ ಆರೋಪ ಎದುರಿಸುತಿದ್ದಾರೆ.
ನಾಮಧಾರಿಗಳೇ ಗೆಲ್ಲುವ ಭಟ್ಕಳದಲ್ಲಿ ಮಂಕಾಳು ವೈದ್ಯರಿಗೆ ಕಾಂಗ್ರೆಸ್ ಟಿಕೇಟ್ ನೀಡಲಾಗಿದೆ. ಶಿರಸಿ, ಕುಮಟಾಗಳಲ್ಲಿ ಹಾಗೂ ಯಲ್ಲಾಪುರದಲ್ಲಿ ಕೂಡಾ ಬ್ರಾಹ್ಮಣರಿಗೇ ಟಿಕೇಟ್ ನೀಡಬೇಕೆಂದು ಕಾಂಗ್ರೆಸ್ ಗೆ ದುಂಬಾಲು ಬಿದ್ದಿದ್ದಾರೆ ದೇಶಪಾಂಡೆ ಎನ್ನುವ ಮಾತು ಜಿಲ್ಲೆಯಲ್ಲಿ ಚರ್ಚೆಯಲ್ಲಿದೆ.
ಕಾಂಗ್ರೆಸ್ ಅಥವಾ ಬಿ.ಜೆ.ಪಿ.ಯಿಂದ ನಾಮಧಾರಿಗಳಿಗೆ ಜಿಲ್ಲೆಯಲ್ಲಿ ಕನಿಷ್ಟ ೨-೩ ಟಿಕೇಟ್ ನೀಡದಿದ್ದರೆ ನಮ್ಮ ಆಯ್ಕೆ ಜೆ.ಡಿ.ಎಸ್. ಎನ್ನುತ್ತಿರುವ ನಾಮಧಾರಿಗಳಲ್ಲಿ ಸುಖಾನುಭವದ ಗಾಳಿ ಬೀಸುವ ಪ್ರಯತ್ನ ಮಾಡಿರುವ ಜೆ.ಡಿ.ಎಸ್. ಯಲ್ಲಾಪುರ ಮತ್ತು ಕುಮಟಾಗಳಲ್ಲಿ ನಾಮಧಾರಿಗಳಿಗೆ ಮತ್ತು ಹಳಿಯಾಳದಲ್ಲಿ ಬಹುಸಂಖ್ಯಾತ ಮರಾಠರಿಗೆ ಟಿಕೇಟ್ ಘೋಶಿಸಿದೆ. ದೇಶಪಾಂಡೆ ಜಿಲ್ಲೆಯ ಬಹುಸಂಖ್ಯಾತರ ಬುಡಕ್ಕೆ ಡೈನಾಮೇಟ್ ಇಡುವ ವೈದಿಕ ರಾಜಕಾರಣ ಮಾಡಲು ಹೋಗಿ ಕೊನೆಕಾಲದಲ್ಲಿ ವಿಫಲರಾಗುತಿದ್ದಾರೆಯೆ? ಎನ್ನುವಂತಾಗಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
