ಜೋಗಕ್ಕೆ ಬರಬೇಡಿ ಪ್ಲೀಜ್….ಜೋಗದ ಸಿರಿ ಬೆಳಕಿಲ್ಲ…!

ವಿಶ್ವಪ್ರಸಿದ್ಧ ಜೋಗದ ಜಲಪಾತ ನೋಡದವರುಂಟೆ? ಸಾಯೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ ಎಂದು ಡಾ. ರಾಜ್‌ ಕುಮಾರ್‌ ಹಾಡಿ ಕುಣಿದಾದ ಮೇಲೆ ಮುಂಗಾರು ಮಳೆ ಚಿತ್ರದ ನಂತರ ಜೋಗದ ಗುಂಡಿ ಈಗಿನ ಭಾಷೆಯಲ್ಲಿ ವೈರಲ್‌, ಸೆನ್ಸೆಷನ್‌ ಆಗಿತ್ತು.
ಇದೇ ವೈಭವದ ಮಾತನ್ನು ಹಲವು ದಶಕಗಳಿಂದ ಕೇಳುತ್ತಾ ಬಂದ ಸಾರ್ವಜನಿಕರಿಗೆ ಈಗೊಂದು ಕೆಟ್ಟ ಸುದ್ದಿ ಇದೆ. ಜೋಗದ ಕಲ್ಪನೆ, ಯೋಚನೆ ಎಂದರೆ ರಮ್ಯ,ಗಮ್ಯ ಎಂದುಕೊಂಡವರು ಈಗ ಜೋಗದ ಜಲಪಾತವನ್ನು ನೋಡಲೇ ಬಾರದು. ಪ್ರತಿವರ್ಷ ಮಳೆಗಾಲದಲ್ಲಿ ಅದರಲ್ಲೂ ಜೂನ್ ನಿಂದ ಅಕ್ಟೋಬರ್‌, ನವೆಂಬರ್‌ ವರೆಗೆ ಜೋಗ ಜಲಪಾತ ನೋಡಲು ಹೇಳಿ ಮಾಡಿಸಿದ ಸಮಯ! ಎನ್ನುವ ರೂಢಿಯೊಂದಿತ್ತು. ಆದರೆ ಈಗ ಜೋಗದ ಸ್ಥಿತಿ -ಗತಿ ಹಿಂದಿನಂತಿಲ್ಲ.


ಮಲೆನಾಡಿನಲ್ಲಿ ಕೈಕೊಟ್ಟ ಮಳೆರಾಯ ದಿನಕ್ಕೆ ಆಗೊಮ್ಮೆ ಈಗೊಮ್ಮೆಯೂ ಹನಿಗಳನ್ನು ಚೆಲ್ಲಲು ತಯಾರಿಲ್ಲ. ಮಳೆ ಇಲ್ಲ,ನೀರಿಲ್ಲ ಎಂದರೆ ಜೋಗದ ಜಲಪಾತ ಎಷ್ಟು ನೀರಸವಿರಬೇಡ. ಹೌದು ಈಗ ಜೋಗ ಹಿಂದಿನಂತಿಲ್ಲ ಜೋಗದ ರಾಜ, ರಾಣಿ ರೋರರ್‌, ರಾಕೆಟ್‌ ಜಲಧಾರೆಗಳೆಲ್ಲಾ ಸೊರಗಿವೆ. ಜೋವೆಂದರೆ ಅಬ್ಬರ, ರೋಮಾಂಚನ, ಮಂಜು, ಮನೋಲ್ಲಾಸ ಎನ್ನುವ ಶಬ್ಧಗಳ ಭೌತಿಕ ರೂಪ ಈಗ ಕಾಣಿಯಾಗಿದೆ.


ಸುರಿಯದ ಮುಂಗಾರು ಮಳೆ ಜೋಗವೆಂದರೆ ನಿರ್ಲಿಪ್ತ, ನೀರಸ, ನೀರವೆನ್ನುವಂತೆ ಮಾಡಿದೆ. ಪ್ರತಿವರ್ಷ ಮಳೆಗಾಲದ ಈ ಅವಧಿಯಲ್ಲಿ ಜೋಗ ಜಲಪಾತದ ಸುತ್ತಮುತ್ತ ಮುತ್ತಿಕೊಳ್ಳುತಿದ್ದ ಜನ-ವಾಹನಗಳು ಈಗ ಜೋಗ ಕಡೆ ಮುಖ ಮಾಡುತ್ತಿಲ್ಲ. ಮಳೆಗಾಲದ ಮೂರು ತಿಂಗಳಲ್ಲಿ ವರ್ಷದ ದುಡಿಮೆ ಮಾಡುತಿದ್ದ ಸ್ಥಳೀಯ ವ್ಯಾಪಾರಿಗಳಿಗೆ ಈಗ ಹಸಿದ ಹೊಟ್ಟೆ ಮೇಲೆ ಹಸಿಬಟ್ಟೆ ಎನ್ನುವ ಸ್ಥಿತಿ ಇದೆ.


ಮಳೆಗಾಲವೇನೋ ಕೈಕೊಟ್ಟು ಜೋಗದಸಿರಿ ಬೆಳಕನ್ನು ಕತ್ತಲೆಗೆ ದೂಡಿದೆ. ಇದರ ಜೊತೆಗೇ ಜೋಗದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳಿಂದಾಗಿ ಜೋಗ ಜ(ನ) ಲಪಾತದ ಎದುರು ಮಣ್ಣ-ಧೂಳು ರಾರಾಜಿಸುತ್ತಿದೆ. ಜೋಗದ ಅಭಿವೃದ್ಧಿ ಕಾಮಗಾರಿಗಳಿಂದಾಗಿ ಈಗ ಜೋಗ ಜಲಪಾತದ ಎದುರು ವಾಹನಗಳೂ ಹೋಗುವಂತಿಲ್ಲ ಜನರೂ ಸುಳಿಯುವಂತಿಲ್ಲ. ಪ್ರತಿವರ್ಷ ಮಳೆ ಗಾಲದಲ್ಲಿ ಜೋಗದ ಸಂಭ್ರಮ ಸವಿಯಲು ಬರುತಿದ್ದ ಜನತೆ, ಪ್ರವಾಸಿಗರಿಗೆ ಒಂದು ಸಂದೇಶವಿದೆ. ಪ್ರತಿವರ್ಷ ಮಳೆಗಾಲಕ್ಕೆ ತಪ್ಪದೆ ಜೋಗಕ್ಕೆ ಬರುತಿದ್ದವರು ಈ ವರ್ಷ ಬರಲೇ ಬೇಡಿ ಯಾಕೆಂದರೆ ಜೋಗದಲ್ಲಿ ಈಗ ನೀರಿಲ್ಲ ಬರೀ ಮಣ್ಣು ಧೂಳು ಜೋಗವೆಂದರೆ ನಿಮ್ಮ ಕಣ್ಣಲ್ಲಿದ್ದ ಚೆಂದ ಮನದಲ್ಲಿದ್ದ ಮಧುರತೆ ಅಚಲವಾಗಿರಬೇಕೆಂದರೆ ದಯವಿಟ್ಟು ಈ ವರ್ಷ ಜೋಗದ ಕಡೆ ಬರಲೇ ಬೇಡಿ.!

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ನಮಗೆ ಗ್ಯಾರಂಟಿ ಸಹಾಯಕ…

ಸರ್ಕಾರದ ಗ್ಯಾರಂಟಿ ಯೋಜನೆಗಳು ನನ್ನ ಗೆಲುವಿಗೆ ಸಹಕಾರಿಯಾಗಲಿದೆ: ಗೀತಾ ಶಿವರಾಜ್’ಕುಮಾರ್ (ಸಂದರ್ಶನ) ಬೆಂಗಳೂರು: 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ ಗೀತಾ ಶಿವರಾಜಕುಮಾರ್ ಅವರು,...

ಸಚಿವ ಮಧು ಬಂಗಾರಪ್ಪ ಮತ್ತೊಮ್ಮೆ ಪ್ರಾಥಮಿಕ ಶಿಕ್ಷಣ ಓದುವ ಅಗತ್ಯವಿದೆ: ಕುಮಾರ್ ಬಂಗಾರಪ್ಪ

ಹಿರಿಯರಿಗೆ ಗೌರವ ನೀಡದ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಇಲ್ಲದಾಗಿದ್ದು, ಮತ್ತೊಮ್ಮೆ ಅವರು ಪ್ರಾಥಮಿಕ ಶಿಕ್ಷಣ...

modi namskar!- ಮೋದಿ ನಮಸ್ಕಾರ! ಇದು ಪಂಗನಾಮ….?

ಸುಳ್ಳು ಮತ್ತು ಅಹಂಕಾರದಿಂದ ಮೋದಿ ಜನರಿಗೆ ದ್ರೋಹ ಮಾಡುತಿದ್ದಾರೆ ಎಂದು ಆರೋಪಿಸಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್‌ ಮೋದಿ...

ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಮತದಾನ ಹೆಚ್ಚಳ: ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿ ನಿರೀಕ್ಷೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವ ಅಂಶ, ಸೌಜನ್ಯಾ ಹತ್ಯೆ ಪ್ರಕರಣದಿಂದಾಗಿ ಮತದಾನದಲ್ಲಿ ಮತದಾರರಿಂದ ಹೆಚ್ಚಿನ ಪ್ರಮಾಣದಲ್ಲಿ ನೋಟಾ ಅಭಿಯಾನ, ಎಸ್‌ಡಿಪಿಐ ಸ್ಪರ್ಧೆಯಲ್ಲಿ ಇಲ್ಲದಿರುವುದು ಮತ್ತು...

ಅಂಜಲಿ ನಿಂಬಾಳ್ಕರ್ ಭರ್ಜರಿ ಪ್ರಚಾರ

ಶಿರಸಿಯಲ್ಲಿ ಕಾಗೇರಿ ವಿರುದ್ಧ ವಾಗ್ದಾಳಿ ನಡೆಸಿದ ಆರ್ ವಿ ದೇಶಪಾಂಡೆ. ಪರೇಶ್ ಮೆಸ್ತಾ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ನಮ್ಮ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *