

ಈಗಿನ ಉತ್ತರ ಕನ್ನಡ ಹಿಂದಿನ ಕನ್ನಡ ಜಿಲ್ಲೆ ಈ ಹಿಂದಿನ ಕೆನರಾ ಕ್ಷೇತ್ರದಲ್ಲಿ ನಿರಂತರವಾಗಿ ಗೆಲ್ಲುತಿದ್ದ ಕಾಂಗ್ರೆಸ್ ನಿರಂತರ ಸೋಲಲು ಜಿಲ್ಲೆಯ ಬಹುಸಂಖ್ಯಾತ ಮತದಾರರಾದ ದೀವರು ಅಥವಾ ನಾಮಧಾರಿಗಳನ್ನು ಕಡೆಗಣಿಸಿದ್ದು ಕಾರಣವೆ? ಎನ್ನುವ ಪ್ರಶ್ನೆ ಈಗ ಚರ್ಚೆಯ ವಿಷಯವಾಗಿದೆ.

ಹೌದು ಈ ಶತಮಾನದ ಪ್ರಾರಂಭದ ಮೊದಲು ಉತ್ತರ ಕನ್ನಡ ಜಿಲ್ಲೆಯಲ್ಲಿ ಜನತಾ ಪರಿವಾರದ ಪಾರಮ್ಯದ ಕಾಲದಲ್ಲಿ ಕೂಡಾ ಕಾಂಗ್ರೆಸ್ ನಿಂದ ದೀವರು ನಾಲ್ಕು ಕ್ಷೇತ್ರಗ ಳಲ್ಲಿ ಶಾಸಕರು, ಉತ್ತರ ಕನ್ನಡದ ಸಂಸದರೂ ಆಗುತಿದ್ದರು.

ದಿ. ದೇವರಾಯ ನಾಯ್ಕ ನಿರಂತರವಾಗಿ ನಾಲ್ಕು ಬಾರಿ ಸಂಸದರಾಗಿ ನಂತರ ಕ್ಷೇತ್ರ ಬಿಟ್ಟುಕೊಟ್ಟರು. ಆಗ ಈ ಕ್ಷೇತ್ರಕ್ಕೆ ಬಂದವರು ಮಾರ್ಗರೇಟ್ ಆಳ್ವ ಒಂದು ಅವಧಿಗೆ ಗೆದ್ದು ಎರಡು ಬಾರಿ ಸೋತ ಮಾರ್ಗರೇಟ್ ಆಳ್ವ ಬದಲು ಜಿಲ್ಲೆಯ ಬಹುಸಂಖ್ಯಾತ ನಾಮಧಾರಿ, ದೀವರಿಗೆ ಟಿಕೇಟ್ ನೀಡಿದ್ದರೆ ಅನಂತಕುಮಾರ ಹೆಗಡೆ ನಿರಂತರ ಗೆಲುವು ಸಾಧ್ಯವೇ ಇರಲಿಲ್ಲ.
೨೦೦೦ ಇಸ್ವಿಯ ಈಚೆಗೆ ಕೆನರಾ ಕ್ಷೇತ್ರದಲ್ಲಿ ೫ ಬಾರಿ ಗೆದ್ದ ಅನಂತಕುಮಾರ ಹೆಗಡೆ ಜಿಲ್ಲೆಯ ಬಹುಸಂಖ್ಯಾತರಾದ ದೀವರ ಎದುರು ಗೆದ್ದಿದ್ದೇ ಇಲ್ಲ. ದಿ.ಜಿ. ದೇವರಾಯ ನಾಯ್ಕ, ಆರ್. ಎನ್. ನಾಯ್ಕ ಜಾದಳದಿಂದ ಚುನಾವಣೆ ಕಣದಿಂದ ಸ್ಫರ್ಧಿಸಿದರಾದರೂ ಅವರ ಸ್ಫರ್ಧೆ ನಾಮಕಾವಾಸ್ತೆಯಾಗಿತ್ತು. ರಾಮಕೃಷ್ಣ ಹೆಗಡೆಯವರ ಜನತಾದಳ ಯು ಬೆಂಬಲ, ಎಸ್. ಬಂಗಾರಪ್ಪನವರು ಬಿ.ಜೆ.ಪಿ. ಸೇರಿದ್ದು ಹೀಗೆ ಅನಾಯಾಸವಾಗಿ ಗೆಲ್ಲಲು ಅವಕಾಶವಾದಾಗಲೆಲ್ಲ ಗೆಲುವು ಕಂಡ ಅನಂತಕುಮಾರ ಹೆಗಡೆ ಎದುರು ಸ್ಫರ್ಧೆಯಲ್ಲಿರುತಿದ್ದವರು ಕಾಂಗ್ರೆಸ್ ನ ಮಾರ್ಗರೇಟ್ ಆಳ್ವ. ಒಂದು ಬಾರಿ ಅನಂತಕುಮಾರ ಹೆಗಡೆ ವಿರುದ್ಧ ಕಾಂಗ್ರೆಸ್ ನಿಂದ ಸ್ಫರ್ಧೆ ಮಾಡಿದವರು ಪ್ರಶಾಂತ್ ದೇಶಪಾಂಡೆ ಹಿಂದಿನ ಲೋಕಸಭಾ ಚುನಾವಣೆಯಲ್ಲಂತೂ ಚುನಾವಣೆ ಮೊದಲೇ ಶಸ್ತ್ರತ್ಯಾಗ ಮಾಡಿದ್ದ ಕಾಂಗ್ರೆಸ್ ಜಾದಳಕ್ಕೆ ಕ್ಷೇತ್ರ ಬಿಟ್ಟುಕೊಟ್ಟಿತ್ತು!
ಹೀಗೆ ಕಾಂಗ್ರೆಸ್ ನ ಮತದಾರರಾದ ನಾಮಧಾರಿಗಳಿಗೆ ಉಪಾಯದಿಂದ ಟಿಕೇಟ್ ತಪ್ಪಿಸಿ ಮೇಲ್ವರ್ಗದ ರಾಜಕಾರಣಕ್ಕೆ ಬೆಂಬಲಿಸುತಿದ್ದ ಆರ್. ವಿ. ದೇಶಪಾಂಡೆ ಮತ್ತು ಮಾರ್ಗರೇಟ್ ಆಳ್ವ ಅನಂತಕುಮಾರ ಹೆಗಡೆಯವರಿಗೆ ಪರೋಕ್ಷವಾಗಿ ಬೆಂಬಲಿಸಿ ಜಿಲ್ಲೆಯ ಬಹುಸಂಖ್ಯಾತರನ್ನು ತುಳಿದದ್ದು ಹಳೆ ಕತೆ. ಈಗ ಕಾಂಗ್ರೆಸ್ ಗೆ ಹೊಸ ಉಭಯ ಸಂಕಟ ಪ್ರಾರಂಭವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ನಂ೧ ಮತದಾರರಾದ ನಾಮಧಾರಿಗಳು ಅಥವಾ ನಂತರದ ಮರಾಠರಿಗೆ ಟಿಕೇಟ್ ಕೊಡದಿದ್ದರೆ ಈ ಬಾರಿ ಕೂಡಾ ಬಿ.ಜೆ.ಪಿ. ಅನಾಯಾಸವಾಗಿ ಗೆಲ್ಲುವ ಅಪಾಯವಿದೆ. ಈ ಸೂಕ್ಷ್ಮ ಅರಿತ ಬಿ.ಜೆ.ಪಿ. ಜಯಶಂಕರ್, ನಿರ್ಮಲಾ ಸೀತಾರಾಮನ್, ಅಜಿತ್ ಹನುಮಕ್ಕನವರ್, ಹರಿಪ್ರಕಾಶ ಕೋಣೆಮನೆ, ಚಕ್ರವರ್ತಿ ಸೂಲಿಬೆಯಂತಹ ಯಾರೋ ಒಬ್ಬ ಅಭ್ಯರ್ಥಿಯನ್ನು ಹಾಕಿ ಚುನಾವಣೆ ಗೆಲ್ಲುವ ಯೋಚನೆಯಲ್ಲಿದೆ!. ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಆರ್. ವಿ. ದೇಶಪಾಂಡೆ, ಅಂಜಲಿ ನಿಂಬಾಳ್ಕರ್,ರವೀಂದ್ರನಾಥ ನಾಯ್ಕ, ಭೀಮಣ್ಣ ನಾಯ್ಕ ಅಥವಾ ಜಿ.ಟಿ. ನಾಯ್ಕ ಹಾಗೂ ಆರ್. ಎಚ್. ನಾಯ್ಕ ಸೇರಿದ ಕೆಲವು ಹೆಸರುಗಳನ್ನು ತೇಲಿ ಬಿಟ್ಟಿದೆ.
ರಾಜಕಾರಣದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿರುವ ಹಿರಿಯ ಆರ್.ವಿ. ದೇಶಪಾಂಡೆಯವರಿಗೆ ಜಿಲ್ಲೆಯ ಶಾಸಕರ ಮೇಲೆ ನಂಬಿಕೆ ಇಲ್ಲ. ಅರಣ್ಯ ಅತಿಕ್ರಮಣ ಹೋರಾಟದಿಂದ ಜಿಲ್ಲೆಯ ಗಮನ ಸೆಳೆದ ರವೀಂದ್ರ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಯಾದರೆ ಗೆಲ್ಲುವ ಸಾಧ್ಯತೆ ಹೆಚ್ಚು ಆದರೆ ಅವರಿಗೆ ಪಕ್ಷದ ವಾತಾವರಣ ಹೇಗೆ ಸಹಕರಿಸುವುದೋ ಎನ್ನುವ ಭಯ. ಬಿ.ಜೆ.ಪಿ. ಟಿಕೇಟ್ ಕೇಳಿ ಹವಾ ಎಬ್ಬಿಸಿರುವ ಅನಂತಮೂರ್ತಿ ಹೆಗಡೆಯಂತೆ ಕಾರವಾರದ ಜಿ.ಟಿ. ನಾಯ್ಕ ಮತ್ತು ಕುಮಟಾದ ಆರ್. ಎಚ್. ನಾಯ್ಕರನ್ನು ಪಕ್ಷ ಪರಿಗಣಿಸಿರುವ ಸಾಧ್ಯತೆ ಕಡಿಮೆ. ಈ ನಡುವೆ ರಾಮ ಜಪದ ಬಿ.ಜೆ.ಪಿ.ಗೆ ಗ್ಯಾರಂಟಿ ಮೂಲಕ ಉತ್ತರ ಕೊಡಲು ಹೊರಟಿರುವ ಕಾಂಗ್ರೆಸ್ ಗೆ ಸೈದ್ಧಾಂತಿಕ ಸೇನಾನಿಗಳ ಕೊರತೆ ಇರುವುದರಿಂದ ದೇಶಪಾಂಡೆ, ನಿವೇದಿತ್ ಆಳ್ವ ಅಥವಾ ಇತರ ಅಲ್ಪಸಂಖ್ಯಾತರ ಸ್ಫರ್ಧೆ ಪರಿಣಾಮ ಭೀರುವ ಸಾಧ್ಯತೆ ಕಡಿಮೆ. ಬಹುಸಂಖ್ಯಾತರ ಮತ ಕ್ರೋಡೀಕರಣ ಹಿನ್ನೆಲೆಯಲ್ಲಿ ಶಿರಸಿ ಕ್ಷೇತ್ರ ಗೆದ್ದಿರುವ ದೀವರಿಗೆ ಈ ಬಾರಿ ರಾಮನೋ? ನಮ್ಮ ಸ್ವಾಭಿಮಾನವೋ? ಎನ್ನುವ ಪ್ರಶ್ನೆ ಎದ್ದಿದೆ. ಕಾಂಗ್ರೆಸ್ ತನ್ನ ಗ್ಯಾರಂಟಿ ಪರವಾಗಿ ಪ್ರಚಾರ ನಡೆಸಿ ದೀವರಿಗೆ ಟಿಕೇಟ್ ನೀಡಿದರೆ ಶಿರಸಿಯಲ್ಲಿ ಬಿ.ಜೆ.ಪಿ. ಕತೆ ಮುಗಿಸಿದಂತೆ ಉತ್ತರ ಕನ್ನಡದಲ್ಲೂ ಸುಳ್ಳುಭಾಷಣ, ದೇವರು, ಧರ್ಮದ ವ್ಯಭಿಚಾರದ ಮತಾಂಧ ಬಿ.ಜೆ.ಪಿ.ಯನ್ನು ಉತ್ತರ ಕನ್ನಡದಿಂದ ಹೊರಹಾಕಬಹುದು ಎನ್ನಲಾಗುತ್ತಿದೆ. ಅದಕ್ಕೆ ಪೂರಕವಾಗಿ ಕಾಂಗ್ರೆಸ್ ಗೆ ಮೀನುಗಾರರು,ಮರಾಠರು, ಸೇರಿದ ಅಹಿಂದ ಬೆಂಬಲ ನಿಚ್ಚಳವಾಗಿದೆ. ಅನಂತಕುಮಾರ, ಕಾಗೇರಿ ವಿಶ್ವೇಶ್ವರ ಹೆಗಡೆ ಬದಲು ಯಾರೋ ಒಬ್ಬನನ್ನು ಗೆಲ್ಲಿಸುವ ಬಿ.ಜೆ.ಪಿ. ಅಹಂಕಾರ ಮರ್ಧನಕ್ಕೆ ವೇದಿಕೆ ಸಿದ್ಧವಾಗಿರುವ ಸಮಯದಲ್ಲಿ ಕಾಂಗ್ರೆಸ್ ನ ಮೀನ ಮೇಷ ಮಾರಣಾಂತಿಕವಾದರೂ ಅಚ್ಚರಿಇಲ್ಲ. ಈ ನಡುವೆ ಶಿವರಾಮ ಹೆಬ್ಬಾರ್ ನಡೆ ಕಾಂಗ್ರೆಸ್, ಬಿ.ಜೆ.ಪಿ. ಗಳ ಕುತೂಹಲದ ಕೇಂದ್ರವಾಗಿರುವುದಂತೂ ಸತ್ಯ.

