ನಿನ್ನ ಸ್ಫರ್ಶದಿಂದ ನಿನ್ನೆ,ಇಂದು ನಾಳೆಗಳೆಲ್ಲಾ ಬದಲಾಯ್ತು! ಖುಷಿ ಮಿಲಗಯಿ…

ಡಿಯರ್‌ ಲೈಲಾ…. ಚಳಿಬಿಡುವ ಸಂಧಿ ಕಾಲದಲ್ಲಿ ನಿನ್ನ ನೆನಪಾಗಲು ಏನಾದರೂ ನೆಪ ಒಂದಿರಬೇಕಲ್ವ?

ನಾಳೆ ವೆಲೆಂಟೈನ್‌ ದಿನ….ನನ್ನ ವೆಲೆಂಟೈನ್‌ ಹೆಸರಿಗೂ ನಿನ್ನ ಮೋಹಕ್ಕು ಅದೆಂಥಾ ಬಾದರಾಯಣ ಸಂಬಂಧವೋ?

ನೆಲದ ಮಣ್ಣ ವಾಸನೆ ಮೂಗಿಗೆ ಬಡಿದದ್ದೇ… ಮಾವಿನ ತಳಿರು, ತೆನೆ ಹೀಚು ಮಿಡಿ ಎಲ್ಲವೂ ಘಮ್‌ ಎನ್ನುವಂತೆ ಕಣ್ಮುಂದೆ ಬಂದವು. ಈಗಲೂ ನಿನ್ನ

ತುಮ್‌ ಮಿಲೆ…ದಿಲ್‌ ಖಿಲೆ ಹಾಡು ನೆನಪಾಗದಿರುತ್ತಾ….!

ಶುದ್ಧ ಕನ್ನಡಪ್ಪ! ಇದರ ಅರ್ಥ ಹೇಳೋ ಎಂದು ನೀನು ನನ್ನ ಬೆನ್ನಿಗೆ ಮೊಟಕುತಿದ್ದೆ…

ನನ್ನ ಜೀವ ರೋಮಾಂಚನಗೊಂಡು ನೀ ಸಿಕ್ಕೆ…ಹೃದಯದ ಬಾಗಿಲು ತೆಗೆಯಿತು, ಮತ್ತೇನು ಬೇಕು ಬಾಳಲು ಎಂದು ಗುನಗಿದ್ದೇ ನಿನ್ನ ಕಣ್ಣು ಮಿನುಗುತಿದ್ದವು. ಎಂಥಾ ರೋಮಾಂಚನ!

ಮದ್ಯ ಪ್ರೀಯರು ಒಗರನ್ನು ಗುಟುಕರಿಸುತ್ತಾ ಎಂಥಾ ಮಜಾ ಅಂಥಾರಲ್ಲ…. ಅದೆಂಥಾ ಮಜಾ…. ನಿನ್ನ ಕಣ್ಣೋಟ, ಸ್ಫರ್ಶ, ಸಾನಿಧ್ಯದ ಮುಂದೆ ಯಾವ ಮದ್ಯ,ಮೋಹಿನಿಯೂ ಸಾಟಿಯಾಗರು…

ತು ಮಿಲೆ… ದಿಲ್‌ ಖಿಲೆ ಅವರ್‌ ಜೀನೆ ಕೊ ಕ್ಯಾ ಚಾಯಿಯೆ………

ನನ್ನದೂ ಒಂದು ಮಧುರ ಹಾಡಿತ್ತು ನೆನಪಿದೆಯಾ….?

ಕಣ್ಣಾಮುಚ್ಚಾಲೆ ಆಡೋಣ ಅಂದಾಗಲೆಲ್ಲಾ ನೆನಪಾಗುತಿದ್ದ ಹಾಡದು…..

ತೆರೆದಿದೆ ಬಾನು….. ಹಿತವಾದ ಗಾಳಿ… ನಾವು ಬಂದದ್ದೆಲ್ಲಿಗೆ ಎಲ್ಲೋ? ಯಾಕೋ? ಅದೆಲ್ಲಾ ಯಾಕೋ ನೀ ನನ್ನ ಸಾಥಿ ಆದ ಮೇಲೆ…..

ನೀನು ವರಿಜನಲ್‌ ಹಾಡತಿದ್ದೆ…… ನೆನಪಿಸಿಕೊ

ಎ ಹಸೀ ವಾದಿಯಾ…. ಎ ಖುಲಾ ಆಸಮಾ

ಆಗಯೆ ಹಮ್‌ ಕಹಾ…… ಹೈ ಮೆರಿ ಸಾಜನಾ… ಎ ಬಂಧನ್‌ ಹೈ ಪ್ಯಾರಕಾ ದೇಕೋ……

ಈ ಮಧುರ ಅನುಭೂತಿಗೆ ಹೆಸರಿಡಬೇಕೆ?

ಜನ, ಪ್ರೀತಿ-ಪ್ರೇಮ,ಸ್ಫರ್ಶ ಅನುರಾಗ,ಹೃದಯರಾಗ ಏನೇನೆಲ್ಲಾ ಹೆಸರಿಟ್ಟುಬಿಡುತ್ತಾರೆ!

ಇವೆಲ್ಲಾ ಸೇರಿಯೆ ಮಧುರಕಾವ್ಯವಾಗುವುದು.

ನೆನಪಿದೆಯಾ….

ನನ್ನ ಅಪಘಾತಕ್ಕೆ ಮೊದಲು ನಾವು ಕಟ್ಟಿಕೊಂಡ ಕನಸುಗಳೇನು? ನಾನು ಮಧುರ ದುರಂತ ಮದುವೆ ಎನ್ನುತಿದ್ದೆ ನೀನು ದುರಂತ ತೆಗೆದುಬಿಡು…. ಜೀವನವಿಡಿ ಮಧುರವಾಗಿರುವುದೇ ಬದುಕು ಎಂದುಬಿಡುತಿದ್ದೆ!.

ಹೌದು ಮಾರಾಯ್ತಿ ಹುಡುಗಿಯರಿಗೆ ಅದೆಷ್ಟು ಬೇಗ ಮೆಚ್ಯುರಿಟಿ ಬಂದುಬುಡುತ್ತೆ. ನಿಮ್ಮ ದೈಹಿಕ ಮೆಚ್ಯುರಿಟಿಗೂ ಭೌತಿಕ ಬೆಳವಣಿಗೆಗಳಿಗೂ ಅದೆಂಥಾ ಸಂಬಂಧವೋ…

ನಮ್ಮದು ಗಂಡು ಪ್ರಾಣಿ ಜನ್ಮ, ದೈಹಿಕ ಮೆಚ್ಯರಿಟಿಯೂ ಇಲ್ಲ ಭೌತಿಕ ಕೂಡಾ…!

ಬದುಕಿಡೀ ಹುಚ್ಚಾಡುತ್ತಲೇ ಮದುಕರಾಗಿಬಿಡುತ್ತೀವಿ. ಮರ ಮುಪ್ಪಾದರೂ ಹುಳಿ ಮುಪ್ಪೆ, ಮುಪ್ಪೇ ಬಾರದ ಇಮ್ಯಾಚುರಿಟಿಗೆ ಏನಾದರೂ ಮೌಲ್ಯವಿದೆಯಾ?

ನಿನ್ನ ಧ್ಯಾನದಲ್ಲಿದ್ದಾಗಲೆಲ್ಲಾ ಎಂ.ಡಿ. ಪಲ್ಲವಿಯ ಸ್ವರದಲ್ಲಿ ನೆನಪಾಗುವ ಹಾಡು

ಎಲ್ಲಿ ಜಾರಿತು ಮನವು ಎಲ್ಲೆ ಮೀರಿತು…

ಎಲ್ಲಿ ಅಲೆಯುತಿಹುದೋ ಯಾಕೆ ನಿಲ್ಲದಾಯಿತು…..

ಹೀಗೆ ನನ್ನ ನಿನ್ನ ಸಮ್ಮಿಲನ, ಸಾಂಗತ್ಯವೆಂದರೆ ಅದು ಹಾಡು, ಗೀತೆ, ಹಾಡು ಸಂಗೀತ, ಮತ್ತದೇ ಹಾಡು ಸಾಹಿತ್ಯ ಹಾಡು, ಬೇಂದ್ರೆ, ಕುವೆಂಪು, ಹಂಸಲೇಖ,ಜಯಂತ್‌ ಕಾಯ್ಕಿಣಿ, ಇತ್ಯಾದಿ … ಇತ್ಯಾದಿ.

ಆಮೇಲೆ… ಅಮೇಲೇನು ಗೊತ್ತಾ?

ಯಾವ ಕವಿಯು ಬರೆಯಲಾರ,

ಒಲವಿನಿಂದ…. ಕಣ್ನೋಟದಿಂದ

ಹೃದಯದಲ್ಲಿ ನೀ ಬರೆದ ಈ ಪ್ರೇಮಗೀತೆಯ…

ನಿನ್ನ ಕವಿತೆ ಎಂಥ ಕವಿತೆ ರಸಿಕರಾಡೊ ನುಡಿಗಳಂತೆ ಮಲ್ಲೆ ಹೂವು ಅರಳಿದಂತೆ…

ಚಂದ್ರ ಕಾಂತಿ ಚೆಲ್ಲಿದಂತೆ…… ಇಂಥ ನಿನ್ನ ಸ್ಫರ್ಶ ಮಾತ್ರದಿಂದಲೇ ಇಂದು ನಿನ್ನೆ, ನಾಳೆಗಳೆಲ್ಲಾ ಬದಲಾಯ್ತು

ಜಸ್ಟ್‌ ಖುಷಿ ಮಿಲ್‌ ಗಯಿ….

ಈ ಹಿಡಿ ಖುಷಿ, ಪ್ರೀತಿಗಾಗಿ ಜನರಾಡುವ ಆಟ ನೋಡಿದಾಗ ನನಗನಸುತ್ತೆ ಪ್ರತಿದಿನ ಪ್ರೇಮಿಗಳ ದಿನ, ವೆಲೆಂಟೈನ್‌ ಡೇ ಆಗಬಾರದೆ?

ಇಂತಿ ನಿನ್ನ ವೆಲೆಂಟೈನ್‌

(ಹಕೋಕ) 13-02-2024‌

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ನಮಗೆ ಗ್ಯಾರಂಟಿ ಸಹಾಯಕ…

ಸರ್ಕಾರದ ಗ್ಯಾರಂಟಿ ಯೋಜನೆಗಳು ನನ್ನ ಗೆಲುವಿಗೆ ಸಹಕಾರಿಯಾಗಲಿದೆ: ಗೀತಾ ಶಿವರಾಜ್’ಕುಮಾರ್ (ಸಂದರ್ಶನ) ಬೆಂಗಳೂರು: 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ ಗೀತಾ ಶಿವರಾಜಕುಮಾರ್ ಅವರು,...

ಸಚಿವ ಮಧು ಬಂಗಾರಪ್ಪ ಮತ್ತೊಮ್ಮೆ ಪ್ರಾಥಮಿಕ ಶಿಕ್ಷಣ ಓದುವ ಅಗತ್ಯವಿದೆ: ಕುಮಾರ್ ಬಂಗಾರಪ್ಪ

ಹಿರಿಯರಿಗೆ ಗೌರವ ನೀಡದ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಇಲ್ಲದಾಗಿದ್ದು, ಮತ್ತೊಮ್ಮೆ ಅವರು ಪ್ರಾಥಮಿಕ ಶಿಕ್ಷಣ...

modi namskar!- ಮೋದಿ ನಮಸ್ಕಾರ! ಇದು ಪಂಗನಾಮ….?

ಸುಳ್ಳು ಮತ್ತು ಅಹಂಕಾರದಿಂದ ಮೋದಿ ಜನರಿಗೆ ದ್ರೋಹ ಮಾಡುತಿದ್ದಾರೆ ಎಂದು ಆರೋಪಿಸಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್‌ ಮೋದಿ...

ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಮತದಾನ ಹೆಚ್ಚಳ: ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿ ನಿರೀಕ್ಷೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವ ಅಂಶ, ಸೌಜನ್ಯಾ ಹತ್ಯೆ ಪ್ರಕರಣದಿಂದಾಗಿ ಮತದಾನದಲ್ಲಿ ಮತದಾರರಿಂದ ಹೆಚ್ಚಿನ ಪ್ರಮಾಣದಲ್ಲಿ ನೋಟಾ ಅಭಿಯಾನ, ಎಸ್‌ಡಿಪಿಐ ಸ್ಪರ್ಧೆಯಲ್ಲಿ ಇಲ್ಲದಿರುವುದು ಮತ್ತು...

ಅಂಜಲಿ ನಿಂಬಾಳ್ಕರ್ ಭರ್ಜರಿ ಪ್ರಚಾರ

ಶಿರಸಿಯಲ್ಲಿ ಕಾಗೇರಿ ವಿರುದ್ಧ ವಾಗ್ದಾಳಿ ನಡೆಸಿದ ಆರ್ ವಿ ದೇಶಪಾಂಡೆ. ಪರೇಶ್ ಮೆಸ್ತಾ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ನಮ್ಮ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *