ಮುತ್ತುಗ (ಹಳದಿ /ಬಿಳಿ)

ಮುತ್ತುಗ(ಹಳದಿ /ಬಿಳಿ)

ವೈಜ್ಞಾನಿಕ ಹೆಸರು – Butea monosperma

ಕುಟುಂಬ – Fabaceae

ನಾನು ಹೇಳ ಹೊರಟ ಮುತ್ತುಗ . ಮುತ್ತುಗ ಮರವೇ ಅದರ ವೈಶಿಷ್ಟತೆ ಮತ್ತು ಇರುವಿಕೆ ತುಂಬಾ ರೋಚಕ ಮತ್ತು ರೋಮಾಂಚನ ಸಾಮಾನ್ಯವಾಗಿ ಮುತ್ತುಗ ಕೆಂಪು ಬಣ್ಣದ ಹೂಗಳು ಬಿಡುತ್ತವೆ. ಮುತ್ತುಗವನ್ನು ಪಾಲಾಶ್‌, ಬ್ರಾಹ್ಮಮರ, Flame of The Forest ,ವಕ್ರಪುಷ್ಪಮರ, ರಕ್ತಪುಷ್ಪಕ.ಭಾರತದ ಮುತ್ತುಗ,ಬಿಳಿ ಮುತ್ತುಗ,ಕೆಂಪು ಹಳದಿ ಮುತ್ತುಗ. 3-4 ಬಣ್ಣದಲ್ಲಿ ಹೂ ಬಿಡುವ ಮುತ್ತುಗ ಕಾಣಬಹುದು. ಸಾಮಾನ್ಯವಾಗಿ ಕೇವಲ ಕೆಂಪು ಬಣ್ಣದ ಹೂಬಿಡುವ ಮುತ್ತುಗ ಕಾಣುತ್ತೇವೆ.

ಈಗ ನಾನು ಹೇಳ ಹೊರಟಿರುವುದು ಬಹಳ ವಿರಳವಾಗಿ ಕಾಣಸಿಗುವ ಒಂದು ವಿಶೇಷ ಮುತ್ತುಗದ ಮರದ ಬಗ್ಗೆ, ಇದು ಹಳದಿ ಮುತ್ತುಗ (Yellow) ಇದನ್ನೇ ಬಿಳಿ ಮುತ್ತುಗ ಅಂತಲು ಕರೆಯುತ್ತಾರೆ ಎಂಬ ಗೊಂದಲವಿದೆ.ನಾನು ಕಳೆದ 12 ವರ್ಷಗಳಿಂದ ಲೋಂಡಾ ಅರಣ್ಯ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ಅರಣ್ಯ ಮರಗಳ ಬಗ್ಗೆ ಮತ್ತು ಸ್ವಲ್ಪ ಆಯುರ್ವೇದ ಗಿಡ ಮೂಲಿಕೆಗಳ ಬಗ್ಗೆ ಆಸಕ್ತಿಯಿಂದ ತಿಳಿದುಕೊಳ್ಳಲು ಪ್ರಯತ್ನಿಸಿದಾಗ ನನ್ನದೇ ಬೀಟ್‌ ನಲ್ಲಿ ಇಂತಹ ವಿಶೇಷ, ವಿರಳ, Red listed, Threatened ಜಾತಿಯ ಮರವಿರುವುದೆ ವಿಶೇಷ. ಕಳೆದ ವರ್ಷ ಅಂದರೆ 2023 ರ ಸೆಪ್ಟೆಂಬರ್‌ ತಿಂಗಳಲ್ಲಿ ಹಳ್ಳಿಯ ಒಬ್ಬ ಔಷಧಿ ನೀಡುವವನಿಗೆ ಬಿಳಿ ಮುತ್ತುಗದ ಬಗ್ಗೆ ವಿಚಾರಿಸಿದಾಗ ಆತ ಹೇಳಿದ ಸರ್‌ ಈ ಮರವಿದೆ ನಮ್ಮದೆ ಹಳ್ಳಿಯ ಅರಣ್ಯ ಪ್ರದೇಶದಲ್ಲಿ ನಿಮಗೆ ತೋರಿಸುತ್ತೇನೆ ಅಂತಾ ಹೇಳಿ ಇಂತಹ ವ್ಯಕ್ತಿಯ ಹೊಲದ ಪಕ್ಕದ ಅರಣ್ಯದಲ್ಲಿ ಬಿಳಿ ಮುತ್ತುಗದ ಮರವಿದೆ ಅಂತಾ ಹೇಳಿದ.ನಾನು ನೋಡಲಾಗಿ ಅಲ್ಲಿ ಸುಮಾರು ಒಂದು ಕಡೆ 10-15 ಮುತ್ತುಗದ ದೊಡ್ಡ ಮರಗಲ್ಲಿದ್ದವು ಆದರೆ ಆಗ ಸಾಮಾನ್ಯ ಹಸಿರು ಎಲೆ ಮರಗಳು ಆತನು ಬಂದು ತೋರಿಸಿದ ಆದರೆ ಗುರುತಿಸಲು ಆಗ ಸಾಧ್ಯವಿಲ್ಲ . ಎಲ್ಲ ಮರಗಳ ಎಲೆ, ತೊಗಟೆ ಒಂದೇ ರೀತಿ ಆಗ ನಾವುಗಳು ಮುತ್ತುಗದ ಹೂ ಬಿಡುವ ಕಾಲ ಜನೇವರಿ ಮಧ್ಯ ಮಾರ್ಚ್‌ ತಿಂಗಳಲ್ಲಿ ನೋಡಬೇಕೆಂದು ನಿರ್ಧರಿಸಿ ಜನೇವರಿ ತಿಂಗಳಲ್ಲಿ ಮತ್ತು ಪೆಬ್ರುವರಿ 3 ರಂದು ಹೊಗಿ ನೋಡಲಾಗಿ 6-7 ಮರಗಳು ಹೂಬಿಡದೆ ಹಾಗೆ, ಮತ್ತೆ ಹಲವು ಕೆಂಪು ಹೂ ಬಿಟ್ಟು ಕಂಗೊಳಿಸುತ್ತಿವೆ.ಆದರೆ ಒಂದು ಮರ ಬಾಂಬು ಜಂಗ್ಲದಲ್ಲಿ ಮರದ ಕೊನೆಯ ಟೊಂಗೆಯಲ್ಲಿ ಹಳದಿ ಹೂ ಬಿಟ್ಟು ಕಂಗೊಳಿಸುತ್ತಿದೆ. ಅವುಗಳನ್ನು ತಿನ್ನಲು ಹಕ್ಕಿಗಳ ಹಿಂಡೆ ಮರದಲ್ಲಿತು. ಆ ಮರ ನೋಡಿದಾಗ ಒಂದು ಕ್ಷಣ ವಿಸ್ಮಯ ಅನಿಸ್ತಿತ್ತು, ಹೀಗೆ ಮರದ ಬಗ್ಗೆ ಹಳ್ಳಿ ಜನರ ಅದನ್ನೇ ಬಳಸುವ ಬಗ್ಗೆ ಮತ್ತು 3-4 ಜನರಿಂದ ವಿಶೇಷತೆ ಕೇಳಿದಾಗ ಒಂದು ಕ್ಷಣ ದಂಗಗಾಗಬಹುದಂತಹ ವಿವರಣೆ . ಇದು ಅತೀ ವಿರಳವಾಗಿ ಕಾಣಬಹುದಾದ ಮರ 10000 ಮರಗಳಲ್ಲಿ ಎಲ್ಲೋ ಒಂದು ಮರ ಕಾಣಸಿಗುತ್ತದೆ ಅಂತೇ ನನಗೆ ಒಂದು ಗೊಂದಲದ ಪ್ರಶ್ನೆ ಕೇಳಲಾಗಿ ಬಿಳಿ ಮುತ್ತುಗ ಮತ್ತು ಹಳದಿ ಮುತ್ತುಗ ಬೇರೆ ಬೇರೆ ಎಂದಾಗ ಅಸಮಂಜಸ ಉತ್ತರ ಮತ್ತೆ ಒಬ್ಬ ಇಲ್ಲಿ ಬಿಳಿಮುತ್ತುಗ ಇದೆ ಸರ್‌ ಅಂತಾ. ಆಗ ನಾನು ಸತತ ಗಮನಹರಿಸಿ (Observation) ಮಾಡಲಾಗಿ ಒಂದು ತಿಂಗಳಲ್ಲಿ ಮೊದಲಿಗೆ ಮರದಲ್ಲಿ ಹಳದಿ ಬಣ್ಣವಿರುವ ಹೂ-ಮರದ ಗೊಂಚಲಿನಿಂದ ಕೆಳಗೆ ಬಿದ್ದ 4-5ದಿನಗಳ ನಂತರ ಬಿಳಿ ಬಣ್ಣಕ್ಕೆ ಪರಿವರ್ತನೆಯಾಗಿ ಹೂ- ಬಿಳಿ ಬಣ್ಣದಲ್ಲಿ ನೆಲದ ಮೇಲೆ ಬಿಳಿ ಬಣ್ಣದಲ್ಲಿ ಕಾಣಿಸತ್ತಿದ್ದವು. ಬೇರೆ-ಬೇರೆ Articleನಲ್ಲೂ ಇದೆ ರೀತಿಯ ವಿವರಣೆ , ಆದರೆ ವೈಜ್ಞಾನಿಕವಾಗಿ ಎಲ್ಲ ಬಿಳಿ/ಹಳದಿ ಅಂತರ ವಿಂಗಡಣೆ ಸಿಗಲೆ ಇಲ್ಲ. ಇದರ ಮೇಲೆ ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕು ಅನಿಸುತ್ತಿದೆ.

ಮುತ್ತುಗವನ್ನು ಸಾಮಾನ್ಯವಾಗಿ ಭಾರತದ ಎಲ್ಲಾ ಉಷ್ಣವಲಯ ಮತ್ತು ಮಳೆ ಕಾಡುಗಳಲ್ಲು ನೋಡಬಹುದು. ಮುತ್ತುಗ ಎಂದಾಕ್ಷಣ ನೆನಪಾಗೋದು 3 ದೊಡ್ಡ ಎಲೆಗಳು ಇವುಗಳಿಂದ ಊಟದ ಪತ್ರೆ ತಯಾರಿಕೆ ಮತ್ತು ಊಟದ ಎಲೆ ಎಂದೇ ಸಾಮಾನ್ಯವಾಗಿ ಗುರುತಿಸುವುದು. ಈಗಿನ ಪ್ಲಾಸ್ಟಿಕ್‌ ಯುಗದಲ್ಲಿ ಮುತ್ತುಗ ಎಲೆಯ ರೀತಿಯಲ್ಲೆ ಪ್ಲಾಸ್ಟಿಕ್‌ ನಿಂದ ಪತ್ರೆ / ಹಸಿರು ಬಣ್ಣದಲ್ಲಿ ಪ್ಲಾಸ್ಟಿಕ್‌ ಪತ್ರೆಗಳನ್ನು ಮಾರಾಟವಾಗುತ್ತಿವೆ. ಆದರೆ ಮರಗಳ ಕೊರತೆಯೂ ನಮ್ಮ ಜನರ ನಿರಾಸಕ್ತಿಯು ಈಗ ಅಲ್ಲಲ್ಲಿ ಕೆಲಬೆರಳೆಣಕೆಷ್ಟು ಅಂಗಡಿಗಳಲ್ಲಿ ನಾವುಗಳು ಮುತ್ತುಗದ ಎಲೆ ಪತ್ರೆಗಳನ್ನು ಪಡೆಯಬಹುದು ಮತ್ತು ಎತ್ತರ ಭಾರತದ ಹಲವು ಕಡೆ ಮತ್ತು ನಮ್ಮ ಎತ್ತರ ಕರ್ನಾಟಕದಲ್ಲಿ ಬೇಸಿಗೆನಲ್ಲಿ ಹೂ ಬಿಡುವ ಗಿಡವಾಗಿದ್ದು ಹೊಳಿ ಬಣ್ಣಕ್ಕೆ ಈ ಗಿಡ ಕೆಂಪು ಹೂಗಳನ್ನು ಒಣಗಿಸಿ ಬಣ್ಣ ತಯಾರಿಸುತ್ತಿದ್ದರಂತೆ ಮತ್ತು ಇದರ ಬೇರನ್ನು ಈ ಹಿಂದೆ ಮನೆಗಳಿಗೆ ಬಣ್ಣ ಹಚ್ಚಲು ಬ್ರಶ್‌ ರೀತಿ ಬಳಕೆ.

ಈ ಮರದ ವಿಶೇಷತೆ- ಗಿಡದ ವ್ಯಾಸ-120cm. ಎತ್ತರ-8-10M

• ಪಾಲಾಶ್‌, ವಕ್ರಪುಷ್ಪ ಅಂದರೆ ಅಂಕು ಡೊಂಕುವಿರುವ ಪುಷ್ಪ ಈ ಹಳದಿ/ಬಿಳಿ ಮುತ್ತುಗ ಮಾಟಮಂತ್ರಕ್ಕೆ ಬಳಕೆ ಅಂತೆ.

• ಇದರ ಹೂವಿನ ಪೌಡರ ಮಾಡಿ ಬಿಸಿ ನೀರಿನಲ್ಲಿ ಕುಡುದರೆ ದೇಹದ ನಂಜು ನಿವಾರಕ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

• ಆಯುರ್ವೆದದಲ್ಲಿ ತುಂಬಾ ಉಪಕಾರ ಮರ .

• ಇದರ ತೊಗಟೆ ಮಧುಮೇಹ ರೋಗಕ್ಕೆ ಉಪಯೋಗಿಸುತ್ತಾರೆ.

• ಲೈಂಗಿಕ ದೌರ್ಬಲತೆ ನಿವಾರಣೆಗೆ

• ಚರ್ಮ ರೋಗಕ್ಕೆ ತೊಗಟೆಯಿಂದ ಬರುವ ಗಮ್‌ ನ ಬಳಕೆ

• ಹಾವುಗಳ ಕಡಿತಕ್ಕೂ

• ರಾತ್ರಿ ಇರುಳುಕಣ್ಣು ರೋಗಕ್ಕೂ

• ಹೊಟ್ಟೆ ಮತ್ತು ಪೈಲ್ಸ್‌ ರೋಗಕ್ಕೆ ಹೂಗಳ ಬಳಕೆ. ಧನ್ಯವಾದಗಳು.

🖊️ ಗುಂಡಪ್ಪ ಎಸ್.

ಗಸ್ತು ವನಪಾಲಕ. ಲೋoಡಾ.

(ಕೃಪೆ-ಪರಿಸರ ಪರಿವಾರ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *