

(ವಿ.ಸೂ.- ಈ ಸಂಶೋಧನಾ ಲೇಖನವನ್ನು ಪೂರ್ತಿ ಅಥವಾ ಭಾಗಶ: ಪ್ರಕಟಿಸುವುದು, ಮುದ್ರಿಸುವುದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದು ಕೃತಿಚೌರ್ಯ, ಕಾನೂನು ಬಾಹೀರ, ಆಸಕ್ತರು ಶೇರ್, like ಮಾಡಬಹುದು)
ತರಳಿಯಲ್ಲಿ ೧೯೭೦-೮೦ ರ ದಶಕದಲ್ಲಿ ದೇವಾಲಯ, ಪುರಾತತ್ವ ಸಂಬಂಧಿ ಕುರುಹುಗಳು ಪತ್ತೆಯಾಗುವ ಮೊದಲು ಇಲ್ಲಿ ಈಶ್ವರ ದೇವಸ್ಥಾನವಿತ್ತು. ದಟ್ಟ ಅರಣ್ಯದಿಂದ ಆವೃತ್ತವಾದ ಈ ಪ್ರದೇಶದಲ್ಲಿ ತರಳಿಯ ಅವಧೂತ ಪುರುಷ ಜನಿಸಿ ಆತ ಆಕಾಲದಲ್ಲಿ ಬರಿಗಾಲಲ್ಲಿ ತಿರುಪತಿ ತಲುಪಿ ಅಲ್ಲಿಂದ ಮರಳಿ ಇಲ್ಲಿ ತಪಸ್ಸನ್ನಾಚರಿಸಿದ ಎನ್ನುವ ಅಂಶಗಳ ಹಿನ್ನೆಲೆಯಲ್ಲಿ ಈಗಲೂ ತರಳಿಯಲ್ಲಿ ತಿಮ್ಮಪ್ಪನ ಪಾದುಕೆ ಪೂಜೆ ನಡೆಯುತ್ತದೆ. ( ತಿರುಪತಿಯಿಂದ ಮರಳಿದ ತರಳಿಯ ವ್ಯಕ್ತಿ ಅಭಿನವ ತಿಮ್ಮಪ್ಪನಾದ ಕತೆ)
ವೈಷ್ಣವರ ಪ್ರಭಾವದಿಂದ ಸ್ಥಳೀಯ ಶೈವ ಮೇಲ್ವರ್ಗದವರಿಗೆ ಸೆಡ್ಡು ಹೊಡೆದ ಇಲ್ಲಿಯ ಶ್ರಮಜೀವಿಗಳು ತರಳಿಯಲ್ಲಿ ಪದ್ಮಾವತಿ, ಗಣಪತಿ, ಬೀರಪ್ಪ ದೇವರನ್ನು ಪ್ರತಿಷ್ಠಾಪಿಸಿ ಪೂಜಿಸಿದರು. ಆ ಪೂಜೆಗೆ ಹೊರ ಊರುಗಳಿಂದ ಬಂದ ವೈಷ್ಣವ ಬ್ರಾಹ್ಮಣರು ದೀವರ ಜಾತಿ-ಮಠ, ಪೂಜೆಗಳ ನೇತಾರರಾದರು ಎನ್ನುವಲ್ಲಿಗೆ ಈ ಪ್ರದೇಶದಲ್ಲಿ ಸ್ಥಳೀಯ ಮೂಲನಿವಾಸಿಗಳು ವಲಸೆ ಶೈವ ಅದ್ವೈತಿಗಳಿಗೆ ಸವಾಲ್ ಹಾಕಿದ್ದರು ಎನ್ನುವುದು ಸ್ಪಷ್ಠವಾಗುತ್ತದೆ.
ಈ ಹಿನ್ನೆಲೆಯಿಂದ ಬಂದ ಕೆಲವು ವೈಷ್ಣವರು ಚಿಕ್ಕಮಂಗಳೂರು, ಶಿವಮೊಗ್ಗ ಸೇರಿದ ಮಲೆನಾಡಿನ ಜೊತೆ ಕರಾವಳಿಯ ಸಾಂಗತ್ಯ ಪಡೆದು ತರಳಿಯನ್ನೂ ಪ್ರವೇಶಿಸುತ್ತಾರೆ. ಈ ವೇಳೆ ಚಿಕ್ಕ ಬಾಲಕನಾಗಿದ್ದ ಎನ್.ಡಿ. ನಾಯ್ಕ ಹೆಗ್ಗೇರಿ ಯಲ್ಲಿ ಈ ವೈಷ್ಣವ ಪಂಥದ ಯತಿಗಳು, ಪೂಜಾರಿಗಳನ್ನು ನೋಡುತ್ತಾರೆ.
ಆವೇಳೆಗೆ ತರಳಿಗೆ ಬಂದು ದೀವರಿಗೆ ಪೂಜೆ, ಪುನಸ್ಕಾರ, ಧಾರ್ಮಿಕತೆ ಬೋಧಿಸುತಿದ್ದ ಹಿರಿಯನೊಬ್ಬ ಚಪ್ಪಲಿತೊಟ್ಟು ಶಿಷ್ಯರಿಂದ ನಮಸ್ಕರಿಸಿಕೊಳ್ಳುತಿದ್ದ ಎನ್ನುವ ತಕರಾರಿನಿಂದ ಆ ವ್ಯಕ್ತಿಗೆ ವಿರೋಧ ವ್ಯಕ್ತವಾಗಿ ಬಾಲಕೃಷ್ಣ ಸ್ವಾಮೀಜಿಗಳ ಪ್ರವೇಶವಾಗುತ್ತದೆ. ಈ ಹಿಂದಿದ್ದ ವ್ಯಕ್ತಿ ಬಾಲಕೃಷ್ಣ ಸ್ವಾಮೀಜಿಯವರ ವೈಷ್ಣವ ಸಹೋದರ ಎನ್ನುವುದು ಉಲ್ಲೇಖನೀಯ.
ಗುರುದಕ್ಷಿಣೆ ಪಡೆಯುವುದು, ಲೋಕಸಂಚಾರ ಮಾಡುವುದು ಮಾಡುತಿದ್ದ ಗುರು ಬಾಲಕೃಷ್ಣ ವೈಷ್ಣವ ಪರಂಪರೆಯಂತೆ ಸಂಸಾರಿ ಸ್ವಾ ಮಿಯಾಗುತ್ತಾರೆ. ಆ ವೇಳೆಗೆ ದೀವರು ಹಿರಿಯರು ಕಟ್ಟಿಕೊಂಡ ತಂಡ ಬೇಡ್ಕಣಿ ಗೌರ್ಯಾ ನಾಯ್ಕರು, ತರಳಿ ಹನುಮ ನಾಯ್ಕರು, ಅವರಗುಪ್ಪಾ ವೀರಭದ್ರ ನಾಯ್ಕರು, ಬಿಕ್ಕಳಸೆ ಮಹಾಬಲ ನಾಯ್ಕರ ನೇತೃತ್ವದಲ್ಲಿ ಸಮೀತಿಯಾಗಿ ೬-೦೯-೧೯೮೩ ರಲ್ಲಿ ನೋಂದಣಿಯಾಗುತ್ತದೆ.
ಈ ಟ್ರಸ್ಟ್ ಸ್ಥಾಪಕ ಅಧ್ಯಕ್ಷರಾಗಿದ್ದ ಗೌರ್ಯಾ ಈರಾ ನಾಯ್ಕರ ನೇತೃತ್ವದಲ್ಲಿ ಸಭೆಗಳಾಗಿ ಮಕ್ಕಳಾಗದ ಹನುಮ ನಾಯ್ಕ ತರಳಿ ಇಲ್ಲಿ ದೇವಸ್ಥಾನ ಪ್ರತಿಷ್ಠಾಪನೆ ಮಾಡುವ ಸಂಕಲ್ಪದಿಂದ ಮೂರ್ತಿ ತಂದಿದ್ದು ಗಮನಕ್ಕೆ ಬಂದು ಮೂರ್ತಿ ಪೂಜೆ- ಪುನಸ್ಕಾರಕ್ಕೆ ದೇವರ ಪ್ರತಿಷ್ಠಾಪನೆಗೆ ಹಣದ ಅಗತ್ಯ ಕಂಡು ಬಂದಾಗ ಸತ್ಯನಾರಾಯಣ ಕಲಸ ಪೂಜೆ ಮಾಡುವ ಮೂಲಕ ಧನ ಸಂಗ್ರಹ ಪ್ರಾರಂಭವಾಗುತ್ತದೆ.
ಈ ವಾರ್ಷಿಕ ಸತ್ಯ ನಾರಾಯಣ ಪೂಜೆ ಪ್ರಾರಂಭದ ಎರಡು ವರ್ಶಗಳ ನಂತ ಈ ತರಳಿ ದೇವಸ್ಥಾನ ಸಮೀತಿಗೆ ಅಧ್ಯಕ್ಷರಾಗಿ ಯುವಕ ವಕೀಲ ಎನ್.ಡಿ. ನಾಯ್ಕರ ಪ್ರವೇಶ ವಾಗುತ್ತದೆ.ಈ ಅವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು ಎಸ್. ಬಂಗಾರಪ್ಪ ಈ ಅವಧಿಯಲ್ಲೇ ತರಳಿ ಮಠದ ದೇವಸ್ಥಾನ ಸ್ಥಾಪನೆಗೆ ರೂಪರೇಶೆಗಳೂ ಪ್ರಾರಂಭವಾಗುತ್ತವೆ.
೧೯೮೩-೮೪, ನಂತರ ೧೯೯೨ ಆನಂತರದ ದಿನಗಳಲ್ಲಿಕೂಡಾ ತರಳಿಯ ದೇವಸ್ಥಾನ ಸಮೀತಿ ಮತ್ತು ಸ್ಥಳೀಯ ಮೇಲ್ವರ್ಗದವರ ನಡುವಿನ ಹೋರಾಟ ಕೋರ್ಟ್ ಮೆಟ್ಟಿಲೇರಿ ಯುವ ಅಧ್ಯಕ್ಷರಾಗಿದ್ದ ಎನ್.ಡಿ. ನಾಯ್ಕ ದೇವಸ್ಥಾನದ ಆಸ್ತಿ ಉಳಿಸಿಕೊಂಡರಾದರೂ ದೇವಸ್ಥಾನಕ್ಕೆ ಬಿಟ್ಟಿದ್ದ ಸ್ವಲ್ಪ ಅತಿಕ್ರಮಣ ಜಾಗ ಸ್ವಾಮೀಜಿಯವರ ಕುಟುಂಬದ ಪಾಲಾಯಿತು.
ಹೀಗೆ ಸುಮಾರು ೪೦ ವರ್ಷಗಳ ತರಳಿ ಮಠದ ಚರಿತ್ರೆಯಲ್ಲಿ ಎನ್.ಡಿ. ನಾಯ್ಕರ ನೇತೃತ್ವದ್ದೇ ೩೫ ವರ್ಷಗಳ ಕಾಲ.
ದೀವರ ಸಮಾಜದ ಮೊದಲ ವಕೀಲರಾದ ಎನ್.ಡಿ. ನಾಯ್ಕ ತರಳಿ ಮಠದ ಆಸ್ತಿ ಉಳಿಸಲು ಹೋರಾಡುತ್ತ ಐಸೂರಿನ ಬರಗಾಲದ ದೇವಸ್ಥಾನದ ಜಾಗದ ಪ್ರಕರಣ ಹವ್ಯಕರು, ನಾಯ್ಕರ ನಡುವಿನ ಸಂಘರ್ಷವಾಗಿ ಎನ್.ಡಿ. ನಾಯ್ಕ ಪರ್ಯಾಯ ಪೂಜಾರಿಗಳ ಹುಡುಕಾಟದಲ್ಲಿ ದೀವರಿಗೆ ಬ್ರಮ್ಮೋಪದೇಶ ಪ್ರಾರಂಭಿಸುತ್ತಾರೆ. ಹೀಗೆ ಪೂಜಾರಿಗಳಾದ ದೀವರು ಈಗ ದೇಶ, ರಾಜ್ಯಗಳ ನೂರಾರು ದೇವಾಲಯಗಳಲ್ಲಿ ಪೂಜಾರಿಗಳಾಗಿದ್ದಾರೆ.
ತರಳಿಮಠ ಕೇಂದ್ರೀಕರಿಸಿ ಸಿದ್ಧಾಪುರ, ಶಿರಸಿಗಳಲ್ಲಿ ನಡೆದ ಧಾರ್ಮಿಕ ಚಟುವಟಿಕೆಗಳಿಗೆ ಅವಧೂತ ಕಲ್ಲೇಶ್ವರ ಸ್ವಾಮೀಜಿ ಮಾರ್ಗದರ್ಶನ ಮಾಡಿದ್ದೂ ಕೂಡಾ ದೀವರ ಚರಿತ್ರೆಯೇ.
