ನಮ್ಮ ನೆಚ್ಚಿನ ಅಷ್ಟೇ ಅಲ್ಲ… ಕನ್ನಡದ ಮೆಚ್ಚಿನ ಸಾಹಿತಿ ತೇಜಸ್ವಿ ತಮ್ಮ ಸ್ಕೂಟರ್ ನ ಹಿಂದಿನ ಸೀಟ್ ತೆಗೆಸಿ ಯಾರೂ ಕೂತಕೊಳ್ಳದಂತೆ ಮಾಡಿಸಿದ್ದರಂತೆ! ಅವರದ್ಯಾವ ಅನಿವಾರ್ಯತೆ ಇತ್ತೋ ಗೊತ್ತಿಲ್ಲ. ಚಪ್ಪಲಿ ದುರಸ್ತಿ ಮಾಡುವ ಗೂಡಂಗಡಿಯಲ್ಲಿ ಕೂತಿರುತಿದ್ದ ತೇಜಸ್ವಿ ಬಹಳ ಶಿಸ್ತಿನ ವ್ಯಕ್ತಿಗಳ ಬಗ್ಗೆ ಒಂದು ರೇಂಜಿನ ರೇಜಿಗೆ ಬೆಳೆಸಿಕೊಂಡಿದ್ದರು ಎಂದು ಕೇಳಿದ್ದೇನಿ. ಆದರೆ ದುರ್ವಾಸನ ಅಪರಾವತಾರವಾಗಿದ್ದ ಅವರು ಜೀವಪರವಾಗಿದ್ದರು, ಪರಿಸರ, ಸರಳತೆಗಳ ಪರವಾಗಿದ್ದರು.
ಈ ನಮ್ಮ ತೇಜಸ್ವಿ ಕೀರ್ತಿಯನ್ನು ಶನಿ ಎಂದು ಜರಿದ ಅವರಪ್ಪ ಕುವೆಂಪು ಅವರನ್ನು ಚಾಚೂ ತಪ್ಪದೆ ಫಾಲೋ ಮಾಡಿದ್ದು ಇದೇ ವಿಚಾರದಲ್ಲಿ. ಇಂಥ ತೇಜಸ್ವಿಯವರಿಗೆ ರಾಜ್ಯ ಸರ್ಕಾರ ಪಂಪ ಪ್ರಶಸ್ತಿ ಘೋಶಿಸಿದ್ದಾಗ ತಿರಸ್ಕರಿಸಿದ್ದರು. ಪಂಪ ಪ್ರಶಸ್ತಿ ಸ್ವೀಕರಿಸಲು ತೇಜಸ್ವಿ ಬರುತ್ತಾರೆ ಅವರನ್ನು ಹತ್ತಿರದಿಂದ ನೋಡಬಹುದೆಂದು ನಾನಂತೂ ಕನಸಿದ್ದೆ ಅದಾಗಲೇ ಇಲ್ಲ.
ಆ ನಂತರ ಒಬ್ಬ ಪ್ರಸಿದ್ಧ ಸಂಶೋಧಕರಿಗೆ ರಾಜ್ಯ ಸರ್ಕಾರ ಪಂಪ ಪ್ರಶಸ್ತಿ ಘೋಶಿಸಿದ್ದಾಗ ಬನವಾಸಿಗೆ ಬಂದಿದ್ದ ಅವರನ್ನು ಕೋನ್ ರೆ? ಎಂದು ಯಾರೂ ಕೇಳುವವರೇ ಇಲ್ಲದಾಗ ಪಾಪಪಜ್ಞೆ, ಪಶ್ಚಾತ್ತಾಪದಿಂದ ನಾನೇ ಅವರಿಗೆ ಮಾತನಾಡಿಸಿ ಕ್ಷೇಮ ಸಮಾಚಾರ ಕೇಳಿದ್ದೆ.
ಹೀಗೆ ನಾವು ಬಯಸಿದ್ದು ಬೇಕಾದಾಗ ಸಿಗವುದಿಲ್ಲ ನಮಗೆ, ನಮ್ಮಿಷ್ಟದ್ದು ನಮಗೆ ಸಿಗುವಾಗ ನಮಗೆ ಅದು ಬೇಕಿರುವುದಿಲ್ಲ. ಇದು ಜಗದ ನಿಯಮ.
ಹಿಂಗೇ ಶಿವಾ ಅಂಥ ನಮ್ಮ ವಾಹನದ ಮೇಲೆ ನಾವು ಹೋಗುತಿದ್ದಾಗ ಎನೇನೋ ಸಿಗಬಹುದು ಆದರೆ ಕೆಲವು ಯೋಚನೆಗಳಂತೂ ನಮ್ಮನ್ನು ಕೆಣಕುತ್ತವೆ. ಒಬ್ಬ ಅಪರೂಪದ ವ್ಯಕ್ತಿ ಬಲು ಅಪರೂಪಕ್ಕೆ ಶುದ್ಧವೆಂದರೆ ಪರಮ ಶುದ್ಧ ಕನ್ನಡ ಮಾತನಾಡುತಿದ್ದ ಆತನ ಹೆಸರು ಕರ್ನಾಟಕ ರಾಜ್ಯದ ಚತುರ ಕುಮಾರ ನಾಯಕ!
ಅವರನ್ನು ಜನ ವಿಚಿತ್ರವಾಗಿ ನೋಡುತಿದ್ದರು. ಕಾರವಾರದಂಥ ಕನ್ನಡದ ʼಬರʼದ ನಾಡಲ್ಲಿ ಕರಾಚಕುನಾಯಕ ಗೇಲಿಯ ವಸ್ತುವಾಗಿದ್ದರು. ಅವರೇ ನಮಗೆ ಕ್ರಿಕೆಟ್ ಗೆ ಕನ್ನಡದಲ್ಲಿ ಜೀರುಂಡೆ ಆಟ ಎಂದು ಕರೆಯುತ್ತಾರೆ ಎಂದಿದ್ದರು.
ಹೀಗೆ ನೀವು ನಿಮ್ಮಷ್ಟದ, ನಿಮಗೊಪ್ಪುವ ಕನ್ನಡ, ಇಂಗ್ಲೀಷ್, ಕೊಂಕಣೆ, ಹಿಂದಿ ಮರಾಠಿ, ತೆಲುಗು, ತಮಿಳು ಯಾವುದೇ ಭಾಷೆ ಮಾತನಾಡಿ ನೀವು ಅಚ್ಚ (ಕನ್ನಡಿಗ) ಭಾಷಿಕರಾಗಿದ್ದರೆ ಜನ ನಿಮ್ಮನ್ನ ವಿಚಿತ್ರವಾಗೇ ನೋಡುತ್ತಾರೆ!. ಕನ್ನಡಿಗರನ್ನು ಕನ್ನಡದ ತುಂಡು, ಇಂಗ್ಲೀಷ್ ಭಾಷೆ ಮಾತನಾಡುವವರನ್ನು ಇಂಗ್ಲೀಷ್ ತುಂಡು ಎಂದು ಜನ ಗೇಲಿ ಮಾಡುವುದು ಸಾಮಾನ್ಯ.
ಬಟ್ಲರ್ ಗಳೇ ಇಲ್ಲಿ ಹಿಟ್ಲರ್ ಗಳು!
ಹಾಗಾಗಿ ಮಳೆಯೆಂದರೆ ….. ಎನ್ನುವ ಕವಿ ವಾಣಿಯಂತೆ ಜಗ ಮೆಚ್ಚುವ ವಸ್ತು, ನಡವಳಿಕೆ ಇಲ್ಲಿಲ್ಲ. ಬ್ರಷ್ಟನಿಗೆ ಪರವಾಗಿಲ್ಲ ಎಂದರೆ ಪ್ರಾಮಾಣಿಕನಿಗೆ ಇಲ್ಲಿ ಗಾಂಧಿ ಎನ್ನುವ ಬಿರುದು. ಹಾಗಾಗಿ ನೀವು ನಿಮ್ಮ ದಾರಿಯಲ್ಲಿ ನಡೆಯಿರಿ, ಅದು ಒಮ್ಮುಖ ಮಾರ್ಗವಾದರೂ ಅಡ್ಡಿಯಿಲ್ಲ. ಯಾಕೆಂದರೆ,,…. ನಡೆಯುವವರು, ಸಹಿಸಿಕೊಳ್ಳುವವರು, ನಡೆಯುತ್ತಾ ಎಡವಿ ಮತ್ತೆ ನಡೆಯುತ್ತಾ ಪಯಣ ಮುಂದುವರಿಸುವವರು ನೀವೇ. ಬಟ್ ಇತರರ ತಪ್ಪು, ಅನುಭವದಿದ ಪಾಠ ಕಲಿಯದಿದ್ದರೆ… ನಾವೇ ಕಲಿತು, ತಪ್ಪಿ, ಎಡವಿ, ಬಿದ್ದು ಎದ್ದು ನಡೆಯುತ್ತಾ ಸುಧಾರಿಸಿಕೊಳ್ಳುವಾಗ (ನಿ) ನಮಗೇ ದಣಿವಾಗಿರುತ್ತದೆ.@! ನೆನಪಿಡಿ ನೀವು ತಪ್ಪು ಒಪ್ಪು ಮಾಡಿ ಗೆದ್ದಿರೋ ಬಚಾವು ನಿಮ್ಮ ಅನುಭವಕ್ಕೆ ಬೆಲೆ ಇದೆ. ಒಂದಾನುವೇಳೆ ಎಲ್ಲಾ ಪ್ರಯತ್ನಗಳ ನಂತರ ನೀವು ಯಶಸ್ವಿಯಾಗದಿದ್ದರೆ ಆಗ ನಿಮ್ಮ ಅನುಭವಕ್ಕೆ ಬೆಲೆ ಇಲ್ಲ. ಅಷ್ಟಕ್ಕೂ ಸೋತವರ ಅನುಭವ ಕೇಳಿ ಏನಾಗಬೇಕು.