



ಜೋಗ ನೋಡಲು ನಿರಬಂಧ ವಿಧಿಸಲಾಗಿದೆ. ಜೋಗ ಜಲಪಾತ ಜಗತ್ತಿನ ಬೆರಗು,ಅದ್ಭುತ,ಕನಸು, ಕಲ್ಪನೆ ಅಗಾಧತೆ ಕೂಡಾ. ಇದೇ ಜೋಗದ ಝರಿಯನ್ನು ಶಿರಸಿಯ ಎಂ.ಇ.ಎಸ್. ಕಾಲೇಜಿನ ಮೈದಾನದಲ್ಲಿ ವೇದಿಕೆಗೆ ಇಳಿಸಿದ್ದರು ಝಾಕಿರ್ ಹುಸೇನ್!

ಝಾಕಿರ್ ಹುಸೇನ್ ಇರಲಿ, ತಬಲಾ ಇರಲಿ, ತಬಲಾ ಶಾಸ್ರ್ತೀಯ ಸಂಗೀತಗಳಿರಲಿ ಇವುಗಳ ಗಂಧ-ಗಾಳಿ ಗೊತ್ತಿರದ ನಮ್ಮಂಥ ಅನೇಕರು ನಮ್ಮ ಬದುಕಿನಲ್ಲಿ ಮೊದಲ ಬಾರಿ ಙಾಕೀರ್ ಹುಸೇನ್ ತಮಲಾ ಕ್ಕೆ ಮೈ ಮರೆತು ಕುರಿತಿದ್ದೆವು.
ಜಾಕಿರ್ ಬೆಂಕಿ ಹೊತ್ತಿಸಿದರು,ಮಳೆ ಸುರಿಸಿದರು. ಜೋಗದ ಝರಿ ಹೀಗೆ ಧುಮುಕುತ್ತದೆ ನೋಡಿ ಎಂದು, ಕಾಡಿನ ಬೆಂಕಿ ವಿಸ್ತರಿಸುತ್ತಿದೆ ನೋಡಿ ಎಂದು ಹೀಗೆ ಬಿರುಗಾಳಿ, ಮಳೆ, ಹಿಮಾಲಯದ ಥಂಡಿ ಎಲ್ಲವನ್ನೂ ಕೂತಲ್ಲೇ ಅನುಭವಿಸಲು ಅನುಗ್ರಹಿಸಿದರು. ಇವೆಲ್ಲವನ್ನೂ ಸಾಧ್ಯ ಮಾಡಿದ್ದವು ಝಾಕಿರ್ ರ ಮಾಂತ್ರಿಕ ಬೆರಳುಗಳು!

ನಮ್ಮಂಥವರು ಅಲ್ಲೇ ಶರಣಾಗಿದ್ದೆವು. ಇವರೇ ಝಾಕಿರ್ ಹುಸೇನ್. ಜಾಕಿರ್ ಹುಸೇನ್ ಅಲ್ಲಾ ರಖಾ ರ ಮಗನಾಗಿ ಹುಟ್ಟುತ್ತಲೇ ತಬಲಾ ಮುಟ್ಟುತ್ತಾ ಬೆಳೆದಿದ್ದರು. ಮೂರು ವರ್ಷದ ಮಗು ಝಾಕಿರ್ ತಬಲಾ ಮೇಲೆ ಕಣ್ಣಾಡಿಸತೊಡಗಿದ್ದರು. ಕೈಯಾಡಿಸಿ ತಬಲಾಕ್ಕೆ ಸಂಗಾತಿಯಾಗಿದ್ದರು. ಏಳನೇ ವರ್ಷಕ್ಕೆ ತಬಲಾ ನುಡಿಸತೊಡಗಿದ್ದರು ೧೧ ನೇ ವಯಸ್ಸಿಗೆ ತಬಲಾ ಕಾರ್ಯಕ್ರಮ ನೀಡಿದ್ದರು ಆ ನಂತರದ್ದು ಅವರ ಚರಿತ್ರೆಯಾದರೆ. ಅದು ಭಾರತದ ತಬಲಾ ಇತಿಹಾಸ!
ಇಂಥ ತಬಲಾ ಮಾಂತ್ರಿ ಕನಿಂದ ತಬಲಾ ಬಗ್ಗೆ ಆಸಕ್ತಿ ತಾಳಿದ ನನ್ನಂಥವರ ಸಂಖ್ಯೆ ಲಕ್ಷಾಂತರ.
ಸಾಧಕನೊಬ್ಬ ತಮ್ಮ ವೃತ್ತಿ- ಪ್ರಚೃತ್ತಿಗಳನ್ನು ನೂರಾರು ಜನ ಅನುಸರಿಸುವಂತೆ ಮಾಡಿದರೆ ಅದು ಆತನ ಸಾಧನೆ.
ಝಾಕಿರ ಭಯ್ಯಾ ಸಾಧಿಸಿ ತೋರಿಸಿದ್ದು ಹೀಗೆ.

ಇವರ ಅಂತ್ಯದ ದಿನವೇ ಅಂಕೋಲಾದ ತುಳಸಿ ಗೌಡ ನಿಧನರಾಗಿದ್ದಾರೆ. ತುಳಸಿ ಅನಿವಾರ್ಯತೆಯಿಂದ ಗುತ್ತಿಗೆ ಆಧಾರದ ಕೆಲಸ ಸೇರಿ ನಂತರ ಖಾಯಂ ನೌಕರರಾಗಿ ಆಮೇಲೆ ವಯೋ ನಿವೃತ್ತಿ ಹೊಂದಿ ಮರಣ ಹೊಂದಿದ್ದರೆ ಅವರ ಸಾವು ಆತ್ಮೀಯರ ಅಶ್ರುತರ್ಪಣ ದೊಂದಿಗೆ ಮುಕ್ತಾಯವಾಗುತಿತ್ತು. ಆದರೆ ತುಳಸಿ ವೃತ್ತಿಯನ್ನು ಪ್ರವೃತ್ತಿಯಾಗಿ ಸಮರ್ಪಿಸಿಕೊಂಡಿದ್ದರು. ಗಿಡ ಬೆಳೆಸುತ್ತಾ, ಮರ ಸಾಕುತ್ತಾ ವೃತ್ತಿ-ಪ್ರವೃತ್ತಿ ಎಲ್ಲವನ್ನೂ ವೃಕ್ಷ ಸಂರಕ್ಷಣೆಗೆ ಮೀಸಲಿಟ್ಟರು.
ಪ್ರಕೃತಿಯ ಮಕ್ಕಳಾದ ಹಾಲಕ್ಕಿಗಳು ಮುಗ್ಧರು, ವನವಾಸಿಗಳಾದರೂ ಅವರಲ್ಲಿ ಕ್ರೌರ್ಯ ಕಡಿಮೆ. ಇಂಥ ವಿಶಿಷ್ಟ ಜನಾಂಗ ಪ್ರತಿನಿಧಿಸಿದ್ದ ತುಳಸಿ ಗೌಡರ ಪ್ರಕೃತಿ ಪ್ರೀತಿ ಸಹಜ ಆದರೆ ಅದನ್ನು ಧ್ಯೇಯ- ನಿಷ್ಠೆಗಳನ್ನಾಗಿಸಿಕೊಂಡ ತುಳಸಿ ಪ್ರಕೃತಿಯನ್ನೇ ತನ್ನ ಕುಟುಂಬವೆಂದೇ ಪ್ರೀತಿಸಿದ್ದರು. ಅವರ ವನ ಪ್ರೀತಿ ಅವರಿಗೆ ಪದ್ಮಶ್ರೀ ಜೊತೆ ಖ್ಯಾತಿ-ಪ್ರೀತಿಯನ್ನು ದಯಪಾಲಿಸಿತು. ನಮ್ಮನ್ನೇ ನಾವು ವೈಶಿಷ್ಟ್ಯತೆಗೆ ಸಮರ್ಪಿಸಿಕೊಂಡರೆ ಸಮಾಜ ನಮ್ಮನ್ನು ಹೇಗೆ ಗೌರವಿಸುತ್ತದೆಂಬುದಕ್ಕೆ ಝಾಕಿರ್ ಹುಸೇನ್ ಮತ್ತು ತುಳಸಿ ಗೌಡ ದೃಷ್ಟಾಂತ ಇಂಥವರು ಮಾತ್ರ ಹೊಸ ಪೀಳಿಗೆಗೆ ಮಾದರಿಯಾಗಬಲ್ಲರು.

