


ಬಂಜಾರ ಸಮೂದಾಯ ಎನ್ನುವ ಲಂಬಾಣಿ ಅಲೆಮಾರಿ ಸಮೂದಾಯ ರಾಜಸ್ಥಾನ ಮೂಲದ್ದು ಎನ್ನಲಾಗುತ್ತದೆ. ಅವರ ಕರಕುಶಲತೆ,ಜೀವನಶೈಲಿ ಉತ್ತರ ಭಾರತೀಯರ ಬದುಕಿಗೆ ಸಾಮ್ಯತೆ ಹೊಂದಿದೆ. ಮೂಲತ: ವ್ಯಾಪಾರಿಗಳಾಗಿ ಅಲೆಮಾರಿ ಬದುಕುಕಂಡುಕೊಂಡಿದ್ದ ಈ ಸಮೂದಾಯ ಧಾಡಸಿತನ ಮತ್ತು ಧೈರ್ಯಕ್ಕೆ ಹೆಸರುವಾಸಿ. ಅಲೆಮಾರಿಗಳಾದ ಬಂಜಾರರು ಎರಡು ಶತಮಾನಗಳ ಹಿಂದೆ ಸರಕು ಸಾಗಾಣಿಕೆ ಮಾಡುವ ಕೆಲಸ ಮಾಡುತಿದ್ದ ಪ್ರಮುಖ ಸಮೂದಾಯ. ಬೆನ್ನು, ತಲೆಯ ಮೇಲೆ ಸರಕು ಹೊತ್ತು ಸಾಗುತ್ತಾ, ಸರಕುಸಾಗಾಣಿಕೆಗೆ ಎತ್ತು ದನಗಳನ್ನು ಬಳಸುತ್ತಾ ಬದುಕಿನೊಂದಿಗೆ ಪಶುಪಾಲನೆಯನ್ನೂ ಮಾಡುತ್ತಾ ಜೀವನ ಸಾಗಿಸುತಿದ್ದ ಈ ಸಮೂದಾಯಕ್ಕೆ ಬ್ರೀಟಿಷರ ಆಳ್ವಿಕೆಯಲ್ಲಿ ವ್ಯಾಪಾರದ ಸ್ಫರ್ಧೆ ಏರ್ಪಟ್ಟು ಬ್ರಟೀಷರು ಇವರ ಮೇಲೆ ಕಾನೂನುಕ್ರಮಕ್ಕೆ ಮುಂದಾದಾಗ ಸಾಮಂತ ಅರಸರನ್ನು ಯುದ್ಧದಲ್ಲಿ ಗೆಲ್ಲುತ್ತಾ ತಮ್ಮ ಸಾಗಾಣಿಕೆ ಬದುಕನ್ನು ಉಳಿಸಿಕೊಂಡು ಅಲೆಮಾರಿಗಳಾಗಿ ಮುಂದುವರಿದರು ಎನ್ನಲಾಗುತ್ತದೆ.

ಹೈದರಾಬಾದ್ ನಿಜಾಮ, ದೆಹಲಿಸುಲ್ತಾನರೊಂದಿಗೆ ಕಾದುತ್ತಾ ತಮ್ಮ ವೃತ್ತಿ-ಬದುಕು ಉಳಿಸಿಕೊಂಡ ಈ ಬಂಜಾರ ಸಮೂದಾಯ ವ್ಯಾಪಾರಕ್ಕಾಗಿ ಬ್ರಟೀಷರೊಂದಿಗೆ ಸಮರ ಸಾರುತ್ತಾ ಮೊಗಲರು ಮತ್ತು ಬ್ರಟೀಷರ ವಿರುದ್ಧ ಧರ್ಮಯುದ್ಧ ನಡೆಸಿದರು ಎನ್ನುವುದು ಬಂಜಾರರ ಹೆಗ್ಗಳಿಕೆ.

ಪ್ರಕೃತಿ ಆರಾಧಕರಾದ ಲಮಾಣಿ, ಬಂಜಾರರು ನಾಟಿವಿದ್ಯೆ ಬಲ್ಲ ವೈದ್ಯರು, ದೈಹಿಕಶ್ರಮದ ಈ ಸಮೂದಾಯ ಸಾಹಸಿ, ಪರಾಕ್ರಮಿಗುಂಪು ಎಂಬುದು ಇವರ ಚರಿತ್ರೆಯ ವಿಶೇಶ ಅಂಶ. ಲಮಾಣಿಗಳು ತಮ್ಮ ಸಾಹಸ, ಧೈರ್ಯ,ಸೇವಾ ಕೆಲಸ,ಗಿಡಮೂಲಕೆ ಪಾಂಡಿತ್ಯದಿಂದ ಬಂಜಾರ ಹಿಲ್ಸ್ ಇನಾಮು ಪಡೆದಿದ್ದು ಇವರ ವೈಶಿಷ್ಟ್ಯ.
ತಂಡಗಳಾಗಿ, ತಾಂಡಗಳಲ್ಲಿ ವಾಸಿಸುತಿದ್ದ ಈ ಬಂಜಾರರಿಗೆ ಸೇವಾಲಾಲರು ಮೌಢ್ಯ, ವ್ಯಸನ, ತ್ಯಜಿಸಿ ಕಾಡುಬದುಕಿನಿಂದ ಮುಖ್ಯ ವಾಹಿನಿಗೆ ಬರುವ ಹೊಸ ದಾರಿ ಪರಿಚಯಿಸಿದರು. ಇಂದಿನ ದಾವಣಗೆರೆ ಜಿಲ್ಲೆಯ ಕುಗ್ರಾಮದ ಸೇವಾಲಾಲ್ ದೇವರ ಕೃಪೆಯಿಂದಲೇ ಜನಿಸಿ ಮುಂದೆ ಮಾರಿಯಮ್ಮನ ಭಕ್ತನಾಗಿ ನಂತರ ಸಮಾಜಸುಧಾರಣೆಯ ದಾರಿ ಹಿಡಿದು ಸಂತರಾದರು ಎನ್ನುವುದು ಇವರ ಚರಿತ್ರೆ.
ಅಲೆಮಾರಿ ವ್ಯಾಪಾರಿ ಸರಕು-ಸಾಗಾಣಿಕೆಯ ಕೆಲಸ ಮಾಡುತ್ತಲೇ ಮನುಷ್ಯನಿಂದಾಗದ ಕೆಲವು ಪವಾಡಗಳನ್ನು ಮಾಡುತ್ತಾ ಸೇವಾ ಭಯ್ಯ ನಾಗಿ ಸೇವಾಲಾಲ ಎಲ್ಲರ ಅಣ್ಣನಾಗಿರುವುದು ಅವರ ನಿಸ್ವಾರ್ಥ, ತ್ಯಾಗದ ಬದುಕಿಗೆ ಸಾಕ್ಷಿ.

