
ಕೋವಿಡ್ 19 ನಿರ್ವಹಣೆ ಹೇಗೆ ಎಂಬುದಕ್ಕೆ ಮೈಸೂರಿನ ಈ ದಲಿತ ಕಾಲೋನಿ ಮಾದರಿ!
ಸದ್ಯದ ಕೋವಿಡ್ 19 ಪರಿಸ್ಥಿತಿಯನ್ನು ಪಟ್ಟಣಗಳು ಹೇಗೆ ನಿರ್ವಹಿಸಬೇಕು ಎಂಬುದನ್ನು ಮೈಸೂರಿನ ಈ ದಲಿತ ಕಾಲೋನಿ ನೋಡಿ ಕಲಿಯಬೇಕಾಗಿದೆ.

ಕೋವಿಡ್ ಉಲ್ಬಣ: ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಚಿತಾಭಸ್ಮ ಬಿಡುವುದಕ್ಕೆ ರಾಜ್ಯ ಸರ್ಕಾರ ನಿಷೇಧ
ಕಾವೇರಿ ನದಿಯಲ್ಲಿ ಮೃತಪಟ್ಟವರ ಚಿತಾಭಸ್ಮ ಹಾಗೂ ಇನ್ನಿತರೆ ವಸ್ತುಗಳನ್ನು ಬಿಡುವುದಕ್ಕೆ ರಾಜ್ಯ ಸರ್ಕಾರ ನಿಷೇಧ ವಿಧಿಸಿದೆ.

ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಮೃತಪಟ್ಟವರ ಚಿತಾಭಸ್ಮ ಹಾಗೂ ಇನ್ನಿತರೆ ವಸ್ತುಗಳನ್ನು ಬಿಡುವುದಕ್ಕೆ ರಾಜ್ಯ ಸರ್ಕಾರ ನಿಷೇಧ ವಿಧಿಸಿದೆ.
ಕೋವಿಡ್‌ನಿಂದಾಗಿ ಸಾವುಗಳು ಹೆಚ್ಚಾಗುತ್ತಿದ್ದಂತೆ, ಶ್ರೀರಂಗಪಟ್ಟಣದ ಪ್ರಸಿದ್ಧ ಪಶ್ಚಿಮವಾಹಿನಿ ಮತ್ತಿತರೆಡೆಗಳಲ್ಲಿ ಮೃತರ ಚಿತಾಭಸ್ಮವನ್ನು ಬಿಡಲು ಭಾರೀ ಸಂಖ್ಯೆಯಲ್ಲಿ ಜನ ಸೇರಿರುವುದನ್ನು ಗಮನಿಸಿ ಈ ಆದೇಶ ನೀಡಲಾಗಿದೆ.
ಕೋವಿಡ್ 19 ರ ಹರಡುವಿಕೆಯ ಬಗ್ಗೆ ಸ್ಥಳೀಯರು ಭಯ ವ್ಯಕ್ತಪಡಿಸಿದ್ದರಿಂದ ರಾಜ್ಯ ಮತ್ತು ನೆರೆ ಜಿಲ್ಲೆ, ನೆರೆ ರಾಜ್ಯಗಳ ಜನ ಕಾವೇರಿಯಲ್ಲಿ ಚಿತಾಭಸ್ಮವನ್ನು ಬಿಡುವುದಕ್ಕೆ ತಾಲ್ಲೂಕು ಆಡಳಿತವು ನಿಷೇಧ ಹೇರಿದೆ. ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ತಹಶೀಲ್ದಾರ್ ಎಂ ವಿ ರೂಪಾ ತಿಳಿಸಿದ್ದಾರೆ. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಮೈಸೂರು: ಸದ್ಯದ ಕೋವಿಡ್ 19 ಪರಿಸ್ಥಿತಿಯನ್ನು ಪಟ್ಟಣಗಳು ಹೇಗೆ ನಿರ್ವಹಿಸಬೇಕು ಎಂಬುದನ್ನು ಮೈಸೂರಿನ ಈ ದಲಿತ ಕಾಲೋನಿ ನೋಡಿ ಕಲಿಯಬೇಕಾಗಿದೆ.
ಕೋವಿಡ್ ಎರಡನೇ ಅಲೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆ ತೆಗೆದುಕೊಳ್ಳಲು ಹಿಂಜರಿಯಬಾರದು ಹಾಗೂ ಆರ್ ಟಿ ಪಿಸಿಆರ್ ಪರೀಕ್ಷೆ ಕೂಡಿ ಮಾಡಿಸಿಕೊಳ್ಳಬೇಕು ಎಂದು ಚಾಮರಾಜನಗರ ಜಿಲ್ಲೆಯ ಸತ್ಯಗಾಲ ಗ್ರಾಮದ ದಲಿತ ಮುಖಂಡ ಎಲ್ಲರಿಗೂ ಜಾಗೃತಿ ಮೂಡಿಸಿದ್ದಾರೆ.
ಇದರ ಜೊತೆಗೆ ಬೆಂಗಳೂರು ಅಥವಾ ಮೈಸೂರಿನಿಂದ ಬರುವ ಯಾರನ್ನು ಗ್ರಾಮಕ್ಕೆ ಬಿಡದಿರಲು ನಿರ್ಧರಿಸಿದ್ದಾರೆ. ಸ್ಥಳೀಯ ಛತ್ರದಲ್ಲಿ ಯುವಕರ ಗುಂಪೊಂದು ಆರ್ ಟಿ ಪಿಸಿಆರ್ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.
ವೈದ್ಯಕೀಯ ತುರ್ತು ಅವಶ್ಯಕತೆಯಿದ್ದರೇ ಮಾತ್ರ ಗ್ರಾಮದಿಂದ ಹೊರಗೆ ಹೋಗಬೇಕು, ಅನಾವಶ್ಯಕವಾಗಿ ತೆರಳಬಾರದು ಎಂದು ಕಠಿಣ ನಿಯಮಕ್ಕೆ ಆದೇಶಿಸಿದ್ದಾರೆ.
ಪಿಗ್ಮಿ ಸಂಗ್ರಹಗಾರರು ಸೇರಿದಂತೆ ಯಾವುದೇ ಕಂಪನಿಯ ಏಜೆಂಟ್ ಗಳು ಗ್ರಾಮಕ್ಕೆ ಬರದಂತೆ ತಡೆ ಒಡ್ಡಲಾಗಿದೆ.ಒಂದು ವೇಳೆ ನಿಯಮ ಮೀರಿ ಮಾಸ್ಕ್ ಧರಿಸದೇ ಬಂದರೇ ದಂಡ ವಿಧಿಸಲು ತೀರ್ಮಾನಿಸಿದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪಂಚಾಯತಿ ನಿರ್ದೇಶನ ನೀಡಿದೆ.
ಹಲವರು ಲಸಿಕೆ ತೆಗೆದುಕೊಳ್ಳಲು ಬಯಸಿದ್ದಾರೆ, ಆದರೆ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಸಮರ್ಕವಾಗಿ ಕೆಲಸ ಮಾಡುವ ವೈದ್ಯರಿಲ್ಲ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ, ಲಸಿಕೆ ಪಡೆದ ನಂತರ ಏನಾದರೂ ಅಡ್ಡ ಪರಿಣಾಮ ಉಂಟಾದರೇ ನಾವು ಚಿಕಿತ್ಸೆಗೆ ಎಲ್ಲಿಗೆ ಹೋಗಬೇಕು ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ. (kpc)
