
ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ವೈದ್ಯಕೀಯ ಸೇವೆ ದೊರೆಯುತ್ತಿದೆ. ಶಿರಸಿ ಘಟನೆ ಮರುಕಳಿಸಬಾರದು, ಕೋವಿಡ್ ರೋಗಿಗಳಿಗೆ ಚಿಕಿತ್ಸೆ ದೊರೆಯದೆ ತೊಂ ದರೆಗೆ ಒಳಗಾಗುವ ಸ್ಥಿತಿ ಇಲ್ಲ. ಖಾಸಗಿ ಆಸ್ಫತ್ರೆಗಳಲ್ಲಿ ದೊರೆಯುವ ಸೌಲಭ್ಯಕ್ಕಿಂತ ಹೆಚ್ಚಿನ ವ್ಯವಸ್ಥೆ, ಅನುಕೂಲ ಸರ್ಕಾರಿ ಆಸ್ಫತ್ರೆಗಳಲ್ಲಿವೆ.-ಶಿವರಾಮ್ ಹೆಬ್ಬಾರ್
ಇಂದು ಏ.30 ರಂದು ಸಿದ್ಧಾಪುರದಲ್ಲಿ ಪತ್ತೆಯಾದ ಒಟ್ಟೂ 39 ಪ್ರಕರಣಗಳಲ್ಲಿ ನಿಡಗೋಡಿನ ನಾಲ್ಕು ಪ್ರಕರಣಗಳು ಸೇರಿವೆ.
ಶಿರಸಿ (ಉತ್ತರ ಕನ್ನಡ ) ಅಮ್ಮಿನಲ್ಲಿ ಮಂಜ ಮಡಿವಾಳ ಶವದ ರಕ್ತ ಸ್ರಾವದ ಬಗ್ಗೆ ಜಿಲ್ಲಾಡಳಿತ ಶಿರಸಿ ತಾಲೂಕ ಆಸ್ಪತ್ರೆಯ ವಿವರಣೆ ಕೇಳಿದೆ. ಬುಧವಾರ ಕೋವಿಡ್ ಚಿಕೆತ್ಸೆಗೆ ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಮಂಜ ಮಡಿವಾಳ ಕೆಲವೇ ಗಂಟೆಗಳಲ್ಲಿ ಮೃತರಾಗಿದ್ದರು. ಈ ಶವದ ರಕ್ತಶ್ರಾವದ ವಿಡಿಯೋ ವೈರಲ್ ಆಗಿತ್ತು. ಇಂದು ಈ ಬಗ್ಗೆ ವಿಚಾರಿಸಿದ ಸಮಾಜಮುಖಿ ಪ್ರತಿನಿಧಿ ಗೆ ಮಾಹಿತಿ ನೀಡಿದ ಜಿಲ್ಲಾಡಳಿತದ ಮೂಲಗಳು. ಬುಧವಾರ ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆ ಸೇರಿದ್ದ ರೋಗಿ ಕೆಲವೇ ಗಂಟೆಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರು ಕೋವಿಡ್ ರೋಗಿಯಾಗಿದ್ದರಿಂದ ಇವರಿಗೆ ರಕ್ತ ಹೆಪ್ಪುಗಟ್ಟದ ಔಷಧಿ ನೀಡಲಾಗಿತ್ತು. ಹಾಗಾಗಿ ಅವರ ಶವದಿಂದ ರಕ್ತಶ್ರಾವವಾಗಿತ್ತು. ಈ ಬಗ್ಗೆ ವಿಡಿಯೋ ವೈರಲ್ ಆಗಿತ್ತು. ಆಸ್ಪತ್ರೆ ಆಡಳಿತ ಮೃತರ ವಾರಸುದಾರರಿಗೆ ಸರಿಯಾದ ಮಾಹಿತಿ ನೀಡಬೇಕಾಗಿತ್ತು. ಈ ಬಗ್ಗೆ ಸಂಬಂಧಿಸಿದವರಿಗೆ ಕಾರಣ ಕೇಳಿ ನೋಟೀಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಕೊರೋನಾ ಆಸ್ಪತ್ರೆ ಅವ್ಯವಸ್ಥೆ ಹಿನ್ನೆಲೆ ಗಳಲ್ಲಿ ಸುದ್ದಿ ಯಾಗಿದ್ದ ಈ ಪ್ರಕರಣದ ಗುಟ್ಟು ರಟ್ಟಾದಂತಾಗಿದೆ.
