

ಕೋವಿಡ್ ಸೋಂಕಿತರು ಮತ್ತು ಸಾರ್ವಜನಿಕರು ಕೂಡಾ ಅಗತ್ಯವಸ್ತುಗಳಿಗಾಗಿ ಬೀದಿಅಲೆಯುವ ಅಗತ್ಯವಿಲ್ಲ ಎಂದು ತೀರ್ಮಾನಿಸಿ ಗ್ರಾಮಪಂಚಾಯತ್ ಮಟ್ಟದಿಂದ ನಗರ ವ್ಯಾಪ್ತಿಯಲ್ಲಿ ಕೂಡಾ ಜನರ ಮನೆಬಾಗಿಲಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಅವಕಾಶ ಮಾಡಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗಿದೆ ಎಂದು ಶಿರಸಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಹೇಳಿದ್ದಾರೆ.
ಇಂದು ಸಿದ್ದಾಪುರದಲ್ಲಿ ನಡೆಸಿದ ಕೋವಿಡ್ ಸಮಾಲೋಚನಾ ಸಭೆ ಮತ್ತು ಪ್ರಗತಿಪರಿಶೀಲನೆಯ ನಂತರ ಮಾಧ್ಯಮಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಅವರು ಶಿರಸಿ ಉಪವಿಭಾಗದಲ್ಲಿ ಕೋವಿಡ್ ಸಾಂಕ್ರಾ ಮಿಕ ನಿರ್ವಹಣೆಗೆ ಯಾವುದೇ ತೊಂದರೆ ಇಲ್ಲ. ಸೋಂಕಿತರು ಮತ್ತು ಅಗತ್ಯ ವಿರುವವರಿಗೆ ಆರೋಗ್ಯ ವ್ಯವಸ್ಥೆ,ಆಮ್ಲಜನಕ ಪೂರೈಕೆ ಸೇರಿದಂತೆ ಅಗತ್ಯ ಅನುಕೂಲತೆಗಳನ್ನು ಪೂರೈಸಿದ್ದು ಸಾರ್ವಜನಿಕರು ಆಯಾ ತಾಲೂಕು ಜಿಲ್ಲೆ ವ್ಯಾಪ್ತಿಯ ಸರ್ಕಾರಿ ಆಸ್ಫತ್ರೆಗಳಲ್ಲೇ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯಬೇಕು ಎಂದರು.

