ಹೈಟೆಕ್ ದನಗಳ್ಳರ ಜಾಲ ಭೇದಿಸಿದ ಶಿರಸಿ ಪೊಲೀಸರು, ಇಬ್ಬರು ಅಂದರ್.. ಮೂವರು ಪರಾರಿ

ಶಿರಸಿ ಪೊಲೀಸರಿಂದ ಅಂತರ್ ಜಿಲ್ಲಾ ದನಗಳ್ಳರ ಬಂಧನ. ಐಷಾರಾಮಿ ವಾಹನದಲ್ಲಿ ದನಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ, ಮೂವರು ಪರಾರಿ.

ಫಾರ್ಚುನರ್ ಮತ್ತು ಕ್ರೇಟಾ ವಾಹನಗಳು ವಶ.

ಐಶಾರಾಮಿ ಕಾರುಗಳಲ್ಲಿ ಬಂದು ರಾತ್ರೋ ರಾತ್ರಿ ಜಾನುವಾರುಗಳನ್ನು ಕದ್ದು ಸಾಗಿಸುವ ಶಿವಮೊಗ್ಗ, ದಕ್ಷಿಣ ಕನ್ನಡ ಮೂಲದ ಒಂದೇ ತಂಡದ ಎರಡು ಕಾರುಗಳನ್ನು ವಶಕ್ಕೆ ಪಡೆದಿರುವ ಶಿರಸಿ ಪೊಲೀಸರು ಕ್ರೇಟಾ ಕಾರಿನಲ್ಲಿದ್ದ ಇಬ್ಬರನ್ನು ಬಂಧಿಸುವ ಕೆಲಸದಲ್ಲಿ ಯಶಸ್ವಿಯಾಗಿದ್ದಾರೆ. ಫಾರ್ಚುನರ್ ನಲ್ಲಿದ್ದ ಮೂವರು ತಲೆಮರೆಸಿಕೊಂಡಿದ್ದು ಅವರ ಶೋಧ ಕಾರ್ಯ ನಡೆಯುತ್ತಿದೆ. ಬೀಡಾಡಿ ದನಗಳನ್ನು ಕದ್ದು ಸಾಗಿಸುತಿದ್ದ ಈ ತಂಡ ಅಂತರ್ಜಿಲ್ಲಾ ದನಗಳ್ಳರ ಗುಂಪು ಎನ್ನುವುದು ಸಾಬೀತಾಗಿದೆ.

ಇದು ಅಧೀಕೃತ ಪೊಲೀಸ್ ವರದಿ- ಇದೇ ತಿಂಗಳು ದಿನಾಂಕ 07-07-2021 ಮತ್ತು 09-07-2021 ರಂದು ಶಿರಸಿ ಹೊಸ ಮಾರುಕಟ್ಟೆ ಪೊಲೀಸ ಠಾಣಾ ವ್ಯಾಪ್ತಿಯ ವಿವೇಕಾನಂದನಗರ ಮತ್ತು ಮರಾಠಿಕೊಪ್ಪದಲ್ಲಿ ದನಗಳ್ಳತನ ಆದ ಬಗ್ಗೆ ಪ್ರಕರಣಗಳು ವರದಿಯಾಗಿದ್ದು. ಈ ಪ್ರಕರಣದ ದನಗಳ್ಳರ ಪತ್ತೆಯ ಕುರಿತು ರಾಮಚಂದ್ರ ನಾಯಕ, ಸಿ.ಪಿ.ಐ. ಶಿರಸಿ ಮತ್ತು ಭಿಮಾಶಂಕರ ಸಿನ್ನೂರ ಸಂಗಣ್ಣ ಪಿ.ಎಸ್.ಐ. ರವರ ನೇತೃತ್ವದಲ್ಲಿ ಸಿಬ್ಬಂದಿಗಳ ಒಂದು ವಿಶೇಷ ತಂಡವನ್ನು ರಚಿಸಿದ್ದು . ದಿನಾಂಕ 30-07-2021 ರಂದು ಪಿ.ಎಸ್.ಐ. ಶ್ರೀ ಭೀಮಾಶಂಕರ್ ವಿಶೇಷ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ 03-30 ಗಂಟೆಗೆ ಕೋಟೆಕೆರೆ ಜಂಕ್ಷನ್ ಹತ್ತಿರ ಸಿಬ್ಬಂದಿಗಳೊಂದಿಗೆ ನಾಕಾಬಂದಿ ಮಾಡಿ ವಾಹನಗಳನ್ನು ಚೆಕ್ ಮಾಡುತ್ತಿರುವಾಗ ಸುಮಾರು 03-45 ಗಂಟೆಗೆ ಬಂದ ಟೋಯಟಾ ಫಾರ್ಚೂನರ್ ಮತ್ತು ಕ್ರೇಟಾ ಕಾರನ್ನು ತಡೆದು ನಿಲ್ಲಿಸಿದಾಗ ಫಾರ್ಚುನರ್ ಕಾರಿನಲ್ಲಿದ್ದ ಮೂವರು ಆರೋಪಿಗಳು ವಾಹವನ್ನು ಬಿಟ್ಟು ಓಡಿ ಹೊಗಿದ್ದು ಕ್ರೇಟಾ ಕಾರಿನಲ್ಲಿದ್ದ ಇಬ್ಬರು ಓಡಲು ಪ್ರಯತ್ನಿಸಿದಾಗ ಸಿಬ್ಬಂದಿಗಳೊಂದಿಗೆ ಸೇರಿ ಅವರನ್ನು ಹಿಡಿಯಲಾಯಿತು. ವಿಚಾರಿಸಿದಾಗ ತಾವು ಶಿರಸಿಗೆ ದನಗಳ್ಳತನ ಮಾಡುವ ಉದ್ದೇಶದಿಂದ ಬಂದಿರುತ್ತೇವೆ ಮತ್ತು ಅವರು ಈ ಹಿಂದೆ ಶಿರಸಿಯಲ್ಲಿ ದನಗಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿರುತ್ತಾರೆ. ಇವರಲ್ಲಿ ಒಬ್ಬನ ಹೆಸರು 1) ಅಬ್ದುಲ್ ಅಜೀಜ್ ತಂದೆ ಅಬ್ದುಲ್ ಗಫಾರ ಪ್ರಾಯ 29 ವರ್ಷ ವೃತ್ತಿ ಮಟನ್ ವ್ಯಾಪಾರ ಸಾ|| ಸೂಲೇಬೈಲ್, ಈದ್ಗಾನಗರ, ಮತ್ತೂರ ರಸ್ತೆ, ಶಿವಮೊಗ್ಗ, 2) ಫೈಜಲ್ ತಂದೆ ಅಬ್ದುಲ್ ರಜಾಕ್ ಪ್ರಾಯ 36 ವರ್ಷ ವೃತ್ತಿ ಚಾಲಕ ಸಾ|| ಬದ್ರಿಯಾನಗರ, ಕೊಂಚಾರು, ಕೊಳಂಜೆ, ಬಜಪೆ ದಕ್ಷಿಣ ಕನ್ನಡ ಅಂತಾ ಹೇಳಿದ್ದು ಓಡಿ ಹೊದವರ ಬಗ್ಗೆ ವಿಚಾರಿಸಲಾಗಿ 1) ಇಮ್ರಾನ್ @ ಬಾಬು 2) ಅಂಡು @ ಅಯಾಸ್ 3) ರೆಹೆಮಾನ್ ಎಲ್ಲಾರು ಶಿವಮೊಗ್ಗ ನಿವಾಸಿಗಳು ಎಂದು ಹೇಳಿರುತ್ತಾರೆ.

ಈ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಶಿರಸಿ ಹೊಸ ಮಾರುಕಟ್ಟೆ ಪೊಲೀಸ ಠಾಣೆಯ 02 ಪ್ರಕರಣಗಳು ಮತ್ತು ಶಿರಸಿ ನಗರ ಠಾಣೆಯ 01 ಪ್ರಕರಣ ಭೇದಿಸಲಾಗಿದೆ. ಈ ಕಾರ್ಯಚರಣೆಯು ರವಿ ನಾಯ್ಕ, ಡಿ.ಎಸ್.ಪಿ. ಶಿರಸಿ ರವರ ಮಾರ್ಗದರ್ಶನದಲ್ಲಿ ಶ್ರೀ ರಾಮಚಂದ್ರ ನಾಯಕ ಸಿ.ಪಿ.ಐ ಶಿರಸಿ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ ಠಾಣೆಯ ಉಪ ನಿರೀಕ್ಷಕರಾದ ಶ್ರೀ ಭೀಮಾಶಂಕರ ಸಿನ್ನೂರ ಸಂಗಣ್ಣ, ಹಾಗೂ ಸಿಬ್ಬಂಧಿಯವರಾದ ಶ್ರೀ ಮೊಹಮ್ಮದ ಇಸ್ಮಾಯಿಲ್ ಕೋಣನಕೇರಿ, ಶ್ರೀ ರಾಮಯ್ಯ ಪೂಜಾರಿ, ಶ್ರೀ ಮಹಾಂತೇಶ ಬಾರಕೇರ, ಶ್ರೀ ರೋನಾಲ್ಡ್ ಆಲ್ಮೇಡಾ, ಶ್ರೀ ಅಶೋಕ ನಾಯ್ಕ, ಶಿರಸಿ ಗ್ರಾಮೀಣ ಪೊಲೀಸ ಠಾಣೆಯ ಶ್ರೀ ಚೇತನ ನಾಯ್ಕ, ಶ್ರೀ ಪ್ರದೀಪ ರೇವಣಕರ ಹಾಗೂ ಶಿರಸಿ ನಗರ ಠಾಣೆಯ ಶ್ರೀ ರಾಮದೇವ ಗಾಂವಕರ, ಹಾಗೂ ಚಾಲಕರಾದ ಶ್ರೀ ಪಾಂಡು ನಾಗೋಜಿ, ಶ್ರೀ ಮೋಹನ ನಾಯ್ಕ ಇವರು ಭಾಗವಹಿಸಿ ಆರೋಪಿತರನ್ನು ವಶಕ್ಕೆ ಪಡೆಯುವಲ್ಲಿ ಸಹಕರಿಸಿದ್ದು, ಸಿರ್ಸಿ ಪೊಲೀಸ್ ರ ಈ ಕಾರ್ಯಾಚರಣೆಯನ್ನು ಪ್ರಶಂಸಿಸಲಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *