

ನುಡಿ ಕನ್ನಡ, ನಡೆ ಕನ್ನಡ, ಕನ್ನಡವೇ ನಮ್ಮ ಉಸಿರು ಎಂದು ಹೇಳುವ ನವೆಂಬರ್ ಒಂದರ ರಾಜ್ಯೋತ್ಸವ ದಿನ ಕನ್ನಡವೇ ಉಸಿರು ಕನ್ನಡವೇ ಹೆಸರು ಎನ್ನುವಂತೆ ಸಮುದ್ರದಾಳದಲ್ಲಿ ಕನ್ನಡಧ್ವಜವನ್ನು ಹಾರಿಸಿ ಕೀರ್ತಿ ಪತಾಕೆ ಏರಿಸಿದ ಸಾಹಸ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಭಟ್ಕಳದ ನೇತ್ರಾಣಿ ಎಡವೆನ್ಚರ್ಸ್ ಮುರಡೇಶ್ವರ ಸ್ಕೂಬಾ ಡೈವಿಂಗ್ ತಂಡ ಇಂದು ೨೦ ಅಡಿ ಉದ್ದದ ಹಳದಿ-ಕೆಂಪು ಕನ್ನಡಧ್ವಜವನ್ನು ೧೦ ಮೀಟರ್ ಆಳದ ಸಮುದ್ರದಲ್ಲಿ ಹಾರಾಡಿಸುವ ಮೂಲಕ ಕನ್ನಡಪ್ರೇಮ ಮೆರೆಯಿತು.
ಬೆಂಗಳೂರಿನ ನಾಲ್ಕುಜನ ಅತಿಥಿಗಳ ಜೊತೆ ಸೇರಿದ ಇಲ್ಲಿಯ ಡೈವಿಂಗ್ ಮಾಸ್ಟರ್ ಗಣೇಶ್ ಹರಿಕಂತ್ರ ತಮ್ಮ ಡೈವಿಂಗ್ ಪರಿಣತರ ತಂಡದ ಅನೀಶ್,ನವೀನ್,ಮೊಯಿನ್ ಜೊತೆ ಸೇರಿ ಈ ಸಾಹಸ ಮಾಡಿದರು.
ಬಲುಅಪರೂಪದ ಈ ಸಾಹಸ ಮಾಡಿದ ನೇತ್ರಾಣಿ ಎಡವೆಂನ್ಚರ್ಸ ನ ಈ ಸಾಹಸಕ್ಕೆ ಕನ್ನಡಿಗರು ಭೇಷ್ ಎಂದಿದ್ದು ಸಮುದ್ರದಾಳದಲ್ಲಿ ಹಾರಾಡಿ, ತೇಲಾಡಿ ಕನ್ನಡ ಪ್ರೇಮ ಮೆರೆದ ವಿಡಿಯೋ ಈಗ ವೈರಲ್ ವಿಡಿಯೋ ಆಗಿ ಪ್ರಸಿದ್ಧವಾಗಿದೆ. ಆಕಾಶ,ಮುಗಿಲು,ಸಮುದ್ರ ಎಲ್ಲೆಲ್ಲೂ ಹಾರಾಡಿದ ಕನ್ನಡ ಧ್ವಜ ಕನ್ನಡಿಗರ ರೋಮಾಂಚನಕ್ಕೆ ಕಾರಣವಾಗಿರುವುದು ಇಂದಿನ ರಾಜ್ಯೋತ್ಸವದ ವಿಶೇಶ.
