

ತಾನು ಶಾಸಕನಾದರೆ ಶಾಸಕರಿಗೆ ನೀಡುವ ಗೌರವಧನ, ಭತ್ಯೆಗಳೆಲ್ಲಾ ಸೇರಿ ವರ್ಷಕ್ಕೆ ದೊರೆಯುವ ಮೂವತ್ತು ಲಕ್ಷರೂಪಾಯಿಗಳನ್ನು ಸ್ವಂತ: ಕ್ಕೆ ಬಳಸದೆ ಅದರಲ್ಲಿ ಶಾಲಾಮಕ್ಕಳಿಗೆ ಬ್ಯಾಗ್ ವಿತರಿಸುತ್ತೇನಿ ಎಂದು ಭರವಸೆ ನೀಡಿರುವ ಶಿರಸಿ ಕ್ಷೇತ್ರದ ಜೆ.ಡಿ.ಎಸ್. ಅಭ್ಯರ್ಥಿ ಉಪೇಂದ್ರ ಪೈ ಉಳಿ ದ ಅಭ್ಯರ್ಥಿಗಳೂ ಹೀಗೆ ಮಾಡುತ್ತಾರಾ ಕೇಳಿ ನೋಡಿ ಹಾಗೇನಾದರೂ ಎಲ್ಲರೂ ಈ ಚಾಲೇಂಜ್ ಗೆ ಒಪ್ಪಿದರೆ ನಿಕಟಪೂರ್ವ ಶಾಸಕರಿಗೆ ಮೂವತ್ತು ವರ್ಷಗಳ ಬಾಕಿ ಕೊಡುವ ಜವಾಬ್ಧಾರಿ ಹೆಗಲೇರುತ್ತದೆ ಎಂದು ಪರೋಕ್ಷವಾಗಿ ವಿಶ್ವೇಶ್ವರ ಹೆಗಡೆಯವರನ್ನು ತಿವಿದಿದ್ದಾರೆ.
ಸಿದ್ಧಾಪುರದಲ್ಲಿ ನಡೆದ ನಗರ ಘಟಕದ ಸಮಾಲೋಚನಾ ಸಭೆಯಲ್ಲಿ ಜೆ.ಡಿ.ಎಸ್. ಗೆ ಹೊಸ ಕಾರ್ಯಕರ್ತರನ್ನು ಸೇರ್ಪಡೆಮಾಡಿಕೊಂಡು ಮಾತನಾಡಿದ ಅವರು ಜನಪ್ರತಿನಿಧಿಯಾಗುವವನು ಜನಪರ ಇರಬೇಕು. ಕಾಮಗಾರಿಗಳ ಕಮೀಷನ್ ಪಡೆದು ಶಾಸಕಗಿರಿ ಮಾಡುವವನು ಜನಪ್ರತಿನಿಧಿಯಾಗುವುದಿಲ್ಲ ಎಂದು ಕುಟುಕಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕಾ ಜಾ.ದಳದ ಅಧ್ಯಕ್ಷ ಸತೀಶ್ ಹೆಗಡೆ ಜೆ.ಡಿ.ಎಸ್. ನಲ್ಲಿ ಯಾರು ಶಾಸಕರು, ಯಾರು ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಎನ್ನುವ ವಿಷಯಗಳೆಲ್ಲಾ ಸ್ಫಷ್ಟವಾಗಿವೆ. ರಾಷ್ಟ್ರೀಯ ಪಕ್ಷಗಳಿಗೆ ಇವುಗಳೇ ಗೊಂದಲವಾಗಿದ್ದು ಅವರು ಗೆಲ್ಲಲು ಪ್ರಯತ್ನಿಸುವುದ್ಯಾವಾಗ ಎಂದು ಲೇವಡಿ ಮಾಡಿದರು. ಜೆ.ಡಿ.ಎಸ್. ಮುಖಂಡರಾದ ರಾಜುಗೊಂಡ, ಕೆ.ಬಿ.ನಾಯ್ಕ ಮಾತನಾಡಿದರು.
