ಉ.ಕ.ದಲ್ಲಿ ಈಗ ಉಚ್ಛಾಟನಾ ಪರ್ವ!

ನಿರೀಕ್ಷೆಯಂತೆ ಉತ್ತರ ಕರ್ನಾಟಕ, ಉತ್ತರ ಕನ್ನಡ ಸೇರಿದಂತೆ ರಾಜ್ಯದಲ್ಲಿ ಬಿ.ಜೆ.ಪಿ. ಸೋತಿದೆ.

ಜಾದಳದ ಅಥವಾ ಇತರ ಜಾತ್ಯಾತೀತ ಪಕ್ಷಗಳ ಮತಗಳನ್ನು ಕಾಂಗ್ರೆಸ್‌ ಕ್ರೋಢೀಕರಿಸಿದ್ದರಿಂದ ಬಿ.ಜೆ.ಪಿ. ಹೀನಾಯವಾಗಿ ಸೋತಿದೆ ಎಂದು ಬಿ.ಜೆ.ಪಿ. ಆತ್ಮಾವಲೋಕನ ಮಾಡಿಕೊಳ್ಳತೊಡಗಿದೆ.

ವಾಸ್ತವವೆಂದರೆ ಬಿ.ಜೆ.ಪಿ. ಸೋಲಿನಲ್ಲಿ ಹಿಂದೂ ಎಂದುಕೊಂಡು ಕಾರ್ಯಾಚರಿಸುವ ಹಿಂದುತ್ವ ವಾದದ ವೈದಿಕತೆಯಿಂದ ಬಿ.ಜೆ.ಪಿ. ಸೋತಿದೆ.

ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ,ಹಳೆಮೈಸೂರು ಭಾಗಗಳಲ್ಲಿ ಬಿ.ಜೆ.ಪಿ. ಆಡಳಿತದಲ್ಲಿ ಭಜರಂಗಿಗಳ ಉಪಟಳ ಹೆಚ್ಚಿತ್ತು. ದೇಶಪ್ರೇಮ, ರಾಷ್ಟ್ರೀಯತೆ,ಹಿಂದುತ್ವ ಎನ್ನುವ ಪರಿವಾರಿಗಳು ರಾಜ್ಯದ ಕಾನೂನು ಸುವ್ಯವಸ್ಥೆಗೆ ಭಂಗ ತರುತಿದ್ದರೆ ಬಿ.ಜೆ.ಪಿ ಆಡಳಿತದು ದ್ದಕ್ಕೂ ಆಡಳಿತಶಾಹಿ ಬ್ರಷ್ಟವಾಗಿ ರಾಜ್ಯದೆಲ್ಲೆಡೆ ಸ್ವಜನಪಕ್ಷಪಾತ ವಿಪರೀತವಾಗಿ ಈ ಅಸಹ್ಯಗಳನ್ನು ಮರೆಮಾಚಲು ಹಿಂದುತ್ವ, ದೇಶಪ್ರೇಮ, ರಾಷ್ಟ್ರೀಯತೆ ಎಂದು ಪ್ರಚಾರ, ಪ್ರಸಾರ ಮಾಡಿಬಿಟ್ಟರೆ ಕನ್ನಡಿಗರು ಬಿ.ಜೆ.ಪಿ. ಕೈ ಹಿಡಿಯುತ್ತಾರೆ ಎಂದು ಗುಜರಾತಿಗಳು ಭ್ರಮಿಸಿದ್ದ ಕಪಟತನ ಕನ್ನಡಿಗರಿಗೆ ಅರ್ಥವಾಯಿತು.

ಜಾತ್ಯಾತೀತ ಜನತಾದಳ ಅಸ್ಥಿತ್ವಕ್ಕಾಗಿ ಬಿ.ಜೆ.ಪಿ. ಬೆಂಬಲಿಸಿದರೂ ಅದು ಅಹಿಂದ ಗಳಿಗೆ ಆಗುವ ಹಾನಿ, ಅವಮಾನ ಎನ್ನುವ ಸತ್ಯವನ್ನು ಮತದಾರರಿಗೆ ತಿಳಿಸುವಲ್ಲಿ ಕಾಂಗ್ರೆಸ್‌ ಗೆದ್ದಿತು. ಜೊತೆಗೆ ಬಿ.ಜೆ.ಪಿ.ಯ ಸುಳ್ಳು,ಕೋಮುವಾದದ ತಂತ್ರಗಳಿಂದ ನಾವೇನಾದರೂ ಯಾಮಾರಿದರೆ ಈ ದೇಶಕ್ಕೆ ಭವಿಷ್ಯವಿಲ್ಲ ಎಂದು ಅರಿತ ಅಹಿಂದ್‌ ಸಮೂದಾಯ ಜಾಗೃತವಾಗುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಗತಿಪರ ಮನಸ್ಸುಗಳು ದುಡಿದವು.

ಮಾರಿಕೊಂಡ ಮಾಧ್ಯಮಗಳು ಮೋದಿ, ಹಿಂದುತ್ವ, ರಾಷ್ಟ್ರೀಯತೆ, ದೇಶದ ಸುರಕ್ಷತೆ ಎನ್ನುವ ಶಬ್ಧಗಳು ಮಲಿನವಾಗಿವೆಎಂದರಿತ ಜಾಗೃತ ಕನ್ನಡ ಮನಸ್ಸುಗಳು ಮಾಧ್ಯಮ, ಸಾಮಾಜಿಕ ಮಾಧ್ಯಮಗಳ ಮೂಲಕ ಪರ್ಯಾಯ ಶಕ್ತಿಗಳಾಗಿ ದುಡಿದವು ಇದರ ಪರಿಣಾಮ ಕಾಂಗ್ರೆಸ್‌ ಗೆ ೧೩೫ ಸಂಖ್ಯೆಗಳು ದೊರೆತು ಮೋದಿ-ಷಾ ಕನ್ನಡಿಗರನ್ನು ಕಂಡರೆ ಹೆದರುವಂತಾಯಿತು.

ಇದೇ ಮೋದಿ-ಷಾ, ಮಾಧ್ಯಮಗಳನ್ನು ಹತ್ತು ವರ್ಷಗಳ ಹಿಂದೆ ನಂಬುತಿದ್ದ ಜನರು ೨೦೨೩ ರಲ್ಲಿ ಈ ಪರಿವಾರದ ಆಶಾಢಭೂತಿತನದ ವಿರುದ್ಧ ಜಾಗೃತರಾದರು. ಇಷ್ಟೆಲ್ಲಾ ಆದ ಮೇಲೆ ವರುಣಾದಲ್ಲಿ ಸೋತ ಸೋಮಣ್ಣ ತನ್ನ ಸೋಲಿನ ಹಿಂದೆ ಬಿ.ಜೆ.ಪಿ. ಯ ಷಡ್ಯಂತ್ರವಿದೆ ಎಂದು ಶಪಿಸತೊಡಗಿದ್ದಾರೆ.

ಸ್ವಜನ ಪಕ್ಷಪಾತ,ಕೋಮುವಾದಿ ನೀತಿಗಳಿಂದ ಜೀವಮಾನದಲ್ಲಿ ಮೊದಲ ಬಾರಿ ಸೋತ ಮಾಜಿ ಸ್ಫೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವಪಕ್ಷ, ಕಾಂಗ್ರೆಸ್‌ ಸೇರಿದಂತೆ ಇಡೀ ರಾಜ್ಯದ ಜನರನ್ನು ಅವಮಾನಿಸತೊಡಗಿದರು!.

ತೇಜಸ್ವಿ ಸೂರ್ಯ, ಪ್ರತಾಪಸಿಂಹ, ಚಕ್ರವರ್ತಿ ಸೂಲಿಬೆಲೆ ಮಹೇಶ್‌ ಹೆಗಡೆಗಳೆಲ್ಲಾ ಮತಿವಿಕಲರಂತೆ ವರ್ತಿಸತೊಡಗಿದರು. ಇಂಥ ಮರೆಯದ ಏಟು ಕೊಟ್ಟ ಕನ್ನಡಿಗರು ದೇಶದ ದಕ್ಷಿಣ ಭಾರತೀಯರು ಉತ್ತರ ಭಾರತೀಯರಂತೆ ಸಮೂಹಸನ್ನಿಗೊಳಗಾಗದ ಪ್ರಜ್ಞಾವಂತರು ಎನ್ನುವುದನ್ನು ನಿರೂಪಿಸಿದರು.

ಈ ಫಲಿತಾಂಶ, ಬದಲಾವಣೆ ಕನಿಷ್ಟ ೫ ವರ್ಷಗಳ ಹಿಂದೇ ಆಗಿದ್ದರೆ……

ಸಿ.ಟಿ. ರವಿಯಂಥವರು ರಾಷ್ಟ್ರಮಟ್ಟದಲ್ಲಿ ಕನ್ನಡಿಗರ ಮಾನ ಕಳೆಯುವಂತೆ ಆಗುತ್ತಿರಲಿಲ್ಲ.

ಈಗ ಶಿರಸಿ-ಸಿದ್ಧಾಪುರ ಕ್ಷೇತ್ರದಲ್ಲಿ ಬಿ.ಜೆ.ಪಿ. ರಾಜ್ಯ ಕಾರ್ಯಕಾರಿ ಸಮೀತಿ ಸದಸ್ಯ ಕೆ.ಜಿ. ನಾಯ್ಕ ಸೇರಿದಂತೆ ಅವರ ಬಣದ ಕೆಲವರನ್ನು ಉಚ್ಛಾಟಿಸುವಂತೆ ಪಕ್ಷದ ಜಿಲ್ಲಾ ಘಟಕಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ತಾಲೂಕಾ ಮಂಡಳಗಳ ಮೂಲಕ ದೂರು ನೀಡಿದ್ದಾರೆ.

ಕುಮಟಾದಲ್ಲಿ ಪಕ್ಷದ್ರೋಹಿಗಳನ್ನು ಉಚ್ಛಾಟಿಸುವಂತೆ ಮತದಾನದ ಮೊದಲೇ ತಲೆಮರೆಸಿಕೊಂಡ ಕುಮಟಾ ಕ್ಷೇತ್ರದ ಆಮದು ಅಭ್ಯರ್ಥಿ ನಿವೇದಿತ್‌ ಆಳ್ವ ದೂರು ನೀಡಿದ್ದಾರೆ.

ಇದೇ ಸ್ಥಿತಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಕುಮಟಾ,ಯಲ್ಲಾಪುರ, ಕಾರವಾರ ಸೇರಿದಂತೆ ಕನಿಷ್ಟ ೫೦ ಕ್ಷೇತ್ರಗಳಲ್ಲಿದೆ.

ಕಾಂಗ್ರೆಸ್‌ ನ ಗೆಲುವು ಕೊಟ್ಟ ಹೊಡೆತದಿಂದ ಚೇತರಿಸಿಕೊಳ್ಳಲು ಸಾಧ್ಯವಿಲ್ಲದ ಬಿ.ಜೆ.ಪಿ., ಜೆ.ಡಿ.ಎಸ್.‌ ಗಳು ರಾಜ್ಯದಲ್ಲಿ ಅನ್ಯರನ್ನು ಟೀಕಿಸುವ ನೈತಿಕತೆ, ಯೋಗ್ಯತೆ ಕಳೆದುಕೊಂಡಿವೆ. ಕರ್ನಾಟಕ ಕೊಟ್ಟ ಈ ಮೆಸೆಜ್‌ (ಸಂದೇಶ) ಭಾರತದ ಇತರ ಭಾಗಗಳ ಜನರು, ವಿಶೇಶವಾಗಿ ಉತ್ತರ ಭಾರತೀಯರಿಗೆ ಅರ್ಥವಾದರೆ ಶ್ರೀಮಂತ ಅದಾನಿ.ಅಂಬಾನಿಗಳ ಸೇವೆಯ ಜೊತೆಗೆ ಶ್ರೀಮಂತ ಮೇಲ್ವರ್ಗವೇ ಭಾರತ ಎಂದುಕೊಂಡಿರುವ ಮತಾಂಧ ಬಿ.ಜೆ.ಪಿ. ಆರೆಸ್ಸೆಸ್‌ ಗಳ ಭ್ರಮೆ ಕಳಚಿ ಮತಾಂಧ ಸೋಗಲಾಡಿ ಹಗಲುದರೋಡೆಕೋರ ಸಂಘಿಗಳಿಂದ ಭಾರತಮಾತೆಯನ್ನು ಪಾರು ಮಾಡಬಹುದು.

ಕಾಂಗ್ರೆಸ್‌ ಗ್ಯಾರಂಟಿಗಳ ಜೊತೆಗೆ ಜನಸಾಮಾನ್ಯ ಬಹುಜನರನ್ನು ಬಲಗೊಳಿಸುವತ್ತ ಕೂಡಾ ಕಾರ್ಯಪ್ರವ್ರತ್ತವಾಗಲು ಇದೇ ಸಕಾಲ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *