ಉತ್ತರ ಕನ್ನಡ ಸಾಹಿತ್ಯ, ಪರಿಷತ್‍ಗೆ ಹೊಸದಿಕ್ಕು ಕೊಟ್ಟ ನಾಯಕ ಯಾರು ಗೊತ್ತಾ?

ಹಠ-ಛಲಗಳಿಲ್ಲದಿದ್ದರೆ ಬದುಕು ನಿಸ್ಸಾರ ಎನ್ನುವ ಮಾತೊಂದಿದೆ. ಅದನ್ನೇ ಲಂಕೇಶ್ ಹೀಗೆ ಹೇಳುತ್ತಾರೆ
‘ಮನುಷ್ಯ ಎಷ್ಟು ವಿಚಿತ್ರ ಅವನಿಗೆ ಸಂಪತ್ತು ವಿದ್ಯೆ, ಕಲೆ ಎಲ್ಲವೂ ಬೇಕು ಆದರೆ ಆತ ಯಾವುದೋ ಅಸಹ್ಯ ಜಿದ್ದಿನಿಂದ
ಬದುಕುತ್ತಾನೆ.
ಅದಿಲ್ಲದಿದ್ದರೆ ಅವನು ಬದುಕೋದಕ್ಕೆ ಕಾರಣವೇ ಸಿಗಲ್ಲ’ ಈ ಬರಹದ ಬಗ್ಗೆ ಯೋಚಿಸುತ್ತಾ ನನಗೊಬ್ಬ ವ್ಯಕ್ತಿ
ನೆನಪಾಗುತ್ತಾರೆ.
ಆತ ಒಬ್ಬ ಸಾಮಾನ್ಯ ನೌಕರನ ಮಗ. ಆ ಕಾಲದಲ್ಲಿ ನೌಕರಿಗಿಂತ ಕೃಷಿ ಚಾಕರಿ ಸಾಮಾಜಿಕ ಹೋರಾಟ,
ಸಾಹಿತ್ಯ ಸೇವೆಗಳಿಗೆ ಹೆಚ್ಚಿನ ಮಹತ್ವವಿದ್ದ ಕಾಲ. ಬಹುಶಃ ಗಳಿಕೆಗೆ ಎಲ್ಲ ಕಾಲದಲ್ಲೂ ವಿಶೇಶ ಮಹತ್ವ ಇರುವುದರಿಂದ ಆ
ಕಾಲದಲ್ಲೂ ಗಳಿಕೆಯ ನೌಕರಿ, ಗುತ್ತಿಗೆ ಮತ್ತೇನೇನೋ ವಿನಾಕಾರಣ ಪ್ರಾಮುಖ್ಯತೆ ಪಡೆದುಕೊಂಡ ಸಮಯ. ಆಗ ಈ
ವ್ಯಕ್ತಿ ಪರಿಶ್ರಮದಿಂದ ದುಡಿದು ಶಿಕ್ಷಕನಾಗಲು ಪ್ರಯತ್ನಿಸಿ ಗೆಲ್ಲುತ್ತಾರೆ.
ಆ ನಂತರ ಅಲ್ಲಿಂದ ಸ್ಫರ್ಧಾತ್ಮಕ ಪರೀಕ್ಷೆಯಲ್ಲಿ ಜಯಿಸಿ,ಹಿರಿಯ ಅಧಿಕಾರಿಯಾಗಿ
ಕರ್ತವ್ಯ ನಿರ್ವಹಿಸುತ್ತಾರೆ.
ಆಗಲೂ ಇವರ ಒಳಮನಸ್ಸು ‘ಇರುವುದೆಲ್ಲವ ಬಿಟ್ಟು’ ಸಾಹಿತ್ಯ, ಹೋರಾಟ, ಪತ್ರಿಕೋದ್ಯಮದ
ಬಗ್ಗೆ ತುಡಿಯುತ್ತದೆ. ಮನಸ್ಸು ಸಾಹಿತ್ಯ, ಸಾಂಸ್ಕøತಿಕ ಕೆಲವೊಮ್ಮೆ ರಾಜಕಾರಣಗಳ ಆಸು-ಪಾಸು ಸುಳಿಯದಿದ್ದರೆ
ಆಸೆಬುರುಕುತನ ಎಂಥವನನ್ನೂ ನಾಶಮಾಡುವ ಮಟ್ಟಕ್ಕೆ ಬೆಳೆಯುತ್ತದೇನೋ! ಅದಕ್ಕೆ ಅನೇಕ ದೃಷ್ಟಾಂತಗಳೂ ಇವೆ. ಆದರೆ
ಮುಕ್ತಮನಸ್ಸು ಕಲೆ, ಸಾಹಿತ್ಯ ಸಂಸ್ಕøತಿ ಸಾಂಸ್ಕøತಿಕ ಅಭ್ಯಾಸಗಳಿಗೆ ಒಗ್ಗಿಕೊಳ್ಳದಿದ್ದರೆ ಲೆಕ್ಕಾಚಾರ ಬ್ರಷ್ಟಾಚಾರಗಳಿಗೆ
ತುತ್ತಾಗುವ ಅಪಾಯ ಎದುರಾಗುತ್ತೆ.
ಆದರೆ ಒಬ್ಬ ಉನ್ನತ ಅಧಿಕಾರಿ ಕಾವ್ಯ, ಕಾದಂಬರಿ, ಕಥೆ, ಲೇಖನಗಳಂಥ ಸೃಜನಶೀಲ
ಚಟುವಟಿಕೆಗಳಿಗೆ ತನ್ನ ಸಮಯ ಕೊಡತೊಡಗಿದರೆ ಆತ ಮಲಿನವಾಗದಂತೆ ಕಾಪಾಡಿಕೊಳ್ಳಬಲ್ಲ.
ನನ್ನ ಕಥಾ ನಾಯಕ
ಹಿರಿಯ ಅಧಿಕಾರಿಯಾಗಿ ತನ್ನ ಕೆಲಸದೊಂದಿಗೆ ಕಥೆ-ಲೇಖನ, ಕವನ, ಪತ್ರಿಕೆ ಹೀಗೆ ತನ್ನ ಸಕಲವನ್ನೂ ವೃತ್ತಿ-ಪ್ರವೃತ್ತಿಗೆ
ಅರ್ಪಿಸಿಕೊಂಡ, ಸರ್ಕಾರಿ ಹುದ್ದೆ ಕೊಡುವ ಅನುಕೂಲ, ಭದ್ರತೆಗಿಂತ ಒಂದು ಸೇವಾಮನೋಭಾವದ ಸಂಘಟನೆ ಅವರನ್ನು
ಸೆಳೆಯಿತು.
ಸಾಹಿತ್ಯ ಕೃಷಿ ನೌಕರಿಗಳನ್ನೆಲ್ಲಾ ಬಿಟ್ಟು ಸಾಹಿತ್ಯ ಪರಿಷತ್ತನ್ನು ಕಟ್ಟುವ ಕೆಲಸಕ್ಕೆ ಇವರು ಒಗ್ಗಿಕೊಂಡರು. ಪಟ್ಟಣ,
ನಗರ, ಗ್ರಾಮ, ಕುಗ್ರಾಮಗಳೆನ್ನದೆ ಸಾಹಿತ್ಯ ಪ್ರಚಾರ, ಸಂಘಟನೆಯಲ್ಲಿ ತೊಡಗಿಕೊಂಡರು.
ಅವರು ತನ್ನ ಹುಟ್ಟೂರನ್ನೇ
ಕೇಂದ್ರವಾಗಿಟ್ಟುಕೊಂಡು. ಜಿಲ್ಲಾ ಸಾಹಿತ್ಯ ಪರಿಷತ್ ಚಟುವಟಿಕೆ ಪ್ರಾರಂಭಿಸಿದರು. ಸಾಹಿತ್ಯ, ಸೃಜನಶೀಲತೆ
ಸಾಮಾನ್ಯನಿಗಲ್ಲ ಎನ್ನುವ ಅಭಿಪ್ರಾಯ ಬದಲಿಸಿ, ಜನಸಾಮಾನ್ಯರನ್ನೂ ಸಾಹಿತ್ಯ ಪರಿಷತ್ ಸದಸ್ಯರನ್ನಾಗಿಸಿದರು. ಇವರ
ನೇತೃತ್ವದಲ್ಲಿ ಗ್ರಾಮ. ಪಟ್ಟಣಗಳಲ್ಲೆಲ್ಲಾ ಸಾಹಿತ್ಯ ಚಟುವಟಿಕೆ ವಿಸ್ತರಿಸುತ್ತಾ ಜಾತ್ಯಾತೀತವಾದ ಯುವ ಪಡೆಯೊಂದು
ತಯಾರಾಯಿತು. ಇದು ಉತ್ತರಕನ್ನಡ ಸಾಹಿತ್ಯ ಪರಿಷತ್ ಹಿಂದಿನಅಧ್ಯಕ್ಷ ರೋಹಿದಾಸ್ ನಾಯ್ಕರ ಪರಿಚಯ.
ಉತ್ತರಕನ್ನಡದಲ್ಲಿ
ಸಾಹಿತ್ಯ, ಸಾಹಿತ್ಯ ಚಟುವಟಿಕೆಗಳು ಜಡ್ಡುಗಟ್ಟಿದ ಅವಧಿಯಲ್ಲಿ ಪರಿಷತ್ ಮತ್ತು ಸಾಹಿತ್ಯವಲಯಕ್ಕೇ ಹೊಸ ಚಲನಶೀಲತೆ
ತಂದುಕೊಟ್ಟ ಅಧ್ಯಕ್ಷರಿವರು.
ಸಾಹಿತಿ ಸಾಹಿತ್ಯ, ಕಾವ್ಯ, ಕಥೆ ಎಲ್ಲವೂ ‘ಜಾತಿ’ ವರ್ಗ, ಧರ್ಮ ಹಿತಾಸಕ್ತಿಯನ್ನೇ
ಕೇಂದ್ರವಾಗಿಟ್ಟುಕೊಂಡರೆ ವಾಸ್ತವ ವರ್ತಮಾನಕ್ಕೆ ಅನ್ಯಾಯವಾಗುತ್ತದೆ. ಅಂಥದೊಂದು ನಿರಂತರ ಅನ್ಯಾಯವನ್ನು
ಅನುಭವಿಸಿಕೊಂಡು ಬಂದ ಉತ್ತರಕನ್ನಡ ಸಾಹಿತ್ಯ ಪರಿಸರಕ್ಕೆ ರೋಹಿದಾಸ ನಾಯಕರ ಸಾಹಿತ್ಯ ನೇತೃತ್ವ ಹೊಸ ಹೊಳಹು,
ಹೊಸದಾರಿಗೆ ಎಡೆಮಾಡಿಕೊಟ್ಟಿತು.
ಅದರ ಪರಿಣಾಮ ತಬ್ಬಲಿ ಜಾತಿಗಳ ಸೃಜನಶೀಲರಿಗೆ ವಿಶ್ವಾಸ ಮೂಡುವಂತಾಯಿತು.
ಎಲ್ಲವನ್ನೂ ಸರ್ಕಾರದ ಮೀಸಲಾತಿಯಿಂದಲೇ ಸಾಧಿಸಿಕೊಳ್ಳಬೇಕೆಂಬ ದಲಿತರು, ದಮನಿತರ ಕ್ರೂರ ವಾಸ್ತವವನ್ನು
ಸಹ್ಯವಾಗಿಸುವಲ್ಲಿ ರೋಹಿದಾಸರ ಎರಡ್ಮೂರು ದಶಕದ ಸಾಹಿತ್ಯ ಸಾಹಿತ್ಯ ಸೇವೆ ಕೆಲಸಮಾಡಿದೆ. ಆಳ ಅರಸರ ಕಾಲದ
ಬುದ್ಧಿಜೀವಿಗಳಂತೆ,ಪ್ರಭುತ್ವ ಮಠ, ಜಾತಿ, ಧರ್ಮ ಮೀರದ ಬರಹಗಾರ ಶುಷ್ಕ ಪಂಡಿತ. ಆದರೆ ಒಂದು ವಿಮೋಚನೆ ಅದರ
ವಿರೋಧಿಗಳು ಎಲ್ಲರ ಕಣ್ಣು-ಬಾಯಿಗೆ ಆಹಾರವಾಗಿ ವಿನಾಕಾರಣ ದೂಷಣೆಗೆ ಒಳಗಾಗುವಂತೆ ರೋಹಿದಾಸರ ಮೇಲೆ
ಮೇಲ್ವರ್ಗ, ಮಠ, ಜಾತಿ ಆಧಾರಿತ ಲಾಭಿ ಸಂಘಟಿತ ವಿರೋಧಗಳು ನಡೆದರೂ ರೋಹಿದಾಸ ನಾಯಕ ಅದಕ್ಕೆಲ್ಲಾ ಆಯಾ
ಕಾಲದಲ್ಲಿ ಸಮರ್ಥವಾಗೇ ಉತ್ತರಿಸಿದ್ದಾರೆ, ಎದುರಿಸಿದ್ದಾರೆ.
ನೌಕರಿ, ಹಣ, ಲಾಭ, ಸ್ವಾರ್ಥಗಳನ್ನು ಮೀರದ ಇಂದಿನ ಶಿಕ್ಷಿತರ ನಡುವೆ
ರೋಹಿದಾಸ ನಾಯಕರ ಪ್ರಯತ್ನ ಸಾಧನೆ ವಿವೇಕಿಯೊಬ್ಬನ ಶ್ರೇಷ್ಠ ಪ್ರಯತ್ನ ಎಂದರೆ ತಪ್ಪಾಗಲಾರದು. ಹಿರಿಯ
ಅಧಿಕಾರಿಯಾಗಿದ್ದವರು ತಮ್ಮ ಗಳಿಕೆ, ಪ್ರಯತ್ನಗಳೆಲ್ಲವನ್ನೂ ಸಾಹಿತ್ಯ ಪರಿಷತ್‍ಗೆ ದಾರೆಎರೆದಿದ್ದರಿಂದಾಗಿ ಉತ್ತರ ಕನ್ನಡ
ಸಾಹಿತ್ಯ ವಲಯ ಜಾತಿ-ಧರ್ಮ ಗುಂಪುಗಳ ಸಂಕುಚಿತತೆಯನ್ನು ಕಳೆದುಕೊಂಡಿತು, ಎನ್ನುವ ವಾಸ್ತವ ಸಾಹಿತ್ಯದ ಸಾಧನೆ
ಈ ಸಾಧನೆಗೆ ತನು-ಮನ-ಧನದಿಂದ ದುಡಿದ ರೋಹಿದಾಸ ನಾಯ್ಕರು ಎಲ್ಲರ ಶ್ಲಾಘನೆ ಪ್ರಶಂಸೆಗೂ ಅರ್ಹರು. ಅವರು
ಬೆಳೆಸಿದ ಸಾಹಿತ್ಯ ಫಸಲು ಮುಂದೊಂದು ದಿನ ಲೆಕ್ಕಕ್ಕೂ ಸಿಗಬಹುದು ಸಾಹಿತ್ಯ ಸಾಧಕ ರೋಹಿದಾಸರಿಗೆ
ಶುಭಾಭಿನಂದನೆಗಳು

  • ಕೋಲಶಿರ್ಸಿ ಕನ್ನೇಶ್
    ಅಧ್ಯಕ್ಷರು ತಾ.ಕ.ಸಾ.ಪ.ಸಿದ್ಧಾಪುರ
    (ಉ.ಕ) (2014-15)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *