


ಕೃಷಿ ಹುಟ್ಟುವಳಿಗಳ ಸಂಸ್ಕರಣ ಮತ್ತು ಮಾರಾಟ ಸಹಕಾರಿ ಸಂಘನಿ.ಸಿದ್ಧಾಪುರದ ವಾರ್ಷಿಕ ಸರ್ವಸಾಧಾರಣ ಸಭೆ ಆಗಸ್ಟ್ ೨೬ ರ ಶನಿವಾರ ಬೆಳಿಗ್ಗೆ ೧೧-೩೦ ಕ್ಕೆ ನಡೆಯಲಿದೆ. ಈ ಸಭೆಯಲ್ಲಿ ಸಂಘದ ಕೆಲವು ಸದಸ್ಯರಿಗೆ ಸನ್ಮಾನ ನಡೆಯಲಿದ್ದು ಸರ್ವಸದಸ್ಯರೂ ಸಕಾಲದಲ್ಲಿ ಹಾಜರಾಗಲು ಸಂಘದ ಅಧ್ಯಕ್ಷ ರಮಾನಂಧ ಹೆಗಡೆ ಮಳಗುಳಿ ಕೋರಿದ್ದಾರೆ.
ಸಮಾಜಮುಖಿ ಡಾಟ್ ನೆಟ್ ಪ್ರತಿನಿಧಿ ಜೊತೆ ಮಾತನಾಡಿದ ಅವರು ನನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತಿದ್ದೇನೆ. ಸಂಘದ ಸದಸ್ಯರು ಇಲ್ಲಿಯೇ ಹಣಕಾಸಿನ ವ್ಯವಹಾರ ಮಾಡಲು ಅನುಕೂಲವಾಗುವಂತೆ ಸಹಕಾರಿಯ ಬ್ಯಾಂಕಿಂಗ್ ವ್ಯವಸ್ಥೆಯೂ ಸೇರಿದಂತೆ ಸಂಸ್ಥೆಯ ಅಭಿವೃದ್ಧಿ,ಬೆಳವಣಿಗೆಗೆ ಪೂರಕ ಕೆಲಸ ಮಾಡಲು ಶಕ್ತಿ ಮೀರಿ ಪ್ರಯತ್ನಿಸುತಿದ್ದೇನೆ ಎಂದರು.
ಸಂಘದ ಸದಸ್ಯರ ಪ್ರಾಮಾಣಿಕ ವ್ಯವಹಾರ ಆಡಳಿತ ಮಂಡಳಿ ನಿರ್ಧೇಶಕರು, ಸಿಬ್ಬಂದಿಗಳ ಸಹಕಾರಗಳಿಂದ ಸಂಸ್ಥೆ ಅಭಿವೃದ್ಧಿ ಪಥದತ್ತ ಮುಖಮಾಡಿದ್ದು ವರ್ಷದಿಂದ ವರ್ಷಕ್ಕೆ ಲಾಭದ ಪ್ರಮಾಣ ಹೆಚ್ಚುತ್ತಿರುವುದು ಸಮಾಧಾನ ತಂದಿದೆ ಎಂದು ವಿವರಿಸಿದರು.
