ಪೌರತ್ವಮಸೂದೆ ರಾಷ್ಟ್ರಪತಿಗಳಿ ಗೊಂದು ಮನವಿ


ಮಾನ್ಯ ರಾಷ್ಟ್ರಪತಿಗಳು
ಭಾರತ ಸರ್ಕಾರ, ನವದೆಹಲಿ
(ತಹಶಿಲ್ದಾರರು, ಸಿದ್ದಾಪುರ ರವರ ಮೂಲಕ)

ವಿಷಯ: ಡಿಸೆಂಬರ್ 19, 2019 ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ಅಖಿಲ ಭಾರತ ಪ್ರತಿಭಟನೆ: ಎನ್.ಆರ್.ಸಿ ಮತ್ತು ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿರುವ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಅಂಶಗಳನ್ನು ಕೈಬಿಡಲು, ಜನರ ಪ್ರತಿಭಟನಾ ಹಕ್ಕಿನ ಮೇಲಿನ ದಾಳಿಯಾಗಿ ನಿಶೇಧಾಜ್ಞೆ ಹೇರಿದ್ದು ವಾಪಸ್ ಪಡೆಯಲು, ಬಂಧಿತ ಎಲ್ಲಾ ಪ್ರತಿಭಟನಾಕಾರ ಬಿಡುಗಡೆಗೆ ಸಿಐಟಿಯು ಆಗ್ರಹ.
ಮಾನ್ಯರೇ,
ಭಾರತದ ಸ್ವಾತಂತ್ರ್ಯವನ್ನು ಗಳಿಸಲು ಮತ್ತು ಅಭಿವೃದ್ಧಿಗೆ ಎಲ್ಲಾ ಪ್ರಜೆಗಳೂ ಹೋರಾಡಿದ್ದಾರೆ. ಜಾತಿ, ಧರ್ಮ ಲಿಂಗಬೇಧವಿಲ್ಲದೇ ಶ್ರಮಿಸಿದ್ದಾರೆ. ಇಂದು ಸ್ವಾತಂತ್ರ್ಯ ಹೋರಾಟದಲ್ಲಿ ಮತೀಯ ನೆಲೆಗಳನ್ನು ಮೀರಿದ ಐಕ್ಯತೆಯನ್ನು ನೆನಪಿಸುವ ದಿನ, 1927ರಲ್ಲಿ ಇದೇ ಡಿಸೆಂಬರ್ 19ರಂದು, ಸ್ವಾತಂತ್ರ್ಯ ಹೋರಾಟದಲ್ಲಿ ತನ್ನ “ಸರ್ ಫರೋಶೀ ಕೀ ತಮನ್ನಾ ಅಬ್ ಹಮಾರೇ ದಿಲ್ ಮೇಂ ಹೈ, ದೇಖ್‍ನಾ ಹೈ ಜೋರ್ ಕಿತ್ನಾ ಬಾಜು-ಏ-ಕಾತಿಲ್ ಮೇಂ ಹೈ” ಎಂಬ ಪ್ರಸಿದ್ಧ ಕವನದ ಮೂಲಕ ಇಡೀ ದೇಶದ ಜನತೆಯನ್ನು ಜಾಗೃತಗೊಳಿಸಿದ ರಾಂಪ್ರಸಾದ್ ಬಿಸ್ಮಿಲ್‍ರನ್ನು ಗೋರಖ್‍ಪುರ ಜೈಲಿನಲ್ಲಿ, ಅಶ್ಫಾಖುಲ್ಲ ಖಾನ್‍ರನ್ನು ಫೈಝಾಬಾದ್ ಜೈಲಿನಲ್ಲಿ, ರೋಶನ್ ಸಿಂಗ್‍ರನ್ನು ನೈನಿ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಮತೀಯ ನೆಲೆಗಳನ್ನು ಮೀರಿ ನಿಂತ ಈ ಐಕ್ಯತೆಯಿಂದಲೇ ನಾವು ಬ್ರಿಟೀಶರಿಂದ ನಮ್ಮ ಸ್ವಾತಂತ್ರ್ಯವನ್ನು ಗೆದ್ದುಕೊಂಡಿದ್ದೇವೆ. ಭಾರತವನ್ನು ಪುನಃ ವಿಭಜಿಸುವ ಸಲುವಾಗಿಯೇ ದುಡಿಯುವ ಜನರ ವಿರೋಧಿಯಾದ ಪೌರತ್ವ ತಿದ್ದುಪಡಿ ಮಸೂದೆ(ಸಿ.ಎ.ಬಿ.) (ಈಗ ಸಿಎಎ ಕಾಯ್ದೆ) ಮತ್ತು ರಾಷ್ಟ್ರೀಯ ಪೌರತ್ವ ದಾಖಲಾತಿ (ಎನ್.ಆರ್.ಸಿ.) ಜಾರಿಗೆ ತಂದು ದೇಶಾದ್ಯಂತ ಅಭದ್ರತೆಯ ವಾತಾವರಣ ಸೃಷ್ಟಿಸಲಾಗಿದೆ.
ಇದರ ವಿರುದ್ಧ ಇಂದು ಡಿಸೆಂಬರ್ 19 ರಂದು ದೇಶಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ದಾಳಿ ನಡೆಸಲಾಗಿದೆ, ಬಂಧಿಸಲಾಗಿದೆ. ಇದನ್ನು ಸೆಂಟರ್ ಆಫ್ ಇಂಡಿಯನ್ ಟ್ರೇಡಸ್ ಯೂನಿಯನ್ ಉತ್ತರ ಕನ್ನಡ ಜಿಲ್ಲಾ ಸಮಿತಿಯು ಬಲವಾಗಿ ಖಂಡಿಸುತ್ತದೆ, ಮಾತ್ರವಲ್ಲ, ಈ ಕಾಯ್ದೆಯಲ್ಲಿರುವ ಸಂವಿಧಾನಕ್ಕೆ ಮತ್ತು ಮತಧರ್ಮ ನಿರಪೇಕ್ಷವಾದ ಭಾರತದ ತತ್ವಕ್ಕೆ ವಿರೋಧಿಯಾದ ಅಮಾನವೀಯ ಅಂಶಗಳನ್ನು ಕೈಬಿಡಲು ಆಗ್ರಹಿಸುತ್ತೇವೆ.
ಧರ್ಮದ ಆಧಾರದಲ್ಲಿ ಪೌರತ್ವವನ್ನು ನೀಡಬೇಕೆಂಬ ಈ ಕಾಯ್ದೆಯಿಂದ ದೇಶದಲ್ಲಿ ಕೋಮು ವಿಭಜನೆ ಮತ್ತು ಸಾಮಾಜಿಕ ಧ್ರುವೀಕರಣವನ್ನು ಇನ್ನಷ್ಟು ತೀಕ್ಷ್ಣಗೊಳಿಸುವುದು ಈ ಕಾಯ್ದೆಯ ಉದ್ದೇಶ. ಇದು ನಮ್ಮ ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಅಪಾಯಕಾರಿ ಹಾನಿಯುಂಟು ಮಾಡುತ್ತದೆ. ಇಂತಹ ಮಸೂದೆ ಪಾಸಾಗಿರುವುದು, ಮತ್ತು ಎನ್.ಆರ್.ಸಿ.ಯನ್ನು ಇಡೀ ದೇಶಕ್ಕೆ ವಿಸ್ತರಿಸಲಾಗುವುದು ಎಂದು ಸರಕಾರ ಸಾರಿರುವುದು ಭಾರತೀಯ ಗಣತಂತ್ರದ ಸ್ವರೂಪವನ್ನೇ ಬದಲಿಸುವ ಒಂದು ಅವಳಿ ಸಂಯೋಜನೆ. ಇದು ನಮ್ಮ ಜಾತ್ಯತೀತ ಪ್ರಜಾಪ್ರಭುತ್ವ ಗಣತಂತ್ರವನ್ನು ಮನುವಾದಿಯಾಗಿಸುವÀ ರಾಜಕೀಯ ಯೋಜನೆ.
ಪೌರತ್ವ (ತಿದ್ದುಪಡಿ) ಮಸೂದೆ 2019 ಸಂವಿಧಾನದ ಮೂಲ ವೈಶಿಷ್ಟ್ಯಗಳ ಉಲ್ಲಂಘನೆ. ಭಾರತವು ಎಲ್ಲರದ್ದೂ, ಇಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ. ನಮ್ಮ ಸಂವಿಧಾನ ನಮಗೆ ಆ ಹಕ್ಕುಗಳನ್ನು ದಯಪಾಲಿಸಿದೆ. ಆಧಾರ್ ಮತ್ತು ಮತದಾರರ ಫೆÇೀಟೋ ಗುರುತು ಪತ್ರ (ಇಪಿಐಸಿ) ಇರುವಾಗ, ಇದೊಂದು ಅನಗತ್ಯವಾದ, ದುಂದುವೆಚ್ಚದ ಪ್ರಕ್ರಿಯೆ. ಇದು ‘ವಿದೇಶಿಯರು’ ಎಂದು ಹಣೆಪಟ್ಟಿ ಹಚ್ಚಿರುವ ಕೆಲವು ವಿಭಾಗಗಳ ಮೇಲೆ ಗುರಿಯಿಡುವ ಆಳುವ ಪಕ್ಷದ ಅಜೆಂಡಾವನ್ನು ಈಡೇರಿಸಲಿಕ್ಕಾಗಿ ಮಾತ್ರವೇ ತಂದಿದ್ದಾರೆ.
ಕರ್ನಾಟಕ ಸರಕಾರ ರಾಜ್ಯದಾದ್ಯಂತ ಮೂರು ದಿನಗಳ ಕಾಲ ನಿಶೇದಾಜ್ಞೆ ಹೇರುವ ಮೂಲಕ ಜನರ ಪ್ರತಿಭಟನಾ ಹಕ್ಕಿನ ಮೇಲೆ ದಾಳಿ ನಡೆಸಿದೆ. ಜನತೆ ಮತ್ತು ಸಂಘ ಸಂಸ್ಥೆಗಳು ರಾಜಕೀಯ ಪಕ್ಷಗಳು ನಡೆಸುವ ಅವರ ಸಂವಿಧಾನಾತ್ಮಕ ಹಾಗೂ ಪ್ರಜಾಸತ್ತಾತ್ಮಕ ಮತ್ತು ಶಾಂತ ರೀತಿಯ ಪ್ರತಿಭಟನಾ ಹಕ್ಕಿನ ಮೇಲಿನ ನಿಶೇದಾಜ್ಞೆಯನ್ನು ಈ ಕೂಡಲೇ ವಾಪಾಸು ಪಡೆದು ಪ್ರತಿಭಟನಾ ಹಕ್ಕನ್ನು ಎತ್ತಿ ಹಿಡಿಯಲು ಕ್ರಮವಹಿಸಬೇಕೆಂದು ರಾಷ್ಟ್ರಪತಿಗಳಲ್ಲಿ ವಿನಂತಿಸುತ್ತೇವೆ.
ವಂದನೆಗಳು, ಯಮುನಾ ಗಾಂವ್ಕರ್
ಸಿಐಟಿಯು ರಾಜ್ಯ ಕಾರ್ಯದರ್ಶಿ

ಡಿ.22ರಂದುಆಯ್.ಎನ್.ಎಸ್.
ವಿಕ್ರಮಾದಿತ್ಯ ವೀಕ್ಷಣೆಗೆ ಅವಕಾಶ
ಬಹುವೈಶಿಷ್ಟ್ಯ,ಅಸಾಧಾರಣ ಸಾಮಥ್ರ್ಯದ ಆಯ್.ಎನ್.ಎಸ್.ವಿಕ್ರಮಾದಿತ್ಯ ಡಿ.22 ರಂದು ಕಾರವಾರದ ಅರಗಾ ನೌಕಾನೆಲೆಯಲ್ಲಿ ಸಾರ್ವಜನಿಕ ವೀಕ್ಷಣೆಗೆ ದೊರೆಯಲಿದೆ.
ರಷ್ಯಾಮೂಲದ ವಾಯುನೌಕೆ ಕೊಂಡೊಯ್ಯುವ ಬೃಹತ್ ಹಡಗು ಇದಾಗಿದ್ದು ನೌಕಾನೆಲೆಯ ವೀಕ್ಲಿ ಸೆಲಿಬ್ರೇಷನ್ 2019 ರ ಅಂಗವಾಗಿ ಈ ವಾಯುವಾಹಕ ಯುದ್ಧನೌಕೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ.
ಆಧಾರ್‍ಕಾರ್ಡ್,ಚುನಾವಣಾ ಗುರುತಿನ ಚೀಟಿ, ಅಥವಾ ಇತರೆ ಕನಿಷ್ಠ 2 ಗುರುತಿನ ಚೀಟಿಗಳನ್ನು ಪ್ರದರ್ಶಿಸಿ ಈ ಯುದ್ಧನೌಕೆ ವೀಕ್ಷಣೆಗೆ ಅವಕಾಶ ಪಡೆಯಬಹುದಾಗಿದೆ.
1978ರಲ್ಲಿ ರಷ್ಯಾದಲ್ಲಿ ನಿರ್ಮಾಣವಾಗಿ 1996ರಲ್ಲಿ ನಿವೃತ್ತಿ ಹೊಂದಿದ ರಷ್ಯಾದ ಈ ನೌಕಾಹಡಗನ್ನು ನವೀಕರಿಸಿ 2013 ರಲ್ಲಿ ಭಾರತಕ್ಕೆ ತರಲಾಗಿದೆ. 44500ಟನ್ ತೂಕದ ಈ ಹಡಗು 284 ಮೀಟರ್ ಉದ್ದ, 60 ಮೀಟರ್ ಎತ್ತರದ ಬೃಹತ್ ಗಾತ್ರದಲ್ಲಿದೆ.ಒಮ್ಮೆ ಇಂಧನ ಭರ್ತಿ ಮಾಡಿದರೆ13000ಕಿ.ಮೀ ಕ್ರಮಿಸುವ ಈ ಹಡಗು 22 ಅಂತಸ್ತುಗಳನ್ನು ಹೊಂದಿದೆ. 1600ಕ್ಕೂ ಹೆಚ್ಚು ಸಿಬ್ಬಂದಿಗಳಿರುವ ಈ ಹಡಗು ಭಾರತೀಯ ಜಲಸೇನೆಯ ಮಹತ್ವದ ಯುದ್ಧ ಹಡಗಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *