

ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಬಿ.ಜೆ.ಪಿ. ಕಾರ್ಯಕರ್ತರ
ಗೂಂಡಾಗಿರಿ, ಪ್ರವಾಹ ಸಂತೃಸ್ತರ ಪುನರ್ವಸತಿ ವಿಳಂಬ
ಕೇಂದ್ರ,ರಾಜ್ಯ ಸರ್ಕಾರಗಳ ವಿರುದ್ಧ ಆಳ್ವ ಗುಡುಗು
ಬಿ.ಜೆ.ಪಿ.ಆಡಳಿತದ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಇದಕ್ಕೆ ಕಾರಣ ಕೇಂದ್ರ ಸರ್ಕಾರ ಮತ್ತು ಈ ಸರ್ಕಾರದ ಆಡಳಿತ ಪಕ್ಷಗಳುನೇರ ಹೊಣೆ ಎಂದಿರುವ ಕಾಂಗ್ರೆಸ್ ಮುಖಂಡ ನಿವೇದಿತ್ ಆಳ್ವ ಸಿದ್ಧಾಪುರದಲ್ಲಿ ಬಿ.ಜೆ.ಪಿ. ಮುಖಂಡರು ಪೊಲೀಸ್ ಠಾಣೆಯಲ್ಲಿ ಆರೋಪಿಯನ್ನು ಹೊಡೆಯುವ ಮೂಲಕ ಅವರ ಪಕ್ಷದ ನೀತಿಯನ್ನು ಪ್ರತಿಬಿಂಬಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಇಲ್ಲಿಯ ತಹಸಿಲ್ಧಾರರಿಗೆ ಮಳೆ,ಪ್ರವಾಹ ಸಂತೃಸ್ತರಿಗೆ ಪುನರ್ವಸತಿಗೆ ಆಗ್ರಹಿಸಿ ಮನವಿ ನೀಡಿದ ನಂತರ ಮಾತನಾಡಿದ ಅವರು ಒಂದು ತಿಂಗಳಲ್ಲಿ ಪ್ರವಾಹ ಸಂತೃಸ್ತರಿಗೆ ಸೂರು ಕಲ್ಫಿಸುತ್ತೇವೆ ಎಂದು ರಾಜ್ಯದ ಮುಖ್ಯಮಂತ್ರಿ ಹೇಳಿದ್ದಾರೆ. ಸಿದ್ದಾಪುರದಲ್ಲಿ ಮಳೆ ತೊಂದರೆ ಆಗಿ ಈಗಾಗಲೇ 5 ತಿಂಗಳುಗಳು ಕಳೆದಿವೆ.ರಾಜ್ಯ ವಿಧಾನಸಭಾ ಅಧ್ಯಕ್ಷರ ಕ್ಷೇತ್ರದಲ್ಲಿ ಈ ಕತೆಯಾದರೆ ಉಳಿದೆಡೆ ಹೇಗಿರಬೇಡ ಎಂದು ಪ್ರಶ್ನಿಸಿದ ಆಳ್ವ ದೇಶದಲ್ಲಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಭಾರಿ ಇತ್ತೀಚಿನ ಎರಡು ಕೇಂದ್ರ ಸರ್ಕಾರಗಳು ಜನಸಾಮಾನ್ಯರ ಹಿತ ಕಡೆಗಣಿಸಿ ಹಿಂಸೆ,ಸರ್ವಾಧಿಕಾರದ ಮೂಲಕ ದೇಶ ಆಳುತ್ತಿರುವಂತಿದೆ. ಉತ್ತರದ ರಾಜ್ಯಗಳು, ದೆಹಲಿ ಸೇರಿದಂತೆ ಬಿ.ಜೆ.ಪಿ. ಆಡಳಿತದ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು ಆಡಳಿತ ಸರ್ಕಾರ ಗೂಂಡಾಗಳನ್ನು ಬಿಟ್ಟು ವಿದ್ಯಾರ್ಥಿಗಳು ಜನಸಾಮಾನ್ಯರ ಮೇಲೆ ಹಲ್ಲೆ ನಡೆಸುತ್ತಿದೆ. ಅದೇ ಮಾದರಿಯಲ್ಲಿ ಸಿದ್ದಾಪುರದಲ್ಲಿ ಬಿ.ಜೆ.ಪಿ. ಕಾರ್ಯಕರ್ತರು ಪೊಲೀಸ್ ಠಾಣೆಯಲ್ಲಿ ಆರೋಪಿಯ ಮೇಲೆ ಹಲ್ಲೆ ನಡೆಸಿದ್ದು ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಈ ಬಗ್ಗೆ ಮಾಧ್ಯಮಗಳು ನಮ್ಮ ಜವಾಬ್ದಾರಿ ಪ್ರಶ್ನಿಸುವಂತೆ ಆಡಳಿತ ಮಾಡುವವರ ಕರ್ತವ್ಯ, ಜವಾಬ್ಧಾರಿಗಳನ್ನು ಕೇಳದಿರುವುದು ವಿಪರ್ಯಾಸ ಎಂದರು.

