

ಕಾರ್ಮಿಕ ಮಂತ್ರಿ ಶಿವರಾಮ್ ಹೆಬ್ಬಾರ್ ರವರ ಉಪಸ್ಥಿತಿಯಲ್ಲಿ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಮತ್ತು ಮಾಲಿಕರ ಪ್ರತಿನಿಧಿಗಳ ಜೊತೆಗೆ ತ್ರಿಪಕ್ಷೀಯ ಸಭೆಯು ಬೆಂಗಳೂರಿನಲ್ಲಿ ನಡೆಯಿತು.

ರಾಜ್ಯ ಸರ್ಕಾರ ಸಂಘಟಿತ ವಲಯದ ಕಾರ್ಮಿಕರ ಮತ್ತು ಕೈಗಾರಿಕಾ ಸಂಸ್ಥೆಗಳ ಹಾಗೂ ಉದ್ದಿಮೆಗಳ ಕುರಿತಾಗಿ ಜಂಟಿ ಕಾರ್ಮಿಕ ಸಂಘಟನೆಗಳು ಹಾಗೂ ಮಾಲೀಕರ ಸಂಘಗಳ ತ್ರಿಪಕ್ಷೀಯ ಸಭೆಯು ಮಧ್ಯಾಹ್ನ 3 ರಿಂದ 5 ರವರೆಗೆ ವಿಕಾಸ ಸೌಧದಲ್ಲಿ ನಡೆಯಿತು.
ಸಿಐಟಿಯು ನಿಯೋಗದ ಪರವಾಗಿ ರಾಜ್ಯ ಕಾರ್ಯದರ್ಶಿಗಳಾದ ಕಾಂ.ಕೆ.ಎನ್.ಉಮೇಶ್, ಕಾಂ.ಕೆ.ಮಹಾಂತೇಶ್ ಹಾಗು ಕಾಂ.ಎನ್.ಪ್ರತಾಪ್ ಸಿಂಹ ರವರು ಹಾಜರಿದ್ದರು.
ಕಾರ್ಮಿಕರ ಪರವಾಗಿ 13 ಪ್ರಮುಖ ಬೇಡಿಕೆಗಳನ್ನು ಮಂಡಿಸಿ ವಿವರಿಸಲಾಯಿತು.
ಮುಖ್ಯವಾಗಿ (೧) ಲಾಕ್ ಡೌನ್ ಅವಧಿಗೆ ಪೂರ್ಣ ವೇತನ (೨) ಯಾವುದೋ ವಿಧದ ಕಾರ್ಮಿಕರಿಗೆ ಉದ್ಯೋಗ ನಷ್ಟವಾಗದಂತೆ, (೩) ಕೆಲಸದ ಅವಧಿಯನ್ನು ಹೆಚ್ಚಳ ಮಾಡಿ, ಅದನ್ನು ಆರು ಗಂಟೆಗೆ ಇಳಿಸಲು ಮತ್ತು ನಾಲ್ಕು ಪಾಳಿಯಲ್ಲಿ ಕೆಲಸ, (೪) ಕಾರ್ಮಿಕರ ಸೇವಾ ಸೌಲಭ್ಯಗಳು, ವೇತನ ಒಪ್ಪಂದವನ್ನು ಅನುಸ್ಠಾನ ಮಾಡಲು, ವೇತನ ಹೆಚ್ಚಳ ಕುರಿತು, (೫) ಅಗತ್ಯ ಸೇವಾ ಕಾರ್ಮಿಕರಿಗೆ ಹೆಚ್ಚುವರಿ ಭತ್ಯೆ ಹಾಗೂ ಎಲ್ಲ ಸುರಕ್ಷತಾ ಪರಿಕರಗಳು, (೬) ಕಾರ್ಮಿಕರಿಗೆ ವಾಹನ ಸೌಲಭ್ಯ (೭) ಎಲ್ಲಾ ಕಾರ್ಮಿಕರಿಗೆ ಸಾರ್ವಜನಿಕ ಪಡಿತರ ವ್ಯವಸ್ಥೆಯ ಮೂಲಕ ಹತ್ತುಕ್ಕೂ ಹೆಚ್ಚು ಅಗತ್ಯ ವಸ್ತುಗಳ ಪೂರೈಕೆ, ಮನೆ ಬಾಡಿಗೆಯಿಂದ ವಿನಾಯಿತಿ (೮) ಉದ್ದಿಮೆದಾರರ ಕೆಲಸದ ಅವಧಿಯ ಹೆಚ್ಚಳದ ಪ್ರಸ್ತಾಪದ ತಿರಸ್ಕಾರ (೯) ಇ.ಎಸ್.ಐ ಹಾಗು ಪಿ.ಎಫ್. ಹಣವನ್ನು ವೇತನಕ್ಕೆ ನೀಡಬೇಕೆಂಬ ಪ್ರಸ್ತಾಪಕ್ಕೆ ಕಾ.ಸಂಘದ ವಿರೋಧ ಮುಂತಾದ ಹಲವು ಅಂಶಗಳನ್ನು ಪ್ರಸ್ತಾಪಿಸಲಾಯಿತು.
ಕಾರ್ಮಿಕ ಸಂಘಟನೆಗಳ ಪರವಾಗಿ ಸಿಐಟಿಯು ನಿಂದ ಕಾಂ.ಮೀನಾಕ್ಷಿ ಸುಂದರಂ, ಎಐಟಿಯುಸಿ ನಿಂದ ಕಾಂ.ವಿಜಯ ಭಾಸ್ಕರ್, ಟಿಯುಸಿಸಿ ನಿಂದ ಕಾಂ.ಜಿ.ಆರ್.ಶಿವಶಂಕರ್, ಎ,ಎಐಯುಟಿಯುಸಿ ಯಿಂದ ಕಾಂ.ಕೆ.ವಿ.ಭಟ್, ಹೆಚ್.ಎಂ.ಕೆ.ಪಿ. ಯಿಂದ ಕಾಂ.ಮೈಕಲ್ ಫರ್ನಾಂಡೀಸ್, ಎಐಸಿಸಿಟಿಯು ವಿನಿಂದ ಕಾಂ.ಕ್ಲೀಫ್ಟನ್ ರೆಜ಼ಾರಿಯೋ, ಹೆಚ್.ಎಂ.ಎಸ್. ನಿಂದ ಕಾಂ.ನಾಗನಾಥ್ ಹಾಗು ಐ.ಎನ್.ಟಿ.ಯು.ಸಿ ಯಿಂದ ಎಸ್.ಎಸ್.ಪ್ರಕಾಶಂ ರವರು ಮಾತನಾಡಿದರು. GATWU ಯಿಂದ ಕಾಂ.ಜಯರಾಮ್
ಮಾಲೀಕರ ಸಂಘಗಳ ಪರವಾಗಿ, ಎಫ.ಕೆ.ಸಿ.ಸಿ.ಐ. ಸಣ್ಣ, ಅತೀ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳು, ಮಾಲೀಕರ ಸಂಘಗಳು, ಹೋಟೆಲ್ ಉದ್ದಿಮೆದಾರರು, ಗಾರ್ಮೆಂಟ್ ಉದ್ದಿಮೆದಾರರು ಹಾಗು ಮುಂತಾದವರು ಹಾಜರಿದ್ದರು. ಅವರು ಸರ್ಕಾರಕ್ಕೆ ಕೆಲಸದ ಅವಧಿಯ ಹೆಚ್ವಳ, ಲಾಕ್ ಡೌನ್ ಅವಧಿಗೆ ವೇತನ ನೀಡಲು ಇ.ಎಸ್.ಐ ನಲ್ಲಿನ ಹಣ ನೀಡಬೇಕು, ಕೈಗಾರಿಕೆಗಳನ್ನು ಮುಚ್ಚಲು ಮುಕ್ತ ಅವಕಾಶ ನೀಡಬೇಕು, ಇ.ಎಸ್.ಐ ಮತ್ತು ಪಿ.ಎಫ್. ವಂತಿಗೆ ಕಟ್ಟಲು ಆರು ತಿಂಗಳ ವಿನಾಯಿತಿ, ಕಾರ್ಖಾನೆಗಳ ಬಾಡಿಗೆ ನೀಡಲು ಮುಂತಾದಗಳನ್ನು ಪ್ರಸ್ತಾಪಿಸಿದ್ದನ್ನು ಎಲ್ಲ ಕಾರ್ಮಿಕ ಸಂಘಗಳು ವಿರೋಧಿಸಿತು.
ಕಾರ್ಮಿಕ ಮಂತ್ರಿಗಳು ಪ್ರಾರಂಭದಲ್ಲಿ ಮಾತನಾಡಿ ಕಾರ್ಮಿಕ ಸಂಘದ ಅಹವಾಲಿನ ಒಂಬತ್ತು ಮುಖ್ಯ ಅಂಶಗಳನ್ನು ಪ್ರಸ್ತಾಪಿಸಿದರು ಹಾಗೂ ಎಲ್ಲರು ಮಾತನಾಡಿದ ನಂತರ ಸಭೆ ಮುಕ್ತಾಯಗೊಳಿಸುತ್ತ ರಾಜ್ಯ ಸರ್ಕಾರವು ಕ್ಯಾಬೀನೇಟ್ ಸಭೆಯಲ್ಕಿ ಕೈಗಾರಿಕೆಯನ್ನು ಮೇ 03ರವರೆಗೆ ಪ್ರಾರಂಭಿಸಬಾರದೆಂಬ ಮತ್ತು ಕೈಗಾರಿಕ ಮಂತ್ರಿಗಳು ತಿಳಿಸಿದ ಕೆಲವು ವಿಚಾರಗಳನ್ನು ತಿಳಿಸಿದರು. ಮಾಲೀಕರ ಸಂಘದವರು ಸಭೆಯಲ್ಲಿ ಕಾರ್ಮಿಕರನ್ಬು ಉದ್ಯೋಗದಿಂದ ತೆಗೆಯುವುದಿಲ್ಲ ಹಾಗೂ ಸಂಬಳ ನೀಡುವುದಾಗಿ ಅದಕ್ಕೆ ಸರ್ಕಾರವು ಮಧ್ಯಪ್ರವೇಶಿಸಿ ಪ್ಯಾಕೇಜ್ ನೀಡಬೇಕೆಂಬ ಬಗ್ಗೆ ಕೈಗಾರಿಕ ಮಂತ್ರಿ ಹಾಗು ಮುಖ್ಯಮಂತ್ರಿಗಳ ಚರ್ಚಿಸಿ ಕಾರ್ಮಿಕರ ಹಿತ ಹಾಗು ಉದ್ದಿಮೆಯನ್ನು ಉಳಿಸಲು ಸಮತೋಲನದಿಂದ ಸರ್ಕಾರ ನಿರ್ಣಯಿಸುವುದಾಗಿ ಹೇಳಿದರು. ಮುಂದಿನ ವಾರ ಮತ್ತೊಂದು ತ್ರಿಪಕ್ಷೀಯ ಸಭೆ ಕರೆದು ಸರ್ಕಾರದ ನಿರ್ಧಾರವನ್ನು ತಿಳಿಸುದಾಗಿ ಹೇಳಿದ್ದಾರೆ.
