*ಭೂ ಸುಧಾರಣೆಯೋ? ಕೃಷಿಯ ಕಾರ್ಪೊರೇಟೀಕರಣವೋ?*

ಆತ್ಮೀಯರೇ , ಕರ್ನಾಟಕದ ಬಿಜೆಪಿ ಸರ್ಕಾರವು ನಿನ್ನೆ 1961ರ ಭೂ ಸುಧಾರಣೆ ಕಾಯಿದೆಯ 79-ಎ , ಬಿ, ಸಿ ಮತ್ತು 80 ನೇ ಕಲಂ ಗಳನ್ನೂ ಪೂರ್ವಾನ್ವಯವಾಗುವಂತೆ ರದ್ದುಪಡಿಸಿದೆ. ಹಾಗೂ 63ನೇ ಕಲಮಿಗೆ ತಿದ್ದುಪಡಿ ತಂದಿದೆ.

*ಈ ತಿದ್ದುಪಡಿಗಳ ಉದ್ದೇಶವೇನು ಮತ್ತು ಪರಿಣಾಮಗಳೇನು?* 1961ರ ಕಾಯಿದೆಯ: – 79-ಎ ಮತ್ತು ಬಿ ಕಲಮುಗಳು ಕೃಷಿಯೇತರ ಮೂಲಗಳಿಂದ ಹೆಚ್ಚು ಆದಾಯ ಉಳ್ಳವರು ಹಾಗೂ ಕೈಗಾರಿಕೋದ್ಯಮಿಗಳು ಕೃಷಿ ಭೂಮಿಯನ್ನು ಕಬಳಿಸದಂತೆ ರಕ್ಷಣೆ ಒದಗಿಸುತ್ತಿತ್ತು. – 79- ಸಿ ಕಲಮು ತಾವು ನೈಜ ರೈತರೆಂದು ಸರಿಯಾದ ಪ್ರಮಾಣ ಪಾತ್ರ ಒದಗಿಸದೆ ಜಮೀನನ್ನು ಕೊಂಡವರಿಗೆ ದಂಡ ವಿಧಿಸುವ ಅವಕಾಶವನ್ನು ಒದಗಿಸುತ್ತಿತ್ತು. – 80 ನೇ ಕಲಮು ರೈತರಲ್ಲದವರಿಗೆ ಕೃಷಿ ಭೂಮಿ ಮಾರುವದನ್ನು ನಿಷೇಧಿಸಿತ್ತು. – 63 ನೇ ಕಲಮು ಕೃಷಿ ಹಿಡುವಳಿಯ ಮೇಲ್ಮಿತಿಯು ಐವರಿಗಿಂತ ಹೆಚ್ಚು ಜನರಿರುವ ಕುಟುಂಬಕ್ಕೆ 20 ಯೂನಿಟ್ಟಿಗಿಂತ ಹೆಚ್ಚಿರಬಾರದೆಂದು ನಿಷೇಧಿಸಿತ್ತು. (ಅಂದರೆ ಕೃಷಿ ಭೂಮಿಯ ವರ್ಗಿಕರಣವನ್ನು ಆಧರಿಸಿ ಒಂದು ಕೃಷಿ ಕುಟುಂಬವು ಸರಾಸರಿ 48-108ಎಕರೆಗಳಿಗಿಂತ ಹೆಚ್ಚು ಭೂಮಿ ಹೊಂದಿರಬಾರದೆಂಬ ಮಿತಿಯನ್ನು ವಿಧಿಸಿತ್ತು)

…ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ಈ ಎಲ್ಲಾ ಕಲಮುಗಳು ದೊಡ್ಡ ಭೂಮಲೀಕರ ಊಳಿಗಮಾನ್ಯ ದರ್ಪದಿಂದ ಸಣ್ಣ ರೈತಾಪಿಗಳ ಒಕ್ಕಲುತನವನ್ನೂ ರಕ್ಷಿಸುವ ಹಾಗು ಸಣ್ಣ ಪುಟ್ಟ ಹಿಡುವಳಿದಾರರ ಅಸಹಾಯಕತೆಯನ್ನು ಧನಾಡ್ಯರೂ ಹಾಗು ಕೈಗಾರಿಕೋದ್ಯಮಿಗಳು ದುರುಪಯೋಗ ಪಡಿಸಿಕೊಳ್ಳದಂತೆ ತಡೆಹಿಡಿಯುವ ಅವಕಾಶಗಳನ್ನು ಒದಗಿಸುತ್ತಿದ್ದವು. . ರೈತ ಕೂಲಿಗಳ ಚಳವಳಿಗಳು ಬಲವಾಗಿದ್ದ ಪ್ರದೇಶಗಳನ್ನು ಬಿಟ್ಟು ಬೇರೆ ಕಡೆಗಳಲ್ಲಿ ಈ ಕಾನೂನುಗಳು ಬಡ ರೈತಾಪಿಯ ಪರವಾಗಿ ಜಾರಿಯಾಗಿದ್ದು ಕಡಿಮೆಯೇ ಆಗಿದ್ದರೂ ಈವರೆಗೆ ಕಾಗದದ ಮೇಲಾದರೂ ಒಂದು ಕಾನೂನಿತ್ತು… ಆದರೆ ನಿನ್ನೆ ಕರ್ನಾಟಕ ಸರ್ಕಾರವು: -1961ರ ಭೂ ಸುಧಾರಣೆ ಕಾಯಿದೆಯ ಮೇಲೆ ವಿವರಿಸಲಾದ 79-ಎ , ಬಿ, ಸಿ ಮತ್ತು 80 ನೇ ಕಲಂ ಗಳನ್ನೂ ಪೂರ್ವಾನ್ವಯವಾಗುವಂತೆ ರದ್ದುಪಡಿಸಿದೆ. -ಕೃಷಿ ಭೂಮಿಗಳು ಸುಲಭವಾಗಿ ಲಾಭಕೋರ ಕೈಗಾರಿಕೋದ್ಯಮಿಗಳು ಪಡೆದುಕೊಳ್ಳುವಂತೆ 63ನೇ ಕಲಮಿಗೂ ಮತ್ತು 80 ನೇ ಕಲಮಿಗೂ ತಿದ್ದುಪಡಿ ತಂದಿದೆ. *ಈ ಎಲ್ಲಾ ತಿದ್ದುಪಡಿಗಳ ಪರಿಣಾಮವಾಗಿ:*- ಈಗ ಧನಾಢ್ಯರೂ ಮತ್ತು ದೊಡ್ಡ ಕೃಷಿ ಬಹುರಾಷ್ಟ್ರೀಯ ಕಂಪನಿಗಳು (MNC) ಸುಲಭವಾಗಿ ಕೃಷಿ ಭೂಮಿಯನ್ನು ಕಬಳಿಸಬಹುದು…

– ಸಣ್ಣ ರೈತಾಪಿಗಳು ಇನ್ನಷ್ಟು ವೇಗವಾಗಿ ಹಾಗೂ ಶಾಸನಬದ್ಧವಾಗಿ ಕೃಷಿಯಿಂದ ಹೊರದೂಡಲ್ಪಡುತ್ತಾರೆ – ಭಾರತದ ಕೃಷಿಯ ಮೇಲೆ ಬಹುರಾಷ್ಟ್ರೀಯ ಕಂಪನಿಗಳು (MNC) ಗಳ ಹಿಡಿತವು ಹೆಚ್ಚಾಗಿ ಭಾರತದ ಆಹಾರ ಸ್ವಾವಲಂಬನೆ ಮತ್ತು ಆಹಾರ ಸಾರ್ವಭೌಮತೆ ಕ್ರಮೇಣವಾಗಿ ಇಲ್ಲವಾಗುತ್ತಾ ಹೋಗುತ್ತದೆ. ಆದರೆ ಈ ತಿದ್ದುಪಡಿ ಗಳು ಅಕಸ್ಮಿಕವೂ ಅಲ್ಲ… ಪ್ರತ್ಯೇಕ ವಾದುದೂ ಅಲ್ಲ…ಬದಲಿಗೆ ಇವು ಈಗಾಗಲೇ ಮೋದಿ ಸರ್ಕಾರ ಜಾರಿ ಮಾಡುತ್ತಿರುವ ಹಲವಾರು ರೈತ ವಿರೋಧಿ ಹಾಗೂ ಕಾರ್ಪೊರೇಟ್ ಪರ ಕೃಷಿ ನೀತಿಗಳ ಅಂತರ್ಗತ ಭಾಗವಾಗಿದೆ… ಮತ್ತು ಅದರ ಮುಂದುವರೆಕೆಯೇ ಆಗಿದೆ..*ಏಕೆಂದರೆ:* -ಇತ್ತೀಚೆಗೆ ಕೇಂದ್ರವು ಜಾರಿ ಮಾಡಿರುವ ಕೃಷಿ ಮಾರುಕಟ್ಟೆ ಸಂಬಂಧಿತ ಮೂರು ಸುಗ್ರೀವಾಜ್ಞೆಗಳು ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಸಂಪೂರ್ಣವಾಗಿ ದೊಡ್ಡದೊಡ್ಡ ಬಂಡವಾಳ ಹೂಡಿಕೆಗೆ ತೆರೆದಿಟ್ಟಿದೆ. -ಕೇಂದ್ರ ಸರ್ಕಾರವು ಇತ್ತೀಚಿಗೆ ಪ್ರಸ್ತಾಪಿಸಿರುವ ವಿದ್ಯುತ್ “ಸುಧಾರಣೆ”ಗಳು ವಿದ್ಯುತ್ ವಲಯದಲ್ಲಿನ ಇಡೀ ಉತ್ಪಾದನೆ, ಪ್ರಸರಣೆ ಹಾಗು ಸರಬರಾಜು ವ್ಯವಸ್ಥೆಗಳನ್ನು ಲಾಭಕೋರ ಕಾರ್ಪೊರೇಟ್ ಬಂಡವಾಳಿಗ ಸಂಸ್ಥೆಗಳಿಗೆ ಪರಭಾರೆ ಮಾಡುವ ಇರಾದೆ ಹೊಂದಿದೆ. ಆದ್ದರಿಂದಾಗಿ ಈವರೆಗೆ ರೈತಾಪಿಗೆ ನೀಡುತ್ತಿದ್ದ ವಿದ್ಯುತ್ ರಿಯಾಯತಿಗಳೆಲ್ಲವನ್ನು ಸಂಪೂರ್ಣವಾಗಿ ರದ್ದುಪಡಿಸುವ ಪರೋಕ್ಷ ಪ್ರಸ್ತಾಪಗಳನ್ನು ಹೊಂದಿದೆ. – ಕೋವಿಡ್ ಸಂಕಷ್ಟಗಳ ನಡುವೆ ಕೇಂದ್ರ ಸರ್ಕಾರವು ಇತ್ತೀಚೆಗೆ 14 ಬೆಳೆಗಳಿಗೆ ಘೋಷಿಸಿದ ಕನಿಷ್ಠ ಬೆಂಬಲ ಬೆಲೆ (MSP) ಗಳು ಕಳೆದ ವರ್ಷ ಘೋಷಿಸಿದ ಬೆಲೆಗಿಂತ ಕೆಡಿಮೆಯಾಗಿರುವುದೂ ಸಹ ಆಕಸ್ಮಿಕವಲ್ಲ. ವಾಸ್ತವದಲ್ಲಿ ಅದು ರೈತರಿಗೆ ಕೊಡುತ್ತಿದ್ದ ಬೆಂಬಲದ ಹಿಂತೆಗೆತದ ಘೋಷಣೆಯಾಗಿದೆ. ಕೋವಿಡ್ ಸಂಕಷ್ಟಗಳಲ್ಲೂ ಸರ್ಕಾರವು ರೈತರ ಸಹಾಯಕ್ಕೆ ಬರಲಾಗದೆಂದು ಕೊಟ್ಟಿರುವ ಸಂದೇಶವಾಗಿದೆ. ಇದು ಸಾರಾಂಶದಲ್ಲಿ ಬಡ-ಮಾಧ್ಯಮ ರೈತಾಪಿಗಳು ಕೃಷಿಯಲ್ಲಿ ಮುಂದುವರೆಯುವುದನ್ನು ಇನ್ನಷ್ಟು ದುಸ್ತರಗೊಳಿಸಲಿದೆ. – ಅಷ್ಟು ಮಾತ್ರವಲ್ಲ… ನೀತಿ ಆಯೋಗವು ಎರಡು ವರ್ಷಗಳಿಗೆ ಮುಂಚೆ ಪ್ರಸ್ತಾಪಿಸಿದ ಹೊಸ ಗೇಣಿ ನೀತಿಯು ಸಹ ಮೋದಿ ಸರ್ಕಾರವು ಜಾರಿ ಮಾಡಬಯಸಿರುವ ಕಾಂಟ್ರಾಕ್ಟ್ ಫಾರ್ಮಿಂಗ್ ನೀತಿಯ ಭಾಗವೇ ಆಗಿದೆ. ಸರ್ಕಾರದ ನೀತಿಗಳಿಂದ ಕಂಗೆಟ್ಟು ರೈತಾಪಿಗಳೇ ಸ್ವಯಂ ಪ್ರೇರಿತರಾಗಿ ಬೇಸಾಯ ಬಿಡುವಂತೆ ಮಾಡಿದ ನಂತರ ಕಾಂಟ್ರಾಕ್ಟ್ ಪಾರ್ಮಿಂಗ್ ಕಂಪನಿಗಳು ಅವರಿಂದ ಸುಲಭ ದರದಲ್ಲಿ ಗೇಣಿಗೆ ಭೂಮಿಯನ್ನು ಪಡೆದುಕೊಳ್ಳುವುದು ಮೋದಿ ಸರ್ಕಾರದ ಈ ಹೊಸ ಗೇಣಿ ನೀತಿಯ ಸಾರ.

ಈಗ ದೊಡ್ಡ ಕಾಂಟ್ರಾಕ್ಟ್ ಹಾಗೂ ಕಾರ್ಪೊರೇಟ್ ಕೃಷಿ ಕಂಪನಿಗಳೇ ಗೇಣಿದಾರರರಾಗುವುದರಿಂದ ಗೇಣಿಯನ್ನು ಶಾಸನಬದ್ಧಗೊಳಿಸಿ ಈ ಕಾರ್ಪೊರೇಟ್ ಗೇಣಿದಾರರಿಗೆ ಸುಲಭವಾಗಿ ದೀರ್ಘಾವಧಿಯ ಸಾಲಗಳನ್ನು ನೀಡುವಂತೆ ಬ್ಯಾಂಕಿಂಗ್ ನಿಯಮಗಳಿಗೂ ಸಹ ತಿದ್ದುಪಡಿಯನ್ನು ತರಲಾಗಿದೆ. -ಈಗ ಅವೆಲ್ಲಕ್ಕೂ ಪೂರಕವಾಗಿ ಕೃಷಿ ಭೂಮಿಯನ್ನು ಸುಲಭವಾಗಿ ಪಡೆದುಕೊಳ್ಳಲು ಅನುವಾಗುವಂತೆ ಭೂ ಹೂಡುವಳಿ ಕಾನೂನುಗಳಲ್ಲಿ ತಿದ್ದುಪಡಿ ತರಲಾಗುತ್ತಿದೆ. *ಈ ಭೂ ಸುಧಾರಣಾ ತಿದ್ದುಪಡಿಗಳು, APMC ತಿದ್ದುಪಡಿಗಳು, MSP ನೀತಿಗಳು, ಹೊಸ ವಿದ್ಯುತ್ ನೀತಿ, ಪ್ರಸ್ತಾಪದಲ್ಲಿರುವ ಹೊಸ ಬೀಜ ನೀತಿ, ಕೋವಿಡ್ ಸಂಕಷ್ಟಗಳಲ್ಲೂ MNREGA ದ ನಿರ್ಲಕ್ಷ್ಯ …ಇವೆಲ್ಲವೂ ಭಾರತದ ಕೃಷಿಯನ್ನು ಸಂಪೂರ್ಣವಾಗಿ ಕಾರ್ಪೊರೇಟೀಕರಿಸಿ ಬಡ-ಹಾಗು-ಸಣ್ಣ ರೈತಾಪಿಗಳನ್ನು ಒಕ್ಕಲೆಬ್ಬಿಸುವ ನೀತಿಗಳ ಭಾಗವಾಗಿಯೇ ಇದ*. ಈ ವಿಷಯದಲ್ಲಿ ಎಲ್ಲಾ ಪ್ರಧಾನ ರಾಜಕೀಯ ಪಕ್ಷಗಳಲ್ಲಿ ಸರ್ವ ಸಮ್ಮತಿಯಿರುವುದು ನಿಜ.ಆದರೂ ಈ ಹಿಂದಿನ ವಾಜಪೇಯಿಯವರ ಬಿಜೆಪಿ ಸರ್ಕಾರಕ್ಕೂ, ಮನಮೋಹನ್ ಸಿಂಗ್ ಅವರ ಕಾಂಗ್ರೆಸ್ ಸರ್ಕಾರಕ್ಕೂ … ಹಾಗೂ ಇಂದಿನ ಮೋದಿ ಸರ್ಕಾರಕ್ಕೂ ಈ ವಿಷಯದಲ್ಲಿ ಒಂದು ಮೂಲಭೂತ ವ್ಯತ್ಯಾಸವಂತೂ ಇದ್ದೆ ಇದೆ.

ಮೋದಿ ಯುಗದಲ್ಲಿ ಭಾರತದ ಕೃಷಿಯ ಕಾರ್ಪೊರೇಟೀಕರಣ ಹಾಗೂ ಬಡ-ಸಣ್ಣ ರೈತಾಪಿಗಳ ನಿರ್ಗತಿಕರಣ ಆಗುತ್ತಿರುವ ವೇಗ ಮತ್ತು ಅದನ್ನು ಜಾರಿ ಮಾಡುವುದರಲ್ಲಿ ಇರುವ ನಿರ್ಲಜ್ಜತೆ ಹಾಗೂ ಅದು ಸಂತ್ರಸ್ತರಲ್ಲಿ ಸೃಷ್ಟಿಸುತ್ತಿರುವ ಅಸಹಾಯಕತೆ ಪ್ರಜಾತಂತ್ರದ ಎಲ್ಲಾ ಎಲ್ಲೆಗಳನ್ನೂ ಮೀರುತ್ತಿದೆ. ಅದರ ಅಮಾನುಷತೆ ಅತ್ಯಂತ ಭೀಕರವಾಗಿದೆ. ಆದರೆ ಅದೇ ಸಮಯದಲ್ಲಿ ಇವು ಸಂತ್ರಸ್ತರೆಲ್ಲರೂ ಒಂದಾಗಬಹುದಾದ ಅವಕಾಶವನ್ನೂ ಕಲ್ಪಿಸಿಕೊಡುತ್ತಿದೆ. ಹೀಗಾಗಿ ಭೂ ಸುಧಾರಣಾ ನೀತಿಯ ಈ ಹೊಸ ತಿದ್ದುಪಡಿಗಳನ್ನು ಹೊಟ್ಟೆಗೆ ಅನ್ನ ತಿನ್ನುವ ಎಲ್ಲರೂ ಪ್ರತಿಭಟಿಸಲೇ ಬೇಕಿದೆ.. ಅಲ್ಲವೇ?

*ಶಿವಸುಂದರ್*–shivasundar94486597748 Comments

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *