

ಸಿದ್ಧಾಪುರದ ನಾನಾ ಕಾಲೇಜುಗಳಲ್ಲಿ ಕಲಿಯುತಿದ್ದ ಮಕ್ಕಳು ಮತ್ತು ಸಿದ್ಧಾಪುರದವರಾಗಿ ಹೊರ ಊರು, ಕಾಲೇಜುಗಳಲ್ಲಿ ಕಲಿಯುತಿದ್ದ ಮಕ್ಕಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಇಲ್ಲಿಯ ವೈದ್ಯ ದಂಪತಿಗಳಾದ ಡಾ.ರಾಜುಭಟ್ ಮತ್ತು ರೂಪಾ ಭಟ್ ಮಗಳು ಪ್ರೀಯಾ ಶಿವಮೊಗ್ಗ ಆದಿಚುಂಚನಗಿರಿ
ಕಾಲೇಜಿಗೆ ಎರಡನೇ ರ್ಯಾಂಕ್ ಪಡೆದಿದ್ದು, ರಾಜ್ಯದಲ್ಲಿ ಈಕೆ 7 ನೇ ರ್ಯಾಂಕ್ ಗಿಟ್ಟಿಸಿದ್ದಾಳೆ. ಈ ವರ್ಷ ಉತ್ತರ ಕನ್ನಡ ಜಿಲ್ಲೆ ರಾಜ್ಯಕ್ಕೆ ಮೂರನೇ ಸ್ಥಾನದಲ್ಲಿದೆ.
ಸರಕಾರಿ ಪ.ಪೂ.ಕಾಲೇಜು ಹಲಗೇರಿಗೆ ಉತ್ತಮ ಫಲಿತಾಂಶ
ಸಿದ್ದಾಪುರ. ತಾಲೂಕಿನ ಗ್ರಾಮೀಣ ಪ್ರದೇಶದ ಹಲಗೇರಿ ಸರಕಾರಿ ಪ.ಪೂ.ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ 81.91 ಪ್ರತಿಶತ ಫಲಿತಾಂಶವನ್ನು ದಾಖಲಿಸಿದೆ. ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 48 ವಿದ್ಯಾರ್ಥಿಗಳಲ್ಲಿ 1 ಉನ್ನತಶ್ರೇಣಿ, 22 ವಿದ್ಯಾರ್ಥಿಗಳು ಪ್ರಥಮ ದರ್ಜೆ, 9 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಮತ್ತು 4 ವಿದ್ಯಾರ್ಥಿಗಳು ಪಾಸ್ ದರ್ಜೆ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಒಟ್ಟು 35 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 4 ವಿದ್ಯಾರ್ಥಿಗಳು ಉನ್ನತಶ್ರೇಣಿಯಲ್ಲಿ 21 ವಿದ್ಯಾರ್ಥಿಗಳು ಪ್ರಥಮಶ್ರೇಣಿಯಲ್ಲಿ , 5 ವಿದ್ಯಾರ್ಥಿಗಳು ದ್ವಿತೀಯ ಮತ್ತು ಒಬ್ಬ ವಿದ್ಯಾರ್ಥಿ ಪಾಸ್ ದರ್ಜೆಗಳಿಸಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದ ಒಟ್ಟು 11 ವಿದ್ಯಾರ್ಥಿಗಳ ಪೈಕಿ 8 ವಿದ್ಯಾರ್ಥಿಗಳು ಪ್ರಥಮ ದರ್ಜೆ, ಒಬ್ಬ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ಒಬ್ಬ ವಿದ್ಯಾರ್ಥಿ ಪಾಸ್ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇಕಡಾ 75, ವಾಣಿಜ್ಯ ವಿಭಾಗದಲ್ಲಿ ಶೇಕಡಾ 88.57 ಮತ್ತು ವಿಜ್ಞಾನ ವಿಭಾಗದಲ್ಲಿ ಶೇಕಡಾ 90.96 ಫಲಿತಾಂಶ ಬಂದಿದೆ.
ದ್ವಿತೀಯ ಪಿಯುಸಿ ಫಲಿತಾಂಶ : ಸಿದ್ದಾಪುರ ಸರಕಾರಿ ಕಾಲೇಜಿನ ಸಾಧನೆ
ಸಿದ್ದಾಪುರ. ತಾಲೂಕಿನ ಪಟ್ಟಣ ವ್ಯಾಪ್ತಿಯ ಸರಕಾರಿ ಪ.ಪೂ.ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಫಲಿತಾಂಶ ನೀಡಿದೆ. ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 46 ವಿದ್ಯಾರ್ಥಿಗಳಲ್ಲಿ 2 ಉನ್ನತಶ್ರೇಣಿ, 22 ವಿದ್ಯಾರ್ಥಿಗಳು ಪ್ರಥಮ ದರ್ಜೆ, 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಮತ್ತು 2 ವಿದ್ಯಾರ್ಥಿ ಪಾಸ್ ದರ್ಜೆ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಒಟ್ಟು 63 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 3 ವಿದ್ಯಾರ್ಥಿಗಳು ಉನ್ನತಶ್ರೇಣಿಯಲ್ಲಿ 39 ವಿದ್ಯಾರ್ಥಿಗಳು ಪ್ರಥಮಶ್ರೇಣಿಯಲ್ಲಿ ,10 ವಿದ್ಯಾರ್ಥಿಗಳು ದ್ವಿತೀಯ ಮತ್ತು 2 ವಿದ್ಯಾರ್ಥಿಗಳು ಪಾಸ್ ದರ್ಜೆಗಳಿಸಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದ ಒಟ್ಟು 28 ವಿದ್ಯಾರ್ಥಿಗಳ ಪೈಕಿ 2 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 23 ವಿದ್ಯಾರ್ಥಿಗಳು ಪ್ರಥಮ ದರ್ಜೆ, 3 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರಿಂದಾಗಿ ಕಲಾ ವಿಭಾಗದಲ್ಲಿ ಶೇಕಡಾ 69.57, ವಾಣಿಜ್ಯ ವಿಭಾಗದಲ್ಲಿ ಶೇಕಡಾ 85.71 ಮತ್ತು ವಿಜ್ಞಾನ ವಿಭಾಗದಲ್ಲಿ ಶೇಕಡಾ 100 ಫಲಿತಾಂಶ ದಾಖಲಾಗಿದೆ. ಕಾಲೇಜಿನ ಒಟ್ಟೂ ಫಲಿತಾಂಶ ಶೇಕಡಾ 83.21 ಆಗಿದೆ .
ಕಲಾವಿಭಾಗದಲ್ಲಿ ಜೀವನಾ ಎನ್ ನಾಯ್ಕ (89.5%),ಮಾನಸಾ ಎಂ ಮಡಿವಾಳ(87.83%),ಸುರೇಂದ್ರ ಆಯ್ ಮಡಿವಾಳ(84.83%) ವಾಣಿಜ್ಯ ವಿಭಾಗದಲ್ಲಿ ಶಶಿ ಅಣ್ಣಪ್ಪ ಗೌಡ (95.17%), ನಯನಾ ಆರ್ ನಾಯ್ಕ(90.5%), ಆದಿತ್ಯ ಆರ್ ನಾಯ್ಕ(87%) ಮತ್ತು ವಿಜ್ಞಾನ ವಿಭಾಗದಲ್ಲಿ ಕವಿತಾ ಶಂಕರ ಗೌಡ (87.50%), ಮದನ್ ಎಮ ನಾಯ್ಕ (85%),ರಾಕೇಶ ಎ ನಾಯ್ಕ(79.5%), ಅಂಕಗಳಿಸುವುದರೊಂದಿಗೆ ಕಾಲೇಜಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ.



