for weekend reading- ನೀವು ಏನನ್ನು ದ್ವೇಷಿಸುತ್ತೀರೋ, ಅದನ್ನೇ ಮತ್ತೊಬ್ಬರಿಗೆ ಮಾಡಬೇಡಿ

ನೀವು ಏನನ್ನು ದ್ವೇಷಿಸುತ್ತೀರೋ, ಅದನ್ನೇ ಮತ್ತೊಬ್ಬರಿಗೆ ಮಾಡಬೇಡಿ. -ಯಹೂದಿ ದ್ರಷ್ಟಾರ ಹಿಲ್ಲೆಲ್

ಮ್ಯಾಕ್ಷಿಂ ಗಾರ್ಕಿ ಕಂಡ ಕ್ರಾಂತಿಯ ಅಂತರಂಗದ ಸತ್ಯಗಳು:

  • ಡಿ. ರಾಮಪ್ಪ ಸಿರಿವಂತೆ, ಅಂಕೋಲಾ

ಮ್ಯಾಕ್ಷಿಂ ಗಾರ್ಕಿಯ, ‘ತಾಯಿ’ (ಮದರ್) ಕಾದಂಬರಿಯನ್ನು ತುಂಬಾ ಹಿಂದೆ ಓದಿದ ನೆನಪು. ಅದನ್ನು ಗಾರ್ಕಿ 1906ರಲ್ಲಿ ಅಮೇರಿಕದಲ್ಲಿದ್ದಾಗ ಬರೆದ. ತ್ಸಾರ್ ದೊರೆಯ ದುರಾಡಳಿತದ ವಿರುದ್ಧ ರಷ್ಯನ್ ಕ್ರಾಂತಿಯ ಸಮಯದಲ್ಲಿ ಹತಾಶರಾಗಿದ್ದ ಜನರ ಮನಸ್ಸಿನಲ್ಲಿ ಹೊಸ ಹುಮ್ಮಸ್ಸು ತುಂಬಲು ಬರೆದ ಕಾದಂಬರಿಯದು.

ಎಳೆಯದರಲ್ಲೇ ನೋವುಂಡು ಬೆಳೆದ ಜೀವ ಗಾರ್ಕಿಯದು. ತ್ಸಾರ್ ಆಡಳಿತದಲ್ಲ್ಲಿ ರಷ್ಯನ್ ಸಮಾಜದ ದಾರುಣ ಸ್ಥಿತಿ, ಆತನಲ್ಲಿ ನೋವು ಮತ್ತು ಸಿಟ್ಟನ್ನು ಇಮ್ಮಡಿಸಿದ್ದವು. ಕಾದಂಬರಿಯ ಕೇಂದ್ರ ವ್ಯಕ್ತಿಗಳಲ್ಲಿ ಒಬ್ಬನಾದ ಪಾವೆಲ್, ರಾಜಾಡಳಿತ ವಿರೋಧೀ ಭೂಗತ ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತಾನೆ. ಈ ಬಗ್ಗೆ, ಸಂಗಡಿಗರೊಟ್ಟಿಗೆ ತನ್ನ ಮನೆಯಲ್ಲಿ ಆಗಾಗ ಚರ್ಚಿಸುತ್ತಿರುತ್ತಾನೆ. ಅಲ್ಲಿ, ಅವರ ಕೆಲಸವನ್ನು ಆತಂಕದಿಂದ ಗಮನಿಸುತ್ತಾ, ಅವರ ದೈನಂದಿನ ಅವಶ್ಯಕತೆಗಳನ್ನು ಪೂರೈಸುತ್ತಿದ್ದ್ದಳು, ತಾಯಿ ನಿಲೋವ್ನಾ. ಅಂತಹ ಸಂದರ್ಭದಲ್ಲಿ ಒಮ್ಮೆ ಚರ್ಚೆ, ಜನರಿಗೆ ಅಕ್ಷರ ಕಲಿಸುವ ಬಗ್ಗೆ ತಿರುಗುತ್ತದೆ. ಅಲ್ಲೇ ಇದ್ದ ತಾಯಿ ನಿಲೋವ್ನಾ ಮಧ್ಯೆ ಬಾಯಿ ಹಾಕಿ, “ನನಗೂ ಅಕ್ಷರ ಕಲಿಸಿ,” ಎನ್ನುತ್ತಾಳೆ.

“ವಯಸ್ಸಾಗುತ್ತಿರುವಹೆಣ್ಣು ನೀನು; ನಿನಗ್ಯಾಕೆ ಅಕ್ಷರ ಕಲಿಕೆ,” ಎಂದು ನಗುತ್ತಾರೆ ಮಗ ಮತ್ತು ಸ್ನೇಹಿತರು. ಆಗ, “ಹೆಣ್ಣು ಅಕ್ಷರ ಕಲಿಯುವುದೂ ಕ್ರಾಂತಿ ಕಾಣೋ ಮಗ…!” ಎಂದು ತಾಯಿ ಹೇಳುವ ಮಾತು, ಇಂದಿಗೂ ನನ್ನ ಮನಸ್ಸಿನಲ್ಲಿ ಅನುರಣಿಸುತ್ತಿದೆ.

ಸಾಮಾಜಿಕ ವಾಸ್ತವಿಕತೆಯ ಬರಹಗಳ ಜನಕ, 5 ಬಾರಿ ಸಾಹಿತ್ಯದ ನೊಬೆಲ್ ಬಹುಮನಕ್ಕೆ ನಾಮನಿರ್ದೇಶಿತನಾಗಿದ್ದ ಮ್ಯಾಕ್ಷಿಂ ಗಾರ್ಕಿಯ ಮೂಲ ಹೆಸರು, ಅಲೆಕ್ಸಿ ಮ್ಯಾಕ್ಸಿಮೋವಿಚ್ ಪೆಶ್ಕೋವ್. 1868 ರಲ್ಲಿ ಹುಟ್ಟಿದ ಆತ, 11ನೇ ವರ್ಷಕ್ಕೇ ಅನಾಥನಾಗಿ ಅಜ್ಜಿಯೊಟ್ಟಿಗೆ ಬೆಳೆದ. ಬಂಡುಕೋರನಾಗಿದ್ದ ಗಾರ್ಕಿ, ಇಡಿ ರಷ್ಯಾವನ್ನು ಐದು ವರ್ಷಗಳ ಕಾಲ ಕಾಲ್ನಡಿಗೆಯಲ್ಲೇ ಸುತ್ತುತ್ತಾ, ಬೇರೆಬೇರೆ ಕೆಲಸ ಮಾಡಿ ಜೀವನದ ಒರಿಜಿನಲ್ ಎನ್ನಬಹುದಾದ ಅನುಭವ ಪಡೆದ. ಆತ, ‘ಗಾರ್ಕಿ’ ಕಾವ್ಯನಾಮದಲ್ಲಿ ಬರೆದ. ‘ಗಾರ್ಕಿ’ ಎಂದರೆ ‘ಕಹಿ’. ರಷ್ಯಾದಲ್ಲಿನ ಅಂದಿನ ಜೀವನ ಪರಿಸ್ಥಿತಿ ನಿಕೃಷ್ಟವಾಗಿತ್ತು. ಈ ಬಗ್ಗೆ, ಅವನಲ್ಲಿ ಸಿಟ್ಟು ಕುದಿಯುತ್ತಿತ್ತು. ಬರವಣಿಗೆಯಲ್ಲಿ ಕಹಿಸತ್ಯ ಹೇಳುವ ನಿರ್ಧಾರ ಅವನಲ್ಲಿತ್ತು. ಅದೇ ಕಾರಣದಿಂದ ಆತ, ‘ಗಾರ್ಕಿ’ ಎಂಬ ಕಾವ್ಯನಾಮವನ್ನು ಆರಿಸಿಕೊಂಡು ಬರೆಯತೊಡಗಿದ. ‘ಮಕರ್ ಚುದ್ರ’ ಎಂಬ ಮೊದಲ ಸಣ್ಣ ಕತೆ ಬರೆದಾಗ, ಆತ ಕಾಕೇಸಿಯನ್ ರೈಲ್ವೆ ಕಾರ್ಯಾಗಾರದಲ್ಲಿ ಕೂಲಿಯಾಳಾಗಿದ್ದ. 1898ರಲ್ಲಿ ಆತನ ಬರಹಗಳ ಮೊದಲ ಸಂಕಲನ – ‘ಪ್ರಬಂಧಗಳು ಮತ್ತು ಸಣ್ಣಕತೆಗಳು’ – ಪ್ರಕಟವಾಗಿ, ತುಂಬಾ ಯಶಸ್ವಿಯೂ ಅಯ್ತು! ಅಂದಿನಿಂದ ಆತ, ಬರವಣಿಗೆಯಲ್ಲಿಯೇ ಪೂರ್ತಿಯಾಗಿ ತೊಡಗಿಕೊಂಡ.

ಗಾರ್ಕಿ ಎಡಬಿಡದೆ ಬರೆಯತೊಡಗಿದ. ಸಾಹಿತ್ಯಕ ಶೈಲಿ ಮತ್ತು ರೂಪವನ್ನು ಗಮನದಲ್ಲಿಟ್ಟುಕೊಂಡು ಬರೆಯುತ್ತಿದ್ದರೂ, ಅದೇ ಆತನಿಗೆ ಮುಖ್ಯವಾಗಿರಲಿಲ್ಲ. ತನ್ನ ಬರವಣಿಗೆ, ಪ್ರಪಂಚವನ್ನು ಬದಲಾಯಿಸಬಲ್ಲ ನೈತಿಕ ಮತ್ತು ರಾಜಕೀಯ ಶಕ್ತಿಯಾಗಬೇಕು ಎಂದು ಬರೆದ. ಗಾರ್ಕಿಯ ಬರವಣಿಗೆ, ಸಮಾಜದ ಕಟ್ಟಕಡೆಯ ದೀನರು ಅನುಭವಿಸುವ ಬವಣೆ ಮತ್ತು ಅವಮಾನವನ್ನು ವಿವರಿಸುತ್ತದೆ. ಅವರಲ್ಲಿ ಹುಟ್ಟುಹಾಕುತ್ತಿದ್ದ್ತ ಕ್ರೌರ್ಯವನ್ನೂ ಮತ್ತೂ, ಆಗಾಗ್ಗೆ ಹೊಮ್ಮುತ್ತಿದ್ದ ಮಾನವೀಯತೆಯ ಕಿರಣವನ್ನೂ ಅದು ಬಹಿರಂಗಗೊಳಿಸುತ್ತದೆ.

ಸಾಮಾನ್ಯ ಜನರ ಸಾಹಿತ್ಯಕ ಧನಿಯಂತೆ ಹೊರಹೊಮ್ಮಿದ ಗಾರ್ಕಿ, ರಷಿಯಾದ ಸಮಾಜಿಕ, ರಾಜಕೀಯ ಮತ್ತು ಸಾಂಸ್ಕೃ ತಿಕ ಸ್ಥಿತ್ಯಂತರದ ಇತ್ಯಾತ್ಮಕ-ನೇತ್ಯಾತ್ಮಕ ಸಂಗತಿಗಳನ್ನು ಎಚ್ಚರದಿಂದ ಗಮನಿಸಿದ. 1899ರ ಹೊತ್ತಿಗೆ ಆತ, ಅಂದು ಪ್ರವರ್ಧಮಾನಕ್ಕೆ ಬರುತ್ತಿದ್ದ – ಮಾಕ್ರ್ಸಿಸ್ಟ್ ಸೋಸಿಯಲ್ ಡೆಮೋಕ್ರಾಟಿಕ್ ಆಂದೋಲನದೊಟ್ಟಿಗೆ ಗುರುತಿಸಿಕೊಂಡು, ಬುದ್ದಿಜೀವಿಗಳು ಮತ್ತು ತಿಳುವಳಿಕೆ ಇರುವ ಕೆಲಸಗಾರರ ಮಧ್ಯೆ ಜನಜನಿತನಾದ.

ಬರಹಗಾರನಾಗಿ ಯಶಸ್ವಿಯಾದ ಗಾರ್ಕಿ, ನಾಟಕಕಾರನೂ, ಸಂಪಾದಕನೂ ಆದ; ಹಾಗೆಯೇ, ಆರ್ಥಿಕವಾಗಿಯೂ ಗಟ್ಟಿಯಾದ. ಇದರಿಂದ, ರಷಿಯನ್ ಸೋಸಿಯಲ್ ಡೆಮೋಕ್ರಾಟಿಕ್ ಲೇಬರ್ ಪಾರ್ಟಿಗೆ ಹಾಗೂ, ನಾಗರಿಕ ಹಕ್ಕು ಮತ್ತು ಸಾಮಾಜಿಕ ಬದಲಾವಣೆಗೆ ಒತ್ತಾಯ ಮಾಡುವವರಿಗೆ ಆರ್ಥಿಕವಾಗಿ ಸಹಾಯಮಾಡತೊಡಗಿದ. 1905ರ ಜನವರಿ 9ರ ಭಾನುವಾರ(ಬ್ಲಡಿ ಸಂಡೆ)ದಂದು, ಮನವಿ ಕೊಡಲು ಹೋದ ಹೋರಾಟಗಾರರ ಮೇಲೆ ದೊರೆ, ನಿರ್ಧಯವಾಗಿ ಗುಂಡಿನ ಮಳೆಗೆರೆದಾಗ, ರಷ್ಯಾ ಬಿಡುಗಡೆಗೆ ಕ್ರಾಂತಿಕಾರಿ ಹೋರಾಟವೊಂದೇ ಪರಿಹಾರ ಮಾರ್ಗ ಎಂದು ಗಾರ್ಕಿಗೆ ಮನದಟ್ಟಾಯಿತು. ಆಗ ಆತ, ಲೆನಿನ್ ಮತ್ತವನ ಬೋಲ್ಸೆವಿಕ್ ಪಾರ್ಟಿಗೆ ಹತ್ತಿರನಾದ.

1906ರಿಂದ 1913ರ ವರೆಗೆ ಗಾರ್ಕಿ, ದಕ್ಷಿಣ ಇಟಲಿಯ ಕಾಪ್ರಿ ದ್ವೀಪದಲ್ಲಿ ಉಳಿದ – ಭಾಗಶಃ ಆರೋಗ್ಯದ ಕಾರಣದಿಂದ ಮತ್ತೆ ಭಾಗಶಃ, ತ್ಸಾರ್ ದೊರೆಯ ಧಮನ ನೀತಿಯ ಕಾರಣದಿಂದ. ಅಲ್ಲಿಂದಲೇ ಆತ ರಷ್ಯಾದ ಹೋರಾಟಗಾರರಿಗೆ ತನ್ನ ಬೆಂಬಲ ಕೊಡತೊಡಗಿದ. ಈ ಮಧ್ಯೆ ಲೆನಿನ್‍ನನ್ನು ಭೇ ಟಿಯಾಗಿ. ಇತರೆ ಕೊಟ್ಟಿ ಕ್ರಾಂತಿಕಾರಿಗಳೊಟ್ಟಿಗೆ ಸೇರಿ ತುಂಬಾ ಸಮಯ ವ್ಯರ್ಥ ಮಾಡಿದ ಬಗ್ಗೆ ಲೆನಿನ್‍ನನ್ನು ಖಂಡಿಸಿದ. ಲೆನಿನ್ ವಿಷಣ್ಣನಾಗಿ ಅಂದು ಆತನಿಗೆ ಕಂಡ.

ಬೋಲ್ಸೆವಿಸಂಗೆ ಸೆಳೆಯಲ್ಪಟ್ಟರೂ ಗಾರ್ಕಿ, ರಷಿಯನ್ ಕಾರ್ಮಿಕರೊಟ್ಟಿಗಿನ ತನ್ನದೇ ಅನುಭವ ಹೇಳುತ್ತಾ, “ಅವರು ದೈವಿಕ ಸೌಂದರ್ಯ ಮತ್ತು ದಯೆಯ ಮೂರ್ತರೂಪಗಳು ಎಂಬ ಅನ್ನಿಸಿಕೆ ತಪ್ಪು; ಇಡೀ ಕಾರ್ಮಿಕ ವರ್ಗವೆಲ್ಲಾ ಪ್ರಜ್ಞಾವಂತರೂ ಮತ್ತು ಒಳ್ಳೆಯವರು ಎನ್ನುವುದು ವಾಸ್ತವವಲ್ಲ; ಬಡಗಿಗಳು, ಗೌಂಡಿಗಳು ಮುಂತಾದ ಕೆಲಸಗಾರ ಬಡವರು ನನಗೆ ಗೊತ್ತು; ನಾನವರನ್ನು ನಿಜವಾಗಿಯೂ ನಂಬುವುದಿಲ್ಲ,” ಎಂದ.

ನಿರೀಶ್ವರವಾದಿಯಾದರೂ ಗಾರ್ಕಿ ಭೌತವಾದಿ ಆಗಿರಲಿಲ್ಲ! ಅನೇಕ ವಿಚಾರವಾದಿ ಬೊಲ್ಸೆವಿಕ್‍ರೊಂದಿಗೆ ಸೇರಿ, ಒಂದು ಫಿಲಾಸಪಿಯ ಬಗ್ಗೆ ಹೇಳತೊಡಗಿದ. ಇದು, ಕ್ರಾಂತಿಗಾಗಿ ಪುರಾಣಕಥೆಗಳ ಶಕ್ತಿಯನ್ನು ಬಳಸುವುದು; ಮತ್ತು, ಮಾನವೀಯತೆಯನ್ನು ದೇವರ ಸ್ಥಾನದಲ್ಲಿ ಇಟ್ಟ ನಿರೀಶ್ವರವಾದವನ್ನು ನಂಬುವುದು. ಹೀಗಾದಾಗ ನೈತಿಕತೆ ಹಾಗೂ, ವಿಮೋಚನೆಯ ಭರವಸೆ ಇರುತ್ತದೆ ಎಂದು ವಿವರಿಸಿದ. ಭೌತವಾದಿಯಾದ ಲೆನಿನ್ ಇದನ್ನು ಅಪಹಾಸ್ಯ ಮಾಡಿದ. “ಕ್ರಾಂತಿಗೆ, ಅದರ ಹಿಂದಿನ ಆಶಯ ಬಹು ಮುಖ್ಯವಾದುದು; ಅದರ ಸಫಲತೆಗೆ, ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಗಿಂತಲೂ ಪ್ರಮುಖ ಪಾತ್ರವನ್ನು ಮಾನವನ ಸಂಸ್ಕ್ತತಿ ವಹಿಸುತ್ತದೆ,” ಎಂದು ಗಾರ್ಕಿ ಉತ್ತರಿಸಿದ.

ಗಾರ್ಕಿ 1913ರಲ್ಲಿ ಮತ್ತೆ ದೇಶಕ್ಕೆ ವಾಪಸ್ಸು ಬಂದಾಗ ಆತನಿಗೆ, ಇಡೀ ರಷ್ಯಾದ ಜನ ಜೀವವಿಲ್ಲದೆ ನಿರ್ವೀರ್ಯಗೊಂಡವರಂತೆ ಕಂಡರು. ಫೆಬ್ರುವರಿ ಕ್ರಾಂತಿಯ ನಂತರ ಆತ, ದೊರೆಯ ಕಾಲದ ಗೂಢಚಾರಿ ಪೊಲೀ ಸ್ ಕೇಂದ್ರ ಕಛೇರಿಯನ್ನು ನೋಡಲು ಹೋದ. ಅದು ಅವನು ವಿದ್ಯೆ ಕಲಿತ ಸ್ಥಳವಾದರೂ ಈಗ ಪೂರ್ತಿ ಪಾಳುಬಿದ್ದ ಕಟ್ಟಡವಾಗತ್ತು! ಅದೇ ರೀತಿ, ಫೆಬ್ರವರಿ ಕ್ರಾಂತಿಯ ಸಮಯದಲ್ಲಿ ಗುಂಡುಗಳ ಸದ್ದಿನ ಮಧ್ಯೆಯೇ ಉದ್ಯಾನದಲ್ಲಿ ಬಿದ್ದ ಹಿಮವನ್ನು ಸ್ವಚ್ಛ ಮಾಡುತ್ತಿದ್ದ ವನಪಾಲಕನೊಬ್ಬ, ಬಂದುಹೋಗುವವರಿಗೆ ಉದ್ಯಾನದ ಹುಲ್ಲನ್ನೂ ಮೆಟ್ಟಿ ಹಾಳುಮಾಡದಿರಲು ಹೇಳುತ್ತಿದ್ದುದನ್ನು ಗಾರ್ಕಿ ಗಮನಿಸಿದ್ದ. ಆದರೆ, ಅಕ್ಟೋ¨ರ್‍ನ ಬೋಲ್ಶೆವಿಕ್ ಕ್ರಾಂತಿಯ ನಂತರ ಅದೇ ಮಾಲಿ, ಉದ್ಯಾನದ ಗಿಡಗಳ ದೊಡ್ಡ ದೊಡ್ಡ ಟೊಂಗೆಗಳನ್ನೇ ಕಡಿಯುತ್ತಿದ್ದುದನ್ನೂ ನೋಡಿದ! ‘ಆತನ ಕೆಲಸ ಹೆಗ್ಗಣದ ಹಟ ಮತ್ತು ಅದೇ ಕುರುಡಿನಿಂದ ಕೂಡಿತ್ತು,’‘ಎನ್ನುತ್ತಾನೆ ಗಾರ್ಕಿ! ‘ರಷ್ಯಾದ ಕ್ರಾಂತಿ ಒಂದು ಕ್ರೂರ ಕ್ರೌರ್ಯ ಆಗಬಹುದು,’ಎಂದು ಊಹಿಸಿ ಖಿನ್ನನಾದೆ; ಇದಕ್ಕೆ ಉತ್ತರ ಸಂಸ್ಕೃ ತಿಯಲ್ಲಿದೆ,’ ಎಂದು ಪದೇಪದೇ ಹೇಳಿದ.

ಈ ಎಲ್ಲಾ ಕಾರಣಗಳಿಂದ, ಸಾಮಾಜಿಕ ವಿಮರ್ಶೆಯನ್ನು ಹೆಚ್ಚು ಗಂಭೀರವಾಗಿ ಮುಂದುವರೆಸಿದ ಗಾರ್ಕಿ, ಸಾಮಾನ್ಯ ಜನರ ಮಧ್ಯೆಯಿಂದ ಬಂದ ಬರಹಗಾರರನ್ನು ರೂಪಿಸತೊಡಗಿದ; ಪ್ರಮುಖವೆನ್ನಿಸುವ ಅನೇಕ ಸಾಂಸ್ಕೃ ತಿಕ ನೆನಪುಗಳ ಲೇಖನಗಳನ್ನು ಬರೆದ.

ಅಕ್ಟೋಬರ್ ಕ್ರಾಂತಿಯ ನಂತರ ರಷ್ಯಾದಲ್ಲಿ ಬೋಲ್ಸೆವಿಕ್ ಆಡಳಿತ ವರ್ಗವೊಂದು ಹುಟ್ಟಿತು. ಅದರ ಕೈಯಲ್ಲಿ ಅಧಿಕಾರ ಕೇಂದ್ರೀಕರಣಗೊಂಡಂತೆ, ಹೆಚ್ಚು ಒರಟೂ, ಕ್ರೂರವೂ ಮತ್ತು, ಭ್ರಷ್ಟವೂ ಆಗತೊಡಗಿತು. ಲಕ್ಷಾಂತರ ರಾಜಕೀಯ ವಿರೋಧಿಗಳೊಟ್ಟಿಗೆ ರಾಜಕುಟುಂಬದ ಬರ್ಬರ ಹತ್ಯೆಯೂ ನಡೆಯಿತು. ಇದರಿಂದ ಗಾರ್ಕಿಗೆ, ಬೋಲ್ಶೆವಿಕ್ ಕ್ರಾಂತಿ ಒಂದು ಕ್ರೂರ ವ್ಯಂಗ್ಯ ಎನಿಸಿ, ಅವರೊಟ್ಟಿಗಿನ ಸಂ ಬಂಧ ಹಳಸತೊಡಗಿತು. ಎಲ್ಲಿಯವರೆಗೆಂದರೆ, ಲೆನಿನ್‍ನ ಹೆಸರು ಕೇಳಿದ ತಕ್ಷಣ ಗಾರ್ಕಿಯ ಮುಖ ಕಟೋರವಾಗುತಿತ್ತು. “ಲೆನಿನ್ ಮತ್ತು ಟ್ರಾಟ್ಸ್ಕಿಗೆ, ಪ್ರಜೆಗಳ ಹಕ್ಕುಗಳನ್ನು ಹತ್ತಿಕ್ಕುವ ಅಧಿಕಾರ ಎಂಬ ಹೊಲಸು ವಿಷ ಏರಿದೆ; ಶ್ರಮಜೀವಿಯ ಗೌರವವನ್ನಾಗಲೀ, ಜೀವವನ್ನಾಗಲೀ ಲೆಕ್ಕಿಸದ ಒಬ್ಬ ಕ್ರೂರ ತಂತ್ರಗಾರ ಲೆನಿನ್! ಆತ ಸಾಮಾನ್ಯರೊಟ್ಟಿಗೆ ಬದುಕಿಲ್ಲ; ಆದ್ದರಿಂದ ಅವರ ಬಗ್ಗೆ ಆತನಿಗೆ ಏನೂ ಗೊತ್ತಿಲ್ಲ,“ ಎಂದು ಹಳಿದ.

ಲೆನಿನ್‍ನನ್ನು ಒಬ್ಬ ರಸಾಯನಶಾಸ್ತ್ರಜ್ಞನಿಗೆ ಹೋಲಿಸಿದ ಗಾರ್ಕಿ, “ರಸಾಯನಶಾಸ್ತ್ರಜ್ಞ ಜೀವವಿಲ್ಲದ ವಸ್ತುಗಳೊಂದಿಗೆ ಪ್ರಯೋಗ ಮಾಡಿದರೆ ಲೆನಿನ್, ರಷ್ಯಾದ ಜೀವಂತ ಜನರನ್ನು ವಸ್ತುಗಳಂತೆ ಬಳಸಿ ಪ್ರಯೋಗ ಮಾಡುತ್ತಾನೆ,” ಎಂದ.

ಅಂತರ್ಯುದ್ಧ(ಸಿವಿಲ್ ವಾರ್)ದ ಸಂದರ್ಭದಲ್ಲಿ, ಗಾರ್ಕಿಯ “ನ್ಯೂ ಲೈಫ್“”ಪತ್ರಿಕೆಯನ್ನು ಸೆನ್ಸಾರ್‍ಗೆ ಒಳಪಡಿಸಿದಾಗ, ಗಾರ್ಕಿಯ ಬೋಲ್ಶೆವಿಕ್ ಸಂಬಂಧ ಇನ್ನೂ ಹದಗೆಟ್ಟಿತು. ಈ ಮಧ್ಯೆ 1918ರಲ್ಲಿ ಆತ, ಬೊಲ್ಶೆವಿಕ್‍ರನ್ನು ವಿಮರ್ಶೆಗೊಳಪಡಿಸಿದ, “ಅನ್‍ಟೈಮ್ಲಿ ತಾಟ್ಸ್“”ಎಂಬ ಪ್ರಬಂಧಗಳ ಸಂಕಲನವನ್ನು ಪ್ರಕಟಿಸಿದ. ಅದೆಷ್ಟು ತೀಕ್ಷ್ಣವಾಗಿತ್ತೆಂದರೆ, ಸೋವಿಯಟ್ ರಷ್ಯಾ 1991ರಲ್ಲಿ ಒಡೆದು ಹೋಗುವವರೆಗೆ, ಅದರ ಮರುಪ್ರಕಟಣೆ ಸಾಧ್ಯವಾಗಲಿಲ್ಲ! 1921ರಲ್ಲಿ 12 ಸಮಾಜವಾದಿ ಕ್ರಾಂತಿಕಾರರ, ‘ಮಾಸ್ಕೊ ವಿಚಾರಣೆ’”ನಡೆಯುವುದೆಂದು ತಿಳಿದು, ಲೆನಿನ್‍ನ ಬೋಲ್ಶೆವಿಕ್ ಆಡಳಿತದ ಬಗ್ಗೆ ಗಾರ್ಕಿ ಕೋಪೋದ್ರಿಕ್ತನಾದ. “ಇದು ರಷ್ಯಾದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಕಗ್ಗೊಲೆಯನ್ನು ಸಾರ್ವಜನಿಕವಾಗಿ ಮಾಡುವ ಸಿನಿಕ ಕ್ರಿಯೆ,“ ಎಂದು ಕಿಡಿಕಾರಿದ.

ರಷ್ಯಾದ ಉಪಾಧ್ಯಕ್ಷ ಅಲೆಕ್ಷಿ ರಿಕೋವ್‍ಗೆ ಕಾಗದವೊಂದನ್ನು ಬರೆದು, ಪ್ರತಿವಾಧಿಗಳಿಗೆ ಕೊಡುವ ಯಾವುದೇ ಗಲ್ಲು ಶಿಕ್ಷೆ ಮೋಸದ ಕೊಲೆ ಎಂದು ಹೇಳಿದ. ಇದನ್ನು ಕೇಳಿ ಲೆನಿನ್ ತಿರಸ್ಕಾರ ತೋರಿ ಹಿಯ್ಯಾಳಿಸಿದ. ಲೆನಿನ್‍ನನ್ನು, “ಒಬ್ಬ ನಿರಂಕುಶ ಬಂಡುಕೋರ ಮತ್ತು ಪಿತೂರಿಗಾರ,” ಎಂದು ಗಾರ್ಕಿಯ ಲೇಖನಗಳು ಕರೆದವು. ಅಲ್ಲದೆ, ಆತನನ್ನು ನಿರಂಕುಶಮತಿ ತ್ಸಾರ್‍ಗೆ ಮತ್ತು, ಶೂನ್ಯವಾದಿ ಚಿಂತಕ ಸೆರ್ಗೆ ನೆಚಾಯೆವ್‍ಗೆ ಹೋಲಿಸಿದ. “ಲೆನಿನ್ ಮತ್ತು ಆತನ ಸಂಗಡಿಗರು, ಎಲ್ಲಾ ರೀತಿಯ ಕ್ರೌರ್ಯಗಳನ್ನು ಮಾಡಬಹುದೆಂದು ತಿಳಿದಿದ್ದಾರೆ, ಅದು ತಪ್ಪು,” ಎಂದು ಬರೆದ.

ಲೆನಿನ್ ನಂತರ ಬಂದ ಸ್ಟಾಲಿನ್ ಸುಮಾರು ಮೂರು ದಶಕಗಳ ಕಾಲ ರಷ್ಯಾವನ್ನು ಸಾಮ್ರಾಟನಂತೆ ಆಳಿದ – ಬೋಲ್ಶೆವಿಕ್‍ರ, “ಕಾರ್ಮಿಕರ ನಿರಂಕುಶಾಧಿಕಾರ,” ಎಂಬ ತತ್ವಕ್ಕೆ ತದ್ವಿರುದ್ಧವಾಗಿ!

ಅಂತಿಮವಾಗಿ,
ಗಾರ್ಕಿ ಕನಸಿನ ರಷ್ಯಾ ಉದಯವಾಗಲೇ ಇಲ್ಲ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *