divali spl- ಕಾಶಿಂ ಸಾಬಿಗೂ ದೀಪಾವಳಿಗೂ ಸಂಬಂಧ

ಮುಘಲರ ದೀಪಾವಳಿ(ಜಶ್ನ್ ಇ ಚಿರಾಗನ್)ದೀಪಾವಳಿಯನ್ನು ಇಂದು ಹಿಂದೂಗಳ ಹಬ್ಬವೆಂದೇ ತಿಳಿಯಲಾಗಿದ್ದರೂ, ಅದು ಶತಶತಮಾನಗಳಿಂದಲೂ ಮತೀಯ ಭಾವೈಕ್ಯತೆಯ ಹಬ್ಬವಾಗಿತ್ತೆಂಬುದನ್ನು ಇತಿಹಾಸದಿಂದ ತಿಳಿಯಬಹುದು. ಕೇವಲ ಮುಘಲರ ಕಾಲದಿಂದ ಮಾತ್ರವಲ್ಲ, ಅದಕ್ಕೂ ಹಿಂದಿನಿಂದಲೂ ದೀಪಾವಳಿ ಹಿಂದೂ-ಮುಸ್ಲಿಂ ಭಾವೈಕ್ಯದ ಪ್ರತೀಕವಾಗಿದೆ.

https://www.youtube.com/watch?v=ZYTbI_UwYMM&t=3s

ಮುಹಮ್ಮದ್ ಬಿನ್ ತುಘಲಕ್(1324-1351) ತನ್ನ ರಾಜಾಸ್ಥಾನದಲ್ಲಿ ದೀವಾಲಿಯನ್ನು ಆಚರಿಸಿದ ಮೊದಲ ಮುಸ್ಲಿಂ ದೊರೆ ಎಂದು ಹೇಳಲಾಗುತ್ತದೆ. ತುಘಲಕ್ ಗೆ ಹಿಂದೂ ಪತ್ನಿಯರಿದ್ದುದರಿಂದ ಅವರಿಂದ ಶುರುವಾಯಿತೆಂದು ಹೇಳಬಹುದು. ಮುಘಲರ ಕಾಲದಲ್ಲಿ ಜಶ್ನ್ ಇ ಚಿರಾಗನ್(ದೀವಾಲಿ), ದೊಡ್ಡ ಹಬ್ಬವಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು. ವಿಶೇಷವಾಗಿ, ಅಕ್ಬರ್ ಕಾಲದಲ್ಲಿ. ಜೋಧಾ ಬಾಯಿ ಹಾಗೂ ರಾಜಾ ಬೀರಬಲ್ ವಾಸವಾಗಿದ್ದ ಆಗ್ರಾ ಕೋಟೆ ಹಾಗೂ ಕೆಂಪು ಕೋಟೆಗಳಲ್ಲಿ ಆಚರಣೆ ವಿಜೃಂಭಣೆಯಿಂದ ನಡೆಯುತ್ತಿತ್ತು. ಅಕ್ಬರ್ ಗೆ ಹಲವಾರು ರಜಪೂತ ಪತ್ನಿಯರು ಇದ್ದುದು ತಿಳಿದೇ ಇದೆ.ನನ್ನ ಹಿಂದಿನ ಮುಘಲರ ಕುರಿತ ಟಿಪ್ಪಣಿಗಳಲ್ಲಿ ಹೆಸರಿಸಿದ್ದ ಅಕ್ಬರ್ ಆಸ್ಥಾನದ ನವರತ್ನಗಳಲ್ಲಿ ಒಂದಾದ ಇತಿಹಾಸಕಾರ ಹಾಗೂ ಜೀವನ ಕಥನಕಾರ ಅಬುಲ್ ಫಜ್ಲ್ ಇಬ್ನ್ ಮುಬಾರಕ್ ರಚಿಸಿದ ಅಕ್ಬರ್ ನಾಮ ಹಾಗೂ ಐನ್ ಇ ಅಕ್ಬರಿಗಳಲ್ಲಿ ಜಶ್ನ್ ಇ ಚಿರಾಗನ್ ಕುರಿತ ಚಿತ್ರಣ ದೊರೆಯುವುದು.

ಕೆಂಪು ಕೋಟೆ(ಲಾಲ್ ) ಸಂಭ್ರಮಾಚರಣೆಯ ಕೇಂದ್ರ. ಸೌಹಾರ್ದಪ್ರಿಯರಾದ ಅಕ್ಬರ್, ದೀಪಾವಳಿಯ ಉಡುಗೊರೆಯಾಗಿ ಸಿಹಿ ಹಂಚುವ ಸಂಪ್ರದಾಯವನ್ನು ಶುರುಮಾಡಿದರು. ಸಾಮ್ರಾಜ್ಯದ ಮೂಲೆಮೂಲೆಗಳಿಂದ ಅರಮನೆಗೆ ಆಗಮಿಸುತ್ತಿದ್ದ ಬಾಣಸಿಗರು ಥರಹೇವಾರಿ ತಿಂಡಿಗಳನ್ನು ತಯಾರಿಸುತ್ತಿದ್ದರು. ಪೇಡ, ಖೀರು, ಜಿಲೇಬಿ, ಫೇಣಿ, ಶಾಹಿ ತುಕ್ಡಾ, ಇತ್ಯಾದಿ. ಈ ಹಿಂದೆ ನಾನು ರಾಮಾಯಣ, ಮಹಾಭಾರತಗಳ ಅನುವಾದ ಯೋಜನೆಯ ಬಗ್ಗೆ ಬರೆದಿದ್ದೆ. ಅಕ್ಬರ್ ಆಸ್ಥಾನದಲ್ಲಿ ರಾಮಾಯಣವನ್ನು ಓದುವ, ಅಯೋಧ್ಯೆಗೆ ರಾಮ ಮರಳುವ ಕಥಾ ಭಾಗದ ನಾಟಕ ಪ್ರದರ್ಶನ ಕೂಡ ಇರುತ್ತಿತ್ತು. ಈ ಸಂಪ್ರದಾಯ ಅಕ್ಬರ್ ಸಾಮ್ರಾಜ್ಯವನ್ನು ಬಲಿಷ್ಠಗೊಳಿಸುವಲ್ಲಿ ದೊಡ್ಡ ಪಾತ್ರವನ್ನು ನಿರ್ವಹಿಸಿತೆಂದು ಅಬುಲ್ ಫಜಲ್ ತನ್ನ ಐನ್ ಇ ಅಕ್ಬರಿಯಲ್ಲಿ ದಾಖಲಿಸಿರುವನು. ಈ ಆಚರಣೆಯು ಹಿಂದೂ ಪ್ರಜೆಗಳೊಂದಿಗೆ ಬೆರೆಯಲು ಅವಕಾಶ ಮಾಡಿಕೊಡುತ್ತಿದ್ದುದು ಒಂದು ಕಾರಣವಾಗಿತ್ತು. ಮುಸ್ಲಿಂ ವರ್ತಕರು ಇದರ ಭಾಗವಾಗಿರುತ್ತಿದ್ದುದು ವಿಶೇಷ.ಮಡಿವಂತ ಉಲೇಮ ಇದನ್ನು ಇಸ್ಲಾಂ ಆಚರಣೆ ಅಲ್ಲವೆಂದು ವಿರೋಧಿಸಿತ್ತು. ಅದಕ್ಕೆ ಕಾರಣ, ಲಕ್ಷ್ಮೀ ಪೂಜೆಯಂದು ಶಕುನದ ಹಕ್ಕಿಯಾದ ಗೂಬೆಯನ್ನು ಬಲಿ ಕೊಡುತ್ತಿದ್ದುದಾಗಿತ್ತು. ಇಂದಿಗೂ ಗೂಬೆಗಳನ್ನು ಬಲಿಕೊಡುವ ಸಂಪ್ರದಾಯವಿದ್ದು, ಕೆಲವೊಮ್ಮೆ ಒಂದು ಗೂಬೆಗೆ ಒಂದು ಲಕ್ಷ ಬೆಲೆ ತೆರುವ ಪರಿಪಾಠವೂ ಉಂಟು. ಆದರೆ, ಮುಘಲರಿಗೆ ಇದು ಬೆಳಕಿನ ಹಬ್ಬವಷ್ಟೇ ಆಗಿತ್ತು. ಅಕ್ಬರ್ ನಂತರದಲ್ಲಿ ಜಹಾಂಗೀರ್ ಕೂಡ ಈ ಆಚರಣೆಗೆ ಭಂಗ ತರಲಿಲ್ಲವಾದರೂ, ಶಾ ಜಹಾನ್ ಇದನ್ನು ಮತ್ತೊಂದು ಎತ್ತರಕ್ಕೆ ಏರಿಸಿದ್ದುಂಟು.

ಮುಸ್ಲಿಮರ ಹೊಸ ವರ್ಶವಾದ ನವ್ರೋಜ್ ದೀಪಾವಳಿಯ ಭಾಗವಾಗಿಬಿಟ್ಟಿತು. ಅದರಿಂದ ಈ ಹಬ್ಬಕ್ಕೆ ದೊಡ್ಡ ಪ್ರಾಮುಖ್ಯತೆ ದೊರೆಯಿತು. ಈ ಕಾಲಘಟ್ಟದಲ್ಲಿ ಪರ್ಶಿಯಾದಿಂದೆಲ್ಲ ಆಹಾರ ಸಾಮಗ್ರಿಗಳು ಹಾಗೂ ಬಾಣಸಿಗರು ಆಗಮಿಸಿ ಛಪ್ಪನ್ ಥಾಲಿ(56 ದೇಶಗಳ ತಿಂಡಿ)ಯನ್ನು ತಯಾರಿಸುತ್ತಿದ್ದರು. ಇದು ದೀಪಾವಳಿ ಆಚರಣೆಯ ಭಾಗವಾಗಿಬಿಟ್ಟಿತು. ಔರಂಗಜೇಬ್ ದೀಪಾವಳಿಯ ಸಿಹಿತಿಂಡಿಯನ್ನು ಗಣ್ಯರಿಗೆ ಹಂಚುತ್ತಿದ್ದುದುಂಟು. ಮುಘಲ್ ಕಾಲದ ಮತ್ತೊಂದು ದೀಪಾವಳಿ ಆಚರಣೆಯೆಂದರೆ, ಸೂರಜ್ ಕ್ರಾಂತ್. ಸಾಮ್ರಾಜ್ಯದ ಅಗ್ನಿ ಮತ್ತು ಬೆಳಕಿನ ಶಾಶ್ವತ ಮೂಲ. ಇದರ ಕತೆಯೇ ರೋಚಕ. ಮುಘಲ್ ವಾಸ್ತುಶಿಲ್ಪದ ಇತಿಹಾಸಕಾರರಾದ ರಾಮ್ ನಾಥ್ ಅವರು ಇದರ ಬಗ್ಗೆ ಹೀಗೆ ಬರೆಯುತ್ತಾರೆ: At noon of the day when the sun entered the 19th degree of Aries, and the heat was the maximum, the (royal) servants exposed the sun’s rays to a round piece of shining stone (Surajkrant). A piece of cotton was then held near it, which caught fire from the heat of the stone. This celestial fire was preserved in a vessel called Agingir (fire-pot) and committed to the care of an officer”. ಅರಮನೆಯಲ್ಲಿ ಬಳಸಲಾಗುತ್ತಿದ್ದ ಅಗ್ನಿಯನ್ನು ಪ್ರತಿ ವರ್ಷ ನವೀಕರಿಸಲಾಗುತ್ತಿತ್ತು. ದಿನನಿತ್ಯ ಅರಮನೆಯನ್ನು ಬೆಳಗಲೆಂದು ಕರ್ಪೂರದ ಕ್ಯಾಂಡಲ್(ಕುಫೂರಿ ಶಮಾ)ಳನ್ನು ಚಿನ್ನ ಹಾಗೂ ಬೆಳ್ಳಿಯ 12 ಕ್ಯಾಂಡಲ್ ಸ್ಟಿಕ್ ಮೇಲಿರಿಸಲಾಗುತ್ತಿತ್ತು ಎಂದು ನಾಥ್ ಅವರು ಹೇಳುತ್ತಾರೆ. ಇದನ್ನು ದೀವಾಲಿಯ ಸಂದರ್ಭದಲ್ಲಿ ಇನ್ನೂ ದೊಡ್ಡದಾಗಿ ಮಾಡಲಾಗುತ್ತಿತ್ತು. ಆಕಾಶ್ ದಿಯಾ(ಆಕಾಶ ದೀಪ)ವನ್ನು ದೊಡ್ಡದಾಗಿ ಉರಿಸಲಾಗುತ್ತಿತ್ತು. 40 ಯಾರ್ಡ್ ಗಳಷ್ಟು ಎತ್ತರದ ಕಂಬದ ಮೇಲೆ, 16 ಹಗ್ಗಗಳನ್ನು ಸಪೋರ್ಟಿಗೆ ನೀಡಿ. ಅದಕ್ಕೆ ಧಾರಾಳವಾಗಿ ಹತ್ತಿಯೆಣ್ಣೆಯನ್ನು ಸುರಿದು ಇಡೀ ದರ್ಬಾರ್ ಶೋಭಾಯಮಾನವಾಗಿ ಕಾಣುವಂತೆ ಮಾಡಲಾಗುತ್ತಿತ್ತು.

ಚಾಂದನಿ ಚೌಕದವರೆಗೆ ಈ ದೀಪಗಳು ಬೆಳಕು ಕೊಡುವುದನ್ನು ಇಂದಿಗೂ ನೆನೆಸಿಕೊಂಡರೆ ರೋಮಾಂಚನವಾಗುವುದು. ಚಾಂದನಿ ಚೌಕದಲ್ಲಿನ ಶ್ರೀಮಂತ ಸೇಠೂಗಳು ತಮ್ಮದೇ ಆದ ದೀಪದ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತಿದ್ದರು. ಪ್ರತಿ ಕಟ್ಟಡದಲ್ಲಿ ಸಾಸಿವೆಯೆಣ್ಣೆಯ ದೀಪಗಳನ್ನು ಉರಿಸಲಾಗುತ್ತಿತ್ತು. ಶಾ ಜಹಾನ್, ಭಾವೈಕ್ಯತೆಯ ಸಂಕೇತವಾಗಿ ಆರಂಭಿಸಿದ ಆಕಾಶ್ ದಿಯಾ. ಮುಂದೆ ಅವರು ಕಟ್ಟಿದ ಶಾಜಹಾನ್ಬಾದ್(ಹಳೇ ದೆಹಲಿ) ಭಾಗವಾಗಿಬಿಟ್ಟಿತು. ಇಂದು ದೀಪಾವಳಿಯೆಂದರೆ ಪಟಾಕಿ ಸಿಡಿಸುವುದು ಎಂದೇ ಹೆಸರಾಗಿರುವುದಕ್ಕೂ ಕಾರಣ ಶಾ ಜಹಾನ್. ಯಮುನಾ ನದೀ ತೀರದುದ್ದಕ್ಕೂ ಪಟಾಕಿಗಳನ್ನು ಸಿಡಿಸುತ್ತಿದ್ದುದು ಅಂದಿನ ಕಾಲದ ವೈಭವ. ಇಂದಿಗೂ ಇಡೀ ದೇಶದಲ್ಲಿಯೇ ಅತ್ಯಧಿಕ ಪ್ರಮಾಣದ ಪಟಾಕಿಗಳನ್ನು ದೆಹಲಿಯಲ್ಲಿ ಸಿಡಿಸುವುದನ್ನು ಕಾಣಬಹುದು. ಮೊಹಮ್ಮದ್ ಶಾ(1720-1748) ಕಾಲದಲ್ಲಿ ಕೆಂಪು ಕೋಟೆಯ ರಂಗ್ ಮಹಲ್, ದೀವಾಲಿ ಹಾಗೂ ಬಸಂತ್ ಉತ್ಸವಗಳ ತಾಣವಾಗಿತ್ತು. ಹೋಲಿಯನ್ನು ಮುಂದಿನ ಲಾನ್ ನಲ್ಲಿ ಆಚರಿಸಲಾಗುತ್ತಿತ್ತು. ದೀವಾಲಿ ದಿಯಾಗಳು ಮಹಲ್ ಗೆ ರಂಗು ತರುತ್ತಿದ್ದವು. ಜೌರಂಗಜೇಬ್, ರಜಪೂತರಾದ ಜೋಧಪುರದ ರಾಜ ಜಸ್ವಂತ್ ಸಿಂಗ್ ಹಾಗೂ ಜೈಪುರದ ಮೊದಲನೇ ಜೈ ಸಿಂಗ್ ರಿಂದ ಉಡುಗೊರೆಗಳನ್ನು ಪಡೆಯುತ್ತಿದ್ದರು. ಒಂದು ವರ್ಷ ಕಾಲ ಮಾತ್ರ ಆಡಳಿತ ನಡೆಸಿದ ಅವರ ಮೊಮ್ಮಗ, ಜಹಂದರ್ ಶಾ, ತನ್ನ ಪ್ರೇಯಸಿ ಲಾಲ್ ಕುನ್ವರ್ ವೊಟ್ಟಿಗೆ ಲಾಹೋರ್ ನಲ್ಲಿ ದೀವಾಲಿ ಆಚರಿಸಿದರೆಂದು ಹೇಳಲಾಗುತ್ತದೆ. ಕೊನೆಯದಾಗಿ, ಕವಿಯಾಗಿದ್ದ ದೊರೆ ಬಹದ್ದೂರ್ ಶಾ ಜಫರ್, ಕೆಂಪು ಕೋಟೆಯಲ್ಲಿ ದೀವಾಲಿಗೆ ಸಂಬಂಧಿಸಿದ ನಾಟಕಗಳನ್ನು ಆಡಿಸುತ್ತಿದ್ದರು. ಈ ಪ್ರದರ್ಶನ ಸಾರ್ವಜನಿಕರಿಗೂ ತೆರೆದಿರುತ್ತಿತ್ತು. ಹಬ್ಬದ ಅವಿಭಾಜ್ಯ ಅಂಗವಾದ ಲಕ್ಷ್ಮೀಪೂಜೆ ಕೂಡ ನಡೆಯುತ್ತಿತ್ತು. ಶಾ ಜಫರ್, ತುಲಾಭಾರವಾಗಿ ತನ್ನ ತೂಕಕ್ಕೆ ಸರಿಸಮನಾಗಿ ಧಾನ್ಯ, ಚಿನ್ನ, ಮುತ್ತುರತ್ನಗಳನ್ನು ತೂಗುತ್ತಿದ್ದರು. ಅದನ್ನು ಪ್ರಜೆಗಳಿಗೆ ಹಂಚಿಸುತ್ತಿದ್ದರು. ಇಂದಿಗೂ ದೆಹಲಿಯ ಹಜ್ರತ್ ನಿಜಾಮುದ್ದೀನ್ ದರ್ಗಾದಲ್ಲಾಗಲಿ, ಮುಂಬೈಯ ಹಾಜಿ ಅಲಿ ದರ್ಗಾದಲ್ಲಾಗಲಿ, ಅಷ್ಟೇ ಯಾಕೆ, ಪುಣೆಯ ಶನಿವಾರ್ ವಾಡಾ ಬಳಿ ಇರುವ ಬಾಬಾ ಹಜ್ರತ್ ಮಖ್ಬೂಲ್ ಹುಸೇನ್ ಮದಾನಿಯಲ್ಲೂ ಮುಸಲ್ಮಾನರು ದೀವಾಲಿ ಆಚರಿಸುವುದನ್ನು ಕಾಣಬಹುದು. ಪಟಾಕಿಗಳ ತಯಾರಿಕೆಗೆ ಬಳಸಲಾಗುತ್ತಿದ್ದ ಗನ್ ಪೌಡರ್ ನ ಕತೆ ರೋಚಕವಾಗಿದೆ. ಅದು ಸುದೀರ್ಘವಾದುದರಿಂತ ಮತ್ತಾವಗಲಾದರೂ ಬರೆಯುವೆ. ಸದ್ಯಕ್ಕೆ ಇಷ್ಟ ಸಾಕು. -ಶಶಿಕುಮಾರ್ #MughalDiwali#Akbar#ShahJahan

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *