ಗಾಂಜಾ ಗ್ಯಾಂಗ್ !

ಗಾಂಜಾ
ಗ್ಯಾಂಗ್
ಎಂಬ
ಮಾತಾಟ,
ಮಾತೂಟ
‘ಕಾಡು ಅಂದರೆ ಹಾಗೇ ಶಂಕರಶೆಟ್ಟಿ, ಅದು ಎಂಥವನನ್ನೂ ಬದಲಾಯಿಸಿ ಬಿಡುತ್ತದೆ.
ಇಲ್ಲಿನ ಕಷ್ಟ ಗಂಡಾಂತರ ಎಲ್ಲವುಗಳ ನಡುವೆಯೂ ಒಂದು ವಿಶಿಷ್ಟವಾದ ಶಕ್ತಿ ಇದೆ ಕಣೋ, ಇಲ್ಲೆ ಬದುಕಿದ್ದರೆ ಎಂಥವನನ್ನೂ ಅದು ಬದಲಾಯಿಸಿಬಿಡುತ್ತದೆ. ನಾವಿದ್ದೇವಲ್ಲ ನಮ್ಮಂಥ ಜನರ ನಡುವಿನ ಜಗತ್ತಲ್ಲ ಇದು’ ‘ಹಾಗಿದ್ದರೆ ವರ್ಷಾನುಗಟ್ಟಲೆ ಇದೇಕಾಡಲಿ ್ಲಇರ್ತಾರಲ ್ಲಈ ಕೊಲೆಗಡುಕರು ಅವರು ಬದಲಾಗಬೇಕಿತ್ತಲ್ಲ’
ಇಂಥದೊಂದು ಸಂವಾದದ ಸುತ್ತಲೇ ಸುತ್ತುತ್ತದೇನೋ ಎನ್ನುವಂತಹ ಗಾಢ ಅನುಭವದ ರೋಚಕ ಕಥಾಹಂದರದ ವಸ್ತು ಪ್ರಾರಂಭವಾಗುವುದು ಗಿರಿಧರ ಎಂಬ ಪತ್ರಕರ್ತನ ಕಿಷ್ಠೆಂದೆಯಂಥ ಕಛೇರಿಯೊಂದರಿಂದ.
ಗೋವಿಂದ ಹೆಗಡೆ ಒಂದು ಸಿಕ್ರೇಟ್ ತಂದಿರುತ್ತಾರೆ. ಊರವರ ಥರಾವರಿ ಗೋಳು ಕೇಳುವ ಪತ್ರಕರ್ತ ಗಿರಿಧರನಿಗೆ ಇಂಥ ಸಿಕ್ರೇಟ್ ಸುದ್ದಿಗಳ ಮೇಲೆ ಸದಾ ಒಂದು ಗುಮಾನಿ, ಹಾಗೆಯೇ ಕುತೂಹಲ!,
ಈ ಕುತೂಹಲ ಬೆರೆತ ಗುಮಾನಿ, ಗುಮಾನಿಯ ಕುತೂಹಲ ಈ ಲಕ್ಷಣದ ಮೂಲ ಬೇರಿನಮೇಲೆಯೇ ಸೃಷ್ಟಿಯಾಗುವ ಕಥಾಲೋಕದ ವೃಕ್ಷ, ಪ್ಲಾಶ್‍ಬ್ಯಾಕ್ ಎನ್ನಬಹುದಾದ ಒಂದು ಟಿಸಿಲಿನ ಮೂಲಕ ಕಾಡುಕೋಣನ ಹತ್ಯೆ ಪ್ರಸಂಗವನ್ನು ಹೇಳುತ್ತಾ ಹೇಳುತ್ತಾ ಒಂದು ಹಂತಕ್ಕೆ ಬಂದು ಗಕ್ಕನೆ ನಿಂತು ಬಿಡುತ್ತದೆ!
ಈ ಭಾಗದುದ್ದಕ್ಕೂ ಶೇಷಾಚಲ ಎಂಬ ಸಂಗಾತಿ ಓದುಗನನ್ನು ಕಾಡುತ್ತಲೆ ಅದೃಶ್ಯನಾಗಿ ಬಿಡುತ್ತಾನೆ. ಗಿರಿಧರ ಹೇಳಹೊರಟಿರುವ ಫಜೀತಿ ಕಾಡು ಕೋಣಗಳ ಅಂತ್ಯದೊಂದಿಗೆ ಶೇಷಾಚಲನ ಅಕಾಲ ಅಂತ್ಯವನ್ನೂ ಹೇಳಿಬಿಡುತ್ತದೆ.
ಈ ಹಳೆ ಮೆಲುಕಿನ ನಂತರವೇ ಪ್ರಾರಂಭವಾಗುವುದು ನಿಜವಾದ ಕಥೆ. ಗೋವಿಂದ ಹೆಗಡೆ ಮಾಹಿತಿಕೊಟ್ಟು ಅದರ ಮಾಹಿತಿ ಆಧರಿಸಿ ಗಿರಿಧರ, ಶಂಕರಶೆಟ್ಟಿ ಜೋಗ ಸಮೀಪದ ಹೆನ್ನೆ ಎಂಬ ಊರಿನ ಮೂಲಕ ಬೈನೆಕಾಡು ತಲುಪುತ್ತಾರೆ.ಅಲ್ಲಿನ ತಂಗವೇಲು ಎಂಬ ಕೇರಳಿ ಕೃಷಿ ಮಾಡುವ ನೆಪದಲ್ಲಿ ಗಾಂಜಾ ಬೆಳೆಯುತ್ತಾ ತನ್ನ ವೃತ್ತಿ ಉದ್ಯಮ ರಕ್ಷಣೆಗಾಗಿ ರಹಸ್ಯ ಕೋಟೆಯೊಂದನ್ನು ಕಟ್ಟಿಕೊಂಡಿರುತ್ತಾನೆ. ಈ ಕೋಟೆ ಪ್ರವೇಶಿಸುವ ಪತ್ರಕರ್ತರ ನೇತೃತ್ವದ ಅರಣ್ಯ ಅಧಿಕಾರಿಗಳ ತಂಡ ಕೊನೆಗೂ ‘ಗಾಂಜಾ ಗ್ಯಾಂಗ್’ ಭೇದಿಸಿ ಪೋಟೋಕ್ಲಿಕ್ಕಿಸಿಕೊಂಡು, ಉಪಾಯದಿಂದ ತಪ್ಪಿಸಿಕೊಂಡು ಬರುವಾಗ ಮೊದಲು ಪತ್ರಕರ್ತರು ಡಕಾಯಿತರನ್ನು ಶೋಧಿಸಿ.ತನಿಖೆಮಾಡಿದಂತೆ ನಂತರ ಗಾಂಜಾಗ್ಯಾಂಗ್‍ನ ಇಬ್ಬರು ಈ ಪತ್ರಕರ್ತರನ್ನುಚೇಜ್‍ಮಾಡತೊಡಗುತ್ತಾರೆ. ಹೀಗೆ ಮಾಹಿತಿ, ಕುತೂಹಲ, ರಹಸ್ಯ, ಸಾಹಸಗಳನ್ನೆಲ್ಲಾ ಬೆನ್ನತ್ತಿ ಬೆಟ್ಟ ಹತ್ತಿ ಇಳಿಯುವುದರೊಂದಿಗೆ ‘ಗಾಂಜಾ ಗ್ಯಾಂಗ್’ ಮುಗಿಯುತ್ತದೆ.
ಇಂಥದೊಂದು ರೋಚಕ ಕಾದಂಬರಿಯನ್ನು ಬರೆದ ಗಿರಿಧರ ಅಲಿಯಾಸ್ ಗಂಗಾಧರಕೊಳಗಿ ತನ್ನ ಕಾದಂಬರಿಯ ಉಪನಾಯಕ ಶಂಕರಶೆಟ್ಟಿಗೆ ಒಂದು ಹಂತದಲ್ಲಿ ಹೀಗೆ ಹೇಳುತ್ತಾರೆ.
‘ಹಾಗೇ ಒಳಗಡೆಒತ್ತಿಟ್ಟುಕೊಂಡರೆ ಬೇರೆ ರೀತಿಯಲ್ಲಿ ಸಿಡಿದರೂ ಸಿಡಿಯಿತೇ ಮಾರಾಯ, ಒಳಗಿರುವುದು ತನಗೆ ಹೊರಗೆ ಚಿಮ್ಮಬೇಕೆಂದಾಗ ನನ್ನನ್ನೂ ಕೇಳೋದಿಲ್ಲ ನಿನ್ನನ್ನೂ ಕೇಳೋದಿಲ್ಲ. ಆಗ ಅದಕ್ಕೆ ಇನ್ನೊಬ್ಬರು ಒಪ್ಪಿಕೊಳ್ಳಬೇಕೆಂಬ ಹಂಗೂ ಇರೋದಿಲ್ಲ. ಹಠವೂ ಇರೋದಿಲ್ಲ.’ ಈ ಸಂಭಾಷಣೆ ಈಕಾದಂಬರಿರಚನೆಗೂಅನ್ವಯಿಸುವಂತಿದೆ.
ಇಡೀ ಕಾದಂಬರಿಯಲ್ಲಿ ವಿಸ್ತರಿಸಿರುವ ಕೊಳಗಿಯವರ ಸಿದ್ಧಾಂತ-ವೇದಾಂತ ಅಲ್ಲಲ್ಲಿ ಹುಬೇಹುಬಾಗಿ ಪ್ರಕಟಗೊಳ್ಳುತ್ತದೆ. ಅಂಥದೊಂದು ದೃಷ್ಟಾಂತವನ್ನು ಎಲ್ಲರೂ ಗಮನಿಸುವುದು ಈ ವಾಕ್ಯಗಳಲ್ಲಿ . . .
‘ಹೇಗೆ ನಮ್ಮ ಅನುಭವಗಳು ನಮ್ಮ ಆಯ್ಕೆಯನ್ನು ಪೂರ್ವನಿರ್ಧರಿತ ಸಿದ್ಧಾಂತಗಳನ್ನು ಬದಲಾಯಿಸಿಕೊಳ್ಳಬೇಕಾದಸ್ಥಿತಿಯನ್ನು ಉಂಟುಮಾಡುತ್ತವೆಯಲ್ಲ? ಅದರರ್ಥ ನಾವು ಅನುಭವಗಳನ್ನುಗ್ರಹಿಸಿಕೊಳ್ಳುವ ಕ್ರಮದಲ್ಲೇ ತಪ್ಪಿದೆಯೋ ಅಥವಾ ಅದರಿಂದ ಸೃಷ್ಟಿಸಿಕೊಳ್ಳುವ ವಿಚಾರದಲ್ಲಿ ನ್ಯೂನ್ಯತೆ ಇದೆಯೊ?
ಹೀಗೆ ವಾಸ್ತವ, ಸಿದ್ಧಾಂತ, ವೇದಾಂತಗಳ ಮೂಲಕವೇ ನಿಧಾನವಾಗಿ ಪ್ರಾರಂಭವಾಗಿ, ಅಷ್ಟೇ ರಹಸ್ಯವಾಗಿ ಮುಗಿದುಹೋಗುವ ಕಾದಂಬರಿ ಈ ಕಾಲದ ಯೋಗರಾಜ್ ಭಟ್‍ರ ಸಿನೇಮಾ, ಜಯಂತ್‍ರ ಹಾಡುಗಳಂತೆ ಇರಬಹುದೇನೋ. ಎನ್ನುವ ಅನುಭೂತಿ ಓದುಗನಿಗೆ ದಕ್ಕುತ್ತದೆ.
ಅದು ಪತ್ರಕರ್ತ, ಬರಹಗಾರನಾಗಿ ಕೊಳಗಿಯವರ ಗೆಲುವು. ಆದರೆ ಪ್ರಾರಂಭದಲ್ಲಿ ಕೊಳಗಿಯವರ ಗಿರಿಧರನ ಪಾತ್ರ ಸ್ವಗತದಲ್ಲಿ ಆಕ್ರೋಶ ವ್ಯಕ್ತಪಡಿಸುವುದು ಹೀಗೆ.ಅವರೆಲ್ಲರ ಲೆಕ್ಕದಲ್ಲಿ ಗಿರಿಧರ ಮದುವೆ ಮಾಡಿಸುವ ಬ್ರೋಕರ್ರೋ ರಿಯಲ್ ಎಸ್ಟೇಟ್ ಏಜೆಂಟ್ ಎಂದೋ ಪರಿಗಣಿಸಲ್ಪಟ್ಟಿದ್ದನೇ ಹೊರತು, ಪತ್ರಿಕೆಯೊಂದರ ವರದಿಗಾರನಾಗಿರಲೇ ಇಲ್ಲ.
ಲೈಸನ್ಸ್ ಇಲ್ಲದೇ ಬೈಕ್ ಹೊಡೆದು ಪೊಲೀಸರ ಬಳಿ ಸಿಕ್ಕಾಕಿಕೊಂಡವರು, ಊರಲ್ಲಿ ಹೊಡೆದಾಟ ಮಾಡಿ ಕೇಸು ಮಾಡಿಕೊಂಡು ಪೊಲೀಸ್ ಸ್ಟೇಷನ್ನಿಗೆ ಬಂದು ಕೂತವರು. ಕಳ್ಳ ನಾಟಾ ಕೊಯ್ದು ಫಾರೆಸ್ಟ್ ಡಿಪಾರ್ಟ್ ಮೆಂಟನವರ ಬಳಿ ಕೇಸುಹಾಕಿಸಿಕೊಂಡವರು.. ಇಂಥವರೆಲ್ಲ ಆಗಾಗ್ಗೆ ಬಿಡಿಸಿಕೊಡಿ ಎಂದು ದುಂಬಾಲು ಬೀಳುತಿದ್ದರು. ಆಗೆಲ್ಲಾ ನಾನೇನು ಇವರ ಸಲುವಾಗಿ ಇದ್ದವನೋ ಅಥವಾ ಸುದ್ದಿ ಬರೆಯಲು ಕೂತವನೋ ಎಂದು ಗಿರಿಧರನಿಗೆ ಅನುಮಾನವಾಗುತಿತ್ತು. ಇಂಥ ಸಿಡಿಮಿಡಿಗೆ ಉತ್ತರವಾಗಿ ಸ್ವವಿಮರ್ಶೆಯನ್ನೂ ಮಾಡಿಕೊಳ್ಳುವುದು ಹೀಗೆ.
ತನ್ನಂಥವರ ಬರವಣಿಗೆಯಿಂದ ಏನಾದರೂಪ್ರಯೋಜನವಾಗುತ್ತಿದೆಯೇ? ಅಥವಾ ನಾವು ಬರೆಯುತ್ತಿರುವುದೆಲ್ಲಾ ಒಳಗಿನತುಡಿತವನ್ನೋ,ಅಹಂಭಾವವನ್ನೋ ವ್ಯಕ್ತಪಡಿಸುವುದಷ್ಟಕ್ಕೆ ಸೀಮಿತವಾಗುತ್ತಿದೆಯೋ ಇಂಥ ಸ್ವವಿಮರ್ಶೆ, ಸಾಮಾನ್ಯನೊಬ್ಬನ ಕುತೂಹಲ, ಸಾಧ್ಯತೆ, ಸಾಹಸ, ಪ್ರಾಮಾಣಿಕತೆ ಎಲ್ಲವನ್ನೂ ಮೇಳೈಸಿಕೊಂಡು ಒಂದೇ ಓದಿಗೆ ಮುಗಿದು ಹೋಗುವಂಥ ಎಲ್ಲಾ ವಿಶಿಷ್ಟತೆಗಳನ್ನೂ ಹೊಂದಿರುವ ಈ ಕಾದಂಬರಿ ಹರಿತ ಕತ್ತರಿಯ ಸಂಕಲನಕ್ಕೆ ಸಿಕ್ಕು ಮೊಟಕಾಗಿರುವಂತೆಭಾಸವಾದರೂ, ಎರಡ್ಮೂರು ಗಂಟೆಗಳ ಓದು ಒಂದು ಉತ್ತಮ ಸಿನೆಮಾ ಕೊಡಬಹುದಾದ ಅಹ್ಲಾದವನ್ನಂತೂ ಕೊಡುತ್ತದೆ.

ನೀತಿ ಪಾಠಗಳ ಮಾತೂಟ
ಒಬ್ಬ ಒಳ್ಳೆಯ ಶಿಕ್ಷಕನ ಲಕ್ಷಣಗಳೆಂದರೆ ಓದು, ಶಿಸ್ತು ಕಲಿಕೆ, ಸರಳತೆ ಮತ್ತು ನೈತಿಕತೆ. ಈ ಲಕ್ಷಣದ ಶಿಕ್ಷಕರು ಕಡಿಮೆ ಎನ್ನುವುದು ವಾಸ್ತವ,ಸಾಹಿತ್ಯ ಚಟುವಟಿಕೆ, ಸಮ್ಮೇಳನಗಳಂಥ ಜ್ಞಾನ ವಿಸ್ತರಿಸುವ ಶಿಕ್ಷಕರ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇಂಥ ಶಿಕ್ಷಕರಿಗೆ ಕಡ್ಡಾಯವಾಗಿ ಸಾಹಿತ್ಯ ಸಮ್ಮೇಳನ, ಸಾಹಿತ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮತ್ತು ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಕನ್ನಡ ಶಾಲೆಗಳಲ್ಲೇ ಕಲಿಯುವಂಥ ಕಠಿಣ-ಕಡ್ಡಾಯ ನಿಯಮ ಮಾಡುವ ಅನಿವಾರ್ಯತೆ ಈಗ ಎದುರಾದಂತಿದೆ.
ಇಂಥ ಸಂದರ್ಭದಲ್ಲಿ ಸರ್ಕಾರಿ ಅಥವಾ ವ್ಯವಸ್ಥೆಯ ಕಡ್ಡಾಯ ಹೇರಿಕೆ ಇಲ್ಲದ ಸಮಯದಲ್ಲೂ ಕೆಲವು ಶಿಕ್ಷಕರು ಸಾಹಿತ್ಯ-ಸಂಗೀತ-ಸಾಂಸ್ಕøತಿಕತೆಗಳಂಥ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಅಂಥವರು ತಮ್ಮ ಜ್ಞಾನ ಕ್ಷಿತಿಜ ವಿಸ್ತರಿಸಿಕೊಳ್ಳುತ್ತಲೇ ಅದನ್ನು ವಿದ್ಯಾರ್ಥಿಗಳಿಗೂ ಹಂಚುತ್ತಾರೆ ಅಂಥವರನ್ನು ಪ್ರಶಸ್ತಿಗಳೂ ಹುಡುಕಿಕೊಂಡು ಬರುತ್ತವೆ.
ಇಂಥ ಅಪರೂಪದ ಶಿಕ್ಷಕರಲ್ಲಿ ಒಬ್ಬರು ಸಿದ್ಧಾಪುರದ ತಮ್ಮಣ್ಣ ಬೀಗಾರ್. ಯಲ್ಲಾಪುರ ಮೂಲದ ತಮ್ಮಣ್ಣ ತನ್ನ ಸರಳತೆ, ಸಹಜತೆಗಳಿಂದ ಸಿದ್ಧಾಪುರದವರೇ ಆಗಿದ್ದಾರೆ. ಅವರ ಹದಿನೈದನೆ ಕೃತಿಯಾಗಿ ‘ಮಾತಾಟ ಮಾತೂಟ’ ಪ್ರಕಟವಾಗಿದೆ. ಭಾಷೆ-ಸಾಹಿತ್ಯದ ದೃಷ್ಟಿಯಿಂದ ಶ್ರೇಷ್ಠ ಎನ್ನಲೇಬೇಕಾದ ವಿಶೇಷಗಳನ್ನು ಹೊಂದಿರದ ಈ ಹೊತ್ತಿಗೆ ಮಕ್ಕಳ ಪುಸ್ತಕವಾಗಿ ಒಂದು ಹೊಸ ದಾರಿಯೆನಿಸುತ್ತದೆ.
ಆದೇಶ, ಪ್ರವಚನ, ಬುದ್ಧಿ ಮಾತುಗಳನ್ನು ಮಕ್ಕಳಿಗೆ ಕಥೆಯಾಗಿಸಿ ಹೇಳುವಲ್ಲಿ ತಮ್ಮಣ್ಣ ಸಿದ್ಧಹಸ್ತರು. ಅವರ ಈ ವಿಶೇಷತೆಯನ್ನು ಮಾತಾಟ-ಮಾತೂಟ ಸಾಬೀತು ಮಾಡುತ್ತದೆ.
ಕಥೆಗಳಲ್ಲದ ಕಥೆಯಂಥ ಪ್ರಬಂಧಗಳೆನ್ನಬಹುದಾದ ತಮ್ಮಣ್ಣರ ಬರಹದ ನಿರೂಪಣಾ ಶೈಲಿ ಕನ್ನಡ ಮಕ್ಕಳ ಸಾಹಿತ್ಯಕ್ಕೆ ತೀರಾ ವಿನೂತನ ಎನ್ನುವಂತಿದೆ. ಹದಿನೇಳು ಪುಟ್ಟ ಪ್ರಬಂಧಗಳಂಥ ಕಥೆಗಳನ್ನು ಬರೆದಿರುವ ತಮ್ಮಣ್ಣ ಅವುಗಳಲ್ಲಿ ಪರಿಸರ, ಪ್ರಕೃತಿ, ಒಳ್ಳೆತನಗಳ ಹುಡುಕಾಟ ನಡೆಸುತ್ತಲೇ ಮಾದರಿ ವ್ಯವಸ್ಥೆ,ಶಿಕ್ಷಕ, ವಿದ್ಯಾರ್ಥಿಗಳನ್ನು ಪ್ರಶಂಶಿಸಿ ‘ನೀವೂ ಹೀಗಾಗಲು ಸಾಧ್ಯ’. ಎಂದು ಎಲ್ಲಾ ವಿದ್ಯಾರ್ಥಿಗಳನ್ನು ಪ್ರೇರೇಪಿಸಿ, ಉತ್ತೇಜಿಸುತ್ತಾರೆ.
ಕೆಟ್ಟ ಮತ್ತು ಒಳ್ಳೆಯ ರೂಪಕಗಳನ್ನು ಕಟ್ಟಿಕೊಡುತ್ತಲೇ ನಿಮ್ಮ ಆಯ್ಕೆ ಇದು ಎಂದು ಒಂದು ಉದಾಹರಣೆ ಎತ್ತಿಕೊಡುತ್ತಾರೆ.
ಮಾತಾಟ-ಮಾತೂಟದ ಕೆಲವು ಕಥೆಗಳು ಫ್ಯಾಂಟಸಿ ಕತೆ ಎನಿಸಬಹುದಾದ, ಚಂದಮಾಮ ಕಥೆಗಳಸ್ಪೂರ್ತಿ, ಮಾದರಿಗಳಂತೆನಿಸಿದರೂ ಅವರ ವಿಷಯ ವಸ್ತು, ಭಾಷೆ, ಪ್ರಾದೇಶಿಕತೆ ‘ನಮ್ಮತನ’ ಪರಿಚಯಿಸುವಂತೆ ಕೆಲಸ ಮಾಡಿದೆ. ಯಾರದೋ ಕಥೆ ಎಂದೆನಿಸುವಂತೆ ಹೇಳುವ ಲೇಖಕ ತನಗೆ ಅರಿವಿಲ್ಲದಂತೆ ತಾನೇ ಕಥಾನಾಯಕನೂ ನಿರೂಪಕನೂ ಆಗಿ ನಿರ್ವಹಿಸುವ ಡಬಲ್‍ರೋಲ್ ಅವರ ಬದ್ಧತೆ-ಒಳಗೊಳ್ಳುವಿಕೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.
‘ನಾನು ಮಂಗನ ಮರಿ’ ಎಂಬ ಪ್ರಬಂಧದಲ್ಲಿ ‘ನಮಗೆ ನಮ್ಮ ಹೊಟ್ಟೆ ತುಂಬಿದರೆ ಸಾಕು, ಮತ್ತೇನೂ ಹೆಚ್ಚಿಗೆ ಆಸೆಇಲ್ಲ. ಮನುಷ್ಯರಿಗಾದರೆ ಮನೆ ಬೇಕು. ಮನೆತುಂಬಾ ಆಹಾರ ಸಾಮಾಗ್ರಿಬೇಕು, ಬಟ್ಟೆ ಬೇಕು ಓಡಾಡಲು ವಾಹನ ಬೇಕು, ಎಲ್ಲಕ್ಕೂ ಹೆಚ್ಚಾಗಿ ದುಡ್ಡುಬೇಕು ‘ದುಡ್ಡು-ದುಡ್ಡು ಅಂತ ಏನೇನೋ ಮಾಡುತ್ತಾ ಇರುತ್ತಾರಂತೆ ಅದಲ್ಲ ನನಗೆ ಏಕೆ?’ ಎನ್ನುವಂಥ ಅನೇಕ ವಿವೇಕಯುತ ನೀತಿಪಾಠಗಳ ಮೂಲಕ ‘ಮಾತಾಟ ಮಾತೂಟ’ ತಮ್ಮಣ್ಣರ ವೃತ್ತಿ-ಪ್ರವೃತ್ತಿಯ ವಿಶಿಷ್ಟ ಅನುಭವವಾಗಿಯೂ ಗಮನ ಸೆಳೆಯುತ್ತದೆ.
…* ಕನ್ನೇಶ್.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *